ನಿಮ್ಮನ್ನ ನೀವು ಡೆವಲಪ್ ಮಾಡಿಕೊಂಡು ಪ್ರಮೋಶನ್ ಪಡೆಯುವುದು ಹೇಗೆ?

ಪ್ರಮೋಶನ್ ಸಿಗಬೇಕು ಎಂದಾದ್ರೆ ಯಶಸ್ಸಿನ ಒಂದು ಮೆಟ್ಟಿಲು ನೀವು ಮೇಲಕ್ಕೆ ಏರಬೇಕು. ಆದ್ರೆ ನಮಗೆ ಎಲ್ಲಾ ತಿಳಿದಿದೆ ಪ್ರಮೋಶನ್ ಸಿಗುವುದು ಅಷ್ಟು ಸುಲಭದ ಕೆಲಸವಲ್ಲ. ಹಾಗಂತೂ ಕಷ್ಟದ ಕೆಲಸವೂ ಅಲ್ಲ.

ನಿಮ್ಮನ್ನ ನೀವು ಡೆವಲಪ್ ಮಾಡಿಕೊಂಡು ಪ್ರಮೋಶನ್  ಪಡೆಯುವುದು ಹೇಗೆ?

 

ಪ್ರತಿಯೊಂದು ಹುದ್ದೆಯೂ, ಹಾರ್ಡ್ ವರ್ಕ್ ಹಾಗೂ ಕ್ರಿಯೇಟಿವಿಟಿಯನ್ನ ಬಯಸುತ್ತದೆ. ನೀವು ಸರಿಯಾದ ಟ್ರ್ಯಾಕ್ ನಲ್ಲಿದ್ದರೆ ನಿಮಗೆ ಅದು ಒಳ್ಳೆಯದೇ ಆದ್ರೂ ಕೂಡಾ ನಿಮಗೆ ಪ್ರಮೋಶನ್ ಸಿಗ್ತಿಲ್ಲ ಎಂದಾದ್ರೆ ಅದು ಒಂದು ಸಮಸ್ಯೆಯೇ.

ಹಲ್ಲಿನ ಮಧ್ಯೆ ಗ್ಯಾಪ್... ನಿಮ್ಮ ಕೆರಿಯರ್ ಲೈಫ್ ಗೆ ಇದು ಲಕ್‌ ಅಥವಾ ಬ್ಯಾಡ್?

ಪ್ರಮೋಶನ್ ಸಿಗಬೇಕು ಎಂದಾದ್ರೆ ಲಿಟಲ್ ಎಫರ್ಟ್ ಜತೆ ಕೆಲವೊಂದು ಟೆಕ್ನಿಕ್ಸ್ ಕೂಡಾ ಬಳಸಬೇಕು ಆ ಟೆಕ್ನಿಕ್ಸ್ ಗಳು ಯಾವುವು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತದೆ.

ನಿಮ್ಮನ್ನ ಪ್ರೆಸೆಂಟ್ ಮಾಡಿಕೊಳ್ಳಿ:

ಇದು ಪ್ರಮುಖವಾದ ವಿಷಯ. ಸೀನಿಯರ್ ಮಾತ್ರವಲ್ಲದೇ ಜ್ಯೂನಿಯರ್ಸ್ ಜತೆಯೂ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವುದು ಬೆಸ್ಟ್. ನಿಮ್ಮ ಕಮ್ಯುನಿಕೇಶನ್ ಲೆವೆಲ್ ನೀವು ಅವರ ಮುಂದೆ ತೋರ್ಪಡಿಸಿ. ಆಫೀಸ್ ವಾತಾವರಣದಲ್ಲಿ ನಿಮ್ಮ ಕೋ-ವರ್ಕರ್ಸ್ ಜತೆ ಸೋಶಲ್ ಆಗಿ ವರ್ತಿಸಿ.

ಈ ಮಾತುಗಳನ್ನ ಬಾಸ್ ಮುಂದೆ ಹೇಳಿದ್ರೆ ಸಾಕು... ಮುಂದೆ ನೀವು ಕೇಳಿದ್ದಕ್ಕೆಲ್ಲಾ ಗ್ರೀನ್ ಸಿಗ್ನಲ್!

ಗಮನವಿಟ್ಟು ಕೆಲಸ ಮಾಡಿ:

ನೀವು ಮಾಡುತ್ತಿರುವ ಕೆಲಸದ ಬಗ್ಗೆ ನೀವು ಯಾವಾಗಲೂ ಅಪ್‌ಡೇಟ್ ಆಗಿರಿ. ನಿಮ್ಮ ಬಾಸ್ ಏನಾದ್ರೂ ಕೆಲಸದ ಬಗ್ಗೆ ಪ್ರಶ್ನೆಗಳನ್ನ ಕೇಳಿದ್ರೆ ಕೂಡಲೇ ನೀವು ಉತ್ತರಿಸುವಂತಿರಬೇಕು. ಇದರಿಂದ ನಿಮ್ಮ ಪಾಸಿಟೀವ್ ರೆಪ್ಯುಟೇಶನ್ ಹೆಚ್ಚುವುದು. ಇನ್ನು ಚರ್ಚೆ ವೇಳೆ ಕಿವಿಯನ್ನ ತೆರೆದಿಟ್ಟುಕೊಳ್ಳಿ ಹಾಗೆಯೇ ನೋಟ್ಸ್ ಮಾಡಿಕೊಳ್ಳಿ.

ನೆಟ್‌ವರ್ಕಿಂಗ್:

ಇತರರಿಗೆ ನಿಮ್ಮ ಅಗತ್ಯವಿದ್ದಾಗ ನೀವು ಅವರಿಗೆ ಸಿಗುವಂತೆ ಮಾಡಿಕೊಳ್ಳುವುದು ತುಂಬಾ ಅಗತ್ಯ. ಹಾಗೆಯೇ ಜನರು ನಿಮ್ಮ ಬಗ್ಗೆ ನಿಮ್ಮ ಕೆಲಸದ ಬಗ್ಗೆ ಸದಾ ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾರೆ. ಅಷ್ಟೇ ಅಲ್ಲ ಅವರಿಗೆ ನಿಮ್ಮ ಸಹಾಯ ಬೇಕಿದ್ದಾಗ ನೇರವಾಗಿ ನಿಮ್ಮ ಬಳಿ ಬರುತ್ತಾರೆ.

 

ಇಂಟರ್ವ್ಯೂ ಡ್ರೆಸ್ ಕೋಡ್.... ನಿಮ್ಮ ಡ್ರೆಸ್ಸಿಂಗ್ ಸ್ಟೈಲ್ ಹೀಗಿರಲಿ!

ನಿಮ್ಮ ಸಾಧನೆ ಎಲ್ಲರಿಗೂ ತಿಳಿಯುವಂತೆ ಇರಲಿ:

ನೀವು ಎಷ್ಟು ಸ್ಮಾರ್ಟ್ ಎಂದು ಬೇರೆಯವರ ಮುಂದೆ ನೀವು ಶೋ ಆಫ್ ಮಾಡುವ ಅಗತ್ಯವಿಲ್ಲ. ಆದ್ರೆ ನಿಮ್ಮ ಸ್ಮಾರ್ಟ್ ಮ್ಯಾನರ್ ನಿಂದ ನಿಮ್ಮ ಹಿಂದಿನ ಸಾಧನೆ ಬಗ್ಗೆ ನೀವು ಮಾತನಾಡಬಹುದು. ಹಾರ್ಡ್ ವರ್ಕ್ ಮಾಡಿ ಹಾಗೆಯೇ ನಿಮ್ಮ ಸಾಧನೆ ಬಗ್ಗೆ ನೋಟ್ ಮಾಡಿಕೊಳ್ಳಿ. ಸಮಯ ಬಂದಾಗ ನಿಮ್ಮ ಹಾಗೂ ನಿಮ್ಮ ಸಾಧನೆ ಬಗ್ಗೆ ನೀವು ಮಾತನಾಡಬಹುದು.

ಕ್ರಿಯೆಟಿವಿಟಿ ಇರಲಿ:

ಒಂದು ಬಾರಿ ನೀವು ಕೆಲಸ ಪ್ರಾರಂಭಿಸಿದ್ರೆ, ಅದನ್ನೇ ಯಾವಾಗಲೂ ಮಾಡುತ್ತಾ ಇರಬೇಡಿ. ನಿಮ್ಮ ದೈನಂದಿನ ಕೆಲಸಕ್ಕೆ ಕ್ರಿಯೆಟಿವಿಟಿ ಟಚ್ ನೀಡಿ ನಿಮ್ಮ ಬೋರಿಂಗ್ ಕೆಲಸಕ್ಕೆ ಒಂದು ಟ್ವಿಸ್ಟ್ ಕೊಡಿ. ನಿಮ್ಮ ಕೆಲಸ ಕ್ರಿಯೇಟಿವ್ ಆಗಿದ್ರೆ ನೀವು ಸೀನಿಯರ್ಸ್ ಹಾರ್ಟ್ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

For Quick Alerts
ALLOW NOTIFICATIONS  
For Daily Alerts

English summary
And, we all know getting promoted is not really easy. But, hey it’s not that hard too. Every job requires employees who are working hard and also who are full of creative mind. Well, in short a professional player is needed at work.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X