ಬರೀ ಪುಸ್ತಕದ ಬದನೆಕಾಯಿ ಮಾತ್ರವಲ್ಲ ಈ ಬಗ್ಗೆಯೂ ಸ್ಟುಡೆಂಟ್ಸ್ ಗೆ ಕ್ಲಾಸ್ ಮಾಡಿ !

ಸೈನ್ಸ್, ಮ್ಯಾಥ್ಸ್, ಮಾತ್ರವಲ್ಲದೇ ಈ ವಿಷಯಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅವಶ್ಯಕತೆ ಇದೆ. ಅವುಗಳು ಯಾವುವು ಎಂದರೆ ಮುಂದಕ್ಕೆ ಓದಿ

ಶಾಲೆಗಳಲ್ಲಿ ಶಿಸ್ತು ಹಾಗೂ ಪಾಠದ ಬಗ್ಗೆ ಕಲಿಸಿಕೊಡುತ್ತಾರೆ. ಅದಕ್ಕೂ ಹೊರತಾಗಿ ಇನ್ನಿತ್ತರ ವಿಷಯಗಳ ಬಗ್ಗೆ ಕೂಡಾ ಹೇಳಿ ಕೊಟ್ಟರೆ ಎಷ್ಟು ಬೆಸ್ಟ್ ಎಂದು ನೀವು ಯಾವತ್ತಾದ್ರೂ ಯೋಚಿಸಿದ್ದೀರಾ?

ಬರೀ ಪುಸ್ತಕದ ಬದನೆಕಾಯಿ ಮಾತ್ರವಲ್ಲ ಈ ಬಗ್ಗೆಯೂ ಸ್ಟುಡೆಂಟ್ಸ್ ಗೆ ಕ್ಲಾಸ್ ಮಾಡಿ !

ಸಾಮಾನ್ಯ ಪಠ್ಯಕ್ರಮ ಕಲಿಕೆ ಹೊರತು ಪಡಿಸಿ, ಜೀವನಕ್ಕೆ ಬೇಕಾಗುವ ಇನ್ನಿತ್ತರ ವಿಷಯಗಳ ಬಗ್ಗೆಯೂ ಕಲಿಸಿಕೊಟ್ಟರೆ ಬೆಸ್ಟ್ ಎಂಬುವುದು ನಮ್ಮ ಅಭಿಪ್ರಾಯ. ಇತ್ತೀಚಿಗಿನ ಬದಲಾಗುತ್ತಿರುವ ಟೆಕ್ನಾಲಾಜಿ ಹಾಗೂ ಜನರೇಶನ್ ಗೆ ತಕ್ಕಂತೆ, ವಿದ್ಯಾರ್ಥಿಗಳಿಗೆ ಬರೀ ಪಠ್ಯಪುಸ್ತಕ ಮಾತ್ರವಲ್ಲದೇ, ಪುಸ್ತಕಕ್ಕಿಂತ ಹೊರತಾಗಿರುವ ಹಣದ ನಿರ್ವಹಣೆ, ವರ್ಕ್ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್ , ಟೈಂ ಮ್ಯಾನೇಜ್‌ಮೆಂಟ್ ಇನ್ನಿತ್ತರ ವಿಷಯಗಳ ಬಗ್ಗೆಯೂ ಶಾಲೆ ಹಾಗೂ ಕಾಲೇಜುಗಳಲ್ಲಿ ತಿಳಿಸಿಕೊಡುವ ಅವಶ್ಯಕತೆ ಇದೆ

ಸೈನ್ಸ್, ಮ್ಯಾಥ್ಸ್, ಮಾತ್ರವಲ್ಲದೇ ಈ ವಿಷಯಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಅವಶ್ಯಕತೆ ಇದೆ. ಅವುಗಳು ಯಾವುವು ಎಂದರೆ ಮುಂದಕ್ಕೆ ಓದಿ

ಕೆಲಸ ಹಾಗೂ ಪರ್ಸನಲ್ ಲೈಫ್ ಬ್ಯಾಲೆನ್ಸ್:

ಶಾಲೆ ಹಾಗೂ ಕಾಲೇಜುಗಳಲ್ಲಿ ಈ ಬಗ್ಗೆ ಯಾವತ್ತೂ ಹೇಳಿ ಕೊಡುವುದಿಲ್ಲ. ಶಾಲೆ ಹಾಗೂ ಕಾಲೇಜುಗಳು ಕೇವಲ ವಿಜ್ಞಾನ, ಮ್ಯಾಥಮ್ಯಾಟಿಕ್ಸ್ ಹಾಗೂ ಇನ್ನಿತ್ತರ ಸಬ್‌ಜೆಕ್ಟ್ ಬಗ್ಗೆ ಮಾತ್ರ ಫೋಕಸ್ ಮಾಡುತ್ತದೆ. ಒಂದು ವೇಳೆ ಕೆಲಸ ಹಾಘೂ ಪರ್ಸನಲ್ ಲೈಫ್ ಹೇಗೆ ಬ್ಯಾಲೆನ್ಸ್ ಮಾಡುವುದು ಎಂದು ಹೇಳಿಕೊಟ್ಟರೆ, ಇಂದು ಯಾರೂ ಕೂಡಾ ಸ್ಟ್ರೆಸ್ ನ ಜೀವನ ನಡೆಸುವುದಿಲ್ಲ.

ಸಬ್‌ಜೆಕ್ಟ್ ಮನನ ಮಾಡಿಕೊಳ್ಳುವ ಶಕ್ತಿ:

ಸಬ್‌ಜೆಕ್ಟ್ ಹೇಗೆ ಮನನ ಮಾಡಿಕೊಳ್ಳಬೇಕು ಎಂದು ಕೂಡಾ ಕಾಲೇಜುಗಳು ಕಲಿಸಿಕೊಟ್ಟರೆ ಪ್ರತಿಯೊಬ್ಬರೂ ಟಾಪರ್ ಆಗುವುದರಲ್ಲಿ ನೋ ಡೌಟ್.

ಹಣದ ನಿರ್ವಹಣೆ:

ಸರಿಯಾದ ಪ್ಲ್ಯಾನ್ ಹಾಗೂ ನಿರ್ವಹಣೆ ಮಾಡಲು ತಿಳಿಯದೇ ಇದ್ದರೆ,ನಿಮ್ಮಲ್ಲಿದ್ದ ಹಣ ಹಾಗೂ ಆದಾಯವು ಕೂಡಾ ನಷ್ಟವಾಗುವುದು. ಹಾಗಾಗಿ ಹಣದ ನಿರ್ವಹಣೆಯ ಬಗ್ಗೆಯೂ ತಿಳಿಸಿಕೊಡುವುದು ಉತ್ತಮ.

ಮೂಲಭೂತ ಕೌಶಲ್ಯಗಳು:

ಹಾಗೇ ಸುಮ್ಮನೆ ಜೀವಿಸುವುದು... ಇದರಲ್ಲಿ ಯಾವುದೇ ಸೆನ್ಸ್ ಎಂಬುವುದು ಇರುವುದಿಲ್ಲ. ಆದ್ರೆ ಕುಕ್ಕಿಂಗ್, ಫ್ಯಾಮಿಲಿಯನ್ನ ಹ್ಯಾಪಿಯಾಗಿರಿಸುವುದು, ಸ್ವಿಮ್ಮಿಂಗ್ ಸೇರಿದಂತೆ ಇನ್ನಿತ್ತರ ಅಗತ್ಯ ಕೌಶಲ್ಯಗಳ ಬಗ್ಗೆಯೂ ಕಲಿಸಿಕೊಟ್ಟರೆ ಬೆಸ್ಟ್. ಯಾಕೆಂದ್ರೆ ಜೀವನದಲ್ಲಿ ಯಾವಾಗ ಚ್ಯಾಲೆಂಜ್ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.

ಸಂಬಂಧಗಳು:

ಸಂಬಂಧಗಳ ನಿರ್ವಹಣೆ ಹಾಗೂ ಬ್ಯಾಲೆನ್ಸ್ ಮಾಡುವುದು ಸುಲಭದ ಕೆಲಸವಲ್ಲ. ಇತ್ತೀಚಿಗಿನ ದಿನಗಳಲ್ಲಂತೂ ಸಂಬಂಧಗಳನ್ನ ಬ್ಯಾಲೆನ್ಸ್ ಮಾಡುವುದು ತುಂಬಾ ಕಷ್ಟಕರವಾದ ಕೆಲಸ ವಾಗಿದೆ. ಸಂಬಂಧಗಳನ್ನ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೇಗೆ ಹೋಗುವುದು ಎಂಬುದರ ಬಗ್ಗೆಯೂ ತಿಳಿಸಿಕೊಡುವ ಅಗತ್ಯವಿದೆ.

ಟ್ಯಾಕ್ಸ್ ಗಳು:

ಇತ್ತೀಚಿಗಿನ ದಿನಗಳಲ್ಲಿ ಟ್ಯಾಕ್ಸ್ ಎಂಬುವುದು ದೊಡ್ಡ ಸಂಗತಿ. ಅದೆಷ್ಟೋ ಜನರಿಗೆ ಟ್ಯಾಕ್ಸ್ ವ್ಯವಹಾರದ ಬಗ್ಗೆ ಏನೂ ತಿಳಿದಿಲ್ಲ. ಹಾಗಾಗಿ ಟ್ಯಾಕ್ಸ್ ಹಾಗೂ ಬ್ಯಾಂಕ್ ವ್ಯವಹಾರದ ಬಗ್ಗೆಯೂ ತಿಳಿಸಿಕೊಡುವ ಅವಶ್ಯಕತೆ ಇದೆ.

ಅಡುಗೆ ಕಲೆ:

ಅಡುಗೆ ಕಲಿಯುವುದು ಕೆಟ್ಟ ಸಂಗತಿ ಅಲ್ಲ. ಅಷ್ಟೇ ತಮ್ಮ ಆಪ್ತರಿಗೆ ನಾವೇ ಅಡುಗೆ ಮಾಡಿ ಬಳಸುವುದು ಎಷ್ಟು ಖುಷಿಯ ಸಂಗತಿ ಯೋಚಿಸಿ. ಹಾಗಾಗಿ ಶಾಲೆಗಳಲ್ಲಿ ಅಡುಗೆ ಕಲಿಕೆ ಕೂಡಾ ಹೇಳಿ ಕೊಟ್ಟರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ

More News  

For Quick Alerts
ALLOW NOTIFICATIONS  
For Daily Alerts

English summary
Here are the things that school must teach, apart from discipline, manner etc to upcoming generations. I am sure you all at some points of time felt the same
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+