ಯಾವುದೇ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕಾದರೆ ಜ್ಞಾನ ಹಾಗೂ ಸ್ಕಿಲ್ ತುಂಬಾ ಪ್ರಮುಖವಾಗಿ ಬೇಕಾಗಿರುವಂತದ್ದು. ಹಾಗಂತ ಯಶಸ್ವೀ ಕಂಪನಿಯಲ್ಲಿ ನೀವು ದುಡಿಯಬೇಕೆಂದಿದ್ದರೆ, ಇವೆರಡು ಇದ್ದರೆ ಸಾಲದು.

ಕೆಲಸ ಮಾಡುವ ಜಾಗದಲ್ಲಿ ನಿಮ್ಮ ವರ್ತನೆ ನಿಮ್ಮನ್ನ ತುಂಬಾ ದೂರ ಓಡುವ ಬಲಿಷ್ಟ ಕುದುರೆಯನ್ನಾಗಿಸಬಹುದು. ಇತ್ತೀಚಿಗಿನ ದಿನಗಳಲ್ಲಿ ಕಾರ್ಪೋರೇಟರ್ ವರ್ಲ್ಡ್‌ನಲ್ಲಿ ಪ್ರೋಫೆಶನಾಲಿಸಂಗೆ ತುಂಬಾ ಬೇಡಿಕೆ ಇದೆ. ಯಾರು ಪ್ರೊಫೆಶನಲ್ ಆಗಿ ಇರುತ್ತಾರೋ ಅವರು ಉನ್ನತ ಸ್ಥಾನದವರೆಗೆ ತಲುಪುತ್ತಾರೆ. ಪ್ರೊಫೆಶನಲ್ ಆಗಿ ಇರುವುದೆಂದ್ರೆ ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತೀರೋ ಅಲ್ಲಿ ಒಂದು ನಿಶ್ಚಿತ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.
ಕಾಲ್ ಅಲ್ಲಿ ಬ್ಯುಸಿ :
ಹೌದು ಕೆಲವೊಂದು ಪ್ರತಿಷ್ಟಿತ ಕಂಪನಿಯಲ್ಲಿ ಮೊಬೈಲ್ ಬಳಕೆಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಎಮರ್ಜೆನ್ಸಿ ಕಾಲ್ ಬಂದ್ರೆ ಕಾಲ್ ರಿಸೀವ್ ಮಾಡಬಹುದು. ಆದ್ರೆ ಕೆಲವರು ಸ್ನೇಹಿತರ ಜತೆ ಇಲ್ಲ ಸಂಗಾತಿ ಜತೆ ಗಂಟೆ ಗಟ್ಟಲೆ ಕುಳಿತು ಮಾತನಾಡುತ್ತಾ ಇರುತ್ತಾರೆ. ನೀವು ಪ್ರೊಫೆಶನಲ್ ವ್ಯಕ್ತಿಗಳ ತರಹ ಆಗಬೇಕೆಂದಿದ್ದರೆ, ಫೋನ್ ಬಳಕೆ ಕಡಿಮೆ ಮಾಡಿ. ನಿಮ್ಮ ವೈಯಕ್ತಿಯ ವ್ಯಕ್ತಿಗಳ ಜತೆ ಆಫೀಸ್ ವರ್ಕ್ ಮುಗಿದ ಬಳಿಕ ಕಾಲ್ ಮಾಡಿ ಮಾತನಾಡಿ.
ಸೋಶಲ್ ಮೀಡಿಯಾದಲ್ಲಿ ಬ್ಯುಸಿ:
ದಿನದಲ್ಲಿ ಒಂದೆರಡು ಬಾರಿ ಫೇಸ್‌ಬುಕ್ ಹಾಗೂ ಇಂಸ್ಟಾಗ್ರಾಂ ಚೆಕ್ ಮಾಡುತ್ತಾ ಇರುವುದು ಸರಿ ಆದ್ರೆ ದಿನವಿಡೀ ಸೋಶಲ್ ಮೀಡಿಯಾದಲ್ಲಿ ಕಾಲಕಳೆಯುತ್ತಾ ಇದ್ದರೆ ಇದರಿಂದ ನಿಮ್ಮ ಪ್ರೊಡಕ್ಟಿವಿಟಿ ಕಡಿಮೆಯಾಗುತ್ತದೆ.
ಗಾಸಿಪ್ ಹಬ್ಬಿಸುವುದು:
ಕೆಲವು ಜನರಿಗೆ ಗಾಸಿಪ್ ಹಬ್ಬಿಸುವುದರಲ್ಲಿ ಹೆಚ್ಚು ಮಜಾ ಸಿಗುತ್ತದೆ. ನೀವು ಆಫೀಸ್‌ನ ಯಾವುದೋ ಮೂಲೆಯಲ್ಲಿ ಕುಳಿತು ಮೆತ್ತಗೆ ಮಾತನಾಡಿರಬಹುದು. ಆದ್ರೆ ನಿಮ್ಮ ಮಾತು ಇಡೀ ಆಫೀಸ್‌ಗೆ ಹಬ್ಬಿರುತ್ತೆ. ಕ್ರಮೇಣ ನಿಮ್ಮ ಗಾಸಿಪ್ ನೇಚರ್ ಬಗ್ಗೆ ಇಡೀ ಆಫೀಸ್‌ಗೆ ತಿಳಿಯಬಹುದು. ಇದರಿಂದ ನಿಮಗೆ ಕೆಟ್ಟ ಹೆಸರು ಬರಬಹುದು.


Click it and Unblock the Notifications











