ಫಸ್ಟ್‌ ಟೈಮ್ ಆನ್‌ಲೈನ್ ಪರೀಕ್ಷೆ ಬರೆಯುತ್ತಿದ್ದೀರಾ? ಹಾಗಾದ್ರೆ ಇದನ್ನು ಓದಿ

Written By: Rajatha

ಸ್ಪರ್ಧಾತ್ಮಕ ಪರೀಕ್ಷೆಯೂ ಇತ್ತೀಚೆಗೆ ಆನ್‌ಲೈನ್‌ ವಿಧಾನವನ್ನು ಅನುಸರಿಸುತ್ತಿದೆ. ಇದು ಪೆನ್, ಪೇಪರ್ ಹಿಡಿದು ಬರೆಯುವ ಪರೀಕ್ಷೆಗಿಂತಲೂ ಸಂಪೂರ್ಣ ಭಿನ್ನವಾಗಿದೆ. ಇದರ ಪ್ರಯೋಜನವೇನೆಂದರೆ. ಇದು ಬಹಳ ಗೌಪ್ಯವಾಗಿರುತ್ತದೆ . ಹಾಗೂ ಸೋರಿಕೆಯ ಭಯವಿರುವುದಿಲ್ಲ. ಪರೀಕ್ಷಾರ್ಥಿಗಳಿಗೆ ಬೇಕಾದ ದಿನ ಹಾಗೂ ಸಮಯವನ್ನು ಆಯ್ಕೆ ಮಾಡುವ ಅವಕಾಶವನ್ನು ಆನ್‌ಲೈನ್ ಪರೀಕ್ಷೆ ಒದಗಿಸಿದೆ.

ಮೊದಲ ಬಾರಿಗೆ ಆನ್‌ಲೈನ್ ಪರೀಕ್ಷೆ ಎದುರಿಸುವವರಿಗೆ ಸ್ವಲ್ಪ ಕಷ್ಟವಾಗಬಹುದು. ಪರೀಕ್ಷೆ ಬರೆಯುವುದಕ್ಕೂ ಮುನ್ನ ಅದರ ವಿಧಾನಗಳು ಮತ್ತು ತಂತ್ರಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕಾಗುತ್ತದೆ. ಅದಕ್ಕಾಗಿ ಕೆಲವು ಟಿಪ್ಸ್ ಇಲ್ಲಿದೆ.

1. ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ಒಂದು ವೇಳೆ ನಿಮಗೆ ಕಂಪ್ಯೂಟರ್‌ನ್ನು ಹೇಗೆ ನಿರ್ವಹಿಸುವುದು ಎನ್ನುವುದರ ಬಗ್ಗೆ ಪೂರ್ಣ ತಿಳುವಳಿಕೆ ಇಲ್ಲವೆಂದಾದಲ್ಲಿ ಮೊದಲು ಕಂಪ್ಯೂಟರ್‌ನ್ನು ಹೇಗೆ ಬಳಸುವುದು ಎನ್ನುವುದನ್ನು ತಿಳಿಯಿರಿ. ಇದು ಪರೀಕ್ಷೆ ಬರೆಯುವಾಗ ನಿಮಗೆ ಸಮಯ ಮ್ಯಾನೇಜ್ ಮಾಡುವಲ್ಲಿ ಸಹಕಾರಿಯಾಗುತ್ತದೆ. ಕರ್ಸರ್‌ನ್ನು ಹುಡುಕುತ್ತಿರುವುದು ಅಥವಾ ಮೌಸ್‌ನ್ನು ಸರಿಯಾಗಿ ಬಳಸಲು ಬರದೆ ಇರುವುದು ನಿಮ್ಮ ಸಮಯ ವ್ಯರ್ಥ ಮಾಡಬಲ್ಲದು.

2. ಪ್ರಶ್ನಾಪತ್ರಿಕೆ ಪೂರ್ಣವಾಗಿ ಡೌನ್‌ಲೋಡ್ ಮಾಡಿ

ಪ್ರಶ್ನೆಗೆ ಉತ್ತರಿಸುವ ಮೊದಲು ಪೂರ್ಣ ರೀತಿಯಲ್ಲಿ ಪ್ರಶ್ನಾಪತ್ರಿಕೆ ಡೌನ್‌ಲೋಡ್ ಆಗಲು ಬಿಡಿ. ಆನ್‌ಲೈನ್ ಪರೀಕ್ಷೆ ಬರೆಯುವಾಗ ಮೊದಲಿಗೆ ತಾಳ್ಮೆಯಿಂದ ಇರಬೇಕು. ಪ್ರಶ್ನಾ ಪತ್ರಿಕೆಯು ಪೂರ್ಣ ರೀತಿಯಲ್ಲಿ ಡೌನ್‌ಲೋಡ್ ಆಗದಿದ್ದಲ್ಲಿ ಕೆಲವೊಂದು ಪ್ರಶ್ನೆಗಳು ಮಿಸ್ಸಿಂಗ್ ಆಗುವ ಸಾಧ್ಯತೆಗಳಿವೆ.

3. ಮಾದರಿ ಆನ್‌ಲೈನ್ ಪರೀಕ್ಷೆ ತೆಗೆದುಕೊಳ್ಳಿ

ಆನ್‌ಲೈನ್ ಪರೀಕ್ಷೆ ಬರೆಯುವ ಮೊದಲು ಆನ್‌ಲೈನ್ ಪರೀಕ್ಷೆ ಯಾವ ರೀತಿ ಇರುತ್ತದೆ. ಪ್ರಶ್ನೆಗಳು ಯಾವ ರೀತಿ ಬರುತ್ತವೆ ಎನ್ನುವುದನ್ನು ಮಾದರಿ ಆನ್‌ಲೈನ್ ಪರೀಕ್ಷೆ ಮೂಲಕ ಕಂಡುಕೊಳ್ಳಿ. ಹೀಗೆ ಮಾಡುವುದರಿಂದ ನೀವು ಸಮಯಕ್ಕೂ ಮುಂಚಿತವಾಗಿ ಪರೀಕ್ಷೆ ಮುಗಿಸಲು ಸಹಾಯವಾಗುತ್ತದೆ. ಅಲ್ಲದೆ ನೀವು ಬರೆದಿರುವುದರ ಮೇಲೆ ಮತ್ತೊಮ್ಮೆ ಕಣ್ಣಾಡಿಸಲು ಸಮಯ ದೊರೆಯುತ್ತದೆ.

4. ನೀಡಲಾಗಿರುವ ಸೂಚನೆಯನ್ನು ಸರಿಯಾಗಿ ಓದಿ

ಆನ್‌ಲೈನ್ ಪರೀಕ್ಷೆಗಳು ಅನೇಕ ಚಿಹ್ನೆಗಳೊಂದಿಗೆ ಬರುತ್ತದೆ. ಇವು ಪ್ರಮುಖ ಮಹತ್ವನ್ನು ಸೂಚಿಸುತ್ತದೆ. ಉದಾಹರಣೆಗೆ ಉತ್ತರಿಸಿದ ಪ್ರಶ್ನೆಗೆ ಮರು ಉತ್ತರಿಸುವುದು. ಅನುಕ್ರಮದಲ್ಲಿ ಬರೆಯದಿರುವುದು ಇಂತಹ ಸಮಸ್ಯೆಯನ್ನೆಲ್ಲಾ ಎದುರಿಸಬೇಕಾಗುತ್ತದೆ. ಒಂದು ವೇಳೆ ನೀವು ಕೊಟ್ಟಿರುವ ಸೂಚನೆಯನ್ನು ಸರಿಯಾಗಿ ಓದಿದ್ದಾದರೆ ಇಂತಹ ಸಮಸ್ಯೆಗಳನ್ನು ತಪ್ಪಿಸಬಹುದು.

5. ಪ್ರತಿ ಪ್ರಶ್ನೆಯನ್ನು ಉತ್ತರಿಸಿದ ತಕ್ಷಣ ಸೇವ್ ಕ್ಲಿಕ್ ಕೊಡಿ

ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರಿಸಿದ ತಕ್ಷಣ ಸೇವ್ ಕೊಡಲು ಮರೆಯದಿರಿ. ಒಂದು ವೇಳೆ ಕಂಪ್ಯೂಟರ್ ಅಟೋಮೆಟಿಕ್‌ ಆಗಿ ಸೇವ್ ಮಾಡಿಲ್ಲವೆಂದಾದಲ್ಲಿ ನೀವು ಉತ್ತರಿಸಿರುವ ಪ್ರಶ್ನೆಗಳೆಲ್ಲಾ ಉತ್ತರಿಸಿಲ್ಲವೆಂಬಂತೆ ಇರಬಹುದು. ಮತ್ತೊಮ್ಮೆ ನೀವು ಆ ಪ್ರಶ್ನೆಗಳನ್ನು ಉತ್ತರಿಸಬೇಕಾಗಬಹುದು.

6. ಆಕಸ್ಮಿಕವಾಗಿ ಪುಟದಿಂದ ಹಿಂದೆ ಸರಿದರೆ ಬೋಧಕರನ್ನು ಸಂಪರ್ಕಿಸಿ

ಪರೀಕ್ಷೆ ಬರೆಯುವ ಸಂದರ್ಭ ಆಕಸ್ಮಿಕವಾಗಿ ಪುಟ ಮುಚ್ಚಿಹೋದರೆ ತಕ್ಷಣ ಸೈಬರ್‌ನಲ್ಲಿರುವ ಬೋಧಕರನ್ನು ಸಂಪರ್ಕಿಸಿ ಅವರ ಸಹಾಯ ಪಡೆಯಿರಿ. ಒಂದು ವೇಳೆ ನೀವು ಮನೆಯಿಂದಲೇ ಆನ್‌ಲೈನ್ ಪರೀಕ್ಷೆ ಬರೆಯುತ್ತಿದ್ದೀರೆಂದಾದರೆ ಹೆಲ್ಪ್‌ ಲೈನ್‌ ನಂಬರ್‌ನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಯಾವಾಗ ಇಂತಹ ಸಂದರ್ಭ ಎದುರಾಗುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ.

7. ತಾಂತ್ರಿಕ ತೊಂದರೆ ಕಂಡುಬಂದಲ್ಲಿ ಅಸಮಾಧಾನಗೊಳ್ಳ ಬೇಡಿ

ಹೆಚ್ಚಾಗಿ ಆನ್‌ಲೈನ್‌ನಲ್ಲಿ ಏನಾದರೂ ಕೆಲಸ ಮಾಡುತ್ತಿರುವಾಗ ತಾಂತ್ರಿಕ ತೊಂದರೆ ಉಂಟಾಗುವುದು ಸಾಮಾನ್ಯ. ಹಾಗಂತ ನೀವು ಅಸಮಾಧಾನಗೊಳ್ಳಬೇಡಿ. ಸಮಾಧಾನದಿಂದ ಮುಂದೆ ಏನು ಮಾಡಬೇಕು ಎನ್ನುವುದನ್ನು ಯೋಚಿಸಿ. ಯಾರದಾದರೂ ಸಹಾಯ ಪಡೆಯಿರಿ. ಗಲಿಬಿಲಿಗೊಳ್ಳುವುದಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

8. ಕಾರ್ಯತಂತ್ರದ ವಿಧಾನವನ್ನು ಹೊಂದಿ

ಪರೀಕ್ಷೆ ಬರೆಯುವಾಗ ಯಾವಾಗಲು ನಿಮ್ಮದೇ ಆದ ಕಾರ್ಯತಂತ್ರವನ್ನು ಹೊಂದಿ. ಸೆಕ್ಷನ್‌ಗಳನ್ನು ಮೊದಲು ಉತ್ತರಿಸಿ. ಯಾವುದನ್ನು ಕೊನೆಗೆ ಉತ್ತರಿಸಬೇಕು ಎನ್ನುವುದು ಪೂರ್ವ ನಿರ್ಧರಿತವಾಗಿರಬೇಕು. ಇದು ಸಮಯವನ್ನು ಸರಿಯಾಗಿ ಸದುಪಯೋಗಿಸಲು ಸಹಕಾರಿಯಾಗುತ್ತದೆ. ಜೊತೆಗೆ ಪರೀಕ್ಷಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

9. ಡೆಡ್‌ಲೈನ್‌ನ್ನು ಇಟ್ಟುಕೊಳ್ಳಿ

ಪರೀಕ್ಷಾ ಹಾಲ್‌ನಲ್ಲಿ ಪರೀಕ್ಷಾರ್ಥಿಗಳನ್ನು ನೋಡಿಕೊಳ್ಳಲು, ಸಮಯವನ್ನು ತಿಳಿಸಲು ಒಬ್ಬೊಬ್ಬ ಬೋಧಕರನ್ನು ನೇಮಿಸಲಾಗಿರುತ್ತದೆ. ಆದರೆ ಆನ್‌ಲೈನ್ ಪರೀಕ್ಷೆಯಲ್ಲಿ ಪರೀಕ್ಷಾರ್ಥಿಗಳಿಗೆ ಸಮಯ ಮುಗಿಯುತ್ತಾ ಬರುತ್ತಿದೆ ಎನ್ನುವುದನ್ನು ತಿಳಿಸಲು ಯಾರೂ ಇರುವುದಿಲ್ಲ. ಪ್ರತಿಯೊಂದು ಪ್ರಶ್ನೆಗೂ ಡೆಡ್‌ಲೈನ್‌ನ್ನು ಇಟ್ಟುಕೊಳ್ಳಿ. ಇದರಿಂದ ಸಮಯ ಮುಗಿಯುತ್ತಿದೆ ಎನ್ನುವ ಭಯವೂ ಇರುವುದಿಲ್ಲ. ಸರಿಯಾಗಿ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸಲು ಸಹಾಯವಾಗುತ್ತದೆ. ಇಲ್ಲವಾದಲ್ಲಿ ಸಮಯದ ಅಭಾವ ಉಂಟಾಗುತ್ತದೆ.

10. ಬರೆದಿರುವುದನ್ನು ಮತ್ತೊಮ್ಮೆ ಪರೀಕ್ಷಿಸಿ

ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಕೊನೆಯದಾಗಿ ಬರೆದಿರುವುದನ್ನು ಮತ್ತೊಮ್ಮೆ ಚೆಕ್ ಮಾಡಲು ಕನಿಷ್ಟ 10 ನಿಮಿಷವಾದರೂ ಮೀಸಲಿಡಿ. ಕೆಲವೊಮ್ಮೆ ಅಭ್ಯರ್ಥಿಗಳಿಗೆ ಸರಿಯಾದ ಉತ್ತರ ತಿಳಿದಿದ್ದರೂ ತಪ್ಪಾಗಿ ಮಾರ್ಕ್ ಮಾಡಿರುತ್ತಾರೆ. ಹಾಗಿದ್ದಾಗ ಮತ್ತೊಮ್ಮೆ ಬರೆದಿರುವ ಉತ್ತರಗಳ ಮೇಲೆ ಕಣ್ಣಾಡಿಸುವುದರಿಂದ ತಪ್ಪಾಗಿರಿರುವುದನ್ನು ಸರಿಪಡಿಸಬಹುದು.

English summary
The main advantage of such exams is that they are highly customised, extremely confidential and leakage proof. This avoids re-scheduling of question papers.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia