ಕಾಲೇಜು ಮುಗಿದ ಬಳಿಕ ಕೆಲಸ ಹುಡುಕೋದು ಪ್ರಾರಂಭವಾಗುತ್ತದೆ. ಅಷ್ಟೇ ಅಲ್ಲ ಕೆಲಸ ಹುಡುಕು ಎಂದು ಯಾರಾದ್ರೂ ನಮ್ಮನ್ನ ಪುಶ್ ಮಾಡುತ್ತಲೇ ಇರುತ್ತಾರೆ. ಇನ್ನು ಕೆಲಸ ಸಿಕ್ಕಿದ ಕೂಡಲೇ ನಾವು ಸ್ವತಂತ್ರರಾದೆವು ಎಂಬ ಭಾವನೆಯಿಂದ ಬೀಗುತ್ತೇವೆ. ಹಾಗೆ ಬೀಗುವವರು ಈ ಆರ್ಟಿಕಲ್ ಓದಲೇ ಬೇಕು.

ನೀವು ಏನು ಮಾಡಿದ್ರೂ ನಡೆಯುತ್ತೆ ಅನ್ನೋ ಕಾಲೇಜು ಮೆಂಟಾಲಿಟಿ ಆಫೀಸ್ ಗೆ ಎಂಟ್ರಿ ಆಗುವ ಮುನ್ನ ಹೊರಗೆ ಬಿಟ್ಟು ಬಿಡಿ. ನೀವು ಮಾಡುವ ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳಿಂದ ಕೆಲಸ ಸಿಕ್ಕಿದ ಕೆಲವೇ ದಿನಗಳಲ್ಲಿ ಆ ಕೆಲಸ ಕಳೆದುಕೊಳ್ಳಬಹುದು ಕೂಡಾ. ಹಾಗಾಗಿ ಫೆಶರ್ಸ್ ಇಲ್ಲ ಇಂಟರ್ನ್ ಕೆರಿಯರ್ ಪ್ರಾರಂಭಿಸಿದ ಕೂಡಲೇ ಹೇಗೆ ಬಿಹೇವ್ ಮಾಡಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ ಮುಂದಕ್ಕೆ ಓದಿ.
ಅಷ್ಟೇ ಅಲ್ಲ ಆಫೀಸ್ ನಲ್ಲಿ ಏನಾದ್ರೂ ಮೀಟಿಂಗ್ ಇದ್ದಾಗ ಸಮಯಕ್ಕೆ ಮೊದಲೇ ನೀವಲ್ಲಿ ಇರಬೇಕು. ಕಾರ್ಪೋರೇಟ್ ವರ್ಲ್ಡ್ ನಲ್ಲಿ ನೀವು ಈಗಿಂದಲೇ ಟೈಂನ್ನ ಸ್ಟ್ರಿಕ್ಟ್ ಆಗಿ ಫಾಲೋ ಮಾಡಿದ್ರೆ ಮುಂದೆ ನಿಮ್ಮ ಕೆರಿಯರ್ ಲೈಫ್ ಗೆ ಅದರಿಂದ ತುಂಬಾ ಅನುಕೂಲವಾಗುವುದು.
ಉಡುಗೆ ವಿಚಾರ:
ಇದೀಗ ನಿಮ್ಮ ಕಾಲೇಜು ಲೈಫ್ ಮುಗಿಯಿತು ಎಂಬುವುದು ನೆನಪಿಟ್ಟುಕೊಳ್ಳಿ. ಕಾಲೇಜಿಗೆ ಹೋಗುವಾಗ ಬಣ್ಣ ಬಣ್ಣದ ಫ್ಯಾನ್ಸಿ ಉಡುಗೆ, ಅದಕ್ಕೆ ಮ್ಯಾಚಿಂಗ್ ಮ್ಯಾಚಿಂಗ್ ದೊಡ್ಡ ದೊಡ್ಡ ಇಯರ್ ರಿಂಗ್, ಕೈಗೆ ಕಲರ್ ಫುಲ್ ನೇಲ್‌ಪೇಂಟ್ ಬಳಿದು ಹೋಗಿರಬಹುದು. ಆದ್ರೆ ಆಫೀಸ್ ವಿಚಾರ ಬಂದಾಗ ಅದೆಲ್ಲಕ್ಕೂ ಬೈ ಬೈ ಹೇಳಿ. ಆಫೀಸ್ ವಿಚಾರ ಬಂದಾಗ ನಿಮ್ಮಷ್ಟವೆಲ್ಲ ಪಕ್ಕಕ್ಕಿಡಿ ಬದಲಿಗೆ ಆಫೀಸ್‌ಗೆ ಟಿಪ್ ಟಾಪ್ ಆಗಿ ಹೋಗುವುದು ಕಲಿಯಿರಿ.
ಬಾಸ್ ಜತೆ ಉತ್ತಮ ರಿಲೇಶನ್ ಶಿಪ್ ಇಟ್ಟುಕೊಳ್ಳಿ:
ವರದಿ ಪ್ರಕಾರ ಹೆಚ್ಚಿನ ಉದ್ಯೋಗಿಗಳು ಆ ಸಂಸ್ಥೆಯ ಬಾಸ್ ಜತೆಗಿನ ಅಸಮಾಧಾನಕಾರ ಸಂಬಂಧದಿಂದ ರಿಸೈನ್ ಮಾಡುತ್ತಾರೆ ಎಂದು ತಿಳಿದುಬಂದಿದೆ. ನೀವು ಯಾವುದೇ ಕಂಪನಿಗೆ ಫ್ರೆಶರ್ಸ್ ಆಗಿ ಸೇರಿದಾಗ, ನೀವು ಕೂಡಲೇ ಆ ಕಂಪನಿಗೆ ರಿಸೈನ್ ಮಾಡುವುದು ನಿಮ್ಮ ಕೆರಿಯರ್ ಫ್ಯೂಚರ್ ಪ್ರಕಾರ ಒಳಿತಲ್ಲ. ಇನ್ನು ಆಫೀಸ್‌ನಲ್ಲಿ ನಿಮ್ಮ ಸೀಟು ಗಟ್ಟಿಯಾಗಿ ಇರಬೇಕಾದ್ರೆ ನೀವು ಬಾಸ್ ಜತೆ ಉತ್ತಮ ಹೆಲ್ತಿ ರಿಲೇಶನ್ ಇಟ್ಟು ಕೊಂಡಿರಬೇಕು.
ಬಾಸ್ ಜತೆ ಉತ್ತಮ ಹೆಲ್ತಿ ರಿಲೇಶನ್ ಇಟ್ಟುಕೊಳ್ಳುವುದರಿಂದ ನಿಮ್ಮ ಹುದ್ದೆ ಆದಷ್ಟು ಬೇಗ ಖಾಯಂ ಆಗುವುದಲ್ಲದೇ, ಕೆರಿಯರ್ ಅಲ್ಲಿ ಡೆವಲಪ್ ಮೆಂಟ್ ಕೂಡಾ ನೀವು ಕಾಣಬಹುದು.
ಗಾಸಿಪ್ ನಿಂದ ದೂರವಿರಿ:
ಪ್ರತಿ ಉದ್ಯೋಗಿಯ ಫೈಲುವರ್ ಗೆ ಆಫೀಸ್ ಪಾಲಿಟಿಕ್ಸ್ ಪ್ರಮುಖ ಕಾರಣವಾಗಿರಬಹುದು. ಹಾಗಾಗಿ ಆಫೀಸ್ ಗೆ ಪ್ರೆಶರ್ ಆಗಿ ಕಾಲಿಟ್ಟ ಕೂಡಲೇ ಯಾವುದೇ ಗಾಸಿಪ್ ಗೆ ನೀವು ಕಿವಿ ಕೊಡಬೇಡಿ, ಅದೇ ರೀತಿ ಗಾಸಿಪ್ ಕ್ರಿಯೆಟ್ ಕೂಡಾ ಮಾಡಬೇಡಿ. ಒಮ್ಮೆ ನೀವು ಗಾಸಿಪ್ ಮಾಡಿ ಸಿಕ್ಕಿ ಬಿದ್ದಿರಾ ಅಂದು ಕೊಳ್ಳಿ ಅದು ನಿಮ್ಮ ಕೆರಿಯರ್ ಲೈಫ್ ಗೆ ಒಂದು ಬ್ಲಾಕ್ ಮಾರ್ಕ್ ಆಗಬಹುದು.


Click it and Unblock the Notifications











