ನೀವು ಯಾವ ಟೈಪ್ ಉದ್ಯೋಗಸ್ಥ...ಇಲ್ಲಿರುವ ಯಾವ ಕೆಟಗರಿಯಲ್ಲಿ ನೀವಿದ್ದೀರಾ ಚೆಕ್ ಮಾಡಿಕೊಳ್ಳಿ?

ಪ್ರಪಂಚದಾದ್ಯಂತ ಪ್ರತಿಯೊಬ್ಬ ವ್ಯಕ್ತಿಯು ವಿಭಿನ್ನ. ಯೋಚನಾ ಸಾಮರ್ಥ್ಯದಿಂದ ಹಿಡಿದು ಲೈಫ್ ಸ್ಟೈಲ್, ಆಹಾರ ಪದ್ಧತಿ ಅಷ್ಟೇ ಅಲ್ಲ ತಮ್ಮ ವರ್ಕಿಂಗ್ ಸ್ಟೈಲ್ ನಿಂದಲೂ ಪ್ರತಿಯೊಬ್ಬರೂ ಪರಸ್ಪರ ವಿಭಿನ್ನರಾಗಿದ್ದಾರೆ. ಇನ್ನು ನಮ್ಮ ಕೆರಿಯರ್ ಲೈಫ್ ನಲ್ಲಿ ನಾವು ಕೆಲವೊಂದು ವಿದಧ ಕೆಟಗರಿಯ ಜನರನ್ನ ಭೇಟಿ ಮಾಡುತ್ತೇವೆ. ಕೆರಿಯರ್ ಲೈಫ್ ನಲ್ಲಿ ಸಾಮಾನ್ಯವಾಗಿ ಯಾವೆಲ್ಲಾ ಕೆಟಗರಿ ಜನರನ್ನ ನಾವು ಭೇಟಿ ಮಾಡುತ್ತೇವೆ ಎಂಬ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ.

ನೀವು ಯಾವ ಟೈಪ್ ಉದ್ಯೋಗಸ್ಥ...?

 

ಕೆರಿಯರ್ ಲೈಫ್ ನ ವಿವಿಧ ಕೆಟಗರಿ... ನೀವು ಯಾವ ಕೆಟಗರಿಯಲ್ಲಿ ಇದ್ದೀರಾ ಎಂದು ಚೆಕ್ ಮಾಡಿಕೊಳ್ಳಿ:

ವಿದೇಶದಲ್ಲಿ ವಿದ್ಯಾಭ್ಯಾಸದ ಕನಸು...ಯಾವೆಲ್ಲಾ ದೇಶದಲ್ಲಿ ಫ್ರೀ ಎಜ್ಯುಕೇಶನ್ ಇದೆ ಗೊತ್ತಾ?

ಲೀಡರ್:

ಲಿಸ್ಟ್ ಪ್ರಾರಂಭವಾಗುವುದು ಹೆಚ್ಚು ಫೋಕಸ್ ಹಾಗೂ ಕಾಂಫಿಡೆನ್ಸ್ ಇರುವ ವ್ಯಕ್ತಿ. ಹೌದು ನೀವು ಅಂದುಕೊಂಡದು ನಿಜ ನಾವು ಲೀಡರ್ ಬಗ್ಗೆ ಮಾತನಾಡುತ್ತಿದ್ದೇವೆ. ಪ್ರತಿಯೊಂದನ್ನ ದೊಡ್ಡ ಮಟ್ಟದಲ್ಲೇ ಇವರು ಯೋಚಿಸುತ್ತಾರೆ. ಚಿಕ್ಕ ಚಿಕ್ಕ ವಿಷಯಗಳಿಗೆ ದೊಡ್ಡದಾಗಿ ಇವರು ಯೋಚಿಸಲ್ಲ. ಲೀಡ್ ಮಾಡುವುದು ಹೇಗೆ ಎಂದು ತಿಳಿದುಕೊಂಡಿರುವ ವ್ಯಕ್ತಿ ಮೊದಲಿಗೆ ಕ್ಲಿಯರ್ ಮೈಂಡ್‌ನಿಂದ ಕೆಲಸ ಪ್ರಾರಂಭಿಸುತ್ತಾರೆ.

ಯಾರೂ ಈ ಲೀಡರ್ ಕೆಟಗರಿಯಲ್ಲಿ ಬರಲು ಇಚ್ಚಿಸುತ್ತಾರೋ, ಅವರು ಅವರದ್ದೇ ಪರಿಶ್ರಮ ಹಾಗೂ ಕ್ರಿಯಾತ್ಮಕ ಐಡಿಯಾಗಳಿಂದ ಮುಂದೊಂದು ದಿನ ಶೈನ್ ಆಗುತ್ತಾರೆ. ನಿಮಗೂ ಈ ಎಲ್ಲಾ ಕ್ವಾಲಿಟಿ ಇದೆ ಎಂದು ಅನಿಸಿದ್ರೆ ಮುಂದೊಂದು ದಿನ ನೀವು ಸಕ್ಸಸ್ ಫುಲ್ ವ್ಯಕ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ನಾಲ್ಕು ಕೆಲಸ... ನಿಮ್ಮ ಲಕ್ ಬದಲಾಯಿಸಬಹುದು!

ಆದರ್ಶವಾದಿ:

ಇವರು ಪ್ರೊಫೆಶನ್ ಗಿಂತ ವೆಕೇಶನ್ ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಈ ಟೈಪ್ ನ ಜನರಿಗೆ ಹಣ ಎಂಬುವುದು ಕೊನೆಯ ಪ್ರಾಮುಖ್ಯದ ವಿಚಾರ. ಆದರ್ಶವಾದಿಗಳು ತಮಗೆ ಎಲ್ಲಿ ಗೌರವ, ಮರ್ಯಾದೆ ಸಿಗುತ್ತೋ ಅಂತಹ ಜಾಗದಲ್ಲಿ ಮಾತ್ರ ಕೆಲಸ ಮಾಡಲು ಇಚ್ಚಿಸುತ್ತಾರೆ.ಇವರು ನೀತಿ, ಕರ್ತವ್ಯ ಹಾಗೂ ಕಾನೂನು ನಿಯಮಗಳ ವಿಚಾರದಲ್ಲಿ ಯಾವತ್ತೂ ಕಾಂಪ್ರಮೈಸ್ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ.

ಶಿಕಾರಿ:

ನೀವು ನಂಬ್ತೀರಾ ಅಥವಾ ಇಲ್ಲವಾ ಆದ್ರೆ ಒಂದಂತೂ ನಿಜ ಈ ಕೆಟಗರಿಯಲ್ಲಿ ಬರುವ ವ್ಯಕ್ತಿಗಳಿಗೆ ಮಾರ್ಕೆಟ್ ಫೀಲ್ಡ್‌ನಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ನಿಮ್ಮ ಸಂಸ್ಥೆಗಳಲ್ಲಿ ಈ ಕೆಟಗರಿ ವ್ಯಕ್ತಿಗಳಿದ್ದರೆ ಯಾರೂ ಕೂಡಾ ಅವರನ್ನ ಸಕ್ಸಸ್ ನಿಂದ ದೂರವಿಡಲು ಸಾಧ್ಯವಿಲ್ಲ. ಈ ಜನರು ತಮ್ಮ ವರ್ಕ್ ಪ್ಲೇಸ್ ನಲ್ಲಿ ಯಾವಾಗಲೂ ಅಭಿವೃದ್ಧಿ ಹಾಗೂ ಅವಕಾಶವನ್ನ ಬಯಸುತ್ತಾರೆ.

 

ಇವರು ಮಾರ್ಕೇಟ್ ಫೀಲ್ಡ್‌ನಲ್ಲಿ ಉತ್ತಮ ಸಂವಹನ ಕೌಶಲ್ಯ ಹೊಂದಿದ್ದಾರೆ. ಹಾಗಾಗಿ ಈ ಫೀಲ್ಡ್‌ ನಲ್ಲಿ ಇವರು ಕೆರಿಯರ್ ರೂಪಿಸಿಕೊಂಡರೆ ಬೆಸ್ಟ್.

ನಿಮಗೂ ಕಾಲೇಜು ಹೀರೋ ಎನಿಸಿಕೊಳ್ಳಬೇಕಾ... ಹಾಗಿದ್ರೆ ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ!

ಹಾರ್ಮೋನೈಸರ್:

ಈ ಕೆಟಗರಿಯಲ್ಲಿ ಬರುವ ಜನರು ಹೆಚ್ಚು ಕೊ-ಓಪರೇಟೀವ್ ಆಗಿರುತ್ತಾರೆ. ಹಾಗೆಯೇ ಸುತ್ತಲಿನ ಜನರ ಜತೆ ಬೇಗನೇ ಬೆರೆಯುತ್ತಾರೆ. ಇವರು ಶಾಂತಿಯುತ ಹುದ್ದೆಗಳಲ್ಲಿ ದುಡಿಯಲು ಇಚ್ಚಿಸುತ್ತಾರೆ. ಇವರಿಗೆ ಜಾಬ್ ಸೆಕ್ಯುರಿಟಿ ತುಂಬಾ ಇಂರ್ಪೋಟೆಂಟ್. ಈ ಸ್ವಭಾದ ಜನರು ಹೆಚ್ಚಾಗಿ ಸರ್ಕಾರಿ ಹುದ್ದೆಯಲ್ಲಿ ಇರುತ್ತಾರೆ.

ಇಂಟರ್ನ್ಯಾಷನಲಿಸ್ಟ್:

ಇವರು ಹೆಚ್ಚು ಫೋಕಸ್ ಆಗುವ ವ್ಯಕ್ತಿಗಳಾಗಿರುತ್ತಾರೆ. ಇವರು ಲಾಂಗ್ ಟರ್ಮ್ ಪ್ಲ್ಯಾನಿಂಗ್ ಮಾಡುವ ಸ್ವಭಾವದವರಾಗಿರುತ್ತಾರೆ. ಹೆಚ್ಚು ಜ್ಞಾನ ಹಾಗೂ ಕ್ರಿಯೇಟೀಚ್ದಿಂದಾಗಿ ಇವರು ಇತರರಿಂದ ಗುರುತಿಸಲ್ಪಡುತ್ತಾರೆ ಹಾಗೆಯೇ ಸಿಂಪಲ್ ಆಗಿ ಇವರನ್ನ ಜೀನಿಯಸ್ ಎಂದು ಕರೆಯಬಹುದು.

ಬಾಸ್‌ ಎಷ್ಟೇ ಕ್ಲೋಸ್‌ ಇದ್ರೂ ಈ ಬಗ್ಗೆ ಮಾತನಾಡಿದ್ರೆ ಕೆಲಸಕ್ಕೆ ಕತ್ತರಿ ಗ್ಯಾರಂಟಿ !

For Quick Alerts
ALLOW NOTIFICATIONS  
For Daily Alerts

English summary
The one who knows how to lead always start his work with a clearer version than others. People who fall into this career type, don’t like to walk in a herd instead they prefer to innovate and stand out to create their own sunshine.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more