ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ಇಲ್ಲಿದೆ ಟಿಪ್ಸ್

ಪ್ರತಿಯೊಬ್ಬ ಕೆಲಸಗಾರನಿಗೂ ಬೆಸ್ಟ್ ಉದ್ಯೋಗಿ ಎನ್ನೋ ಅವಾರ್ಡ್ ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಇನ್ನು ಅದಕ್ಕಾಗಿ ಹಗಲು. ರಾತ್ರಿ ಎನ್ನದೇ ಕೆಲಸ ಮಾಡುತ್ತಿರುತ್ತಾರೆ.

By Kavya

ಪ್ರತಿಯೊಬ್ಬ ಕೆಲಸಗಾರನಿಗೂ ಬೆಸ್ಟ್ ಉದ್ಯೋಗಿ ಎನ್ನೋ ಅವಾರ್ಡ್ ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಇದ್ದೇ ಇರುತ್ತದೆ. ಇನ್ನು ಅದಕ್ಕಾಗಿ ಹಗಲು. ರಾತ್ರಿ ಎನ್ನದೇ ಕೆಲಸ ಮಾಡುತ್ತಿರುತ್ತಾರೆ. ಇನ್ನು ಈ ಅವಾರ್ಡ್ ನಿಮ್ಮದಾಗಿಸಿಕೊಳ್ಳಬೇಕೆಂದ್ರೆ ನಿಮ್ಮ ಹಾರ್ಡ್ ವರ್ಕ್ ಮಾತ್ರ ಮುಖ್ಯ ಅಲ್ಲ ಜತೆಗೆ ನಿಮ್ಮ ವರ್ತನೆಗಳಲ್ಲೂ ಕೆಲವೊಂದು ಬದಲಾವಣೆಯಾಗಬೇಕಿದೆ.

ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ಇಲ್ಲಿದೆ ಟಿಪ್ಸ್

ಪ್ರೊಡಕ್ಟಿವಿಟಿ ಫೀಡ್‌ಬ್ಯಾಕ್‌ಗಾಗಿ ಉದ್ಯೋಗಿಗಳು ಕೆಲವೊಂದು ವಿಚಾರಗಳನ್ನ ಫಾಲೋ ಮಾಡುವುದು ಅಗತ್ಯ. ನಿಮ್ಮ ಹಾರ್ಡ್ ವರ್ಕ್ ಜತೆ ಬೇರೆ ಯಾವೆಲ್ಲಾ ಬದಲಾವಣೆ ಮಾಡಿಕೊಂಡರೆ ಬೆಸ್ಟ್ ಅವಾರ್ಡ್ ನಿಮ್ಮದಾಗಿಸಿಕೊಳ್ಳಬಹುದೆಂದು ಇಲ್ಲಿ ನಿಮಗೆ ಸಲಹೆ ನೀಡಲಾಗಿದೆ:

ಶಿಸ್ತು

ಶಿಸ್ತು

ಶಿಸ್ತು ಇಲ್ಲ ಎಂದಾದ್ರೆ ಕೆರಿಯರ್ ಲೈಫ್ ನಲ್ಲಿ ಯಶಸ್ಸು ಸಿಗುವುದು ತುಂಬಾ ವಿರಳ. ನಿಮ್ಮ ಬಾಸ್‌ ಮುಂದೆ ನಿಮ್ಮ ಬಗ್ಗೆ ಒಳ್ಳೆಯ ಇಂಪ್ರೇಶನ್ ಮೂಡಬೇಕೆಂದಿದ್ದರೆ, ನಿಮ್ಮ ಶಿಸ್ತಿನ ವರ್ತನೆ ಕೂಡಾ ತುಂಬಾ ಪ್ರಮುಖ ಪಾತ್ರವಹಿಸುತ್ತದೆ. ಹೀಗೆ ಸುಮ್ಮನೆ ಯಾವುದೇ ಕೆಲಸ ಸಿಗುವುದಿಲ್ಲ ಬದಲಿಗೆ ನೀವು ಸಂದರ್ಶನ ಟೈಂನಲ್ಲಿ ನೀವೆಷ್ಟು ಪಂಕ್ಚುವಲ್ ಇದ್ದೀರ ಎಂಬುವುದು ಅವರಿಗೆ ತಿಳಿಯುವಂತೆ ಮಾಡಿ. ನೀವು ಸರಿಯಾದ ಸಮಯಕ್ಕೆ ಆಫೀಸ್‌ಗೆ ಹಾಜರಾಗುತ್ತೀರಿ ಎಂಬುವುದು ಅವರಿಗೆ ಖಾತ್ರಿ ಪಡಿಸಿ. ಹಾಗೂ ಕೆಲಸ ಸಿಕ್ಕ ಮೇಲೂ ಸರಿಯಾದ ಟೈಂಗೆ ಆಫೀಸ್‌ಗೆ ಹೋಗುವ ಮೂಲಕ ನಿಮ್ಮ ಬಾಸ್‌ಗೆ ನೀವು ಹೇಳಿದಂತೆ ಇದ್ದೀರಾ ಸರಿಯಾದ ಉದ್ಯೋಗಿಯನ್ನೇ ಆರಿಸಿಕೊಂಡಿದ್ದೇವೆ ಎಂದು ಹೆಮ್ಮೆ ಪಡುವಂತೆ ಮಾಡಿ.

ಕಾಂಫಿಡೆನ್ಸ್

ಕಾಂಫಿಡೆನ್ಸ್

ಹೌದು ಕಚೇರಿಯಲ್ಲಿ ಕೆಲಸ ಮಾಡುವಾಗ ಕಾಂಫಿಡೆಂಟ್ ಆಗಿರುವುದು ಕೂಡಾ ಅಗತ್ಯ. ನಿಮ್ಮ ಕೆಲಸ ಮುಗಿಯದೇ ಇರಬಹುದು, ಅಥವಾ ಕೊಟ್ಟ ಕೆಲಸ ಮಾಡಲಾಗದೇ ಹಾಗೆಯೇ ಉಳಿಸಿದ್ದರೆ, ಹಾಗೂ ಅದಕ್ಕೆ ಸರಿಯಾದ ಕಾರಣವಿದ್ದಾಗ ನೀವು ಆ ಬಗ್ಗೆ ಬಾಸ್ ಜತೆ ನೇರವಾಗಿ ಚರ್ಚೆ ಮಾಡಿ. ಹಾಗೂ ಚರ್ಚೆ ವೇಳೆ ಕಾಂಫಿಡೆಂಟ್ ಆಗಿರುವುದು ಉತ್ತಮ. ಇನ್ನು ಯಾವುದೇ ಸೆಮಿನಾರ್, ಇಲ್ಲ ಸಾಮಾನ್ಯ ಮೀಟಿಂಗ್ ಇದ್ದಾಗ ಅಥವಾ ಕಂಪನಿಗೆ ಸಂಬಂಧಪಟ್ಟ ಯಾವುದೇ ಆಕ್ಟಿವಿಟೀಸ್ ಇದ್ದಾಗ ನೀವು ಕಾಂಫಿಡೆನ್ಸ್ ನಿಂದ ಪಾಲ್ಗೊಳ್ಳಿ. ಇದರಿಂದ ನೀವು ಎಲ್ಲರಿಂದಲೂ ಶಹಬ್ಬಾಸ್ ಎನಿಸಿಕೊಳ್ಳುವಿರಿ

ಚಾಂಪಿಯನ್ ಮೈಂಡ್‌ಸೆಟ್

ಚಾಂಪಿಯನ್ ಮೈಂಡ್‌ಸೆಟ್

ಗರಿಷ್ಟ ಸಲಹೆಗಳನ್ನು ಹೇಳುವ ಸಾಮರ್ಥ್ಯ ನಿಮ್ಮಲ್ಲಿ ಇದ್ದರೆ, ಚಿಂತಿ ಬಿಡಿ. ಬೆಸ್ಟ್ ಎಂಪ್ಲಾಯ್ ಅವಾರ್ಡ್ ಸುಲಭವಾಗಿ ನಿಮ್ಮದಾಗುತ್ತದೆ. ಇನ್ನು ಈ ಸಾಮರ್ಥ್ಯ ಬೆಸ್ಟ್ ಎಂಪ್ಲಾಯ್ ಅವಾರ್ಡ್ ಬಾಚಿಕೊಳ್ಳಲು ತುಂಬಾ ಪ್ರಮುಖವಾದ ಟಿಪ್ಸ್ ಆಗಿದೆ. ಪ್ರತಿಯೊಂದು ಕಂಪನಿಯೂ ವರ್ಕರ್ ನಿಂದ ಇದೇ ಟ್ಯಾಲೆಂಟ್ ಬಯಸುತ್ತದೆ. ಕಡಿಮೆ ಇನ್‌ಪುಟ್‌ನಿಂದ ಬೆಸ್ಟ್ ಇನ್‌ಪುಟ್ ಬೇಕೆಂದು ಕಂಪನಿ ಬಯಸುತ್ತದೆ. ನಿಮ್ಮ ಪ್ರೊಫೈಲ್‌ನಿಂದ ಕಂಪನಿ ಏನನ್ನ ಬಯಸುತ್ತದೆಯೋ ಅದಕ್ಕೂ ದುಪ್ಪಟ್ಟು ನೀವು ಕಂಪನಿಗೆ ರಿಸಲ್ಟ್ ನೀಡಿ. ಇದು ಇತರ ವರ್ಕರ್ ಗಿಂತ ನಿಮ್ಮನ್ನ ಮತ್ತೂ ಉನ್ನತ ಸ್ಥಾನದಲ್ಲಿ ಇರಿಸುತ್ತದೆ.

ಯೋಜನೆ ರೂಪಿಸಿಕೊಳ್ಳಿ

ಯೋಜನೆ ರೂಪಿಸಿಕೊಳ್ಳಿ

ವಿದ್ಯಾರ್ಥಿಯಾಗಿದ್ದಾಗ ಶಿಕ್ಷಕರು ಏನೇ ಹೇಳಿದ್ರೂ ನೀವು ಅದನ್ನ ನೋಟ್ ಪ್ಯಾಡ್‌ನಲ್ಲಿ ಬರೆದುಕೊಳ್ಳುತ್ತಿದ್ದೀರಿ ತಾನೇ.. ಅದೇ ಹವ್ಯಾಸವನ್ನ ಕೆಲಸ ಸಿಕ್ಕ ಮೇಲೂ ಮುಂದುವರೆಸಿ. ಬಾಸ್ ಅಥವಾ ಸೀನಿಯರ್ಸ್ ಏನೇ ಹೇಳಿದ್ರೂ ಅದನ್ನ ಕೂಡಲೇ ನೋಟ್ ಮಾಡಿಕೊಳ್ಳಿ. ಇನ್ನು ಆಫೀಸ್ ಕೆಲಸ ಮನೆಯಲ್ಲೂ ಮಾಡುವ ಇಲ್ಲ ಶಿಫ್ಟ್ ಮುಂದುವರೆಸುವ ಬದಲು ಯಾವುದೇ ಕೆಲಸವನ್ನ ಇಷ್ಟು ಗಂಟೆಯೊಳಗೆ ಮಾಡಿ ಮುಗಿಸಿಬೇಕೆಂದು ಯೋಜನೆ ಹಾಕಿಕೊಂಡು ಕೆಲಸ ಮಾಡಿ.

ಜವಬ್ದಾರಿ

ಜವಬ್ದಾರಿ

ವೃತ್ತಿಪರ ಇರಬಹುದು ಅಥವಾ ಬೇರೆ ಏನೇ ಇದ್ರೂ ಜವಬ್ದಾರಿ ತೆಗೆದುಕೊಳ್ಳುವ ಸ್ವಭಾವ ನಿಮ್ಮದಾಗಿರಬೇಕು. ಜವಬ್ದಾರಿ ಸ್ವೀಕರಿಸುವ ಗುಣ ನಿಮ್ಮಲ್ಲಿ ಇದ್ದರೆ ಅದು ವೃತ್ತಿ ಜೀವನದಲ್ಲಿ ಒಂದು ನಿಮಗೆ ಪ್ಲಸ್ ಪಾಯಿಂಟ್ ಇದ್ದಂತೆ. ನಿಮ್ಮ ಸಹದ್ಯೋಗಿಗಳು ಯಾವುದೇ ಕೆಲಸ ಕಂಪ್ಲೀಟ್ ಮಾಡುವಲ್ಲಿ ಹಿಂದೆ ಬಿದ್ದಾಗ, ಆ ಕೆಲಸದ ಹೊಣೆ ನೀವು ತೆಗೆದುಕೊಂಡು ಆದಷ್ಟು ಬೇಗ ಕಂಪ್ಲೀಟ್ ಮಾಡಿ ನೀಡಿ. ಇದರಿಂದ ನಿಮ್ಮ ಟೀಂಗೂ ಕೂಡಾ ಸಹಾಯಕವಾಗುವುದು.

 

 

More News  

For Quick Alerts
ALLOW NOTIFICATIONS  
For Daily Alerts

English summary
All Employers will always think about How we will bag the Best Employee Award. For That Reason Many Leaders Still Struggle to implement Them Successfully.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+