ಈ 5 ಕೆಲಸಗಳು ಸಿಕ್ಕಾಪಟ್ಟೆ ಮಜಾ ಕೊಡುವ ಕೆಲಸಗಳು... ತಿಳ್ಕೊಂಡ್ರೆ ಶಾಕ್ ಆಗ್ತೀರಾ!

ಜಗತ್ತಲ್ಲಿ ಎ‍ಷ್ಟೋ ಜನರು ನೌಕರಿ ಮಾಡುತ್ತಾರೆ. ಆದ್ರೆ ಅವರಲ್ಲಿ ತಾವು ಮಾಡುವ ಕೆಲಸದಿಂದ ಸಂತೃಪ್ತಿ ಸಿಕ್ಕಿರುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಕೆಲವರಂತೂ ತಾವು ಮಾಡುವ ಕೆಲಸದಿಂದ ಪ್ರತಿನಿತ್ಯ ಹಿಂಸೆ ಅನುಭವಿಸುತ್ತಾರೆ. ಯಾವಾಗ ಈ ಜಂಜಾಟದಿಂದ ಮುಕ್ತಿ ಸಿಗುತ್ತೋ ಎಂದು ಪ್ರತಿನಿತ್ಯ ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಈ 5 ಕೆಲಸಗಳು ಸಿಕ್ಕಾಪಟ್ಟೆ ಮಜಾ ಕೊಡುವ ಕೆಲಸಗಳು... ತಿಳ್ಕೊಂಡ್ರೆ ಶಾಕ್ ಆಗ್ತೀರಾ!

 

ಇನ್ನು ಕೆಲವರಿಗೆ ತಾವು ಮಾಡುವ ಕೆಲಸಕ್ಕೆ ಸ್ಯಾಲರಿ ಕಡಿಮೆ ಆದ್ರೆ ಜವಬ್ದಾರಿ ಹೆಚ್ಚು ಎನ್ನುವ ಟೆನ್ಶನ್ ಕೂಡಾ ಇರುತ್ತದೆ. ಆದ್ರೆ ಇಂದು ನಾವು ನಿಮಗೆ ಮಾಹಿತಿ ನೀಡಲದ್ದೇವೆ ಮಜಾ ಮಾಡೋ ಕೆಲಸ ಬಗ್ಗೆ. ಈ ಕೆಸಲ ಬಗ್ಗೆ ಕೇಳಿದ್ರೆ ನಿಮಗೆ ವಿಚಿತ್ರ ಎನಿಸಬಹುದು ಆದ್ರೂ ಇದು ನಿಜ. ಹೆಚ್ಚು ಸ್ಯಾಲರಿ ಹಾಗೂ ಕಡಿಮೆ ಜವಬ್ದಾರಿ ಇರುವ ಕೆಲಸದ ಲಿಸ್ಟ್ ನಾವು ನಿಮಗೆ ನೀಡುತ್ತಿದ್ದೇವೆ ಮುಂದಕ್ಕೆ ಓದಿ

ವೃತ್ತಿಪರ ನಿದ್ರೆ:

ನೀವು ಎಲ್ಲಿಯಾದ್ರೂ ಕೇಳಿದ್ದೀರಾ ಕೇವಲ ಮಲಗುವುದಕ್ಕೆ ಹಣ ಸಿಗುವ ಕೆಲಸವಿದೆ ಎಂದು. ಈ ಹುದ್ದೆಗೆ ಪ್ರತ್ಯೇಕ ಡಿಸಿಗ್ನೇಶನ್ ಕೂಡಾ ಇದೆ. ಈ ಹುದ್ದೆಯಲ್ಲಿ ಕೇವಲ ನಿಮಗೆ ಮಲಗುದೊಂದೆ ಕೆಲಸ. ಡಾಕ್ಟರ್ಸ್, ಸಂಶೋಧಕರು ಹಾಗೂ ಕೆಲವು ಹೋಟೆಲ್ ಆಥೋರಿಟಿ ಇಂತಹ ಹುದ್ದೆಗಳಿಗೆ ಜನರನ್ನ ನೇಮಿಸಿಕೊಳ್ಳುತ್ತಾರೆ.

ಟ್ರಾವೆಲ್ ಗೈಡ್:

ಟ್ರಾವೆಲ್ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಟ್ರಾವೆಲ್ ಗೆ ಸಂಬಂಧಪಟ್ಟಂತೆ ಟ್ರಾವೆಲ್ ಗೈಡ್ ಎಂಬ ಜಾಬ್ ಇದೆ. ಈ ಹುದ್ದೆಯಿಂದ ನೀವು ಫ್ರೀಯಾಗಿ ಇಲ್ಲ ಇತರರ ಹಣದಿಂದ ಇಡೀ ಜಗತ್ತನ್ನೇ ಜೂಮ್ ಜಾಮ್ ಆಗಿ ಸುತ್ತಾಡಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ ನೀವು ಯಾರನ್ನ ತಿರುಗಾಡಿಸ್ತೀರೋ ಅವರ ಮ್ಯಾನೇಜ್‌ಮೆಂಟ್ ಪೂರ್ತಿಯಾಗಿ ನೋಡಿಕೊಳ್ಳುವ ಹೊಣೆ ನಿಮ್ಮದು

ಬಾಡಿಗೆ ಗೆಳೆಯ:

ಇನ್ನು ನೀವು ಸ್ವಲ್ಪ ಓಪನ್ ಮೈಂಡ್ ವ್ಯಕ್ತಿಯಾಗಿದ್ದರೆ ಈ ನೌಕರಿ ಕೂಡಾ ನೀವು ಮಾಡಬಹುದು. ಬಾಡಿಗೆ ಗೆಳೆಯನಾಗಿ ನೀವು ಕೆರಿಯರ್ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಈ ಕೆಲಸ ಶಾಕ್ ಆಗಬಹುದು, ಆದ್ರೆ ಜಪಾನ್ ಸೇರಿದಂತೆ ಇನ್ನು ಕೆಲವು ಮುಂದುವರೆದ ದೇಶಗಳಲ್ಲಿ ಈ ಕೆರಿಯರ್ ಇದೆ. ಈ ಕೆರಿಯರ್ ನಲ್ಲಿ ಬಾಯ್‌ಫ್ರೆಂಡ್ ಜತೆ ಸುತ್ತಾಡಬೇಕು. ಇದರಲ್ಲೂ ಪ್ಯಾಕೇಜ್ ಟೈಪ್ಸ್ ಕೆಲಸವಿದೆ.

 

ಮದುವೆ ನೆಂಟರು:

ಕೆಲವು ಮದುವೆಗೆ ಆಮಂತ್ರಣ ಪತ್ರಿಕೆಯಿಲ್ಲದೇ ಕೆಲವರು ಹೋಗುವುದನ್ನ ನೀವು ನೋಡಿರುತ್ತೀರಾ. ಆದ್ರೆ ಅದೇ ರೀತಿ ಮದುವೆಗೆ ಅಥಿತಿಯಾಗಿ ಹೋಗುವುದು ಕೂಡಾ ಒಂದು ಜಾಬ್ ಆಗಿದೆ ಕೆಲವೆಡೆ. ವಿವಾಹಕ್ಕೆ ಅಥಿತಿಯಾಗಿ ಹೋಗುವುದು ಕೂಡಾ ಒಂದು ಜಾಬ್. ಈ ಜಾಬ್ ನೀವು ಮಾಡಬೇಕೆಂದಿದ್ದರೆ, ಚೆನ್ನಾಗಿ ಉಡುಗೆ ಧರಿಸಿ, ಮೇಕಪ್ ಮಾಡಿಕೊಂಡು ತಯಾರಾಗಿ ಹೋದ್ರೆ ಆಯಿತು.

ವಾಟರ್ ಸ್ಲೈಡರ್:

ವಾಟರ್ ಸ್ಲೈಡರ್ ಕೂಡಾ ಒಂದು ನೌಕರಿಯಾಗಿದೆ. ಆದ್ರೆ ನಿಮಗೆ ಇದನ್ನ ಕೇಳಿದ ಕೂಡಾ ಆಶ್ಚರ್ಯವಾಗಿರಬಹುದು. ಈ ಹುದ್ದೆಯಲ್ಲಿ ನೀವು ವಾಟರ್ ಸ್ಲೈಡ್ ಮಾಡುವುದರಿಂದ ಹಣ ಸಂಪಾದಿಸಬಹುದು

ಈ ಸ್ಟೋರಿ ನಿಮಗೆ ಓದಿದ ಕೂಡಲೇ ಹೀಗೂ ಇದೆಯಾ ಎಂದು ಆಶ್ಚರ್ಯವಾಗಿರಬಹುದು. ಇಲ್ಲ ನಿಮಗೆ ವಿಚಿತ್ರ ಎಂದು ಕೂಡಾ ಅನಿಸಿರಬಹುದು. ಆದ್ರೆ ಈ ತರಹದ ಹುದ್ದೆಗಳು ಇರುವುದು ಮಾತ್ರ ನಿಜ. ನೀವು ಕೂಡಾ ಟ್ರೈ ಮಾಡಬಹುದು

For Quick Alerts
ALLOW NOTIFICATIONS  
For Daily Alerts

English summary
In this article on the 5 most enjoyment jobs in India. there were some surprises. when you think of a cheerful job, you probably don't think of loan officer, werehouse manager, or accountant. But it turn out these are some happiest career in India
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X