ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆಗೆ ತಯಾರಿ ನಡೆಸುವುದು ಹೇಗೆ? ಇಲ್ಲಿದೆ ನೋಡಿ

ಸಿಬ್ಬಂದಿ ನೇಮಕಾತಿ ಆಯೋಗದ ಕಂಬೈನ್ಡ್ ಹೈಯರ್ ಸೆಕೆಂಡರಿ ಲೆವೆಲ್ (ಸಿಹೆಚ್‌ಎಸ್‌ಎಲ್‌) ಪರೀಕ್ಷೆ 2020ರ ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು ಪರೀಕ್ಷೆಗೆ ಹೇಗೆ ತಯಾರಿ ನಡೆಸಬಹುದು ಎನ್ನುವುದನ್ನು ಕರಿಯರ್ ಇಂಡಿಯಾ ನಿಮಗೆ ಇವತ್ತು ತಿಳಿಸುತ್ತದೆ.

ಈ ಪರೀಕ್ಷೆಯನ್ನು ವಿವಿಧ ಸಚಿವಾಲಯಗಳು/ಇಲಾಖೆಗಳು/ ಕಚೇರಿಗಳಲ್ಲಿ ಖಾಲಿ ಇರುವ ಲೋವರ್‌ ಡಿವಿಷನ್‌ ಕ್ಲರ್ಕ್‌/ ಜೂನಿಯರ್‌ ಸೆಕ್ರೇಟೇರಿಯೆಟ್‌ ಅಸಿಸ್ಟೆಂಟ್‌, ಪೋಸ್ಟಲ್‌ ಅಸಿಸ್ಟೆಂಟ್‌/ಸಾರ್ಟಿಂಗ್‌ ಅಸಿಸ್ಟೆಂಟ್‌ ಮತ್ತು ಡೇಟಾ ಎಂಟ್ರಿ ಆಪರೇಟರ್‌ ಹುದ್ದೆಗಳನ್ನು ಭರ್ತಿ ಮಾಡಲು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ಬಾಕಿ ಇರುವ ದಿನಗಳಲ್ಲಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಬಹುದು ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷಾ ತಯಾರಿಗೆ ಸುಲಭ ವಿಧಾನ

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆಯ ಬಗೆಗೆ ತಿಳಿಯಿರಿ:
 

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆಯ ಬಗೆಗೆ ತಿಳಿಯಿರಿ:

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ಪರೀಕ್ಷಾ ಪ್ಯಾಟ್ರನ್ ಬಗೆಗೆ ತಿಳಿಯಿರಿ ಹಾಗೆ ಪರೀಕ್ಷಾ ಪಠ್ಯಕ್ರಮವನ್ನು ತಿಳಿದುಕೊಳ್ಳಿ ನಂತರ ಅದಕ್ಕೆ ಹೇಗೆ ತಯಾರಿ ನಡೆಸಬೇಕು ಎನ್ನುವ ಪ್ಲಾನ್ ಮಾಡಿ. ಇಷ್ಟೆಲ್ಲಾ ತಯಾರಿ ನಡೆಸಿದ ಮೇಲೆ ಕಟ್‌-ಆಫ್ ಸ್ಕೋರ್ ಎಷ್ಟಿರಬೇಕು ಎನ್ನುವುದನ್ನು ಮುಂಚೆಯೇ ತಿಳಿದರೆ ನೀವು ತಯಾರಿ ನಡೆಸಿ ಎಕ್ಸಾಂ ಕ್ಲಿಕ್ ಆಗೋಕೆ ಸಾಧ್ಯವಾಗಬಹದುದು.

ಆನ್‌ಲೈನ್ ಪರೀಕ್ಷಾ ಸಿದ್ಧತೆ ನಡೆಸಿ:

ಆನ್‌ಲೈನ್ ಪರೀಕ್ಷಾ ಸಿದ್ಧತೆ ನಡೆಸಿ:

ಟಯರ್ 1 ಮತ್ತು ಟಯರ್ 2 ಪರೀಕ್ಷೆಗಳನ್ನು ಆನ್‌ಲೈನ್ ನಲ್ಲಿ ನಡೆಸಲಾಗುವುದು. ಈ ಪರೀಕ್ಷೆಗಳು ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ಎದುರಿಸುವ ಕ್ರಮವನ್ನು ಅಭ್ಯಾಸ ಮಾಡಿ.ಇದರಿಂದ ಯಾವುದೇ ಅಡೆ ತಡೆಗಳಿಲ್ಲದೆಯೇ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.

ಪರೀಕ್ಷೆಗೆ ಇರುವ ಕಾಂಪಿಟೇಶನ್ ಬಗೆಗೆ ಅರ್ಥ ಮಾಡಿಕೊಳ್ಳಿ:

ಪರೀಕ್ಷೆಗೆ ಇರುವ ಕಾಂಪಿಟೇಶನ್ ಬಗೆಗೆ ಅರ್ಥ ಮಾಡಿಕೊಳ್ಳಿ:

ಸರ್ಕಾರಿ ಉದ್ಯೋಗ ಅಂದಮೇಲೆ ಎಲ್ಲರಿಗೂ ಎಸ್‌ಎಸ್‌ಸಿ ಪರೀಕ್ಷೆಯ ಮೇಲೆ ಸೆಳೆತ ಜಾಸ್ತಿ ಇರುತ್ತದೆ. ಪ್ರತಿ ವರ್ಷವೂ ತುಂಬಾನೆ ಕಾಂಪಿಟೇಷನ್‌ನಲ್ಲಿ ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಾರೆ. ಹಾಗಾಗಿ ಅದನ್ನು ಅಭ್ಯರ್ಥಿಗಳು ಅರ್ಥ ಮಾಡಿಕೊಂಡು ಪರೀಕ್ಷಾ ಪ್ರಶ್ನೆಗಳ ಕ್ರಮದ ಬಗೆಗೆ ಹೆಚ್ಚು ಒತ್ತು ಕೊಟ್ಟು ತಯಾರಿ ನಡೆಸಿದಲ್ಲಿ ಒಳಿತು.

ಟೈಂ ಚಾರ್ಟ್ ಹಾಕಿಕೊಳ್ಳಿ:
 

ಟೈಂ ಚಾರ್ಟ್ ಹಾಕಿಕೊಳ್ಳಿ:

ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಂಪಿಟೇಶನ್ ಜಾಸ್ತಿ ಇರುತ್ತದೆ. ಹಾಗಾಗಿ ಅಭ್ಯರ್ಥಿಗಳು ನಿರಂತರ ಅಭ್ಯಾಸವನ್ನು ನಡೆಸುವ ಅಗತ್ಯ ಹೆಚ್ಚಿರುತ್ತದೆ. ಆದುದರಿಂದ ಅಭ್ಯರ್ಥಿಗಳು ಟೈಂ ಚಾರ್ಟ್ ಹಾಕಿಕೊಂಡು ಪ್ರತಿ ವಿಷಯಗಳಿಗೂ ಒತ್ತು ಕೊಟ್ಟು ಅಧ್ಯಯನ ನಡೆಸಿ. ಇದರಿಂದ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಎದುರಿಸಲು ಸಹಾಯವಾಗುವುದು.

ಸಬ್‌ಜೆಕ್ಟ್ ವೈಸ್ ತಯಾರಿ ನಡೆಸಿ:

ಸಬ್‌ಜೆಕ್ಟ್ ವೈಸ್ ತಯಾರಿ ನಡೆಸಿ:

ಟಯರ್ 1 ರ ಪರೀಕ್ಷೆಯು ನಾಲ್ಕು ಸೆಕ್ಷನ್‌ಗಳನ್ನು ಒಳಗೊಂಡಿರುತ್ತದೆ ಅವುಗಳೆಂದರೆ ಆಂಗ್ಲ ಭಾಷೆ, ಜನರಲ್ ಇಂಟಲಿಜೆನ್ಸ್, ಪರಿಮಾಣಾತ್ಮಕ ಆಪ್ಟಿಟ್ಯೂಡ್ ಮತ್ತು ಸಾಮಾನ್ಯ ಜಾಗೃತಿ ವಿಷಯಗಳು. ಅಭ್ಯರ್ಥಿಗಳು ಈ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ವಿಷಯವನ್ನು ಸಮರ್ಥವಾಗಿ ಅಧ್ಯಯನ ನಡೆಸಿದ್ದಲ್ಲಿ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.

ಇತರೆ ಪರೀಕ್ಷೆಗಳ ಕ್ರಮದ ಬಗೆಗೆ ಅರಿಯಿರಿ:

ಇತರೆ ಪರೀಕ್ಷೆಗಳ ಕ್ರಮದ ಬಗೆಗೆ ಅರಿಯಿರಿ:

ಎಸ್‌ಎಸ್‌ಸಿ ನಡೆಸುವ ಇತರೆ ಪರೀಕ್ಷಾ ಕ್ರಮ ಮತ್ತು ಪಠ್ಯಕ್ರಮ ಮತ್ತು ಪ್ರಶ್ನೆ ಪತ್ರಿಕೆಗಳ ಬಗೆಗೆ ಒಂದು ಗ್ಲಾನ್ಸ್ ಮಾಡಿ. ಇದರಿಂದ ಬೇರೆ ಪರೀಕ್ಷೆಗಳಲ್ಲಿ ಯಾವ ಪ್ರಶ್ನೆಗಳನ್ನು ಕೇಳಲಾಗಿದೆ ಮತ್ತು ಯಾವ ರೀತಿ ಪ್ರಶ್ನಗಳನ್ನು ಕೇಳಲಾಗಿರುತ್ತದೆ ಎನ್ನುವುದನ್ನು ತಿಳಿಯುತ್ತೀರಿ. ಇದರಿಂದ ಎಸ್‌ಎಸ್‌ಸಿ ಸಿಹೆಚ್‌ಎಸ್‌ಎಲ್‌ ಪರೀಕ್ಷೆಯನ್ನು ಎದುರಿಸಲು ಸುಲಭವಾಗಿ ಸಹಾಯವಾಗುವುದು.

ಪ್ರಮುಖ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ:

ಪ್ರಮುಖ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ:

ಪರೀಕ್ಷಾ ದಿನಗಳು ಹತ್ತಿರ ಇರುವುದರಿಂದ ಅಭ್ಯರ್ಥಿಗಳು ಪ್ರಮುಖ ವಿಷಯಗಳಿಗೆ ಪ್ರಾಮುಖ್ಯತೆ ನೀಡಿ ಅಧ್ಯಯನ ನಡೆಸಿ. ಯಾವ ವಿಷಯಗಳನ್ನು ಹಿಂದಿನ ಪ್ರಶ್ನೆ ಪತ್ರಿಕೆಗಳಲ್ಲಿ ಹೆಚ್ಚು ಕೇಳಲಾಗಿದೆ ಎಂದು ತಿಳಿಯುವುದರ ಜೊತೆಗೆ ಆ ವಿಷಯಗಳಿಗೆ ನೀವೂ ಹೆಚ್ಚು ಪ್ರಾಮುಖ್ಯತೆ ನೀಡಿ ಅಧ್ಯಯನ ನಡೆಸಿ.

ಹಿಂದಿನ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡಿ

ಹಿಂದಿನ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮಾಡಿ

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡ ಅಭ್ಯರ್ಥಿಗಳು ಆ ಪರೀಕ್ಷೆಗೆ ಸಂಬಂಧಿಸಿದಂತೆ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಕಲೆ ಹಾಕಿ. ನಂತರ ಅವುಗಳ ಅಧ್ಯಯನ ಮಾಡಿ ಏಕೆಂದರೆ ಅಲ್ಲಿ ಕೇಳಲಾಗಿರುವ ಪ್ರಶ್ನೆಗಳು ಮತ್ತು ಪ್ರಶ್ನೆಗಳನ್ನು ಕೇಳಲಾಗಿರುವ ರೀತಿ ನಿಮ್ಮ ತಯಾರಿಗೆ ಹೆಚ್ಚು ಸಹಾಯವಾಗುವುದು. ಅನೇಕ ಭಾರಿ ಪ್ರಶ್ನೆ ಪತ್ರಿಕೆಗಳಲ್ಲಿ ಪುನರಾವರ್ತಿತ ಪ್ರಶ್ನೆಗಳಿರುತ್ತವೆ ಹಾಗಾಗಿ ಅದರಿಂದ ಕೂಡ ನಿಮಗೆ ಸುಲಭವಾಗಿ ಅಂಕ ಪಡೆಯಲು ಸಹಾಯವಾಗುತ್ತದೆ.

ಮಾಕ್ ಟೆಸ್ಟ್ ತೆಗೆದುಕೊಳ್ಳಿ:

ಮಾಕ್ ಟೆಸ್ಟ್ ತೆಗೆದುಕೊಳ್ಳಿ:

ಎಸ್‌ಎಸ್‌ಸಿ ಪರೀಕ್ಷೆಗಳಿಗೆ ಹೆಚ್ಚು ಕಾಂಪಿಟೇಶನ್ ಇದ್ದು ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇವೆ. ಹಾಗಾಗಿ ಅಭ್ಯರ್ಥಿಗಳು ವಾರಕ್ಕೆ ಎರಡು ಭಾರಿಯಾದರೂ ಮಾಕ್ ಟೆಸ್ಟ್ ತೆಗೆದುಕೊಳ್ಳಿ ಇದರಿಂದ ಪರೀಕ್ಷೆಯನ್ನು ಎದುರಿಸುವ ರೀತಿ ಮತ್ತು ಸಮಯ ನಿರ್ವಹಣೆಯನ್ನು ತಿಳಿಯುವಿರಿ. ಮಾಕ್ ಟೆಸ್ಟ್ ತೆಗೆದುಕೊಳ್ಳುವುದರಿಂದ ನಿಮ್ಮ ಬುದ್ದಿ ಚುರುಕುಗೊಂಡು ನಿಗದಿತ ಸಮಯದೊಳಗೆ ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸುವುದನ್ನು ಕಲಿಯುತ್ತೀರಿ.

ಪರಿಣಾಮಕಾರಿಯಾಗಿ ಅಧ್ಯಯನ ನಡೆಸಿ:

ಪರಿಣಾಮಕಾರಿಯಾಗಿ ಅಧ್ಯಯನ ನಡೆಸಿ:

ಪರೀಕ್ಷೆಗೆ ಕೆಲವೇ ದಿನಗಳು ಬಾರಿ ಇರುವಾಗ ಅಭ್ಯರ್ಥಿಗಳು ಅಧ್ಯಯನ ನಡೆಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ರಿವೈಸ್ ಮಾಡಿ ಅಧ್ಯಯನ ನಡೆಸಿ. ಕೊನೆಯ ಹಂತದಲ್ಲಿ ನಡೆಸುವ ಅಧ್ಯಯನದಿಂದ ನಿಮ್ಮ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಲಿದೆ. ಹಾಗೆ ಇಲ್ಲಿ ಯಾವುದೇ ಗೋಜಿಗೆ ಒಳಗಾಗಬೇಡಿ. ಕಲಿತಿರುವ ವಿಷಯವನ್ನು ಸಂಪೂರ್ಣವಾಗಿ ಪುನರ್‌ಮನನ ಮಾಡಿ. ಹೀಗೆ ಮಾಡಿದಲ್ಲಿ ಖಂಡಿತವಾಗಿಯೂ ನೀವು ಪರೀಕ್ಷೆಯನ್ನು ಸುಲಭವಾಗಿ ಎದುರಿಸುತ್ತೀರಿ ಜೊತೆಗೆ ಪ್ರಥಮ ಪ್ರಯತ್ನದಲ್ಲಿಯೇ ಯಶಸ್ಸನ್ನು ಕೂಡ ಕಾಣಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are sharing the prepartion tips and strategies for aspirant to crack Staff Selection Commission CHSL Examination
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X