World Sleep Day 2022 : ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ತೊಂದರೆ ಕೊಡುವ ನಿದ್ರೆಗೆ ಏನು ಮಾಡಬೇಕು? ಇಲ್ಲಿದೆ ಸಲಹೆ

ಇಂದು ವಿಶ್ವ ನಿದ್ರಾ ದಿನ: ನಿದ್ರೆ ಎಂಬುದು ಪ್ರತಿ ಜೀವಿಗೂ ಅತ್ಯಗತ್ಯ. ಸರಿಯಾಗಿ ನಿದ್ದೆ ಇಲ್ಲ ಅಂದ್ರೆ ದಿನವೆಲ್ಲಾ ಹಾಳು ಹಾಗೆಯೇ ವಿದ್ಯಾರ್ಥಿ ಜೀವನದಲ್ಲೂ ಕೂಡ ನಿದ್ರೆ ಪ್ರಮುಖವಾದದ್ದು.

ಅಧ್ಯಯನದ ಸಮಯದಲ್ಲಿ ನಿದ್ರೆಯಿಂದ ತೊಂದರೆಗೆ ಒಳಗಾಗುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ

ಇನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡುವುದು ಅಗತ್ಯ ಆದರೆ ಹೆಚ್ಚು ಕಾಲ ಅಧ್ಯಯನ ಮಾಡಿ ಉತ್ತಮ ಅಂಕಗಳಿಸಬೇಕೆಂಬ ವಿದ್ಯಾರ್ಥಿಗಳಿಗೆ ಎದುರಾಗುವ ಸಮಸ್ಯೆಯೇ ನಿದ್ರೆಯ ಸಮಸ್ಯೆ. ಹೌದು ಅನೇಕ ವಿದ್ಯಾರ್ಥಿಗಳು ರಾತ್ರಿ ಹೆಚ್ಚು ಓದಬೇಕು ಎಂದು ಯೋಜನೆ ಹಾಕಿಕೊಳ್ಳುತ್ತಾರೆ ಆದರೆ ಅದು ಫೇಲ್‌ ಆಗಿಬಿಡುತ್ತದೆ. ವಿದ್ಯಾರ್ಥಿಗಳಿಗೆ ಓದಿನ ಸಮಯದಲ್ಲಿ ಈ ನಿದ್ರೆ ಆವರಿಸಲಿಕ್ಕೆ ಹಲವಾರು ಕಾರಣಗಳಿವೆ ಆದರೆ ಅದನ್ನು ನಿಯಂತ್ರಸುವುದು ಹೇಗೆ ಎನ್ನುವುದನ್ನು ಕರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ.

ಅಧ್ಯಯನಕ್ಕೆ ತೊಂದರೆಯನ್ನುಂಟು ಮಾಡುವ ಗ್ಯಾಜೆಟ್ಸ್‌ನಿಂದ ದೂರವಿರಿ:

ಅಧ್ಯಯನಕ್ಕೆ ತೊಂದರೆಯನ್ನುಂಟು ಮಾಡುವ ಗ್ಯಾಜೆಟ್ಸ್‌ನಿಂದ ದೂರವಿರಿ:

ನಿಮ್ಮ ಅಧ್ಯಯನವನ್ನು ಹಾಳು ಮಾಡುವ ಅಥವಾ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಯಾವುದೇ ಗ್ಯಾಜೆಟ್‌ ಬಳಕೆ ಮಾಡದಿರುವುದು ಒಳಿತು. ಇದು ನಿಮ್ಮ ಸಮಯವನ್ನು ಹಾಳು ಮಾಡುವುದು ಮಾತ್ರವಲ್ಲದೆ ನೀಲಿ ಬೆಳಕಿಗೆ ನಿಮ್ಮ ಕಣ್ಣುಗಳನ್ನು ಒಡ್ಡಿಕೊಳ್ಳುವುದರಿಂದ ನಿಮಗೆ ಬೇಗ ನಿದ್ರೆ ಬರುತ್ತದೆ. ಆದ್ದರಿಂದ ಓದುವಾಗ ಇಂತಹ ಗಮನ ಸೆಳೆಯುವ ವಸ್ತುಗಳನ್ನು ದೂರ ಇಡುವುದು ಒಳಿತು.

ಅಧ್ಯಯನ ಮಾಡುವಾಗ ವಿರಾಮ ತೆಗೆದುಕೊಳ್ಳಿ:

ಅಧ್ಯಯನ ಮಾಡುವಾಗ ವಿರಾಮ ತೆಗೆದುಕೊಳ್ಳಿ:

ದೀರ್ಘಕಾಲ ನೀವು ಅಧ್ಯಯನ ಮಾಡುವ ವಿದ್ಯಾರ್ಥಿಗಳಾಗಿದ್ದಲ್ಲಿ ಇದರಿಂದ ನಿಮ್ಮ ಮೆದುಳು ಮಂಕಾಗಿ ಬಿಡುವ ಸಾಧ್ಯತೆ ಇರುತ್ತದೆ. ಇದರಿಂದ ನಿಮಗೆ ಬೇಗನೆ ನಿದ್ದೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಓದುವ ಸಮಯದ ನಡುವೆ ವಿರಾಮ ತೆಗೆದುಕೊಳ್ಳಿ. ಇದರಿಂದ ಮನಸ್ಸಿಗೆ ಶಾಂತಿ ಸಿಗುವುದರ ಜೊತೆಗೆ ಮೆದುಳು ಇನ್ನಷ್ಟು ಚುರುಕುಗೊಳ್ಳುವುದು.

ಅಧ್ಯಯನ ಕೊಠಡಿ ಉತ್ತಮ ಬೆಳಕಿನಿಂದ ಕೂಡಿರಲಿ:

ಅಧ್ಯಯನ ಕೊಠಡಿ ಉತ್ತಮ ಬೆಳಕಿನಿಂದ ಕೂಡಿರಲಿ:

ಸಾಮಾನ್ಯ ವಿದ್ಯಾರ್ಥಿಗಳು ಸ್ಟಡಿ ಲ್ಯಾಂಪಿನಡಿಯಲ್ಲಿ ಕುಳಿತು ಓದುತ್ತಾರೆ. ಇದರಿಂದ ಕೋಣೆಯು ಕತ್ತಲಿನಿಂದ ಕೂಡಿರುತ್ತದೆ. ವಿದ್ಯಾರ್ಥಿಗಳು ಓದುವ ಕೋಣೆಯು ಉತ್ತಮ ಬೆಳಕಿನಿಂದ ಕೂಡಿರಬೇಕು ಹಾಗಿದ್ದಾಗ ಮಾತ್ರ ಯಾವುದೇ ಅಡೆತಡೆ ಇಲ್ಲದೆ ಅಧ್ಯಯನವನ್ನು ಉತ್ತಮ ರೀತಿಯಲ್ಲಿ ನಡೆಸಲು ಸಾಧ್ಯ.

ನಿಯಮಿತ ಆಹಾರ ಸೇವನೆ ಇರಲಿ:

ನಿಯಮಿತ ಆಹಾರ ಸೇವನೆ ಇರಲಿ:

ಓದುವಂತಹ ವಿದ್ಯಾರ್ಥಿಗಳು ಅಧ್ಯಯನ ಮಾಡುವಾಗ ಹೆಚ್ಚಿನ ಆಹಾರ ಸೇವನೆ ಅನಗತ್ಯ. ಅಧ್ಯಯನದ ನಡುವೆ ಬಿಡುವು ಮಾಡಿಕೊಂಡು ನಿಯಮಿತ ಆಹಾರವನ್ನು ಸೇವಿಸುವುದು ಒಳಿತು. ಒಂದು ವೇಳೆ ಹೆಚ್ಚು ಆಹಾರ ಸೇವನೆ ಮಾಡಿದ್ದಲ್ಲಿ ನಿದ್ರೆ ಬರುವುದು ಮತ್ತು ಆಲಸ್ಯ ಉಂಟಾಗುವುದು ಹಾಗಾಗಿ ನಿಯಮಿತ ಆಹಾರ ಸೇವನೆಯಿಂದ ನಿದ್ರೆ ಬರುವುದನ್ನು ತಡೆಗಟ್ಟಬಹುದು.

 

ನೀರನ್ನು ಚೆನ್ನಾಗಿ ಕುಡಿಯಿರಿ:

ನೀರನ್ನು ಚೆನ್ನಾಗಿ ಕುಡಿಯಿರಿ:

ನೀರು ಪ್ರತಿಯೊಂದು ಜೀವಿಯ ಆರೋಗ್ಯಕ್ಕೂ ಅಗತ್ಯ. ನೀರನ್ನು ಚೆನ್ನಾಗಿ ಕುಡಿದರೆ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು. ಇನ್ನು ವಿದ್ಯಾರ್ಥಿಗಳ ವಿಷಯಕ್ಕೆ ಬಂದಾಗ ವಿದ್ಯಾರ್ಥಿಗಳು ಹೆಚ್ಚು ನೀರನ್ನು ಕುಡಿಯುವುದರಿಂದ ಎರಡು ಲಾಭಗಳಿವೆ. ಒಂದು ನಿದ್ರೆಯನ್ನು ನಿಯಂತ್ರಿಸಬಹುದು ಮತ್ತು ಇನ್ನೊಂದು ಮೆದುಳು ಚುರುಕಾಗಿ ಅಧ್ಯಯನಕ್ಕೆ ಸಹಕರಿಸುತ್ತದೆ.

 

ರಾತ್ರಿ ಸಮಯ ಬೇಗ ನಿದ್ದೆಗೆ ಜಾರುವುದು ಒಳಿತು:

ರಾತ್ರಿ ಸಮಯ ಬೇಗ ನಿದ್ದೆಗೆ ಜಾರುವುದು ಒಳಿತು:

ವಿದ್ಯಾರ್ಥಿಗಳು ರಾತ್ರಿಯೆಲ್ಲಾ ಕುಳಿತು ಓದುವುದಿದ್ದರೆ ಅವರಿಗೆ ನಿದ್ರೆ ತೊಂದರೆ ಕೊಡುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಓದುವುದು ಉತ್ತಮ ಅಭ್ಯಾಸ. ರಾತ್ರಿ ಬೇಗ ನಿದ್ದೆಗೆ ಜಾರುವುದು ಮತ್ತು ಹಗಲಿನ ಸಮಯ ಬೇಗ ಎದ್ದು ಓದುವುದರಿಂದ ಬುದ್ದಿ ಇನ್ನಷ್ಟು ಚುರುಕಾಗಿ ಸಹಕರಿಸುತ್ತಿದೆ. ವಿದ್ಯಾರ್ಥಿಗಳು ಹಗಲು ಹೊತ್ತು ಮಾಡಿದ ಅಧ್ಯಯನ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ ಎಂಬ ಮಾತಿದೆ. ಹಾಗಾಗಿ ರಾತ್ರಿ ಬೇಗ ಮಲಗುವ ಅಭ್ಯಾಸ ಮಾಡಿ.

 

ಮಧ್ಯಾಹ್ನದ ಸಮಯ ಸ್ವಲ್ಪ ನಿದ್ರೆ ಮಾಡಿ:

ಮಧ್ಯಾಹ್ನದ ಸಮಯ ಸ್ವಲ್ಪ ನಿದ್ರೆ ಮಾಡಿ:

ನೀವು ಬೆಳಗ್ಗೆ ಎದ್ದಾಗಿನಿಂದಲೂ ಓದುತ್ತಿದ್ದರೆ ಮಧ್ಯಾಹ್ನ ಬಿಡುವು ಮಾಡಿಕೊಂಡು ಸ್ವಲ್ಪ ನಿದ್ರೆ ಮಾಡುವುದು ಒಳಿತು. ಇದರಿಂದ ತಡ ರಾತ್ರಿ ಅಧ್ಯಯನ ಮಾಡುವಾಗ ನಿದ್ರೆ ಬರುವಂತಹ ಸಮಸ್ಯೆಗಳು ಎದುರಾಗುವುದಿಲ್ಲ.

 

 ಓದುವ ಸ್ಥಳದ ಆಯ್ಕೆ ಮುಖ್ಯ:

ಓದುವ ಸ್ಥಳದ ಆಯ್ಕೆ ಮುಖ್ಯ:

ಅನೇಕ ವಿದ್ಯಾರ್ಥಿಗಳು ಓದುವ ಸ್ಥಳವನ್ನು ಅನುಕೂಲವಾಗಿರಿಸಿಕೊಳ್ಳಲು ಬಯಸುತ್ತಾರೆ. ಆದರೆ ಅದು ತಪ್ಪು, ಹಾಸಿಗೆ ಮೇಲೆ ಕುಳಿತು ಓದುವುದಕ್ಕಿಂತ ಒಂದು ಕುರ್ಚಿಯ ಮೇಲೆ ಕುಳಿತು ಓದುವುದರಿಂದಲೂ ನಿದ್ರೆ ಬರುವ ಸಾಧ್ಯತೆ ಕಡಿಮೆ ಇರುತ್ತದೆ.

 

ಓದುವಾಗ ನೋಟ್ ಮಾಡಿಕೊಳ್ಳುವ ಅಭ್ಯಾಸ ಮಾಡಿ:

ಓದುವಾಗ ನೋಟ್ ಮಾಡಿಕೊಳ್ಳುವ ಅಭ್ಯಾಸ ಮಾಡಿ:

ವಿದ್ಯಾರ್ಥಿಗಳು ಸುಮ್ಮನೆ ಓದುತ್ತಾ ಕುಳಿತರೆ ಅದರಿಂದ ನಿಮಗೆ ಓದಿನ ಆಸಕ್ತಿ ಕಡಿಮೆಯಾಗಬಹುದು ಅಥವಾ ಗಮನ ಬೇರೆಡೆಗೆ ಹೋಗಬಹುದು. ಹಾಗಾಗಿ ಅಧ್ಯಯನ ಮಾಡುವಾಗ ಪ್ರಮುಖ ಅಂಶಗಳನ್ನು ಒಂದೆಡೆ ನೋಟ್ ಮಾಡಿಕೊಳ್ಳಿ. ಇದರಿಂದ ಓದಿನಲ್ಲಿ ಆಸಕ್ತಿ ಹೆಚ್ಚಾಗುವುದು ಮತ್ತು ಓದಿದ್ದು ಹೆಚ್ಚಿನ ಕಾಲ ನೆನಪಿನಲ್ಲಿ ಉಳಿಯುತ್ತದೆ ಹಾಗೂ ನೀವು ಮಾಡಿಕೊಂಡ ಪ್ರಮುಖ ಅಂಶಗಳ ನೋಟ್‌ನಿಂದ ಪರೀಕ್ಷಾ ಸಂದರ್ಭದಲ್ಲಿ ಸಹಾಯವಾಗುವುದು.

 

ಕಾಫಿ ಸೇವನೆ ನಿಲ್ಲಿಸಿ:

ಕಾಫಿ ಸೇವನೆ ನಿಲ್ಲಿಸಿ:

ಒಂದು ವೇಳೆ ನೀವು ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದಲ್ಲಿ ಅದನ್ನು ನಿಲ್ಲಿಸಿ. ಹಲವರು ರಾತ್ರಿ ಹೆಚ್ಚು ಸಮಯ ಓದಬೇಕು ಎಂದು ಕಾಫಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳುತ್ತಾರೆ. ಆದರೆ ಅದು ತಪ್ಪು ಕಾರಣ ರಾತ್ರಿಯ ಸಮಯದಲ್ಲಿ ಕೆಫೀನ್ ಅಥವಾ ಎನರ್ಜಿ ಪಾನೀಯಗಳನ್ನು ಸೇವಿಸುವುದರಿಂದ ನಿದ್ರೆಯನ್ನು ಇನ್ನಷ್ಟು ಪ್ರಚೋದಿಸಿದಂತಾಗುತ್ತದೆ. ಹಾಗಾಗಿ ಅದರ ಬದಲಾಗಿ ಹೆಚ್ಚು ನೀರನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
Here we are giving some tips for students to avoid sleep while studying. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X