ಯಶಸ್ಸು... ಕೈ ಹಿಡಿಯಬೇಕಾದ್ರೆ ನೀವೇನು ಮಾಡಬೇಕು ಗೊತ್ತಾ?

ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ. ಯಶಸ್ಸಿಗಾಗಿ ನಾವು ದೇವರ ಮೊರೆ ಕೂಡಾ ಹೋಗುತ್ತೇವೆ. ವಾಸ್ತು ಸಲಹೆಗಳನ್ನ ಚಾಚೂ ತಪ್ಪದೇ ಪಾಲಿಸುತ್ತೇವೆ

By Kavya

ಯಶಸ್ಸು ಯಾರಿಗೆ ತಾನೇ ಬೇಡ ಹೇಳಿ. ಯಶಸ್ಸಿಗಾಗಿ ನಾವು ದೇವರ ಮೊರೆ ಕೂಡಾ ಹೋಗುತ್ತೇವೆ. ವಾಸ್ತು ಸಲಹೆಗಳನ್ನ ಚಾಚೂ ತಪ್ಪದೇ ಪಾಲಿಸುತ್ತೇವೆ. ಆದ್ರೂ ಯಶಸ್ಸು ಕೆಲವೊಮ್ಮೆ ಕೈ ಗೆಟುಕದ ನಕ್ಷತ್ರವಾಗಿ ಬಿಡುತ್ತದೆ. ಬನ್ನಿ ಯಶಸ್ಸಿನ ಸ್ಟೆಪ್ ಹತ್ತಬೇಕಾದ್ರೆ ನಿಮ್ಮಲ್ಲಿ ಕೆಲವೊಂದು ಬದಲಾವಣೆ ನೀವು ಮಾಡಿಕೊಳ್ಳಬೇಕು. ಆ ಬದಲಾವಣೆ ಏನು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತದೆ ಮುಂದಕ್ಕೆ ಓದಿ

ಯಶಸ್ಸು... ಕೈ ಹಿಡಿಯಬೇಕಾದ್ರೆ ನೀವೇನು ಮಾಡಬೇಕು ಗೊತ್ತಾ?

ನಿಮಗೂ ಜೀವನದಲ್ಲಿ ಸಕ್ಸಸ್‍ಫುಲ್ ಲೈಫ್ ಬೇಕೇ ಹಾಗಿದ್ರೆ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.

ಬೇಗ ಎದ್ದೇಳುವ ಹವ್ಯಾಸ ರೂಢಿಸಿಕೊಳ್ಳಿ:

ಬೇಗ ಎದ್ದೇಳುವ ಹವ್ಯಾಸ ರೂಢಿಸಿಕೊಳ್ಳಿ:

ನಿಮ್ಮ ಜೀವನದಲ್ಲಿ ಗಡಿಯಾರ ಪ್ರಮುಖ ಪಾತ್ರವಹಿಸುತ್ತದೆ. ನೀವು ಕೂಡಾ ಓಡುವ ಗಡಿಯಾರದ ಜತೆ ಓಡಬೇಕು. ಒಂದು ವೇಳೆ ನೀವು ಟೈಂ ಜತೆ ಓಡುವಲ್ಲಿ ಹಿಂದೆ ಬಿದ್ದರೆ ಸಕ್ಸಸ್‍ನಿಂದಲೂ ಹಿಂದೆ ಉಳಿಯುತ್ತೀರಾ. ಹಾಗಾಗಿ ಟೈಂ ಜತೆ ಹೊಂದಾಣಿಕೆ ಮಾಡಿಕೊಂಡು ಕೆಲಸ ಕಾರ್ಯ ಮುಂದುವರೆಸಿ. ಅಷ್ಟೇ ಅಲ್ಲ ವರ್ಕ ಮಧ್ಯೆ ನಿಮ್ಮ ಮೆದುಳಿಗೆ ಆರಾಮದ ಅಗತ್ಯವಿರುತ್ತದೆ. ಅದಕ್ಕಾಗಿ ಸರಿಯಾಗಿ ನಿದ್ರೆ ಮಾಡಿ, ಮುಂಜಾನೆ ಎದ್ದು ವರ್ಕೌಟ್ ಮಾಡಿ. ಇದರಿಂದ ನಿಮ್ಮ ಕೆಲಸದ ದಿನ ಕಾಂಫಿಡೆನ್ಸ್ ನಿಂದ ಪ್ರಾರಂಭವಾಗುವುದು. ಉದಾಹರಣೆಗೆ ಬರಾಕ್ ಒಬಾಮಾ ಅವರನ್ನೇ ತೆಗೆದುಕೊಳ್ಳಿ. ಬೆಳಗ್ಗೆ 4 ಗಂಟೆಗೆ ಎದ್ದು, ವರ್ಕೌಟ್ ಮಾಡಿ, ಬಳಿಕ ಈ-ಮೇಲ್ಸ್ ಚೆಕ್ ಮಾಡುತ್ತಾರೆ. ಇನ್ನು ಪೆಪ್ಸಿಕೋ ಸಿಇಒ ನೂಯಿ ಬೆಳಗ್ಗೆ 7 ಗಂಟೆಗೆ ಮುನ್ನನೇ ಎದ್ದೇಳುತ್ತಾರೆ.

ಆರೋಗ್ಯದ ಕಡೆಯೂ ಗಮನ:

ಆರೋಗ್ಯದ ಕಡೆಯೂ ಗಮನ:

ಆರೋಗ್ಯವಂತ ಮನಸ್ಸಿಗೆ ಆರೋಗ್ಯವಂತ ದೇಹವೇ ಮನೆಇದ್ದಂತೆ. ಆರೋಗ್ಯವಂತ ಮನಸ್ಸು ಯಾವುದೇ ಕಷ್ಟಕರ ಚಾಲೆಂಜ್ ಸ್ವೀಕರಿಸಲು ತಯಾರಿರುತ್ತದೆ ಹಾಗೆಯೇ ಹೊಸತನ್ನ ಕಲಿಯಲು ಕೂಡಾ ಸಿದ್ಧವಿರುತ್ತದೆ. ನೀವು ಆರೋಗ್ಯವಂತರಾಗಿದ್ದರೆ ಮಾತ್ರ ಸದಾ ಉತ್ಸಾಹದ ಚಿಲುಮೆಯಾಗಿ ದುಡಿಯಲು ಸಾಧ್ಯ. ಅದಕ್ಕಾಗಿ ನೀವು ವರ್ಕೌಟ್ ಕೂಡಾ ಮಾಡುವ ಅಗತ್ಯವಿದೆ.

ಲಿಸ್ಟ್ ಮಾಡಿಕೊಳ್ಳಿ:

ಲಿಸ್ಟ್ ಮಾಡಿಕೊಳ್ಳಿ:

ನೀವು ದಿನ ಬಗ್ಗೆ ಈಗಾಗಲೇ ಯೋಜನೆ ಮಾಡಿಕೊಂಡಿದ್ದರೆ, ಹಾಗೂ ಆ ದಿನದ ಬಗ್ಗೆ ಒಂದು ಪ್ಲ್ಯಾನ್ ಮಾಡಿಕೊಳ್ಳಿ. ಹಿಂದಿನ ರಾತ್ರಿಯೇ ನಾಳೆ ಏನು ಮಾಡಬೇಕು ಎಂದು ಲಿಸ್ಟ್ ಮಾಡಿಕೊಳ್ಳಿ. ಅದಕ್ಕಾಗಿ ಸ್ಮಾರ್ಟ ಫೋನ್ ಸಹಾಯದಿಂದ ನೀವು ಯೋಜನೆಗಳನ್ನ ನೋಟ್ ಮಾಡಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನೀವು ನಿಮ್ಮ ಆ ದಿನದ ವರ್ಕ ಟಾರ್ಗೇಟ್ ಆರಾಮವಾಗಿ ರೀಚ್ ಆಗಬಹುದು.

ಆಫೀಸ್ ವಾತಾವರಣವನ್ನ ಆರ್ಗನೈಸ್ ಆಗಿಟ್ಟುಕೊಳ್ಳಿ:

ಆಫೀಸ್ ವಾತಾವರಣವನ್ನ ಆರ್ಗನೈಸ್ ಆಗಿಟ್ಟುಕೊಳ್ಳಿ:

ಯಾವಾಗ ನಿಮ್ಮ ವರ್ಕ ಸ್ಟೇಶನ್ ಚೆನ್ನಾಗಿರುತ್ತದೋ ಆಗ ನಿಮ್ಮ ವರ್ಕ ಕೂಡಾ ಬೇಗ ಬೇಗನೇ ನಡೆಯುತ್ತದೆ. ನೀವು ಕೆಲಸ ಮಾಡುವ ಜಾಗವೂ ನೋಡಲು ಸುಂದರವಾಗಿದ್ದರೆ ನಿಮ್ಮ ಕೆಲಸವೂ ಕೂಡಾ ಸಲೀಸಾಗಿ ಸಾಗುತ್ತದೆ. ಅದಕ್ಕಾಗಿ ನೀವು ಕೆಲಸ ಮಾಡುವ ಜಾಗದಲ್ಲಿ ಚಿಕ್ಕ ಚಿಕ್ಕ ಗಿಡಗಳನ್ನ ಇರಿಸಿ. ಹೂವುಗಳಿಂದ ಅಲಂಕರಿಸಿ. ಇದರಿಂದ ನಿಮ್ಮ ಜಾಗವು ಮತ್ತಷ್ಟು ಆಕರ್ಷಿತವಾಗಿ ಕಾಣುವುದು. ಅಷ್ಟೇ ಅಲ್ಲ ಇದರಿಂದ ನಿಮ್ಮ ಆಫೀಸ್ ವಾತಾವರಣದಲ್ಲಿ ಇರುವ ನೆಗಟೀವ್ ಎನರ್ಜಿ ಕೂಡಾ ಮಾಯವಾಗುವುದು.

ತಪ್ಪುಗಳಿಂದ ಕಲಿಯಿರಿ:

ತಪ್ಪುಗಳಿಂದ ಕಲಿಯಿರಿ:

ಹೌದು ನೀವು ಯಾವಾಗ ತಪ್ಪಿನಿಂದ ಕಲಿಯುತ್ತೀರೋ ಹಾಗಿದ್ರೆ ತಪ್ಪುಗಳು ಕೂಡಾ ಬೆಸ್ಟ್. ನೀವು ತಪ್ಪು ಮಾಡುವುದರಿಂದ ತಪ್ಪಿಸಿಕೊಳ್ಳಬೇಡಿ ಹಾಗೆಯೇ ಆ ತಪ್ಪಿನಿಂದ ಕಲಿಯುವುದು ಕೂಡಾ ಮರೆಯಬೇಡಿ. ನಿಮ್ಮೊಳಗೆ ನೀವೇ ಒಂದು ಚ್ಯಾಲೇಂಜ್ ಹಾಕಿಕೊಳ್ಳಿ. ಪಾಸಿಟೀವ್ ಆಗಿ ಮುನ್ನುಗ್ಗಿ. ಯಶಸ್ಸು ನಿಮ್ಮದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

More News  

For Quick Alerts
ALLOW NOTIFICATIONS  
For Daily Alerts

English summary
Today’s youth would not only confine to bread-winning but a rapid and exponential growth in their careers to set an example for the generation to come. It is a cut-throat competition outside and there is no time to squander
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+