ಪ್ರತಿಯೊಬ್ಬರ ಆಫೀಸಿನಲ್ಲೂ ಸಿಗ್ತಾರೆ ಈ ಆರು ವಿಧದ ಸಹದ್ಯೋಗಿಗಳು!

By Kavya

ಪ್ರತಿಯೊಬ್ಬರ ಆಫೀಸಿನಲ್ಲಿಯೂ 6 ರೀತಿಯ ಸಹದ್ಯೋಗಿಗಳು ಇರ್ತಾರೆ. ಆಫೀಸಿನಲ್ಲಿ HR ಡಿಪಾರ್ಟ್ ಮೆಂಟ್‌ನ ರೂಲ್ಸ್ ಗಳಿರುತ್ತೆ ನಿಜ. ಆದ್ರೂ ಅದನ್ನು ಬ್ರೇಕ್ ಮಾಡಿ ನಿಮ್ಮನ್ನ ಕಾಡುವ, ನಿಮಗೆ ಹಿತವೆನಿಸುವ, ನಿಮಗೆ ಬೋರ್ ಹೊಡೆಸುವ, ನಿಮಗೆ ಬೇರೆಬೇರೆ ರೀತಿಯ ಭಾವನೆಗಳನ್ನು ನೀಡುವ ಸಹದ್ಯೋಗಿಗಳ ಜೊತೆಗೆ ನಿಮ್ಮನ್ನ ನೀವು ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾಗುತ್ತೆ. ಹಾಗಾದ್ರೆ ನಿಮ್ಮ ಆಫೀಸಿನ ಸಹದ್ಯೋಗಿಗಳಲ್ಲಿ ಯಾರು ಯಾವ ರೀತಿಯವರು ಅಂತ ತಿಳಿದು ಲೆಕ್ಕಾಚಾರ ಹಾಕೋಕೆ ಈ ಲೇಖನ ನಿಮಗೆ ಸಹಾಯ ಮಾಡಲಿದೆ.

ಮೀಟಿಂಗ್ ಮೀಟಿಂಗ್ ಎಂದು ಹೇಳುತ್ತಲೇ ಇರುವವರು

ಮೀಟಿಂಗ್ ಮೀಟಿಂಗ್ ಎಂದು ಹೇಳುತ್ತಲೇ ಇರುವವರು

ಕೆಲವು ಸಹದ್ಯೋಗಿಗಳಿರುತ್ತಾರೆ. ಅವರಿಗೆ ಮೀಟಿಂಗ್ ಮಾಡೋದೆ ಕೆಲಸ. ಸಣ್ಣಪುಟ್ಟ ವಿಷಯಕ್ಕೂ ಮೀಟಿಂಗ್ ಕರೆದು ಎಲ್ಲರೊಡನೆಯೂ ಚರ್ಚಿಸಿ ನಿರ್ಧಾರ ತೆಗೆದಕೊಳ್ಳಲು ಬಯಸುತ್ತಾರೆ. ಇವತ್ತಿನ ಟೀಂ ಲಂಚ್‌ಗೆ ಯಾವ ಫೀಝಾ ಆರ್ಡರ್ ಮಾಡ್ಬೇಕು ಅನ್ನೋದನ್ನು ಮೀಟಿಂಗ್ ಕರೆದ ಚರ್ಚಿಸುವ ಸಹದ್ಯೋಗಿ ಇವರು. ಇಂತಹ ಸ್ವಭಾವದ ಸಹದ್ಯೋಗಿಗಳು ಫನ್ನಿ ಅಂತ ಅನ್ನಿಸಿದ್ರೂ ಕೆಲವೊಮ್ಮೆ ಇವರು ಮಾಡುವುದೇ ಸರಿ ಅನ್ನಿಸುವಂತಾಗುತ್ತೆ. ಮತ್ತೂ ಕೆಲವೊಮ್ಮೆ ನಿದ್ದೆಯಲ್ಲೂ ಎಬ್ಬಿಸಿ ಮೀಟಿಂಗ್ಅಂತ ಹೇಳಿದಂತೆ ಭಾಸವಾಗುತ್ತೆ.

ಗಲಿಬಿಲಿಗೊಳಿಸುವ ಸಹದ್ಯೋಗಿಗಳು

ಗಲಿಬಿಲಿಗೊಳಿಸುವ ಸಹದ್ಯೋಗಿಗಳು

ಇವರು ಆತರಗೆಟ್ಟ ಆಂಜನೇಯನಂತೆ. ಈ ವ್ಯಕ್ತಿ ಹೇಗೆ ಅಂದರೆ ಈಮೇಲ್ ಕಳಿಸ್ತಾರೆ, ಮೆಸೇಜ್ ಮಾಡ್ತಾರೆ, ಕಾಲ್ ಮಾಡ್ತಾರೆ, ಸಣ್ಣ ವಿಚಾರಕ್ಕೆ ಗಲಿಬಿಲಿಗೊಂಡು ನಿಮ್ಮನ್ನೂ ಗಾಬರಿಗೊಳಿಸಿ ಐದೇ ನಿಮಿಷದಲ್ಲಿ ಎಲ್ಲವನ್ನೂ ಆತುರಾತುರದಲ್ಲಿ ಮಾಡಿಬಿಡ್ತಾರೆ

ಚಾಟ್ ಮಾಡುವ ಚಾಂಪಿಯನ್ಸ್ ಇವರು

ಚಾಟ್ ಮಾಡುವ ಚಾಂಪಿಯನ್ಸ್ ಇವರು

ಚಾಟ್ ಮಾಡೋಕೆ ನೀವು ಸರಿಯಾದ ವ್ಯಕ್ತಿ ಅಂತ ಭಾವಿಸಿ ನಿಮಗೆ ತೊಂದರೆ ನೀಡುತ್ತಲೆ ಇರುವವರಿವರು. ಕಾರಿಡಾರ್ ನಲ್ಲಿ ಸಿಗ್ತಾರೆ ಹರಟೆ ಹೊಡಿತಾರೆ, ಕ್ಯಾಂಟೀನ್ ನಲ್ಲಿ ಕಥೆ ಹೊಡಿತಾರೆ. ವಾಷ್ ರೂಮ್ ನಲ್ಲೂ ಬಿಡದೆ ಕಾಡುವ ಮಂದಿ ಇವರು. ಇವರು ಗಾಸಿಪ್ ಹುಟ್ಟುಹಾಕುವ ಜಾದೂಗಾರರು. ಒಂದು ರೀತಿಯಲ್ಲಿ ಅತಿಯಾಗಿ ಮಾತನಾಡುವವರಿವರು. ಗಜಗಜ ಅಂತ ಫುಲ್ ಸ್ಟಾಪ್ ಇಲ್ಲದೆ ಮೆದುಳಿಗೆ ಕೈ ಹಾಕುವ ಮಂದಿ ಅಂತ ಹೇಳಬಹುದು. ಕೈಲಾಗದೆ ಇದ್ರೂ ಬಾಯಲ್ಲಿ ಬಡಾಯಿ ಕೊಚ್ಚುವವರು ಅಂತಲೇ ಹೇಳಬಹುದು.

ಕೆಲಸ ಬಿಟ್ರೆ ಬೇರೆ ಪ್ರಪಂಚ ತಿಳಿಯದ ಶ್ರಮಜೀವಿಗಳು

ಕೆಲಸ ಬಿಟ್ರೆ ಬೇರೆ ಪ್ರಪಂಚ ತಿಳಿಯದ ಶ್ರಮಜೀವಿಗಳು

ಕಂಪ್ಯೂಟರ್ ಮುಂದೆ ಕುಳಿತು ಟೈಪ್ ಮಾಡಲು ಶುರುವಿಟ್ಟುಕೊಂಡ್ರೆ ಸಮಯ ಆದಾಗ್ಲೇ ಇವರು ಅಲ್ಲಿಂದ ಏಳುವವರು. ನೋ ಟೀ ಬ್ರೇಕ್, ನೋ ಲಂಚ್ ಬ್ರೇಕ್. ಕಾಯಕವೇ ಕೈಲಾಸ ಅನ್ನೋ ವ್ಯಕ್ತಿಗಳು ಇರ್ತಾರೆ. ಯಾವಾಗಲೂ ಬ್ಯೂಸಿಯಾಗಿಯೇ ಇರುವವರಿವರು. ಊಟಕ್ಕೆ ತಡವಾಗಿ ಬರೋದು, ಮಾತಿಗೆ ಸಿಗೋದೆ ಇಲ್ಲ, ಯಾವಾಗಲೂ ಒತ್ತಡದ ಮುಖಚರ್ಯೆ ಬಿಟ್ರೆ ಇವರಿಂದ ಹೆಚ್ಚೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

ಡಬ್ಬ ತರಹ ಮಾತನಾಡುವವರು

ಡಬ್ಬ ತರಹ ಮಾತನಾಡುವವರು

ಇವರು ಅಟ್ಟಕ್ಕೆ ಏರಿಸಿ ಚಟ್ಟ ಕಟ್ಟುವವರು ಅಂತಲೇ ಹೇಳಬಹುದು. ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವದವರು. ನಿಮ್ಮೊಡನೆ ಅತ್ಯಾಪ್ತರು ಅನ್ನುವಂತೆ ವರ್ತಿಸ್ತಾರೆ.ಆದ್ರೆ ನಿಮ್ಮ ಬಟ್ಟಲಲ್ಲಿರುವ ಊಟಕ್ಕೆ ಕನ್ನ ಹಾಕುತ್ತಾ ಇರ್ತಾರೆ. ಆಫೀಸಿನಲ್ಲಿ ಅತೀ ಹೆಚ್ಚು ಜಾಗರೂಕರಾಗಿರಬೇಕಾಗಿರುವುದು ಇವರ ಬಗ್ಗೆಯೇ..

ಅತಿಯಾದ ಸಮಯಪ್ರಜ್ಞೆ ಇರುವವರು

ಅತಿಯಾದ ಸಮಯಪ್ರಜ್ಞೆ ಇರುವವರು

ಲಾಗ್ ಇನ್ ಟೈಮಿಗೆ ಸರಿಯಾಗಿ ಬಂದು ಲಾಗ್ ಔಟ್ ಟೈಮಿಗೆ ಸರಿಯಾಗಿ ಆಫೀಸಿಂದ ಹೊರಟು ಒಂದು ನಿಮಿಷವೂ ಹೆಚ್ಚು ಕೆಲಸ ಮಾಡದೇ, ತಾವಾಯ್ತು ತಮ್ಮ ಸಮಯದೊಂದಿಗಿನ ನಡಿಗೆಯಾಯ್ತು ಅನ್ನುವಂತೆ ವರ್ತಿಸುವ ಕೆಲವು ಸಹದ್ಯೋಗಿಗಳನ್ನು ಕೂಡ ನೀವು ನಿಮ್ಮೊಡನೆ ಗಮನಿಸಬಹುದು. ಒಮ್ಮೊಮ್ಮೆ ಇವರಂತೆ ನೀವಿರಬೇಕು ಅಂತ ಅನ್ನಿಸಿದ್ರೂ ಅದು ಸಾಧ್ಯವಾಗದೇ ಇದ್ದಾಗ ನಿಮ್ಮೊಳಗೊಂದು ಹೊಟ್ಟೆಯುರಿಯ ಭಾವ ಮೂಡುವುದು ಸರ್ವೇಸಾಮಾನ್ಯ. ಹೀಗೆ ವರ್ತಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಎನಿ ವೇ ಕೆಲಸ ಅಂದ್ರೆ ಹಾಗೇನೇ. ಅದ್ರಲ್ಲೂ ಈ ಆಫೀಸಿನಲ್ಲಿ ಕೆಲಸ ಮಾಡೋದು ಅಂದ್ರೆ ಅಲ್ಲಿ ನಾನಾ ರೀತಿಯ ವ್ಯಕ್ತಿತ್ವವುಳ್ಳ ವ್ಯಕ್ತಿಗಳೊಡನೆ ಬೆರೆಯಬೇಕಾಗುತ್ತೆ. ಅವುಗಳನ್ನು ನೋಡಿದೊಡನೆ ವಿಂಗಡಿಸಬಹುದಾದ ಸಹದ್ಯೋಗಿಗಳ ಲಿಸ್ಟ್ ಇದು. ನಿಮ್ಮ ಸಹದ್ಯೋಗಿಗಳಲ್ಲಿ ಯಾರು ಹೇಗೆ ಅನ್ನೋದನ್ನ ನೀವೇ ಲೆಕ್ಕಾಚಾರ ಹಾಕಿಕೊಳ್ಳಿ..

 

For Quick Alerts
ALLOW NOTIFICATIONS  
For Daily Alerts

English summary
There are at least six types of human beings in every office. If it were up to me, I’d get them all to wear hats, so that I’d know which type of human I’m dealing with. But the HR department has rules, and I can’t have my way with them.Oh well. So away with the hats! Let me introduce you to the staple office personalities the old-fashioned way.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X