ಇಂಟರ್ವ್ಯೂಗೆ ಹೋಗೋ ಮುನ್ನ ಕಂಪನಿ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ಸಂಗತಿ

By Kavya

ಯಾವುದಾದ್ರೂ ಕಂಪನಿ ನಿಮಗೆ ಉದ್ಯೋಗದ ಆಫರ್ ನೀಡಿದೆಯೇ.. ಅಥವಾ ನೀವು ಯಾವುದಾದರೂ ಕಂಪನಿಗೆ ಸೇರಲಿಚ್ಚಿಸಿದ್ದೀರೇ... ಹಾಗಿದ್ರೆ ಕಂಪನಿಗೆ ಸೇರುವ ಮುನ್ನ ಆ ಕಂಪನಿ ಬಗ್ಗೆ ಕೆಲವೊಂದು ವಿಚಾರಗಳನ್ನ ತಪ್ಪದೇ ತಿಳಿದುಕೊಳ್ಳುವುದು ಒಳ್ಳೆಯದು. ಇಂಟರವ್ಯೂ ಹೋಗೋ ಮುನ್ನ ಕಂಪನಿ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ 6 ವಿಷಯಗಳು ಹೀಗಿವೆ ಚೆಕ್ ಮಾಡಿಕೊಳ್ಳಿ

ಕಂಪನಿ ಅವಲೋಕನ:

ಕಂಪನಿ ಅವಲೋಕನ:

ಇದು ಬೇಸಿಕ್ ಸ್ಟೆಪ್. ಮೊದಲಿಗೆ ಕಂಪನಿಯ ಆಫೀಶಿಯಲ್ ವೆಬ್‌ಸೈಟ್ ಗೆ ಭೇಟಿ ನೀಡಿ. ಪ್ರತಿಯೊಂದು ಕಂಪನಿಯು ಆಫೀಶಿಯಲ್ ವೆಬ್‌ಸೈಟ್ ಹೊಂದಿರುತ್ತದೆ. ಇದರಲ್ಲಿ ಕಂಪನಿಯ ಇತಿಹಾಸ, ಸ್ಥಾಪನೆ, ಉದ್ಯೋಗಸ್ಥರ ಸಂಖ್ಯೆ, ಸಬ್ ಬ್ರ್ಯಾಂಚ್ ಗಳ ಮಾಹಿತಿ ಕಂಪ್ಲೀಟ್ ಇರುತ್ತದೆ. ಈ ಕಾಲಂ ಗೆ ವಿಸಿಟ್ ಮಾಡುವುದು ಬಹಳ ಮುಖ್ಯ. ಇದರಿಂದ ಇಂಟರ್ವ್ಯೂ ವೇಳೆ ನೀವು ಕಂಪನಿ ಬಗ್ಗೆ ಏನಾದ್ರೂ ಕೇಳಿದ್ರೆ ಕಾಂಫಿಡೆಂಟ್ ಆಗಿ ಉತ್ತರಿಸಬಹುದು. ಅಷ್ಟೇ ಅಲ್ಲ ಕಂಪನಿ ಬಗ್ಗೆ ತಿಳಿದುಕೊಂಡಂತೆಯೂ ಆಗುತ್ತದೆ

ಆರ್ಥಿಕ ಸ್ಥಿತಿ:

ಆರ್ಥಿಕ ಸ್ಥಿತಿ:

ಸದ್ಯ ಕಂಪನಿ ಉತ್ತಮ ವೇತನಕ್ಕೆ ನಿಮಗೆ ಆಫರ್ ಮಾಡಿರಬಹುದು. ಆದ್ರೆ ಮುಂದೊಂದು ದಿನ ಆ ವೇತನ ನೀಡಿಕೆಯಲ್ಲಿ ಸಮಸ್ಯೆಯಾಗಬಾರದು ಎಂದಿದ್ದರೆ, ನೀವು ಆ ಕಂಪನಿಯ ಆರ್ಥಿಕ ಸ್ಥಿತಿ ಬಗ್ಗೆ ತಿಳಿದುಕೊಳ್ಳುವುದು ಬೆಸ್ಟ್. ಅಷ್ಟೇ ಅಲ್ಲ ಪ್ರತೀ ವರ್ಷದ ಹಣಕಾಸು ಸ್ಥಿತಿ ಹೇಗಿದೆ ಎಂದು ಚೆಕ್ ಮಾಡಿಕೊಳ್ಳಿ

ಉದ್ಯೋಗಿಗಳ ಅಭಿಪ್ರಾಯ:

ಉದ್ಯೋಗಿಗಳ ಅಭಿಪ್ರಾಯ:

ಇದು ಆ ಕಂಪನಿ ಬಗ್ಗೆ ತಿಳಿದುಕೊಳ್ಳಲು ಬೆಸ್ಟ್ ಉಪಾಯ. ನೀವು ಸೇರಲಿಚ್ಚಿಸುವ ಕಂಪನಿಯಲ್ಲಿ ಈಗಾಗಲೇ ನಿಮ್ಮ ಸ್ನೇಹಿತರಿದ್ದರೆ ಅವರ ಬಳಿ ಕಂಪನಿ ಬಗ್ಗೆ , ಕಂಪನಿಯಲ್ಲಿ ಬಾಸ್ ಹಾಗೂ ಉದ್ಯೋಗೊಗಳ ಮಧ್ಯೆಯ ಸಂಬಂಧದ ಬಗ್ಗೆ ತಿಳಿದುಕೊಳ್ಳುವುದು ಬೆಸ್ಟ್. ಅಷ್ಟೇ ಅಲ್ಲ ಕಂಪನಿಯಲ್ಲಿ ನಡೆಯುವ ಹಬ್ಬಗಳು, ಫಂಕ್ಷನ್ಸ್, ರಜಾ ದಿನಗಳ ಮಾಹಿತಿಗೆ ಸಂಬಂಧಪಟ್ಟಂತೆ ಕೆಲವೊಂದು ಮಾಹಿತಿಗಳನ್ನ ಅಲ್ಲಿನ ಉದ್ಯೋಗಿಗಳಿಂದ ಪಡೆದುಕೊಳ್ಳುವುದು ಬೆಸ್ಟ್

ಕೆಲಸಕ್ಕೆ ನೇಮಕ ಮಾಡುವವರ ಪ್ರೊಫೈಲ್ ಚೆಕ್ ಮಾಡಿ:

ಕೆಲಸಕ್ಕೆ ನೇಮಕ ಮಾಡುವವರ ಪ್ರೊಫೈಲ್ ಚೆಕ್ ಮಾಡಿ:

ನಿಮಗೆ ಯಾವುದಾದರೂ ಕಂಪನಿ ಉದ್ಯೋಗದ ಆಫರ್ ನೀಡಿದ್ದರೆ, ನೀವು ಅಲ್ಲಿನ ಬಾಸ್, ಹೆಚ್ ಆರ್ ಅವರನ್ನ ಸಾಮಾಜಿಕ ಜಾಲತಾಣದಲ್ಲಿ ಹುಡುಕಿ. ಅವರು ಒಂದು ವೇಳೆ ನಿಮಗೆ ಆನ್‌ಲೈನ್‌ನಲ್ಲಿ ಲಭ್ಯವಿದ್ದರೆ ಕ್ಯಾಶುವಲ್ ಆಗಿ ಮಾತನಾಡಿ, ಕಂಪನಿಯ ಬಗ್ಗೆ ತಿಳಿದುಕೊಳ್ಳಿ. ಸಾಧ್ಯವಾದ್ರೆ ಅಲ್ಲೇ ಒಂದು ಹಂತದ ಸಂದರ್ಶನ ಮುಗಿಸಿಕೊಳ್ಳಿ

ಕೆಲಸ ಮಾಡುವ ವಿಧಾನ :

ಕೆಲಸ ಮಾಡುವ ವಿಧಾನ :

ಯಾವ ರೀತಿಯ ಕೆಲಸ ವಿಧಾನಕ್ಕೆ ನೀವು ಪ್ರಾಮುಖ್ಯತೆ ನೀಡುತ್ತೀರಿ. ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡಲು ಇಚ್ಚಿಸುತ್ತೀರಾ. ಇಲ್ಲ ಫೀಲ್ಡ್ ವರ್ಕ್ ಬೇಕೆಂದು ಬಯಸುತ್ತೀರಾ ಅಷ್ಟೇ ಅಲ್ಲ ಟೆಕ್ನಿಕಲ್ ಫೀಲ್ಡ್‌ ಬೇಕೆಂದು ಬಯಸುತ್ತೀರಾ.. ಹಾಗೆ ಅಂದುಕೊಂಡಿದ್ರೆ ನೀವು ನಿಮಗೆ ಯಾವ ರೀತಿಯ ಕೆಲಸ ಬೇಕು, ಅಂತಹ ಕೆಲಸ ಆ ಕಂಪನಿಯಲ್ಲಿ ಇದೆಯಾ ಎಂಬುವುದು ಚೆಕ್ ಮಾಡಿಕೊಳ್ಳಿ

ಪ್ರಸ್ತುತ ವಿದ್ಯಾಮಾನ:

ಪ್ರಸ್ತುತ ವಿದ್ಯಾಮಾನ:

ಕಂಪನಿಯಲ್ಲಿ ಜರುಗಿದ ಪ್ರಸ್ತುತ ವಿದ್ಯಾಮಾನ ಬಗ್ಗೆ ತಿಳಿದುಕೊಳ್ಳಿ. ಅಂದ್ರೆ ಗೂಗಲ್‌ ಸಹಾಯದಿಂದ ಆ ಕಂಪನಿ ಹೆಸರು ಟೈಪ್ ಮಾಡಿ ನ್ಯೂಸ್ ಬಟನ್ ಆಯ್ಕೆ ಮಾಡಿಕೊಳ್ಳಿ. ಇದರಿಂದ ಆ ಕಂಪನಿಯಲ್ಲಿ ಇತ್ತೀಚೆಗೆ ಜರುಗಿದ ಏನೇ ವಿದ್ಯಾಮಾನವಿದ್ದರು ಅದರ ಕಂಪ್ಲೀಟ್ ಮಾಹಿತಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಹಾಗಾಗಿ ಇಂಟರ್ವ್ಯೂಗೆ ಹೋಗುವ ಮುನ್ನ ಅಲ್ಲಿನ ಪ್ರಸ್ತುತ ವಿದ್ಯಾಮಾನದ ಬಗ್ಗೆ ತಿಳಿದುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
Do you have offers from some companies but are confused as to which one to choose? There are certain things that you must know about an organisation before joining it. Check out what details you need to know and how you can check them even before attending a job interview
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+