ಆಫೀಸ್‌ನಲ್ಲಿ ನೀವು ಬಾಸ್ ಜತೆ ಎಷ್ಟೇ ಕ್ಲೋಸ್ ಇರಬಹುದು, ಆದ್ರೆ ಕೆಲವೊಮ್ಮೆ ನಿಮ್ಮ ಕೆಲವೊಂದು ಮಾತುಗಳು ನಿಮ್ಮ ಹಾಗೂ ಬಾಸ್ ಮಧ್ಯೆ ಸಂಬಂಧವನ್ನ ಹಾಳು ಮಾಡಬಹುದು. ಹಾಗಾಗಿ ಬಾಸ್ ಜತೆ ಮಾತನಾಡುವಾಗ ಆದಷ್ಟು ಹುಷಾರಾಗಿರಿ. ಕೆಲವೊಮ್ಮೆ ನಿವು ಆಡಿದ ಮಾತಿನಿಂದ ನೀವು ಕೆಲಸ ಕೂಡಾ ಕಳೆದು ಕೊಳ್ಳಬಹುದು.

ಬನ್ನಿ ಅಂತಹ ಯಾವ ಮಾತುಗಳನ್ನ ಬಾಸ್ ಮುಂದೆ ಆಡಬಾರದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.
ವೈಯಕ್ತಿಕ ಕಾರಣಕ್ಕಾಗಿ ವೇತನ ಹೆಚ್ಚಳ:
ಕೆಲಸ, ಸಾಧನೆ, ವರ್ಕಿಂಗ್ ಸ್ಟೈಲ್ ನೋಡಿ ನಿಮಗೆ ವೇತನ ಹೆಚ್ಚಳ ಮಾಡಬಹುದು. ಆದ್ರೆ ನೀವು ವೈಯಕ್ತಿಕ ಜೀವನದ ಸಮಸ್ಯೆ ಬಗ್ಗೆ ಮಾತನಾಡಿ ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ರೆ ಅದು ಸಿಂಪತಿಗಿಟ್ಟಿಸಿಕೊಂಡಂತೆ ಆಗುತ್ತದೆ. ಇದರಿಂದ ಬಾಸ್ ಗೆ ನಿಮ್ಮ ಮೇಲೆ ಇದ್ದ ಗೌರವ ಕಡಿಮೆಯಾಗಬಹುದು.
ಊಟದ ಬಳಿಕ ನಾನು ಹೊರಡ್ತೇನೆ... ಇಲ್ಲಿ ಏನೂ ಕೆಲಸ ಮಾಡಲು ಇಲ್ಲ:
ನಿಮ್ಮ ಕೆಲಸ ಬೇಗ ಮುಗಿದ್ರೆ ಹೊರಡಿ. ಬದಲಿಗೆ ನನ್ನ ಕೆಲಸ ಆಯಿತು ಇನ್ನೂ ಯಾವ ಕೆಲಸ ಇಲ್ಲ ಎಂದು ಡೈಲಾಗ್ ಹೇಳಬೇಡಿ. ಇದರಿಂದ ನಿಮಗೆ ಕೆಲಸದಲ್ಲಿ ಇಂಟ್ರೆಸ್ಟ್ ಇಲ್ಲ ಎಂದು ಅವರು ತಿಳಿಯುತ್ತಾರೆ.
ಇದೆಲ್ಲಾ ಅವರ ತಪ್ಪು:
ನೀವು ಎಲ್ಲಿಯಾದ್ರೂ ತಪ್ಪು ಮಾಡಿದ್ರೆ ಒಪ್ಪಿಕೊಳ್ಳಿ. ಬದಲಿಗೆ ನಿಮ್ಮ ತಪ್ಪನ್ನ ಬೇರೆಯವರ ಮೇಲೆ ಹೊರಿಸುವುದರಿಂದ ನೀವು ಹೀರೋ ಆಗುವುದಿಲ್ಲ. ಇದರಿಂದ ನೀವು ಇನ್ನೂ ಮೆಚ್ಯುರ್ ಆಗಿಲ್ಲ ಎಂಬುವುದು ತಿಳಿಯುತ್ತದೆ. ಇಂತಹ ಉದ್ಯೋಗಿಗಳನ್ನ ಬಾಸ್ ಬೇಗನೇ ನೋಟೀಸ್ ಮಾಡಿಕೊಳ್ಳುತ್ತಾರೆ.
ನಾವು ಯಾವಾಗಲೂ ಹೀಗೆ ಮಾಡುವುದು:
ನಿಮ್ಮ ಮೊದಲಿದ್ದ ಬಾಸ್ ಈಗ ಬದಲಾಗಿರಬಹುದು. ಹೊಸತಾಗಿ ಬಂದ ಬಾಸ್ ಅವರದೇ ಸ್ಟೈಲ್ ನಲ್ಲಿ ಕೆಲಸ ಮಾಡಬಹುದು. ಹೊಸ ಬಾಸ್ ಅವರ ಆಲೋಚನೆ ನಿಮ್ಮ ಮುಂದೆ ಇಟ್ಟಾಗ ಅದನ್ನ ಒಪ್ಪಿ ಕೊಳ್ಳಿ ಬದಲಿಗೆ ಈ ಹಿಂದೆ ಕೂಡಾ ಹೀಗೆ ಮಾಡಿದ್ವೀ ಎಂದು ಅವರ ಮುಂದೆ ಅಪ್ಪಿ ತಪ್ಪಿಯೂ ಹೇಳಬೇಡಿ. ಇದರಿಂದ ಅವರು ನಿಮ್ಮ ಮೇಲೆ ಕೋಪಿಸಿಕೊಳ್ಳುವ ಸಂಭವವಿರುತ್ತದೆ.
ನಾನು ಟ್ರೈ ಮಾಡುತ್ತೇನೆ:
ನಾನು ಟ್ರೈ ಮಾಡುತ್ತೇನೆ ಎಂದು ನೀವು ಹೇಳಿದ್ರೆ ಇದು ಕೇವಲ ನೀವು ಇಂಟ್ರೆಸ್ಟ್ ಇಲ್ಲದೇ ಮಾಡಬೇಕು ಎನ್ನೋ ಕಾರಣಕ್ಕೆ ಕೆಲಸ ಕೈಗೆತ್ತಿಕೊಂಡಂತೆ ಆಗುತ್ತದೆ. ಸುಮ್ಮನೆ ನೀವೇ ಜವ್ಬಾರಿ ನಿಮ್ಮ ಮೇಲೆ ಹೊತ್ತಿಕೊಂಡಿದ್ದೀರಾ ಎಂಬ ನಂಬಿಕೆ ಬಾಸ್ ಗೆ ನಿಮ್ಮ ಮೇಲೆ ಬರುತ್ತದೆ. ನೀವು ಸೇಫ್ ಸೈಡ್ ಎಂದು ಈ ಡೈಲಾಗ್ ಹೇಳಿರಬಹುದು, ಆದ್ರೆ ಇದು ಮತ್ತೊಂದು ಅರ್ಥದಲ್ಲಿ ನಿಮ್ಮನ್ನ ಬಾಸ್ ಮುಂದೆ ಮತ್ತಷ್ಟು ಚಿಕ್ಕವರನ್ನಾಗಿಸುತ್ತದೆ.


Click it and Unblock the Notifications











