Teachers Day 2020: ಈ ರೀತಿಯಾಗಿ ನಿಮ್ಮ ಟೀಚರ್ಸ್ ಗೆ ಸಪ್ರೈಸ್ ನೀಡಿ !

By Kavya

ಟೀಚರ್ಸ್ ಡೇ... ಜಗತ್ತಿನಾದ್ಯಂತ ವಿಭಿನ್ನ ದಿನಾಂಕಗಳಲ್ಲಿ ಶಿಕ್ಷಕರ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಿಸುತ್ತಾರೆ. ಇನ್ನು ನಮ್ಮ ದೇಶದಲ್ಲಿ ಸೆಪ್ಟಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನ ಆಚರಿಸಲಾಗುತ್ತದೆ. ಡಾ. ಸರ್ವಪಳ್ಳಿ ರಾಧಾಕೃಷ್ಣ ಅವರ ಸ್ಮರಣಾರ್ಥವಾಗಿ ಅವರ ಹುಟ್ಟಿದ ದಿನಾಂಕವನ್ನ ಟೀಚರ್ಸ್ ಡೇಯನ್ನಾಗಿ ಆಚರಿಸಲಾಗುತ್ತದೆ.

 

ಟೀಚರ್ಸ್ ಡೇ ಸ್ಪೇಶಲ್... ಯಾವ ರೀತಿಯಾಗಿ ನಿಮ್ಮ ಟೀಚರ್ಸ್ ಗೆ ಸಪ್ರೈಸ್ ನೀಡಬಹುದು!

ಇನ್ನು ಈ ದಿನಕ್ಕಾಗಿ ಮಕ್ಕಳು ಬಹಳ ಉತ್ಸುಕರಾಗಿ ಕಾಯುತ್ತಿರುತ್ತಾರೆ. ತಮ್ಮ ನೆಚ್ಚಿನ ಶಿಕ್ಷಕರಿಗೆ ಏನಾದ್ರೂ ಸಪ್ರೈಸ್ ಕೊಡಬೇಕೆಂದು ಬಯಸುತ್ತಾರೆ. ಹೆಚ್ಚಿನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಈ ದಿನದಂದು ತಮ್ಮ ನೆಚ್ಚಿನ ಶಿಕ್ಷಕರಿಗೆ ಹೂವು ಇಲ್ಲ ಗ್ರೀಟಿಂಗ್ ಕಾರ್ಡ್ ನೀಡಿ ವಿಶ್ ಮಾಡುತ್ತಾರೆ. ಅಷ್ಟೇ ಅಲ್ಲ ಕೆಲವೊಮ್ಮೆ ಆಕರ್ಷಕ ಉಡುಗೆಯನ್ನ ಕೂಡಾ ನೀಡುತ್ತಾರೆ.

ನಿಮ್ಮ ಕೆಲಸ ಹೋಗಲು ಇವಿಷ್ಟು ಸಾಕು!

ಇದೀಗ ನಿಮ್ಮ ಟೀಚರ್ಸ್ ಗಳನ್ನ ಹೇಗೆ ಇಂಪ್ರೇಸ್ ಮಾಡಬಹುದು ಅದು ಕೂಡಾ ಕಡಿಮೆ ಖರ್ಚಿನಲ್ಲಿ ಎಂಬ ಟಿಪ್ಸ್ ಇದೀಗ ಕೆರಿಯರ್ ಇಂಡಿಯಾ ನೀಡುತ್ತಿದೆ ಮುಂದಕ್ಕೆ ಓದಿ.

ನಿಮ್ಮ ಶಿಕ್ಷಕರಿಗೆ ಇಷ್ಟವಾದ ಸಬ್‌ಜೆಕ್ಟ್ ಬಗೆಗಿನ ಬುಕ್ ನೀಡಿ:

ನಿಮ್ಮ ಶಿಕ್ಷಕರಿಗೆ ಇಷ್ಟವಾದ ಸಬ್‌ಜೆಕ್ಟ್ ಬಗೆಗಿನ ಬುಕ್ ನೀಡಿ:

ಶಿಕ್ಷಕರು ಎಂದ್ರೆ ಅವರಿಗೆ ಓದಿನಲ್ಲಿ ಆಸಕ್ತಿ ಇದ್ದೇ ಇರುತ್ತದೆ. ಓದುವುದೇ ಅವರ ಹವ್ಯಾಸ ಕೂಡಾ ಆಗಿರುತ್ತದೆ. ಹಾಗಾಗಿ ಅವರಿಗೆ ಕಾದಂಬರಿ ಇಲ್ಲ ಅವರ ಆಸಕ್ತಿಯ ಸಬ್‌ಜೆಕ್ಟ್ ಮೇರೆಗೆ ಒಂದು ಪುಸ್ತಕ ನೀಡಿ. ಇನ್ನು ಪುಸ್ತಕ ಉಡುಗೊರೆಯಾಗಿ ನೀಡುವಾಗ ಅದರ ಮೊದಲ ಪುಟದಲ್ಲಿ ಸಂದೇಶ ಬರೆಯಲು ಮರೆಯದಿರಿ. ನಿಮ್ಮ ಈ ಐಡಿಯಾದಿಂದ ನಿಜಕ್ಕೂ ನಿಮ್ಮ ಶಿಕ್ಷಕರು ಇಂಪ್ರೇಸ್ ಆಗುತ್ತಾರೆ. ಅಷ್ಟೇ ಅಲ್ಲ ನಿಮ್ಮ ಉಡುಗೊರೆಯನ್ನ ಸೇಫ್ ಆಗಿ ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ.

ಕ್ಲಾಸ್ ರೂಂ ಅಲಂಕರಿಸಿ:

ಕ್ಲಾಸ್ ರೂಂ ಅಲಂಕರಿಸಿ:

ನಿಮ್ಮ ಕ್ಲಾಸ್‌ನಲ್ಲಿ ಯಾವುದಾದ್ರೂ ಅಗತ್ಯವಾದ ಮಾಹಿತಿ ನೀಡುವಂತಹ ವಸ್ತುಗಳು ಮಿಸ್ ಆಗಿದೆಯೇ ಹಾಗಿದ್ರೆ ನೋ ವರಿ ಈ ಬಾರಿ ನಿಮ್ಮ ಟೀಚರ್ಸ್ ಡೇ ಗೆ ಅದನ್ನೇ ಗಿಫ್ಟ್ ಆಗಿ ನೀಡಿ. ಸ್ವಲ್ಪ ಯೂನಿಕ್ ಆಗಿ ಯೋಚಿಸಿ. ನಿಮ್ಮ ಸಿಲೇಬಸ್ ಗೆ ಸಂಬಂಧಪಟ್ಟಂತೆ ಯಾವುದಾದ್ರೂ ಮಾಹಿತಿಗಳನ್ನ ಒಳಗೊಂಡಂತೆ ಕ್ಲಾಸ್ ರೂಂ ಅಲಂಕರಿಸಿ.

 

ಕೃತಜ್ಞತೆ ಸಲ್ಲಿಸಿ:
 

ಕೃತಜ್ಞತೆ ಸಲ್ಲಿಸಿ:

ಈ ವಿಶೇಷ ದಿನದಂದು, ಪೇಪರ್ ಫೀಸ್ ಗಳಲ್ಲಿ ನೀವು ಏನಾದ್ರೂ ಸಂದೇಶ ಬರೆದು ನಿಮ್ಮ ಶಿಕ್ಷಕರಿಗೆ ಥ್ಯಾಂಕ್ಸ್ ತಿಳಿಸಿ. ನಿಮ್ಮ ಕ್ಲಾಸ್‌ನ ಎಲ್ಲಾ ವಿದ್ಯಾರ್ಥಿಗಳಿಗೂ ತಿಳಿಸಿ, ಟೀಚರ್ ಬಗ್ಗೆ ಏನಾದ್ರೂ ಸಂದೇಶ ಬರೆಯಲು. ಬಳಿಕ ಒಂದು ಜಾರ್ ನಲ್ಲಿ ಎಲ್ಲರ ಸಂದೇಶದ ಚೀಟಿ ಹಾಕಿ ನಿಮ್ಮ ಟೀಚರ್‌ಗೆ ಗಿಫ್ಟ್ ಆಗಿ ನೀಡಿ. ಶಿಕ್ಷಕರು ಕ್ಲಾಸ್‌ಗೆ ಬಂದಾಗ ಅವರ ಮುಂದೆ ಈ ಜಾರ್ ನಿಂದ ಒಂದೊಂದು ಚೀಟ್ ತೆಗೆದು ಓದಿಕೊಳ್ಳಿ. ಇದರಿಂದ ನಿಮ್ಮ ಟೀಚರ್ ಒಂದು ಕ್ಷಣ ಭಾವನಾತ್ಮಕತೆಗೆ ಒಳಗಾಗುವವರು ಖಂಡಿತ.

 

ಸಪ್ರೈಸ್ ಬಾಸ್ಕೇಟ್:

ಸಪ್ರೈಸ್ ಬಾಸ್ಕೇಟ್:

ಪ್ರತೀ ದಿನ ಶಿಕ್ಷಕರು ಏನಾದ್ರೂ ವಸ್ತುಗಳನ್ನ ಕ್ಲಾಸ್‌ ರೂಂನಲ್ಲಿ ಬಳಸುತ್ತಾರೆ. ಸ್ಟಿಕಿ ನೋಟ್ಸ್, ಮಾರ್ಕರ್ , ಚಾಕ್ ಪೀಸ್ ಹಾಗೂ ಪೆನ್ ಸ್ಟಾಂಡ್ ಸೇರಿದಂತೆ ಇನ್ನೂ ದಿನನಿತ್ಯ ಕ್ಲಾಸ್‌ನಲ್ಲಿ ಶಿಕ್ಷಕರು ಉಪಯೋಗಿಸುವ ಚಿಕ್ಕಪುಟ್ಟ ವಸ್ತುಗಳನ್ನ ಬಾಸ್ಕೆಟ್ ನಲ್ಲಿ ಹಾಕಿ ಅವರಿಗೆ ಗಿಫ್ಟ್ ಆಗಿ ನೀಡಿ.

 

ಎಫೆಕ್ಟಿವ್ ಸ್ಪೀಚ್ ತಯಾರು ಮಾಡಿ:

ಎಫೆಕ್ಟಿವ್ ಸ್ಪೀಚ್ ತಯಾರು ಮಾಡಿ:

 

ಹೆಚ್ಚಿನ ಶಾಲೆಗಳಲ್ಲಿ ಮೀಟಿಂಗ್ ಇಲ್ಲ ಸಣ್ಣ ಪ್ರೋಗ್ರಾಂ ಮೂಲಕ ಟೀಚರ್ಸ್ ಡೇ ಸೆಲೆಬ್ರೇಟ್ ಮಾಡಲಾಗುತ್ತದೆ. ಹಾಗಾಗಿ ಇಂತಹ ಸಮಾರಂಭದಲ್ಲಿ ನೀವು ನಿಮ್ಮ ಟೀಚರ್ ಮೇಲಿನ ಅಭಿಮಾನವನ್ನ ವ್ಯಕ್ತಪಡಿಸಬಹುದು. ಟೀಚರ್ ಕುರಿತಾಗಿ ವೇದಿಕೆ ಮೇಲೆ ಸ್ಪೀಚ್ ಮಾಡಿ. ನಿಮ್ಮ ಫೇವರೆಟ್ ಟೀಚರ್ ಆಗಿದ್ದರೆ ಅವರ ಬಗ್ಗೆ ನಿಮಗೆ ಅನಿಸಿದ್ದನ್ನ ನೀವು ಹೇಳಬಹುದು ಅಲ್ಲಿ ಯಾವ ತಪ್ಪು ಕೂಡಾ ಆಗುವುದಿಲ್ಲ.

 

For Quick Alerts
ALLOW NOTIFICATIONS  
For Daily Alerts

English summary
Teachers' Day, which is celebrated across the world on various dates, is observed on September 5 in India. The day is dedicated to Dr Sarvepalli Radhakrishnan, who is not only considered as a great teacher but also an advocate of education reforms in the country. The day is commemorated to appreciate the contributions made by teachers in this particular field
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X