ನಿಮಗೆ ನಿಮ್ಮ ಉದ್ಯೋಗ ಇಷ್ಟ ಇರಬಹುದು ಅಥವಾ ಇಲ್ಲದೆನೇ ಇರಬಹುದು ಆದ್ರೆ ಬಾಸ್ ಜತೆ ಹೇಳಲು ಕೆಲವೊಂದು ವಿಚಾರಗಳು ನಿಮ್ಮ ತಲೆಯಲ್ಲಿ ಓಡಾಡುತ್ತಾ ಇರುತ್ತದೆ. ಯಾರೂ ಕೂಡಾ ಅವರ ಬಾಸ್ ನ್ನ ಇಷ್ಟಪಡುವುದಿಲ್ಲ, ಅದಕ್ಕೆ ಎಂದೇ ಕೆಲವೊಂದು ಕಾರಣಗಳಿರುತ್ತದೆ. ಈ ಕಾರಣಗಳಿಂದಾಗಿಯೇ ಹೆಚ್ಚಿನ ಮಂದಿ ತಮ್ಮ ಬಾಸನ್ನ ಇಷ್ಟಪಡುವುದಿಲ್ಲ.

ಇನ್ನು ನಮ್ಮ ಮನಸ್ಸಿನಲ್ಲಿ ಇರುವ ವಿಚಾರ ಬಾಸ್ ಮುಂದೆ ಹೇಳಲು ನಮಗೆ ಯಾವುದೇ ರೈಟ್ಸ್ ಕೂಡಾ ಇರಲ್ಲ ಅಷ್ಟೇ ಯಾಕೆ ಧೈರ್ಯವೂ ಇರಲ್ಲ. ಅದಕ್ಕಾಗಿ ಹೆಚ್ಚಿನ ಮಂದಿ ತಮ್ಮ ಕೋ- ವರ್ಕರ್ಸ್ ಜತೆ ಈ ಬಗ್ಗೆ ಚರ್ಚಿಸಿ, ಗಾಸಿಪ್ ಕ್ರಿಯೇಟ್ ಮಾಡುತ್ತಾರೆ.ಆದರೆ ನಿಮ್ಮ ಬಾಸ್ ಕೆಲವೊಂದು ವಿಚಾರಗಳನ್ನ ನಿಮ್ಮಿಂದ ಕೇಳಲು ಇಷ್ಟಪಡುತ್ತಾರೆ. ಆ ವಿಚಾರಗಳು ಯಾವುವು ಎಂದು ಕೆರಿಯರ್ ಇಂಡಿಯಾ ಇದೀಗ ನಿಮಗೆ ತಿಳಿಸಿಕೊಡುತ್ತಿದೆ ಮುಂದಕ್ಕೆ ಓದಿ.
ಬಾಸ್‌ಗೆ ನಿಮ್ಮಿಂದ ಕೇಳಲಿಚ್ಚಿಸುವ ವಿಚಾರಗಳು:
ನನ್ನ ಬಳಿ ಪರಿಹಾರ (ಸೊಲ್ಯುಶನ್ ) ಇದೆ
ಪ್ರತೀ ದಿನ ಬಾಸ್ ವರ್ಕರ್ಸ್ ಗಳಿಂದ ತುಂಬಾ ಸಮಸ್ಯೆಗಳನ್ನ ಆಲಿಸುತ್ತಾ ಇರುತ್ತಾರೆ. ಅವರ ಬಳಿ ಸಮಸ್ಯೆಗಳನ್ನ ಹೇಳುವವರೇ ಹೆಚ್ಚು ಮಂದಿ ಇರುತ್ತಾರೆ. ಆದ್ರೆ ಅವರು ಯಾರು ಸೊಲ್ಯುಶನ್ ತರುತ್ತಾರೆ ಎಂದು ನಿರೀಕ್ಷಿಸುತ್ತಾ ಇರುತ್ತಾರೆ. ಬಾಸ್ ಗಮನ ನಿಮ್ಮತ್ತ ಸೆಳೆಯಬೇಕಾದ್ರೆ ಇದು ಬೆಸ್ಟ್ ವಿಧಾನ. ಸಿಂಪಲ್ ಆದ ಸೊಲ್ಯುಶನ್ ಇದ್ರೆ ಬಾಸ್ ಬಳಿ ಹೇಳಿಕೊಳ್ಳಿ. ಇದರಿಂದ ಬಾಸ್ ಫುಲ್ ಖುಶ್ ಆಗುತ್ತಾರೆ.
ನಾನು ಹೊಣೆ ಹೊತ್ತುಕೊಳ್ಳುತ್ತೇನೆ
ಆಫೀಸ್‌ನಲ್ಲಿ ಪ್ರತಿಯೊಬ್ಬರು ತಪ್ಪುಗಳನ್ನ ಮಾಡುತ್ತಾರೆ. ಹಾಗಾಗಿ ತಪ್ಪು ಮಾಡಿದಾಗ ಇನ್ಯಾರೋ ಅದನ್ನ ಬಾಸ್ ಗೆ ತಿಳಿಸುವ ಮುನ್ನ ನಾವೇ ಬಾಸ್ ಬಳಿ ಹೋಗಿ ತಪ್ಪಾಗಿದೆ.. ಅದಕ್ಕೆ ನಾನೇ ಹೊಣೆ. ನಾನೇ ಆ ತಪ್ಪನ್ನ ಸರಿಪಡಿಸಿಕೊಳ್ಳುತ್ತೇನೆ ಎಂದು ಹೇಳಿ. ಅಷ್ಟೇ ಅಲ್ಲ ಆ ತಪ್ಪಾಗಲು ಕಾರಣವೇನು ಎಂದು ಕೂಡಾ ತಿಳಿಸಿ. ಇನ್ನೂ ಆ ತಪ್ಪು ಆಗದಂತೆ ನೋಡಿಕೊಳ್ಳುವುದಾಗಿಯೂ ತಿಳಿಸಿ. ಬಾಸ್ ನೀವು ತಪ್ಪು ಮಾಡಿದಾಗ ನಿಮ್ಮಿಂದ ಈ ಮೇಲಿನ ಮಾತುಗಳನ್ನ ಕೇಳಲು ಇಚ್ಛಿಸುತ್ತಾರೆ.
ಇದನ್ನ ನಾನು ಮಾಡುತ್ತೇನೆ
ವಿಶೇಷವಾಗಿ ಯಾವಾಗ ನೀವು ಹೆಚ್ಚು ಒತ್ತಡದ ಸ್ಥಾನದ ಹುದ್ದೆಯಲ್ಲಿ ಇರುತ್ತೀರೋ ಆವಾಗ ಇನ್ನೂ ಹೆಚ್ಚಿನ ಜವಬ್ದಾರಿ ತೆಗೆದುಕೊಳ್ಳಲು ನೀವು ಸಿದ್ಧರಿರುವುದಿಲ್ಲ. ಆದ್ರೆ ನೀವು ಇನ್ನೊಂದು ಆಂಗಲ್ ನಿಂದ ಅದನ್ನ ನೋಡಿ. ಅದು ನಿಮ್ಮ ಟ್ಯಾಲೆಂಟ್ ತೋರಿಸಲು ನಿಮಗೆ ಸಿಕ್ಕಿರುವ ಒಂದು ಅವಕಾಶ ಎಂದು ತಿಳಿದುಕೊಳ್ಳಿ. ಹೌದು ಇದು ಎಕ್ಸ್‌ಟ್ರಾ ವರ್ಕ್ ಆಗುತ್ತೆ ಆದ್ರೂ ಈ ಟೈಂನಲ್ಲಿ ನೀವು ಎಸ್ ನಾನು ಇದನ್ನ ಮಾಡುತ್ತೇನೆ ಎಂದು ಹೇಳಬೇಕೆಂದು ಬಾಸ್ ನಿಮ್ಮಿಂದ ಬಯಸುತ್ತಾರೆ.
ನಾನು ಸಹಾಯ ಮಾಡಲೇ
ನಿಮ್ಮ ಸಹದ್ಯೋಗಿಗಳು ಏನಾದ್ರೂ ವರ್ಕ್ ವಿಚಾರದಲ್ಲಿ ಸ್ಟಕ್ ಆದಾಗ ನೀವು ಅವರಿಗೆ ಸಹಾಯ ಮಾಡಿ. ಇದರಿಂದ ಅವರು ಮಾತ್ರವಲ್ಲದೇ ನಿಮ್ಮ ಬಾಸ್ ಕೂಡಾ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ.
ನನ್ನ ಬಳಿ ಐಡಿಯಾ ಇದೆ
ವರ್ಕ್ ಗೆ ಸಂಬಂಧಪಟ್ಟಂತೆ ಏನಾದ್ರೂ ಸಮಸ್ಯೆ ತಲೆದೋರಿದಾಗ ಯಾರು ನನ್ನ ಬಳಿ ಐಡಿಯಾ ಇದೆ ಎಂದು ಹೇಳಿ ಬರುತ್ತಾರೋ ಅವರು ಬಾಸ್ ನ ನೆಚ್ಚಿನ ಎಂಪ್ಲಾಯ್ ಆಗಿರುತ್ತಾರೆ. ಸಮಸ್ಯೆ ತಲೆದೋರಿದ್ದ ಸಂದರ್ಭದಲ್ಲಿ ಬಾಸ್ ನಿಮ್ಮಿಂದ ಈ ಮಾತನ್ನ ನಿರೀಕ್ಷಿಸುತ್ತಾರೆ.


Click it and Unblock the Notifications











