ಹೊರದೇಶದಲ್ಲಿ ಶಿಕ್ಷಣಭ್ಯಾಸ ಮಾಡಬೇಕೆಂದು ಯಾವತ್ತಾದ್ರೂ ಯೋಚಿಸಿದ್ದೀರಾ...? ಒಂದು ವೇಳೆ ಇಲ್ಲ ಎಂದಾದ್ರೆ ಈ ಸ್ಟೋರಿ ಓದಿ. ಹೊರದೇಶದಲ್ಲಿ ಓದಿದ್ರೆ ಏನೆಲ್ಲಾ ಲಾಭಗಳಿವೆ ಎಂದು ನಾವು ನಿಮಗೆ ತಿಳಿಸಕೊಡುತ್ತಿದ್ದೇವೆ.

ಕಾಂಪಿಡೆನ್ಸ್ ಜತೆ ಪರ್ಸನಾಲಿಟಿ ಡೆವಲಪ್ ಮೆಂಟ್, ಜತೆಗೆ ಜಗತ್ತು ತುಂಬಾ ಟೂರ್ ಮಾಡುವುದರ ಜತೆಗೆ ಫ್ಯಾಮಿಲಿ, ಫ್ರೆಂಡ್ಸ್ ಗಳಿಲ್ಲದೇ ಅದೆಷ್ಟೋ ವರ್ಷ ಹೊಸ ಪ್ರದೇಶದಲ್ಲಿ ಒಬ್ಬಂಟಿಯಾಗಿ ವಿದ್ಯಾಭ್ಯಾಸ ಮುಂದು ವರೆಸಿದ್ರೆ ಏನೆಲ್ಲಾ ಪ್ರಯೋಜನಗಳಿವೆ ಎಂದು ಮುಂದಕ್ಕೆ ಓದಿ.
ಹೊರದೇಶದಲ್ಲಿ ಸ್ಟಡಿ ಮಾಡುವುದರಿಂದ 5 ಪ್ರಯೋಜನಗಳು ನಿಮ್ಮದಾಗಿಸಿಕೊಳ್ಳಬಹುದು.
ಬ್ರೇಕ್ ಔಟ್ ಆಫ್ ಅಕಾಡೆಮಿಕ್ ರೂಟಿನ್:
ಹೊರದೇಶದಲ್ಲಿ ಶಿಕ್ಷಣ ಪಡೆಯುವುದು ಅದೇ ರೀತಿ ತಾಯ್ನಾಡಲ್ಲಿ ಶಿಕ್ಷಣ ಪಡೆಯುದಕ್ಕೂ ನಡುವೆ ತುಂಬಾನೇ ವ್ಯತ್ಯಾಸವಿದೆ. ಹೊರದೇಶದಲ್ಲಿ ನಿಮಗೆ ವರ್ಲ್ಡ್ ಕ್ಲಾಸ್ ಶಿಕ್ಷಣ ಸಿಗುತ್ತದೆ. ಅಷ್ಟೇ ಅಲ್ಲ ಹೊಸ ಸಂಸ್ಕೃತಿಯ ಪರಿಚಯ ನಿಮ್ಮದಾಗುತ್ತದೆ. ಅಷ್ಟೇ ಅಲ್ಲ ಅಲ್ಲಿ ಶಿಕ್ಷಣ ಪಡೆದ ಬಳಿಕ ನಿಮ್ಮ ರೆಸ್ಯೂಮ್ ಗೂ ಕೂಡಾ ಒಂದು ಗುಡ್ ಲುಕ್ ಬರುತ್ತದೆ.
ನಿಮ್ಮ ಪದವಿಗೆ ಪ್ರಾಮುಖ್ಯತೆ ಜತೆಗೆ ಉದ್ಯೋಗವಕಾಶ :
ನೀವು ಹೊರದೇಶದಲ್ಲಿ ಪದವಿ ಮುಗಿಸಿ ಬಂದ್ರೆ ನಿಮ್ಮ ಡಿಗ್ರಿಗೆ ಪ್ರತ್ಯೇಕ ಪ್ರಾಮುಖ್ಯತೆ ಸಿಗುತ್ತದೆ ಜತೆಗೆ ನಿಮಗೆ ಹಲವಾರು ಪ್ರತಿಷ್ಟಿತ ಕಂಪನಿಗಳಲ್ಲಿ ಉದ್ಯೋಗಕ್ಕೆ ಆಫರ್ ಕೂಡಾ ಬರುತ್ತದೆ. ಕೆಲವು ಕಂಪನಿಗಳು ಹೊರದೇಶದಲ್ಲಿ ಶಿಕ್ಷಣಭ್ಯಾಸ ಮುಗಿಸಿರುವ ಅಭ್ಯರ್ಥಿಗಳಿಗೆ ಹೆಚ್ಚಾಗಿಒ ಆಫರ್ ನೀಡುತ್ತದೆ.
ಟ್ರಾವೆಲ್ ಪ್ರಿಯರಿಗೆ ಬೆಸ್ಟ್:
ಹೊರದೇಶದಲ್ಲಿ ಹೋಗಿ ಶಿಕ್ಷಣಾಭ್ಯಾಸ ಮಾಡಲು ಪ್ರಮುಖ ಕಾರಣ ಇದೂ ಕೂಡಾ ಒಂದಾಗಿರುತ್ತದೆ. ಯಾರೆಲ್ಲಾ ಟ್ರಾವೆಲ್ ಪ್ರಿಯರಾಗಿರುತ್ತಾರೋ ಅವರು ಹೊರದೇಶದಲ್ಲಿ ಕಲಿಯಲು ಹೆಚ್ಚು ಒಲವು ತೋರಿಸುತ್ತಾರೆ. ವಿದ್ಯಾಭ್ಯಾಸದ ಜತೆ ಹೊಸ ದೇಶಗಳನ್ನ ಸುತ್ತಾಡೋ ಅವಕಾಶ ಅವರದಾಗಿರುತ್ತದೆ. ಉತ್ತಮ ವಿದ್ಯಾಭ್ಯಾಸ ಪಡೆಯುವುದು ಮಾತ್ರವಲ್ಲ ಅವರು ವೀಕೆಂಡ್ ಗಳಲ್ಲಿ ಹೊರ ದೇಶವನ್ನ ಕೂಡಾ ಸುತ್ತಾಡ ಬಹುದು.
ಜಗತ್ತಿನಾದ್ಯಂತ ಸ್ನೇಹಿತರು:
ಹೌದು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ರೆ ನಿಮಗೆ ಹಲವಾರು ಸ್ನೇಹಿತರು ಸಿಗುತ್ತಾರೆ. ಬೇರೆ ಬೇರೆ ದೇಶದ ಸ್ನೇಹಿತರು ನಿಮಗೆ ಸಿಗುತ್ತಾರೆ. ಇದರಿಂದ ನಿಮ್ಮ ಪರ್ಸನಾಲಿಟಿ ಅಭಿವೃದ್ದಿಯಾಗುತ್ತದೆ. ಬೇರೆ ಬೇರೆ ದೇಶದ ಸ್ನೇಹಿತರನ್ನ ಭೇಟಿಯಾಗುವುದರಿಂದ ನಿಮಗೆ ಹೆಚ್ಚಿನ ಜ್ಞಾನ ಸಿಗುವುದು, ಅವರಿಂದ ಇನ್ನೂ ಹೆಚ್ಚಿನದನ್ನ ಕಲಿಯುವ ಅವಕಾಶ ನಿಮ್ಮದಾಗುವುದು.
ಸ್ವತಂತ್ರ ವ್ಯಕ್ತಿ ನೀವಾಗ್ತೀರಾ:
ಹೌದು ಬೇರೆ ದೇಶದಲ್ಲಿ ಯಾರ ಸಹಾಯ ಇಲ್ಲದೆನೆ ಹಾಗೆಯೇ ಯಾರ ಹಂಗು ಇಲ್ಲದೆನೇ ನೀವು ಲೈಫ್ ಲೀಡ್ ಮಾಡುವುದರಿಂದ ನಿಮ್ಮಲ್ಲಿ ಧೈರ್ಯ ಹಾಗೂ ಸ್ವತಂತ್ರ ಭಾವನೆ ಮೂಡುತ್ತದೆ. ಹೊರದೇಶದಲ್ಲಿ ನೀವು ಒಬ್ಬರೇ ಇರುವುದರಿಂದ ಮನೆಯ ಕೆಲಸ, ಶಾಪಿಂಗ್, ತರಕಾರಿ ಖರೀದಿ, ಬಿಲ್ ಪಾವತಿ ಸೇರಿದಂತೆ ಈ ಎಲ್ಲಾ ಕೆಲಸಗಳನ್ನ ನೀವೊಬ್ಬರೆ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ ಹೊಸ ಭಾಷೆಯ ಪರಿಚಿತವಾಗುತ್ತದೆ ಜತೆಗೆ ಕಲಿಯುವ ಅನಿವಾರ್ಯ ಕೂಡಾ ನಿಮ್ಮದಾಗಿರುತ್ತದೆ.


Click it and Unblock the Notifications











