ಎಷ್ಟೇ ಡಿಗ್ರಿ ಇದ್ರೂ ನೋ ಯೂಸ್... ಈ ಅರ್ಹತೆ ನಿಮ್ಮಲ್ಲಿ ಇದೆಯಾ ಕೆಲಸ ಗ್ಯಾರಂಟಿ!

ನಿಮ್ಮ ಡಿಗ್ರಿ ಮತ್ತು ಕಾಲೇಜು ನೋಡಿ ಯಾರು ಕೆಲಸ ಕೊಡೋದಿಲ್ಲ. ಬದಲಾಗಿ ನಿಮ್ಮ ಕ್ವಾಲಿಟಿ, ಅರ್ಹತೆ ನೋಡಿ ನಿಮಗೆ ಕೆಲಸ ನೀಡುತ್ತವೆ ಕಂಪನಿಗಳು

ಪ್ರತೀ ದಿನ ಪ್ರತೀ ಕ್ಷಣ ಜಾಬ್ ಹಂಟಿಂಗ್ ನಡೆಯುತ್ತಲೇ ಇರುತ್ತದೆ ಭಾರತದಲ್ಲಿ. ಉದ್ಯೋಗಕ್ಕಾಗಿ ಹಗಲು ರಾತ್ರಿ ಅಲೆದಾಡುತ್ತಿರುತ್ತಾರೆ. ಕೆಲವೊಮ್ಮೆ ಕಾಲೇಜಿನಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗೆ ಸುಲಭವಾಗಿ ಕೆಲಸ ಸಿಗದೇ ಕಡಿಮೆ ಅಂಕದಿಂದ ತೇರ್ಗಡೆಯಾದ ವಿದ್ಯಾರ್ಥಿಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದೆ. ಆವಾಗ ನಾವು ಅಂತೇವೆ ಅವರು ಲಕ್ಕಿ ಪರ್ಸನ್ ಎಂದು. ಆದ್ರೆ ನಿಜವಾದ ವಿಚಾರ ಬೇರೆನೇ ಇರುತ್ತದೆ

ಎಷ್ಟೇ ಡಿಗ್ರಿ ಇದ್ರೂ ನೋ ಯೂಸ್... ಈ ಅರ್ಹತೆ ನಿಮ್ಮಲ್ಲಿ ಇದೆಯಾ ಕೆಲಸ ಗ್ಯಾರಂಟಿ!

ನೀವೇನು ಅಂದುಕೊಂಡಿದ್ದೀರಾ..? ಒಂದು ಜನಪ್ರಿಯ ಕಾಲೇಜಿನಲ್ಲಿ ಡಿಗ್ರಿ ಪದವಿ ಪಡೆದುಕೊಂಡ ಕೂಡಲೇ ಕೆಲಸ ಸುಲಭವಾಗಿ ಗಿಟ್ಟಿಸಿಕೊಳ್ಳಬಹುದು ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ಯಾಕೆಂದರೆ ನಿಮ್ಮ ಡಿಗ್ರಿ ಮತ್ತು ಕಾಲೇಜು ನೋಡಿ ಯಾರು ಕೆಲಸ ಕೊಡೋದಿಲ್ಲ. ಬದಲಾಗಿ ನಿಮ್ಮ ಕ್ವಾಲಿಟಿ, ಅರ್ಹತೆ ನೋಡಿ ನಿಮಗೆ ಕೆಲಸ ನೀಡುತ್ತವೆ ಕಂಪನಿಗಳು

ಅಂದ ಹಾಗೇ ನಿಮ್ಮಲ್ಲಿ ಯಾವ ಪ್ರಮುಖ ಗುಣಗಳು ಇದ್ದರೆ ಸುಲಭವಾಗಿ ಕೆಲಸ ಗಿಟ್ಟಿಸಿಕೊಳ್ಳಬಹುದು ತಿಳಿಯಿರಿ....

ನಾಯಕತ್ವ:

ನೀವು ಕೆಲಸ ಮಾಡುವುದು ಮಾತ್ರವಲ್ಲ ಇವು ಇತರರಿಂದ ಕೆಲಸ ಮಾಡಿಸಿಕೊಳ್ಳುವ ಕೌಶಲ್ಯ ಕೂಡಾ ಹೊಂದಿರಬೇಕೆಂದು ಕಂಪನಿ ಬಯಸುತ್ತದೆ . ನಿಮ್ಮಲ್ಲಿ ಲೀಡರ್‌ಶಿಪ್ ಕ್ವಾಲಿಟಿ ಇತ್ತೆಂದ್ರೆ ಸಾಕು ನೀವು ಡಿಗ್ರಿಯಲ್ಲಿ ಕಮ್ಮಿ ಅಂಕ ಪಡೆದಿದ್ದರೂ ಕೂಡಾ ನೋ ವರಿ ಆ ಕೆಲಸ ನಿಮ್ಮದೇ ಪಾಲಾಗಿರುತ್ತದೆ

ಪರಿಶ್ರಮ:

ಇದು ಉದ್ಯೋಗಸ್ಥರಿಗೆ ಇರಲೇ ಬೇಕಾದ ಕೌಶಲ್ಯ. ಪರಿಶ್ರಮ ಇಲ್ಲ ಅಂದ್ರೆ ನೀವು ಉತ್ತಮ ಉದ್ಯೋಗಸ್ಥರು ಎನಿಸಿಕೊಳ್ಳಲು ಸಾಧ್ಯವೇ ಇಲ್ಲ. ನೀವು ಹಾರ್ಡ್ ವರ್ಕರ್ ಎಂದು ಸಂದರ್ಶನಕಾರರಿಗೆ ತಿಳಿದ್ರೆ ಸಾಕು ಆ ಕೆಲಸ ನಿಮಗೆ ಖಾಯಂ

ನಿಮ್ಮ ಬಾಸ್‌ ಗೆ ಅಪ್ಪಿ ತಪ್ಪಿ ಈ ವಿಚಾರ ಹೇಳಿದ್ರೆ ನೀವು ಖಂಡಿತಾ ಕೆಲಸ ಕಳೆದುಕೊಳ್ಳುತ್ತೀರಾ!ನಿಮ್ಮ ಬಾಸ್‌ ಗೆ ಅಪ್ಪಿ ತಪ್ಪಿ ಈ ವಿಚಾರ ಹೇಳಿದ್ರೆ ನೀವು ಖಂಡಿತಾ ಕೆಲಸ ಕಳೆದುಕೊಳ್ಳುತ್ತೀರಾ!

ಟೀಂ ವರ್ಕ್:

ಇನ್ನು ಪ್ರತಿಷ್ಟಿತ ಕಂಪನಿಗಳಲ್ಲಿ ಹೆಚ್ಚಾಗಿ ಟೀಂ ಮೂಲಕ ಕೆಲಸ ನಡೆಯುತ್ತದೆ. ಇನ್ನು ಟೀಂ ಜೊತೆ ವರ್ಕ್ ಮಾಡಬೇಕು ಎಂದಾದ್ರೆ ನಿಮಗೆ ತಾಳ್ಮೆ ಹಾಗೂ ಸಂಯಮತೆಯ ಸ್ವಭಾವ ಇರಬೇಕು. ಯಶಸ್ವಿ ಕಂಪನಿ ಹಿಂದೆ ಟೀಂ ವರ್ಕ್‌ ಇದ್ದೇ ಇರುತ್ತೆ. ಹಾಗಾಗಿ ಈ ಕೌಶಲ್ಯ ನಿಮ್ಮಿಂದ ನಿರೀಕ್ಷಿಸುತ್ತಾರೆ
ಆಫೀಸ್‌ನಲ್ಲಿ ಯಾವತ್ತೂ ಸಹದ್ಯೋಗಿಗಳ ಜತೆ ಈ ಬಗ್ಗೆ ಚರ್ಚೆ ಬೇಡ

ಒತ್ತಡ ಸಹಿಸುವಿಕೆ:

ಕೆಲಸದ ಒತ್ತಡ ಎಲ್ಲಾ ಕಂಪನಿಯಲ್ಲಿ ಸಾಮಾನ್ಯ. ಹಾಗಾಂತ ಒತ್ತಡ ಜಾಸ್ತಿ ಇದೆ ಎಂದು ಕೆಲಸಕ್ಕೆ ಬೈ ಬೈ ಹೇಳುವುದಲ್ಲ. ಒತ್ತಡವನ್ನ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಇರಬೇಕು . ಯಾರೂ ಎಷ್ಟೇ ಸ್ಟ್ರೆಸ್ ಇದ್ರೂ ಕೂಲ್ ಆಗಿ ಫ್ರೀ ಆಗಿ ವರ್ಕ್ ಮಾಡುತ್ತಾರೋ ಅವರಿಗೆ ಆ ಕೆಲಸ ಫಿಕ್ಸ್ ಬಿಡಿ

ಸಮಸ್ಯೆ ಪರಿಹರಿಸುವಿಕೆ:

ಈ ಕ್ವಾಲಿಟಿ ವರ್ಕರ್ಸ್ ಅಲ್ಲಿ ಇರಬೇಕು ಎಂದು ಪ್ರತಿಯೊಬ್ಬ ಸಂದರ್ಶನಕಾರ ಬಯಸುತ್ತಾನೆ. ಕಂಪನಿ ಎಂದ್ರೆ ಯಾವಾಗ ಬೇಕಾದ್ರೂ ಸಮಸ್ಯೆ ಎದುರಾಗಬಹುದು. ಆದ್ರೆ ಆ ಸಮಸ್ಯೆಗೆ ಧೈರ್ಯಗೆಡದೇ ಕೂಲ್ ಆಗಿ ಪರಿಹರಿಸುವ ಸಾಮರ್ಥ್ಯ ನಿಮ್ಮಲ್ಲಿ ಇರಬೇಕು. ಯಾವುದೇ ಸಮಸ್ಯೆ ಬಂದ್ರೆ ಪರಿಹರಿಸುವ ಸಾಮರ್ಥ್ಯ ನಿಮಗೆ ಇದೆಯೇ ಇಲ್ಲವೇ ಎಂದು ಕಂಪನಿ ಟೆಸ್ಟ್‌ ಮಾಡುತ್ತದೆ. ಸುಲಭವಾಗಿ ಪರಿಹರಿಸೋ ಕೌಶಲ್ಯ ಇದ್ದವರಿಗೆ ಜಾಬ್ ಗ್ಯಾರಂಟಿ

ಆಫೀಸ್‌ನಲ್ಲಿ ನೆಗಟೀವಿಟಿ ವಾತಾವರಣ... ಎಸ್ಕೇಪ್ ಆಗುವುದು ಹೇಗೆ? ಆಫೀಸ್‌ನಲ್ಲಿ ನೆಗಟೀವಿಟಿ ವಾತಾವರಣ... ಎಸ್ಕೇಪ್ ಆಗುವುದು ಹೇಗೆ?

ಕಾನ್ಫಿಡೆಂಟ್ :

ಪ್ರತಿಯೊಬ್ಬ ಉದ್ಯೋಗಸ್ಥನಿಗೆ ಇರಲೇ ಬೇಕಾದ ಗುಣ. ನಿಮಗೆ ಸಿಗುವ ಜಾಬ್ ಮೇಲೆ ನಿಮ್ಮಕಾನ್ಫಿಡೆಂಟ್ ಎಷ್ಟಿದೆ ಎಂಬುವುದು ತಿಳಿಯುತ್ತದೆ. ಸಂದರ್ಶನ ವೇಳೆ ಸಂದರ್ಶನಕಾರರು ನಿಮ್ಮಲ್ಲಿ ಮೊದಲು ಚೆಕ್ ಮಾಡುವುದು ನಿಮ್ಮಲ್ಲಿ ಕಾಂಫಿಡೆನ್ಸ್ ಎಷ್ಟಿದೆ ಎಂದು. ಇನ್ನೂ ಓವರ್ ಕಾಂಫಿಡೆನ್ಸ್ ಕೂಡಾ ಯಾವತ್ತೂ ಒಳ್ಳೆಯದಲ್ಲ

For Quick Alerts
ALLOW NOTIFICATIONS  
For Daily Alerts

English summary
The job hunting process in India has improved manifold following continual efforts to create multiple opportunities for budding professionals. Therefore, prerequisites such as developing certain skills and traits that are specific to a proffession should be taken into consideration by aspiring professionals to maximise their chances of sucess
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X