ಆಗಸ್ಟ್ 15 ರಂದು ಭಾರತವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಿಕೊಳ್ಳುತ್ತಿದೆ. ಪ್ರತೀ ವರ್ಷ ಆಗಸ್ಟ್ 15 ರಂದು ದೇಶದಲ್ಲಿ ಬಹಳ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಕಾಗುತ್ತದೆ. ಸ್ವಾತಂತ್ರ್ಯ ಜತೆ ಜತೆಗೆ ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಆಚರಣೆಯನ್ನ ಆಚರಿಸಲಾಗುತ್ತದೆ.

ಇನ್ನು ಈ ದಿನದಂದು, ದೇಶದೆಲ್ಲೆಡೆ ದ್ವಜಾರೋಹಣ ನೆರವೇರಿಸಿ, ಸಿಹಿ ಹಂಚಿ ಸಂಭ್ರಮಿಸಲಾಗುತ್ತದೆ. ಅಷ್ಟೇ ಅಲ್ಲ ಈ ದಿನ ಸರ್ಕಾರಿ ರಜೆ ಇರುವುದರಿಂದ ಅದೆಷ್ಟೋ ಮಂದಿ ಏನೇನೋ ಯೋಜನೆಗಳನ್ನ ಕೂಡಾ ಹಾಕಿಕೊಂಡಿರುತ್ತಾರೆ. ಬನ್ನಿ ನೀವು ಸ್ವಾತಂತ್ರ್ಯ ದಿನಾಚರಣೆಯಂದು ಏನೆಲ್ಲಾ ಮಾಡಿ ಎಂಜಾಯ್ ಮಾಡಬಹುದು ಎಂದು ನಿಮಗೆ ಇದೀಗ ಕೆರಿಯರ್ ಇಂಡಿಯಾ ಸಲಹೆ ನೀಡುತ್ತದೆ ಮುಂದಕ್ಕೆ ಓದಿ.
ಫ್ಯಾಮಿಲಿಗಾಗಿ ಸ್ಪೇಶಲ್ ಕುಕ್:
ಹೌದು ಸದಾ ಸ್ಟಡೀಸ್, ಆಫೀಸ್, ಬ್ಯುಸಿನೆಸ್ ಎಂದು ಬ್ಯುಸಿಯಾಗಿರುವ ನೀವು ಈ ದಿನ ಫ್ಯಾಮಿಲಿ ಜತೆ ಕಳೆಯಿರಿ. ಅವರಿಗಾಗಿ ಮನೆಯಲ್ಲೇ ಏನಾದ್ರು ಸ್ಪೇಶಲ್ ಅಡುಗೆ ಮಾಡಿ ಬಡಿಸಿ. ಹಾ ಮತ್ತೊಂದು ವಿಷಯ ನೀವು ಮಾಡುವ ಅಡುಗೆ ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ್ದರೆ ಮತ್ತೂ ಚೆಂದ. ಇನ್ನು ಮನೆ ತುಂಬಾ ಪುಟ್ಟ ಮಕ್ಕಳಿದ್ದರೆ, ಇಲ್ಲ ಅತಿಥಿಗಳಿದ್ದರೆ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಥೀಮ್ ನ ಅಡುಗೆ ಮಾಡಿ ಬಡಿಸಿ ಇದರಿಂದ ಅವರಿಗೆ ನಿಜಕ್ಕೂ ಸಪ್ರೈಸ್ ಆಗುವುದು.
ಸ್ನೇಹಿತರ ಭೇಟಿ:
ಹೌದು ಈ ಕೆಲಸದ ಜಂಟಾಟದಲ್ಲಿ ನೀವು ಸ್ನೇಹಿತರನ್ನ ಭೇಟಿಯಾಗಲು ಮರೆತಿರುತ್ತೀರಾ. ಆದ್ರೆ ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರೀಯ ರಜೆ ಇರುವುದರಿಂದ ನೀವು ನಿಮ್ಮ ಸ್ನೇಹಿತರನ್ನ ಆರಾಮವಾಗಿ ಭೇಟಿಯಾಗಬಹುದು. ಅಷ್ಟೇ ಅಲ್ಲ ಈ ದಿನ ರೆಸ್ಟೋರೆಂಟ್ ಗಳಲ್ಲಿ ಫುಡ್‌ಗಳ ದರದ ಮೇಲೆ ಕೆಲವೊಂದು ರಿಯಾಯಿತಿ ಇರುತ್ತದೆ. ನೀವು ಫುಡ್‌ಗಳನ್ನ ಕೂಡಾ ಎಂಜಾಯ್ ಮಾಡಬಹುದು.
ಟ್ರಿಪ್ ಮಾಡಿ:
ಯಾರಿಗೆ ತಾನೆ ಟ್ರಿಪ್ ಅಂದ್ರೆ ಇಷ್ಟವಿರಲ್ಲ ಹೇಳಿ. ಇನ್ನು ಸ್ವಾತಂತ್ರ್ಯ ದಿನಾಚರಣೆಯಂದು ನೀವು ಸ್ನೇಹಿತರ ಜತೆ ಫ್ರೀಡಂ ಆಗಿ ರೋಡ್ ಟ್ರಿಪ್ ಮಾಡಬಹುದು. ನಿಮ್ಮ ವಾಸ ಸ್ಥಳಕ್ಕೆ ಹತ್ತಿರವಾದ ಟೂರಿಸ್ಟ್ ಸ್ಪಾಟ್ ಗೆ ನೀವು ವಿಸಿಟ್ ಮಾಡಬಹುದು. ಆಗಸ್ಟ್ 14 ರ ಸಂಜೆಯಿಂದಲೇ ನೀವು ನಿಮ್ಮ ಟ್ರಿಪ್ ಪ್ರಾರಂಭಿಸಬಹುದು.
ಗಾಳಿಪಟ ಹಾರಿಸಿ:
ಹಿಂದಿನ ಕಾಲದಲ್ಲಿ ಈ ದಿನ ಮನೆ ಟೇರಸ್ ಮೇಲೆ ಹೋಗಿ ಎಲ್ಲರೂ ಗಾಳಿಪಟ ಹಾರಿಸುತ್ತಿದ್ದರು. ಇಂದಿಗೂ ಕೆಲವೆಡೆ ಮುಖ್ಯವಾಗಿ ದೆಹಲಿ, ಲಖ್ನೋ ಹಾಗೂ ಹೈದ್ರಾಬಾದ್ ಮುಂತಾದೆಡೆ ಆ ಸಂಪ್ರದಾಯ ಹಾಗೆಯೇ ಇದೆ. ನೀವು ಕೂಡಾ ಯಾಕೆ ಅದನ್ನ ಟ್ರೈ ಮಾಡಬಾರದು. ನಿಮ್ಮ ಮನೆ ಮಂದಿಯ ಜತೆ ಟೇರಸ್ ಮೇಲೆ ಹೋಗಿ ಗಾಳಿಪಟ ಹಾರಿಸಿ.
ದೇಶ ಭಕ್ತಿಯ ಕತೆಯನ್ನೊಳಗೊಂಡ ಸಿನಿಮಾ ನೋಡಿ:
ಹೌದು ಆ ದಿನ ನಿಮಗೆ ಹೊರಗಡೆ ಹೋಗಲು ಇಷ್ಟವಿಲ್ಲ ಎಂದಾದ್ರೆ ನೋ ವರಿ ಮನೆಯಲ್ಲೇ ದೇಶ ಭಕ್ತಿಯ ಕತೆಯನ್ನು ಒಳಗೊಂಡ ಸಿನಿಮಾವನ್ನ ಮಕ್ಕಳಿಗೆ ಹಾಗೂ ಮನೆಮಂದಿಗೆಲ್ಲಾ ತೋರಿಸಿ. ಮನೆಯಲ್ಲೇ ಥಿಯೇಟರ್ ವಾತಾವರಣ ನಿರ್ಮಿಸಿ, ಫಾಪ್ ಕಾರ್ನ್ ತಿನ್ನುತ್ತಾ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.


Click it and Unblock the Notifications











