ಮುಂಬರಲಿರುವ ಎಸ್‌ಬಿಐ ಎಕ್ಸಾಂಗೆ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

Written By: Nishmitha B

ಎಸ್‌ಬಿಐ ನೇಮಕಾತಿ ನೋಟಿಫಿಕೇಶನ್ ಗೆ ಅದೆಷ್ಟೋ ವಿದ್ಯಾರ್ಥಿಗಳು ಕಾಯುತ್ತಾ ಇರುತ್ತಾರೆ. ಈಗಾಗಲೇ ಜೂನಿಯರ್ ಅಸೋಸಿಯೆಟ್ - ಸೇಲ್ಸ್ ಮತ್ತು ಸಪೋರ್ಟ್ ಕಸ್ಟಮರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಇದೀಗ ಎಕ್ಸಾಂಗಾಗಿ ಕಾಯುತ್ತಿದ್ದಾರೆ.

ಎಸ್‌ಬಿಐ ಯಲ್ಲಿ ಒಟ್ಟು ೮೩೦೧ ಹುದ್ದೆಗಳಿದ್ದು, ಮಾರ್ಚ್ ಕೊನೆಯಲ್ಲಿ ಇಲ್ಲ ಎಪ್ರಿಲ್ ತಿಂಗಳಿನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಇದೀಗ ಪರೀಕ್ಷೆ ಸಿದ್ಧತೆಗೆ ಒಂದು ತಿಂಗಳು ಕೂಡಾ ಬಾಕಿ ಇಲ್ಲ. ಪರೀಕ್ಷೆಗೆ ಹಾಜರಾಗುವ ಮುನ್ನ ಪರೀಕ್ಷೆ ಸಿದ್ಧತೆಗೆ ಪೂರಕವೆಂಬಂತೆ ನಾವು ಇಲ್ಲಿ ಕೆಲವು ಟಿಪ್ಸ್ ನಿಮಗೆ ನೀಡಿದ್ದೇವೆ ಗಮನವಿಟ್ಟು ಓದಿಕೊಳ್ಳಿ

ಮುಂಬರಲಿರುವ ಎಸ್‌ಬಿಐ ಎಕ್ಸಾಂಗೆ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

ಅಭ್ಯರ್ಥಿ ಆಯ್ಕೆ
ಆನ್‌ಲೈನ್ ಮೋಡ್‌ನಲ್ಲಿ ಪರೀಕ್ಷೆ ನಡೆಯಲಿದೆ. ಜ್ಯೂನಿಯರ್ ಅಸೋಸಿಯೆಟ್ ಕಂಸಿಸ್ಟ್ ಆಫ್ ಪ್ರೆಲಿಮಿನರಿ ಹಾಗೂ ಮೈನ್ ಎಕ್ಸಾಮಿನೇಶನ್ಸ್ ಹುದ್ದೆಗೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಯಲಿದೆ

ಪೂರ್ವಭಾವಿ ಪರೀಕ್ಷೆ

ಪರೀಕ್ಷೆ ಪ್ರಶ್ನೆಗಳ ಸಂಖ್ಯೆ ಅಂಕ ಸಮಯ
 ಇಂಗ್ಲೀಷ್ 30 30  20 ನಿಮಿಷ
 ಸಂಖ್ಯಾತ್ಮಕ ಸಾಮರ್ಥ್ಯ 35 35  20 ನಿಮಿಷ
 ರೀಸನಿಂಗ್ ಸಾಮರ್ಥ್ಯ 35 35  20 ನಿಮಿಷ
ಒಟ್ಟು   100 100  1 ಗಂಟೆ

ಪ್ರಮುಖ ಪರೀಕ್ಷೆ

ಪರೀಕ್ಷೆ ಒಟ್ಟು ಪ್ರಶ್ನೆಗಳು ಅಂಕ ಸಮಯ
 ಸಾಮಾನ್ಯ/ ಹಣಕಾಸು ಜಾಗೃತಿ 50 5035 ನಿಮಿಷ 
 ಸಾಮಾನ್ಯ ಇಂಗ್ಲೀಷ್ 40 40  35 ನಿಮಿಷ
 ಪರಿಮಾಣಾತ್ಮಕ ಆಪ್ಟಿಟ್ಯೂಡ್ 50 50  45 ನಿಮಿಷ
 ಕಂಪ್ಯೂಟರ್ ಆಪ್ಟಿಟ್ಯೂಡ್ 50 60  45 ನಿಮಿಷ
 ಒಟ್ಟು 190 200 2 ಗಂಟೆ 40 ನಿಮಿಷ

ಇಲ್ಲಿ ತಪ್ಪು ಉತ್ತರಗಳಿಗೆ ನೆಗಟೀವ್ ಅಂಕಗಳಿವೆ. ಪ್ರತಿ ತಪ್ಪು ಉತ್ತರಕ್ಕೆ 1/4 ಮಾರ್ಕ್ ಕಳೆಯಲಾಗುವುದು.

ಎಸ್‌ಬಿಐ ಕ್ಲಾರ್ಕ್ ಎಕ್ಸಾಂ ಗೆ ಹೇಗೆ ತಯಾರಾಗ ಬೇಕು ಅನ್ನೋ ಟಿಪ್ಸ್ ಇಲ್ಲಿದೆ

ಮುಂಬರಲಿರುವ ಎಸ್‌ಬಿಐ ಎಕ್ಸಾಂಗೆ ಹೆಚ್ಚು ಅಂಕ ಸ್ಕೋರ್ ಮಾಡುವುದು ಹೇಗೆ?

ಅಭ್ಯಾಸ:
ಅಭ್ಯಾಸ ಮನುಷ್ಯನನ್ನ ಪರ್ಫೇಕ್ಟ್ ಮಾಡುತ್ತದೆ ಅನ್ನೋ ಮಾತಿದೆ. ನೀವು ಹೆಚ್ಚು ಹೆಚ್ಚು ಅಭ್ಯಸಿದ್ರೆ ನಿಮಗೆ ಯಾವುದೂ ಕಷ್ಟವಲ್ಲ. ಎಲ್ಲಾ ರೀತಿಯ ಪ್ರಶ್ನೆಗಳನ್ನ ಕೂಡಾ ಅಭ್ಯಸಿಸಿ

ಓದುವ ಅಭ್ಯಾಸ ರೂಢಿಸಿ ಕೊಳ್ಳಿ:
ನೀವು ಪ್ರತಿದಿನದ ಸುದ್ದಿಪತ್ರಿಕೆ, ಮ್ಯಾಗಜಿನ್ ಓದುವ ಹವ್ಯಾಸ ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಇಂಗ್ಲೀಷ್ ಭಾಷಾ ಕೌಶಲ್ಯ ಹೆಚ್ಚುವುದು. ಅಷ್ಟೇ ಅಲ್ಲ ಪ್ರಚಲಿತ ವಿದ್ಯಾಮಾನದ ಬಗ್ಗೆ ನೀವು ಅಪ್‌ಡೇಟ್ ಆಗಿರಬೇಕು

ಟೈಂ ಹೊಂದಾಣಿಕೆ
ಪರೀಕ್ಷೆ ಟೈಂ ವೇಳೆ ಟೈಂ ಹೊಂದಾಣಿಕೆ ಅಗತ್ಯ. ಎಲ್ಲಾ ಸೆಕ್ಷನ್ ಗೂ ಒಂದೇ ರೀತಿಯ ಪ್ರಾಮುಖ್ಯತೆ ನೀಡಬೇಕು.

ಶಾರ್ಟ್ ಕಟ್
ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಆದಷ್ಟು ಸ್ಪೀಡ್ ಇರಬೇಕು. ಹಾಗಾಗಿ ಉತ್ತರಕ್ಕೆ ಶಾರ್ಟ್ ಕಟ್‌ಗಳಿದ್ದರೆ ಅದನ್ನು ಪ್ರಯೋಗಿಸಿ. ಇದರಿಂದ ನಿಮ್ಮ ಟೈಂ ಕೂಡಾ ಸೇವ್ ಆಗುವುದು

ಸ್ಟ್ರೆಸ್ ಫ್ರೀ ಆಗಿರಿ: ಯಾವತ್ತೂ ಸ್ಟ್ರೆಸ್ ನಿಂದ ಇರಬೇಡಿ. ಕೂಲ್ ಆಂಡ್ ಕಾಮ್ ಆಗಿ ಪ್ರಶ್ನೆಗಳಿಗೆ ಉತ್ತರಿಸಿ. ಇಂದೊಂದ ಮಾರ್ಕ್ ಗಳಿಸಲು ಉತ್ತಮ ವಿಧಾನ

English summary
Many job aspirants eagerly wait for the job notifications in the SBI. The bank has issued a recruitment notification for the Junior Associate-Sales & Support Customer in the month of January 2018 and closed the online registration in February 2018

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia