ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?

ಪರೀಕ್ಷೆ ಅಂದ್ರೆ ಸಾಕು ಅದೊಂದು ದೊಡ್ಡ ತಲೆ ನೋವು. ಅದೆಷ್ಟೋ ನಿದ್ರೆ ಇಲ್ಲದ ರಾತ್ರಿಗಳನ್ನ ಕಳೆಯಬೇಕಾಗುತ್ತದೆ ಇದನ್ ವಿದ್ಯಾರ್ಥಿಗಳು ಕೂಡಾ ಒಪ್ಪುತ್ತಾರೆ.

By Kavya

ಪರೀಕ್ಷೆ ಅಂದ್ರೆ ಸಾಕು ಅದೊಂದು ದೊಡ್ಡ ತಲೆ ನೋವು. ಅದೆಷ್ಟೋ ನಿದ್ರೆ ಇಲ್ಲದ ರಾತ್ರಿಗಳನ್ನ ಕಳೆಯಬೇಕಾಗುತ್ತದೆ ಇದನ್ ವಿದ್ಯಾರ್ಥಿಗಳು ಕೂಡಾ ಒಪ್ಪುತ್ತಾರೆ.

ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?

ಇನ್ನು ಕೆಲವೊಂದು ಶಿಕ್ಷಣ ಸಂಸ್ಥೆಗಳು ಆಯೋಜಿಸುವ ಪರೀಕ್ಷೆಗಳು ತುಂಬಾ ಕಷ್ಟಕರವಾಗಿರುತ್ತದೆ. ಭಾರತದಲ್ಲಿ ನಡೆಸಲಾಗುವ ಕಷ್ಟಕರ ಪರೀಕ್ಷೆಗಳ ಲಿಸ್ಟ್ ಇದೀಗ ಕೆರಿಯರ್ ಇಂಡಿಯಾ ನಿಮ್ಮ ಮುಂದೆ ಇಡುತ್ತಿದೆ.

ಐಎಎಸ್ - ಇಂಡಿಯನ್ ಅಡ್ಮಿನಿಸ್ಟ್ರೇಟೀವ್ ಸರ್ವೀಸ್ ಆಂಡ್ ಯುಪಿಎಸ್ ಸಿ- ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್:

ಇಂಡಿಯನ್ ಅಡ್ಮಿನಿಸ್ಟ್ರೇಟೀವ್ ಸರ್ವೀಸ್ ಮತ್ತು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಈ ಎರಡು ಪರೀಕ್ಷೆಗಳು ಸಿವಿಲ್ ಪರೀಕ್ಷೆ ಎಂದೇ ಪರಿಚಿತ. ಈ ಪರೀಕ್ಷೆಗಳನ್ನ ಪಾಸು ಮಾಡುವುದು ತುಂಬಾ ಕಷ್ಟ ಕೂಡಾ. ಈ ಪರೀಕ್ಷೆಯಲ್ಲಿ ನೀವು ಪಾಸಾದ್ರೆ ದೇಶದ ಸರ್ಕಾರಿ ಹುದ್ದೆಗಳಲ್ಲಿನ ಉನ್ನತ ಸ್ಥಾನವನ್ನ ನೀವು ಅಲಂಕರಿಸಬಹುದು. ಈ ಎಕ್ಸಾಂ ಬರೆಯುದಾದ್ರೆ ವಿದ್ಯಾರ್ಥಿಗಳು ಪ್ರತಿಯೊಂದನ್ನ ಕೂಡಾ ತಿಳಿದುಕೊಂಡಿರಬೇಕು.

ಕ್ಯಾಟ್ - ಕಾಮನ್ ಅಡ್ಮಿಶನ್ ಟೆಸ್ಟ್:

ಐಐಎಂಎಸ್ ನಲ್ಲಿ ಸೀಟುಗಾಗಿ ನಡೆಸುವ ಈ ಪರೀಕ್ಷೆಯಲ್ಲಿ ಸುಮಾರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ದೇಶದಾದ್ಯಂತ ನಡೆಯುವ ಕಾಮನ್ ಅಡ್ಮಿಶನ್ ಟೆಸ್ಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಬಹಿಸುತ್ತಾರೆ. ಈ ಪರೀಕ್ಷೆಯನ್ನ ಎದುರಿಸುವ ವಿದ್ಯಾರ್ಥಿಗಳಿಗೆ ಮೌಖಿಕ ಸಾಮರ್ಥ್ಯ, ಪರಿಮಾಣಾತ್ಮಕ ಯೋಗ್ಯತೆ, ದತ್ತಾಂಶ ವ್ಯಾಖ್ಯಾನ ಮತ್ತು ತಾರ್ಕಿಕ ಕ್ರಿಯೆ ಸೇರಿದಂತೆ ಕೆಲವೊಂದು ಕೌಶಲ್ಯಗಳಿರಬೇಕು.

ಜೆಇಇ ಪರೀಕ್ಷೆ - ಜಾಯಿಂಟ್ ಎಂಟ್ರೇಂಸ್ ಪರೀಕ್ಷೆ:

ಈ ಪರೀಕ್ಷೆಯನ್ನ ಪಾಸು ಮಾಡುವುದು ಒಂದು ದೊಡ್ಡ ಟಾಸ್ಕ್ ಅಂತಾನೆ ಹೇಳಬಹುದು. ಯಾರು ಈ ಪರೀಕ್ಷೆಯನ್ನ ಪಾಸು ಮಾಡುತ್ತಾರೋ ಅವರು ಬ್ರಿಲಿಯಂಟ್ ವಿದ್ಯಾರ್ಥಿಗಳು ಎಂದೇ ಅರ್ಥ. ಈ ಪರೀಕ್ಷೆ ಪಾಸು ಮಾಡಿದ್ರೆ ಪ್ರತಿಷ್ಟಿತ ಇಂಜಿನೀಯರ್ ಕಾಲೇಜುಗಳಲ್ಲಿ ಸೀಟು ಪಡೆಬಹುದಾಗಿದೆ. ಈ ಪರೀಕ್ಷೆಯನ್ನ ಜೆಇಇ ಬೋರ್ಡ್ ಆಯೋಜಿಸುತ್ತದೆ.

ಎನ್‌ಐಡಿ - ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಆಫ್ ಡಿಸೈನ್:

ಇದು ಡಿಸೈನ್ ಅಪ್ಟಿಟ್ಯುಡ್ ಎಕ್ಸಾಂ ಎಂದೇ ಫೇಮಸ್. ಅಭ್ಯರ್ಥಿಗಳ ಸೃಜನಶೀಲತೆ, ಗ್ರಹಿಕೆ, ವರ್ತನೆ, ಯೋಗ್ಯತೆ ಮತ್ತು ಪ್ರೇರಣೆಯನ್ನ ಇಲ್ಲಿ ಟೆಸ್ಟ್ ಮಾಡಲಾಗುತ್ತದೆ. ಈ ಪರೀಕ್ಷೆಯ ಮೊದಲ ಸುತ್ತು ಪಾಸು ಮಾಡಿದ್ರೆ ಬಳಿಕ ಸಂದರ್ಶನ ಕ್ಕಾಗಿ ಅಭ್ಯರ್ಥಿಗಳ ಹೆಸರನ್ನ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
The more prestigious an institute or particular field is, the tougher is examinations are conducted. There are umpteen exams but we have chosen few toughest exams in India which are tough nuts to crack.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+