ಬಾಸ್‌ ಎಷ್ಟೇ ಕ್ಲೋಸ್‌ ಇದ್ರೂ ಈ ಬಗ್ಗೆ ಮಾತನಾಡಿದ್ರೆ ಕೆಲಸಕ್ಕೆ ಕತ್ತರಿ ಗ್ಯಾರಂಟಿ !

ಆಫೀಸ್‌ನಲ್ಲಿ ನಿಮ್ಮ ಬಾಸ್ ನಿಮ್ಮ ಜತೆ ಫ್ರೆಂಡ್ ಶಿಪ್ ನಿಂದ ಇರಬಹುದು. ಆದ್ರೆ ಅದೇ ಸಲುಗೆಯಲ್ಲಿ ನೀವು ನಿಮ್ಮ ಬಾಸ್ ಜತೆ ಎಲ್ಲಾ ವಿಚಾರಗಳನ್ನ ಶೇರ್ ಮಾಡಿಕೊಳ್ಳಬಹುದು. ಆದ್ರೆ ನೆನಪಿಟ್ಟುಕೊಳ್ಳಿ ನೀವು ಶೇರ್ ಮಾಡಿರುವ ವಿಚಾರವೇ ನಿಮ್ಮನ್ನ ಕೆಲಸದಿಂದ ತೆಗೆದುಹಾಕುವಂತೆ ಮಾಡಬಹುದು. ಹಾಗಾಗಿ ಬಾಸ್ ಜತೆ

ಎಷ್ಟೇ ಕ್ಲೋಸ್ ಇದ್ರೂ ಯಾವೆಲ್ಲಾ ವಿಚಾರ ಶೇರ್ ಮಾಡಬಾರದು ಎಂಬ ಟಿಪ್ಸ್ ಇಲ್ಲಿದೆ

ವೈಯಕ್ತಿಕ ವಿಚಾರವನ್ನ ಹೇಳಬೇಡಿ:
 

ವೈಯಕ್ತಿಕ ವಿಚಾರವನ್ನ ಹೇಳಬೇಡಿ:

ಆಫೀಸ್ ನಲ್ಲಿ ಬಾಸ್‌ ಜತೆ ನಿಮ್ಮ ಪರ್ಸನಲ್ ಲೈಫ್ ಬಗ್ಗೆ ಯಾವತ್ತೂ ಚರ್ಚಿಸಲು ಹೋಗಬೇಡಿ. ಇದರಿಂದ ಅವರಿಗೆ ನಿಮ್ಮ ವೀಕ್‌ನೆಸ್ ತಿಳಿಯುವುದು. ಅದು ಮುಂದೋಂದು ದಿನ ನಿಮಗೆ ಕಂಟಕವಾಗಬಹುದು. ವೈಯಕ್ತಿಕ ವಿಚಾರ ನಿಮ್ಮ ಜತೆನೇ ಇಟ್ಟುಕೊಳ್ಳಿ

ಇನ್ನು ಕೆಲವು ಕಚೇರಿಗಳಲ್ಲಿ ಬಾಸ್‌ ತುಂಬಾ ಫ್ರೆಂಡ್ಲಿ ಇರುತ್ತಾರೆ. ಅವರು ನಿಮ್ಮ ಪರ್ಸನಲ್ ಲೈಫ್ ಬಗ್ಗೆ ಇಂಟ್ರೆಸ್ಟ್ ತೋರಿಸಬಹುದು. ಆದ್ರೆ ಎಲ್ಲಾ ಕಂಪನಿ ಒಂದೇ ತರಹ ಇರುವುದಿಲ್ಲ.

ಧರ್ಮದ ಬಗ್ಗೆ ಚರ್ಚೆ ಬೇಡ:

ಧರ್ಮದ ಬಗ್ಗೆ ಚರ್ಚೆ ಬೇಡ:

ಧರ್ಮ ತಾರತಮ್ಯ ಮಾಡುವುದು ಕಾನೂನು ಪ್ರಕಾರ ಅಪರಾಧ ಕೂಡಾ. ಕೆಲಸ ಮಾಡುವ ಜಾಗದಲ್ಲಿ ಧರ್ಮದ ಬಗ್ಗೆ ಮಾತನಾಡುವುದು ಸೂಕ್ತವಲ್ಲ. ಒಂದು ವೇಳೆ ಧರ್ಮಕ್ಕೆ ಸಂಬಂಧಪಟ್ಟಂತಹ ಜಾಗದಲ್ಲಿ ನೀವು ಕೆಲಸ ಮಾಡುತ್ತಿದ್ದರೆ ಓಕೆ ಮಾತನಾಡಬಹುದು. ಹಾಗಂತ ನಿಮ್ಮ ಬಾಸ್ ಬಳಿ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ಆಫೀಸನಲ್ಲಿ ಒಂದೇ ಧರ್ಮದ ಜನರು ಇರುವುದಿಲ್ಲ. ಎಲ್ಲಾ ಧರ್ಮದ ಜನರು ಇರುತ್ತಾರೆ. ಹಾಗಾಗಿ ಇಂತಹ ಸ್ಥಳಗಳಲ್ಲಿ ಧರ್ಮದ ಬಗ್ಗೆ ಚರ್ಚೆ ಒಳ್ಳೆಯದಲ್ಲ

ಸಂಗಾತಿ ಆದಾಯ:

ಸಂಗಾತಿ ಆದಾಯ:

ಇನ್ನು ಕೆಲವರು ತಮ್ಮ ಸಂಗಾತಿಯ ಆದಾಯದ ಬಗ್ಗೆ ಹೇಳಿಕೊಳ್ಳುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮ ಕಂಪನಿಗಿಂತ ಉತ್ತಮ ಸ್ಥಾನದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅವರ ವೇತನ ಇನ್ನೂ ಹೆಚ್ಚಿದ್ದರೆ ಆ ಬಗ್ಗೆ ಚರ್ಚಿಸಲು ಹೋಗಬೇಡಿ. ಇದರಿಂದ ನಿಮ್ಮ ವೇತನ ಅಥವಾ ಇನ್‌ಕ್ರೀಮೆಂಟ್ ಗೆ ಕತ್ತರಿ ಬೀಳಬಹುದು

ನೀವು ಬೇರೆ ಕಡೆ ಕೆಲಸ ಮಾಡುತ್ತಿದ್ದರೆ:
 

ನೀವು ಬೇರೆ ಕಡೆ ಕೆಲಸ ಮಾಡುತ್ತಿದ್ದರೆ:

ಈಗಂತೂ ಒಂದೇ ಕೆಲಸ ನಂಬಿ ಕೂತುಕೊಂಡರೆ ಜೀವನ ಸಾಗಲ್ಲ. ಅಷ್ಟೇ ಅಲ್ಲ ಪಾರ್ಟ್ ಟೈಂ ಆಗಿ ಅದೆಷ್ಟೂ ಉದ್ಯೋಗವಕಾಶ ಕೂಡಾ ಇರುತ್ತದೆ. ಹಾಗಾಗಿ ಕಛೇರಿ ಮುಗಿದ ಬಳಿಕ ನಿವು ಬೇರೆ ಏನಾದ್ರೂ ಬ್ಯುಸಿನೆಸ್ ಇಲ್ಲ, ಫ್ರೀಲೈನ್ಸರ್ ಆಗಿ ಕೆಲಸ ಮಾಡುತ್ತಿದ್ದರೆ ಆ ಬಗ್ಗೆ ಬಾಸ್ ಜತೆ ಚರ್ಚೆ ಮಾಡಬೇಡಿ. ಒಂದು ವೇಳೆ ಬಾಸ್ ಗೆ ಈ ಬಗ್ಗೆ ಗೊತ್ತಾದ್ರೆ ಇಲ್ಲಿ ಏನಾದ್ರೂ ಅಭಿವೃದ್ಧಿ ಕೆಳಮುಖ ವಾದ್ರೆ ಅವರು ನೇರವಾಗಿ ನಿಮ್ಮನ್ನೇ ಹೊಣೆ ಮಾಡುತ್ತಾರೆ

ಜೀವನದ ಪರಿಸ್ಥಿತಿ:

ಜೀವನದ ಪರಿಸ್ಥಿತಿ:

ಇನ್ನು ನಿಮ್ಮ ಜೀವನದ ಶೈಲಿ ಬಗ್ಗೆಯೂ ಅವರ ಜತೆ ಚರ್ಚಿಸಬೇಡಿ. ನೀವು ಹೆತ್ತವರ ಜತೆ ಇರುವುದು, ಇಲ್ಲ ರೂಂ ಮಾಡಿಕೊಂಡು ಇರುವುದು ಮುಂತಾದ ಅನಗತ್ಯ ವಿಚಾರದ ಬಗ್ಗೆ ಬಾಸ್ ಜತೆ ಚರ್ಚೆ ಮಾಡಬೇಡಿ

ಮಾನಸಿಕ ಸ್ಥಿತಿ ಹಾಗೂ ದೈಹಿಕ ಸ್ಥಿತಿ:

ಮಾನಸಿಕ ಸ್ಥಿತಿ ಹಾಗೂ ದೈಹಿಕ ಸ್ಥಿತಿ:

ನೀವು ಡಿಪ್ರೇಶನ್, ಸ್ಟ್ರೆಸ್ ಇಲ್ಲ ದೈಹಿಕವಾಗಿ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿದ್ದರೆ ಅದರ ಬಗ್ಗೆ ಬಾಸ್ ಜತೆ ಚರ್ಚಿಸಬೇಡಿ. ಯಾಕೆಂದ್ರೆ ಒಂದು ಸಲ ಆದ್ರೆ ಓಕೆ, ಪದೇ ಪದೇ ಚರ್ಚಿಸುತ್ತಿದ್ದರೆ ನೀವು ಕೆಲಸ ಮಾಡಲು ಅನ್‌ಫಿಟ್ ಎಂದು ಅವರು ಅಂದುಕೊಂಡು ಕೆಲಸದಿಂದ ತೆಗೆದುಹಾಕುವ ಸಂಭವವಿರುತ್ತದೆ

ನಿಮ್ಮ ಹಿಂದಿನ ಕಂಪನಿ ಬಗ್ಗೆ:

ನಿಮ್ಮ ಹಿಂದಿನ ಕಂಪನಿ ಬಗ್ಗೆ:

ಹೌದು ನೀವು ನಿಮ್ಮ ಬಾಸ್ ಜತೆ ನಿಮ್ಮ ಹಿಂದಿನ ಕಂಪನಿ ಬಗ್ಗೆ ಹೊಗಳುತ್ತಾ ಮಾತನಾಡಬೇಡಿ. ಯಾಕೆಂದ್ರೆ ಪ್ರತಿ ಕಂಪನಿಯು ಇದೀಗ ಕಾಂಪಿಟೇಶನಲ್ಲಿ ಕೆಲಸ ಮಾಡುತ್ತಿರುತ್ತದೆ. ಹಾಗಾಗಿ ಕಂಪನಿ ಕಂಪನಿ ಪರಸ್ಪರ ಕಾಂಪಿಟೇಟರ್ಸ ಥರಹ ಆಗಿರುತ್ತದೆ. ಆದ್ರೆ ನೀವು ಈ ಟೈಂನಲ್ಲಿ ನಿಮ್ಮ ಹಿಂದಿನ ಕಂಒನಿಯ ಗುಣಗಾನ ಮಾಡುತ್ತಿದ್ದರೆ ಪ್ರಸ್ತುತ ಕಂಪನಿಯಲ್ಲಿ ಕೆಲಸ ಕಳೆದುಕೊಳ್ಳುವ ಸಂಭವವಿರುತ್ತದೆ

For Quick Alerts
ALLOW NOTIFICATIONS  
For Daily Alerts

English summary
here is some list about what things You Should Never Say to Your Boss. if you said this things means you will loose your job
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X