ಸಿನಿಮಾಗಳಲ್ಲಿ ನೀವು ಹುಡುಗಿಯರ ಹಾಸ್ಟೆಲ್ ನೋಡಿರಬಹುದು. ಕಲರ್ ಕಲರ್ ಆಗಿ ಹುಡುಗಿಯರ ಹಾಸ್ಟೆಲ್ ನಿಮಗೆ ವರ್ಣಿಸುತ್ತಾರೆ. ಅದನ್ನೆಲ್ಲಾ ನೋಡಿದ್ರೆ ಅಯ್ಯೋ ನಾವು ಕೂಡಾ ಹಾಸ್ಟೆಲ್ ಗೆ ಸೇರಬೇಕು ಎಂದು ನಿಮಗೆ ಅನಿಸಬಹುದು. ಇನ್ನ ಹುಡುಗರಿಗೆ ನಾವು ಕೂಡಾ ಒಮ್ಮೆ ಹುಡುಗಿಯರ ಹಾಸ್ಟೆಲ್ ಕದ್ದು ಮುಚ್ಚಿ ನೋಡಬೇಕು ಎಂದು ಅನಿಸಬಹುದು.

ಆದ್ರೆ ಅದೆಲ್ಲ ಬರೀ ಸಿನಿಮಾದಲ್ಲಿ ಮಾತ್ರ ನಿಜ ಜೀವನದ ಹಾಸ್ಟೆಲ್ ನಲ್ಲಿ ಹಾಗೆಲ್ಲ ಇರುವುದಿಲ್ಲ. ನಿಜ ಜೀವನದ ಹಾಸ್ಟೆಲ್ ಗೂ ಸಿನಿಮಾ ಹಾಸ್ಟೆಲ್ ಗೂ ಏನೆಲ್ಲಾ ವ್ಯತ್ಯಾಸವಿದೆ ಎಂದು ನಿಮಗೆ ಕೆರಿಯರ್ ಇಂಡಿಯಾ ತಿಳಿಸುತ್ತಿದೆ ಮುಂದಕ್ಕೆ ಓದಿ
ಹಾಸ್ಟೆಲ್ ನಲ್ಲಿ ಹುಡುಗಿಯರು ಸೆಕ್ಸಿ ಉಡುಗೆಯಲ್ಲೇ ತಿರುಗಾಡಿಕೊಂಡು ಇರಲ್ಲ:
ಕರಣ್ ಜೋಹರ್ ಸಿನಿಮಾದಲ್ಲಿ ನೀವು ಹುಡುಗಿಯರ ಹಾಸ್ಟೆಲ್ ಅಂದ್ರೆ ಅಲ್ಲಿ ಹುಡುಗಿಯರು ಬರೀ ಮಿನಿ ಸ್ಕರ್ಟ್, ಇಲ್ಲ ಒಳ ಉಡುಪಲ್ಲೇ ತಿರುಗಾಡಿಕೊಂಡು ಇರುವುದು ನೀವು ನೋಡಿರುತ್ತೀರಾ ಆದ್ರೆ ಅದು ೧೦೦% ಸುಳ್ಳು. ನಿಜವಾಗಿ ಹಾಸ್ಟೆಲ್ ಗಳಲ್ಲಿ ಹುಡುಗಿಯರು ನೈಟ ಡ್ರೆಸ್ ಅಲ್ಲಿ ಮಾತ್ರ ಇರುತ್ತಾರೆ.
ಆಗಾಗ ಉಡುಗೆ ಬದಲು:
ಸಿನಿಮಾಗಳಲ್ಲಿ ಹಾಸ್ಟೆಲ್ ಹುಡುಗಿಯರು ಪದೇ ಪದೇ ಉಡುಗೆ ಬದಲು ಮಾಡಿ ಹಾಕಿಕೊಳ್ಳುವುದು ನೀವು ನೋಡಿರಬಹುದು. ಆದ್ರೆ ಅದು ಸುಳ್ಳು. ನಿಜ ಜೀವನದಲ್ಲಿ ಹಾಸ್ಟೆಲ್ ಹುಡುಗಿಯರು ಸ್ವಲ್ಪ ಆಲಸಿಗಳಾಗಿರುತ್ತಾರೆ. ಪದೇ ಪದೇ ಉಡುಗೆ ವಾಶ್ ಮಾಡುವುದು ಅವರಿಗೆ ದೊಡ್ಡ ತಲೆ ನೋವೇ ಆಗಿರುತ್ತದೆ. ಹಾಗಾಗಿ ರಿಯಲ್ ಲೈಫ್ ನಲ್ಲಿ ಹಾಸ್ಟೆಲ್ ಹುಡುಗಿಯರು ೫ ದಿನಕ್ಕೊಮ್ಮೆ ಮಾತ್ರ ಹಾಸ್ಟೆಲ್ ಉಡುಗೆ ಬದಲು ಮಾಡುತ್ತಾರೆ.
ತಲೆದಿಂಬಿನ ಫೈಟ್:
ಸಿನಿಮಾಗಳಲ್ಲಿ ಗರ್ಲ್ಸ್ ಹಾಸ್ಟೆಲ್ ಗಳಲ್ಲಿ ಹುಡುಗಿಯರು ತಲೆದಿಂಬಿನ ಫೈಟ್ ಮಾಡುವುದು ನೀವು ನೋಡಿರುತ್ತೀರಾ. ಆದ್ರೆ ನಿಜಜೀವನದಲ್ಲಿ ಫಿಲ್ಲೋ ಫೈಟ್ ಮಾಡಲು ಯಾರಿಗೂ ಟೈಂ ಇರುವುದಿಲ್ಲ. ಎಲ್ಲರೂ ಅವರದ್ದೇ ಆದ ಕೆಲಸದಲ್ಲಿ ಬ್ಯುಸಿ ಇರುತ್ತಾರೆ.
ಲೆಸ್‌ಬಿಯನ್ ಆಕ್ಟಿವಿಟಿ :
ಸಿನಿಮಾಗಳಲ್ಲಿ ಗರ್ಲ್ ಹಾಸ್ಟೆಲ್ ಅಂದ್ರೆ ಹುಡುಗಿ ಹುಡುಗಿ ಮುದ್ದಾಡುವುದು, ಅಪ್ಪಿಕೊಳ್ಳುವುದು, ಕಿಸ್ ಮಾಡುವುದು ಇಂತಹ ಸೀನ್ ಇದ್ದೇ ಇರುತ್ತದೆ. ಆದ್ರೆ ನಿಜ ಜೀವನದಲ್ಲಿ ಇದೆಲ್ಲಾ ಸೀನ್ ಇರುವುದೇ ಇಲ್ಲ.


Click it and Unblock the Notifications