SSC 2019 : ಸಿಜಿಎಲ್‌ ಟೈಯರ್ II ಪರೀಕ್ಷೆಗೆ ಕೆಲವೇ ದಿನಗಳಲ್ಲಿ ತಯಾರಿ ನಡೆಸುವುದು ಹೇಗೆ? ಇಲ್ಲಿದೆ ನೋಡಿ

ಸಿಬ್ಬಂದಿ ನೇಮಕಾತಿ ಆಯೋಗದ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (ಸಿಜಿಎಲ್‌) ನ ಟೈಯರ್ II ಪರೀಕ್ಷೆಯು ಇದೇ ಸೆಪ್ಟೆಂಬರ್ 11 ರಿಂದ 14ರ ವರೆಗೆ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ ಎನ್ನುವುದನ್ನು ಕರಿಯರ್ ಇಂಡಿಯಾ ನಿಮಗೆ ಇವತ್ತು ತಿಳಿಸುತ್ತದೆ.

ಎಸ್‌ಎಸ್‌ಸಿ ಸಿಜಿಎಲ್‌ ಟೈಯರ್ II  ಪರೀಕ್ಷಾ ತಯಾರಿಗೆ ಸುಲಭ ವಿಧಾನ

ಈ ಪರೀಕ್ಷೆಯನ್ನು ವಿವಿಧ ಸಚಿವಾಲಯಗಳು/ಇಲಾಖೆಗಳು/ ಕಚೇರಿಗಳಲ್ಲಿ ಖಾಲಿ ಇರುವ ಲೋವರ್‌ ಡಿವಿಷನ್‌ ಕ್ಲರ್ಕ್‌/ ಜೂನಿಯರ್‌ ಸೆಕ್ರೇಟೇರಿಯೆಟ್‌ ಅಸಿಸ್ಟೆಂಟ್‌, ಪೋಸ್ಟಲ್‌ ಅಸಿಸ್ಟೆಂಟ್‌/ಸಾರ್ಟಿಂಗ್‌ ಅಸಿಸ್ಟೆಂಟ್‌ ಮತ್ತು ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು ಭರ್ತಿ ಮಾಡಲು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ಬಾಕಿ ಇರುವ ಕೆಲವೇ ದಿನಗಳಲ್ಲಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಬಹುದು ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಪರೀಕ್ಷಾ ಮಾದರಿ ತಿಳಿಯಿರಿ:

ಪರೀಕ್ಷಾ ಮಾದರಿ ತಿಳಿಯಿರಿ:

ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವ ಮುನ್ನ ಪರೀಕ್ಷಾ ಮಾದರಿಯನ್ನು ತಿಳಿಯಿರಿ. ಪರೀಕ್ಷಾ ಮಾದರಿಯ ಅನುಸಾರ ಅಧ್ಯಯನ ನಡೆಸಲು ಸುಲಭವಾಗುವುದು.

ಪರೀಕ್ಷಾ ಪೂರ್ವ ಸಿದ್ಧತೆ ನಡೆಸಿ:

ಪರೀಕ್ಷಾ ಪೂರ್ವ ಸಿದ್ಧತೆ ನಡೆಸಿ:

ಟಯರ್ 2 ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸಲಾಗುವುದು. ಈ ಪರೀಕ್ಷೆಗಳು ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ಎದುರಿಸುವ ಕ್ರಮವನ್ನು ಅಭ್ಯಾಸ ಮಾಡಿ.ಇದರಿಂದ ಯಾವುದೇ ಅಡೆ ತಡೆಗಳಿಲ್ಲದೆಯೇ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.

ಪರೀಕ್ಷೆಗೆ ಇರುವ ಸ್ಪರ್ಧೆಯನ್ನು ಅರ್ಥ ಮಾಡಿಕೊಳ್ಳಿ:

ಪರೀಕ್ಷೆಗೆ ಇರುವ ಸ್ಪರ್ಧೆಯನ್ನು ಅರ್ಥ ಮಾಡಿಕೊಳ್ಳಿ:

ಸರ್ಕಾರಿ ಉದ್ಯೋಗಗಳಿಗೆ ಸ್ಪರ್ಧೆ ಹೆಚ್ಚಿದೆ ಹಾಗಾಗಿ ಅಭ್ಯರ್ಥಿಯು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗೆ ತಯಾರಿ ನಡೆಸುವುದು ಒಳಿತು.

ಟೈಂ ಚಾರ್ಟ್ ಹಾಕಿಕೊಳ್ಳಿ:

ಟೈಂ ಚಾರ್ಟ್ ಹಾಕಿಕೊಳ್ಳಿ:

ಎಸ್‌ಎಸ್‌ಸಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಂಪಿಟೇಶನ್ ಜಾಸ್ತಿ ಇರುತ್ತದೆ. ಹಾಗಾಗಿ ಅಭ್ಯರ್ಥಿಗಳು ನಿರ್ಧಿಷ್ಟ ಅವಧಿಯಲ್ಲಿ ಅಭ್ಯಾಸವನ್ನು ನಡೆಸುವ ಅಗತ್ಯ ಹೆಚ್ಚಿರುತ್ತದೆ. ಆದುದರಿಂದ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಅಭ್ಯರ್ಥಿಗಳು ಟೈಂ ಚಾರ್ಟ್ ಹಾಕಿಕೊಂಡು ಪ್ರತಿ ವಿಷಯಗಳಿಗೂ ಒತ್ತು ಕೊಟ್ಟು ಅಧ್ಯಯನ ನಡೆಸಿ. 

ವಿಷಯದನುಸಾರ ತಯಾರಿ ನಡೆಸಿ:

ವಿಷಯದನುಸಾರ ತಯಾರಿ ನಡೆಸಿ:

ಟಯರ್ 2 ರ ಪರೀಕ್ಷೆಯು ನಾಲ್ಕು ಸೆಕ್ಷನ್‌ಗಳನ್ನು ಒಳಗೊಂಡಿರುತ್ತದೆ ಅವುಗಳೆಂದರೆ ಆಂಗ್ಲ ಭಾಷೆ, ಜನರಲ್ ಸ್ಟಡೀಸ್, ಪರಿಮಾಣಾತ್ಮಕ ಆಪ್ಟಿಟ್ಯೂಡ್ ಮತ್ತು ಸ್ಟಾಟಿಸ್ಟಿಕ್ಸ್ ವಿಷಯಗಳು. ಅಭ್ಯರ್ಥಿಗಳು ಈ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ವಿಷಯವನ್ನು ಸಮರ್ಥವಾಗಿ ಅಧ್ಯಯನ ನಡೆಸಿದ್ದಲ್ಲಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.

ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಿ:

ಪ್ರಮುಖ ವಿಷಯಗಳಿಗೆ ಆದ್ಯತೆ ನೀಡಿ:

ಪರೀಕ್ಷಾ ದಿನಗಳು ಹತ್ತಿರ ಇರುವುದರಿಂದ ಅಭ್ಯರ್ಥಿಗಳು ಪ್ರಮುಖ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ಅಧ್ಯಯನ ನಡೆಸಿ. ಯಾವ ವಿಷಯಗಳನ್ನು ಹಿಂದಿನ ಪ್ರಶ್ನೆ ಪತ್ರಿಕೆಗಳಲ್ಲಿ ಹೆಚ್ಚು ಕೇಳಲಾಗಿದೆ ಎಂದು ತಿಳಿಯುವುದರ ಜೊತೆಗೆ ಆ ವಿಷಯಗಳಿಗೆ ನೀವೂ ಹೆಚ್ಚು ಪ್ರಾಮುಖ್ಯತೆ ನೀಡಿ ಅಧ್ಯಯನ ನಡೆಸಿ.

ಹಿಂದಿನ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡಿ:

ಹಿಂದಿನ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡಿ:

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ಆ ಪರೀಕ್ಷೆಗೆ ಸಂಬಂಧಿಸಿದಂತೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಕಲೆ ಹಾಕಿ. ನಂತರ ಅವುಗಳ ಅಧ್ಯಯನ ಮಾಡಿ ಏಕೆಂದರೆ ಅಲ್ಲಿ ಕೇಳಲಾಗಿರುವ ಪ್ರಶ್ನೆಗಳು ಮತ್ತು ಪ್ರಶ್ನೆಗಳನ್ನು ಕೇಳಲಾಗಿರುವ ರೀತಿ ನಿಮ್ಮ ತಯಾರಿಗೆ ಹೆಚ್ಚು ಸಹಾಯವಾಗುವುದು. ಅನೇಕ ಭಾರಿ ಪ್ರಶ್ನೆ ಪತ್ರಿಕೆಗಳಲ್ಲಿ ಪುನರಾವರ್ತಿತ ಪ್ರಶ್ನೆಗಳಿರುತ್ತವೆ ಹಾಗಾಗಿ ಅದರಿಂದ ಕೂಡ ನಿಮಗೆ ಸುಲಭವಾಗಿ ಅಂಕ ಪಡೆಯಲು ಸಹಾಯವಾಗುತ್ತದೆ.

ರಿವಿಷನ್ ಮಾಡಿ:

ರಿವಿಷನ್ ಮಾಡಿ:

 

ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇರುವಾಗ ಅಭ್ಯರ್ಥಿಗಳು ಅಧ್ಯಯನ ನಡೆಸಿದ ವಿಷಯಗಳನ್ನು ರಿವಿಷನ್ ಮಾಡಿ. ಪರೀಕ್ಷೆಯ ಹಂತದಲ್ಲಿ ನಡೆಸುವ ಅಧ್ಯಯನದಿಂದ ನಿಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಲಿದೆ. ಹಾಗೆ ಇಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗಬೇಡಿ. ಕಲಿತಿರುವ ವಿಷಯವನ್ನು ಸಂಪೂರ್ಣವಾಗಿ ಮೆಲುಕು ಹಾಕಿ. ಹೀಗೆ ಮಾಡಿದಲ್ಲಿ ಖಂಡಿತವಾಗಿಯೂ ನೀವು ಪರೀಕ್ಷೆಯನ್ನು ಸುಲಭವಾಗಿ ಎದುರಿಸುತ್ತೀರಿ ಜೊತೆಗೆ ಪ್ರಥಮ ಪ್ರಯತ್ನದಲ್ಲಿಯೇ ಯಶಸ್ಸನ್ನು ಕೂಡ ಕಾಣುತ್ತೀರಿ..

ಅಭ್ಯರ್ಥಿಯು ಪರೀಕ್ಷೆಯ ಬಗೆಗೆ ಗಮನದಲ್ಲಿಡಬೇಕಾದ ಒಂದಷ್ಟು ಅಂಶಗಳು:

ಅಭ್ಯರ್ಥಿಯು ಪರೀಕ್ಷೆಯ ಬಗೆಗೆ ಗಮನದಲ್ಲಿಡಬೇಕಾದ ಒಂದಷ್ಟು ಅಂಶಗಳು:

* ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್ - ಪ್ರತಿ ತಪ್ಪು ಉತ್ತರಕ್ಕೆ 0.50 ನೆಗೆಟಿವ್‌ ಅಂಕ

* ಇಂಗ್ಲಿಷ್ ಪತ್ರಿಕೆ- ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್‌ ಅಂಕ

More News  

For Quick Alerts
ALLOW NOTIFICATIONS  
For Daily Alerts

English summary
Here we are sharing the prepartion tips and strategies for aspirant to crack Staff Selection Commission CGL Tier II Examination.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+