ನೀವು ಯಾವುದೇ ಹುದ್ದೆಯಲ್ಲಿ ಸಕ್ಸಸ್ ಆಗಬೇಕಾದ್ರೆ ಮೊದಲಿಗೆ ಹಾನೆಸ್ಟ್ ಆಗಿರಬೇಕು. ಹಾನೆಸ್ಟ್ ಆಗಿ ನೀವು ಕೆಲಸ ಮಾಡಿದ್ರೆ ಯಶಸ್ಸಿನ ಏಣಿಯನ್ನ ನೀವು ಶೀಘ್ರವಾಗಿ ಏರಬಹುದು.

ಹಾನೆಸ್ಟ್ ಆಗಿರುವುದು ಇಂಪೋರ್ಟೇಂಟ್ ಆದರೆ ಪ್ರತೀ ದಿನವಲ್ಲ. ಪ್ರತಿಯೊಬ್ಬರಿಗೂ ಮನಸ್ಸು ಬಿಚ್ಚಿ ಮಾತನಾಡಬೇಕು ಎಂದಿರುತ್ತದೆ. ಆದ್ರೆ ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಮನಸ್ಸು ಬಿಚ್ಚಿ ಮಾತನಾಡುತ್ತಾರೆ. ಆದ್ರೆ ಎಲ್ಲರ ಜತೆ ಮನಸ್ಸು ಬಿಚ್ಚಿ ಮಾತನಾಡುವುದು ಸರಿಯಲ್ಲ. ಈ ಕೆಳಗಿನ ಕೆಲವೊಂದು ವಿಚಾರಗಳನ್ನ ಬಾಸ್ ಮುಂದೆ ಮಾತನಾಡಬೇಡಿ.
ಬಾಸ್ ಜತೆ ಮಾತನಾಡಬಾರದಂತಹ ಮಾತುಗಳು:
ನನ್ನಿಂದ ಸಾಧ್ಯವಿಲ್ಲ:
ಯಾರು ಅತೀ ಹೆಚ್ಚು ಬಾರಿ ನನ್ನಿಂದ ಸಾಧ್ಯವಿಲ್ಲ ಎನ್ನೋ ಮಾತನ್ನೇ ಆಡುತ್ತಾರೋ ಅವರನ್ನ ಬ್ಲಾಕ್ ಲಿಸ್ಟ್ ನಲ್ಲಿ ಸೇರಿಸುತ್ತಾರೆ ಬಾಸ್. ನಿಮ್ಮ ಮಾತಿನ ಮಧ್ಯೆ ಮಧ್ಯೆ ನೀವು ಅತೀ ಹೆಚ್ಚು ಬಾರಿ ನನ್ನಿಂದ ಸಾಧ್ಯವಿಲ್ಲ ಎನ್ನೋ ಪದ ಬಳಸುತ್ತಾ ಇದ್ದರೆ, ನಿಮ್ಮ ಓವರ್ ಕಾಂಫಿಡೆನ್ಸ್ ಎದ್ದು ಕಾಣುತ್ತದೆ. ಇದರಿಂದ ಅವರು ನಿಮ್ಮ ಮೇಲೆ ಕೋಪಗೊಳ್ಳುವ ಸಂಭವವಿರುತ್ತದೆ.
ಆಗಲ್ಲ:
ಆಫೀಸ್‌ನಲ್ಲಿ ಸಾಧ್ಯವಾದಷ್ಟು ಶಾಂತವಾಗಿ ಕೆಲಸ ಮಾಡಿ ಎಲ್ಲರಿಂದ ಮೆಚ್ಚುಗೆ ಗಳಿಸಿಕೊಳ್ಳಿ. ಏನಾದ್ರೂ ಕೆಲಸ ಹೇಳಿದಾಗ ನೋ... ಆಗಲ್ಲ ಎನ್ನೋ ಪದ ಬಳಸಬೇಡಿ. ಒಂದು ವೇಳೆ ನೋ ಪದ ಬಳಸಲೇ ಬೇಕು ಅಂತಿದ್ದಾರೆ, ಪಾಸಿಟೀವ್ ವೇಯಲ್ಲಿ ನೋ ಅನ್ನಿ. ನೆಗಟೀವ್ ಅಟಿಟ್ಯುಡ್ ಅವರ ಮುಂದೆ ಬೇಡ.
ಇದರಿಂದ ನನಗೆ ಏನು ಲಾಭ:
ಕೆಲವೊಮ್ಮೆ ನಿಮ್ಮ ಸ್ನೇಹಿತರಿಗೆ ಇಲ್ಲ ಸಹದ್ಯೋಗಿಗಳಿಗೆ ಸಹಾಯಮಾಡಲು ನಿಮ್ಮ ಬಾಸ್ ನಿಮಗೆ ಸೂಚಿಸಬಹುದು. ಈ ಟೈಂನಲ್ಲಿ ನೀವು ಖುಶಿ ಖುಶಿಯಾಗಿ ಅವರಿಗೆ ಸಹಾಯ ಮಾಡಿ. ಇದರಿಂದ ಬಾಸ್ ನಿಮ್ಮ ಮೇಲೆ ಮೆಚ್ಚುಗೆ ವ್ಯಕ್ತಪಡಿಸುವರು. ಆದ್ರೆ ಯಾವುದೇ ಕಾರಣಕ್ಕೂ ಬಾಸ್ ಬಳಿ ಅವರಿಗೆ ಸಹಾಯ ಮಾಡಿದ್ರೆ ನನಗೆ ಏನು ಲಾಭ ಎಂದು ಕೇಳಬೇಡಿ. ಹೀಗೆ ಕೇಳುವುದರಿಂದ ಬಾಸ್ ದೃಷ್ಟಿಯಲ್ಲಿ ನೀವು ಮತ್ತೆ ಸಣ್ಣವರಾಗುತ್ತೀರಿ.
ನನಗೆ ಎಷ್ಟು ಗೊತ್ತೋ ಅಷ್ಟು ಮಾಡಿದೆ:
ಬಾಸ್ ಎಲ್ಲಿಯಾದ್ರೂ ನಿಮ್ಮ ತಪ್ಪನ್ನ ಎತ್ತಿ ಹಿಡಿದು ಮಾತನಾಡಿದ್ರೆ ನೀವು ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ. ತಾಳ್ಮೆ ಕಳೆದುಕೊಂಡು ನನಗೆ ಎಷ್ಟು ಗೊತ್ತೋ ಅಷ್ಟು ಮಾಡಿದೆ ಎನ್ನೋ ಡೈಲಾಗ್ ಅವರ ಮುಂದೆ ಹೇಳಬೇಡಿ. ಬದಲಿಗೆ ಅವರ ಮುಂದೆ ಪಾಸಿಟೀವ್ ಆಗಿ ಮುಂದೆ ಆ ತಪ್ಪು ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಮೃದುವಾಗಿ ತಿಳಿಸಿ
ನನ್ನ ಹತ್ತಿರ ಯಾವುದೇ ಸೊಲ್ಯುಶನ್ ಇಲ್ಲ:
ಯಾವಾಗಲೂ ನೆನಪಿಟ್ಟುಕೊಳ್ಳಿ, ಲೀಡರ್ಸ್ ಯಾವಾಗಲೂ ಸೊಲ್ಯುಶನ್ ಬಗ್ಗೆ ಮಾತನಾಡುತ್ತಾರೆ ಇನ್ನು ಫಾಲೋವರ್ಸ್ ಯಾವಾಗಲೂ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ನೀವು ಯಾವುದೇ ಕಾರಣಕ್ಕೂ ನಿಮ್ಮ ಸಮಸ್ಯೆ ಬಗ್ಗೆ ಬಾಸ್ ಗೆ ತಿಳಿಸಬೇಡಿ, ಬದಲಿಗೆ ಒಳ್ಳೊಳ್ಳೆಯ ಸೊಲ್ಯುಶನ್ಸ್ ಹಾಗೂ ಐಡಿಯಾಗಳ ಬಗ್ಗೆ ಬಾಸ್ ಜತೆ ಮಾತನಾಡಿ


Click it and Unblock the Notifications











