ಕಾಲೇಜಿನಲ್ಲಿ ಇಂತಹ ವಿದ್ಯಾರ್ಥಿಗಳಿಂದ ದೂರವಿರುವುದು ಬೆಸ್ಟ್ !

ಇವತ್ತು ನಿಮಗೆ ಕೆರಿಯರ್ ಇಂಡಿಯಾದಲ್ಲಿ ಏನು ಮಾಹಿತಿ ನೀಡುತ್ತಿದ್ದೇವೆ ಎಂದ್ರೆ ಕಾಲೇಜು ಜೀವನದಲ್ಲಿ ಎಂತಹ ವ್ಯಕ್ತಿಗಳಿಂದ ದೂರವಿದ್ರೆ ನಿಮ್ಮ ಜೀವನ ಸ್ಟ್ರೆಸ್ ಫ್ರೀಯಾಗಿ ಇರುತ್ತೆ ಎಂದು.

ಈಗಷ್ಟೇ ನೀವು ಶಾಲಾ ಜೀವನ ಮುಗಿಸಿರಬಹುದು ಅಷ್ಟೇ ಅಲ್ಲ ಕಾಲೇಜು ಬಗ್ಗೆ ನಿಮ್ಮ ಮೈಂಡ್‌ನಲ್ಲಿ ಅದೆಷ್ಟೋ ವಿಚಾರಗಳು ಓಡಾಡುತ್ತಾ ಇರುತ್ತವೆ.

ಕಾಲೇಜಿನಲ್ಲಿ ಇಂತಹ ವಿದ್ಯಾರ್ಥಿಗಳಿಂದ ದೂರವಿರುವುದು ಬೆಸ್ಟ್ !

ಶಾಲಾ ಸ್ನೇಹಿತರನ್ನ ಬಿಟ್ಟು ಹೋಗುವ ಬೇಜಾರಿನಲ್ಲಿ ನೀವು ಇರುತ್ತೀರಾ ಜತೆಗೆ ಕಾಲೇಜು ಎಂಬ ನೂತನ ಲೈಫ್ ಪ್ರಾರಂಭ ಎನ್ನೋ ಖುಷಿಯಲ್ಲಿಯೂ ತೇಲುತ್ತಿರುತ್ತೀರಿ. ಹೌದು ನಾವು ಒಪ್ಪಿಕೊಳ್ಳುತ್ತೇವೆ. ಕಾಲೇಜು ಎಂಬುವುದು ನಿಮ್ಮ ಜೀವನದ ಒಂದು ಟ್ವಿಸ್ಟ್. ಅಷ್ಟೇ ಅಲ್ಲ ಅದೆಷ್ಟೋ ಹೊಸ ವ್ಯಕ್ತಿಗಳನ್ನ ಈ ಹಂತದಲ್ಲಿ ನೀವು ಭೇಟಿಯಾಗುತ್ತೀರಾ. ಇವರು ನಿಮ್ಮ ಜೀವನಕ್ಕೆ ಹೊಸ ಅರ್ಥ ನೀಡಬಹುದು ಇಲ್ಲ ನಿಮ್ಮ ಜೀವನನ್ನ ಅಲ್ಲೋಲಕಲ್ಲೋಲ ಕೂಡಾ ಮಾಡಬಹುದು.

ಇವತ್ತು ನಿಮಗೆ ಕೆರಿಯರ್ ಇಂಡಿಯಾದಲ್ಲಿ ಏನು ಮಾಹಿತಿ ನೀಡುತ್ತಿದ್ದೇವೆ ಎಂದ್ರೆ ಕಾಲೇಜು ಜೀವನದಲ್ಲಿ ಎಂತಹ ವ್ಯಕ್ತಿಗಳಿಂದ ದೂರವಿದ್ರೆ ನಿಮ್ಮ ಜೀವನ ಸ್ಟ್ರೆಸ್ ಫ್ರೀಯಾಗಿ ಇರುತ್ತೆ ಎಂದು.

<strong>ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?</strong>ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?

ಚಾಲಾಕಿ ಚತುರ ವಿದ್ಯಾರ್ಥಿಗಳು:

ನೀವು ಮೂರು ಜನ ಮೂರ್ಖರನ್ನ ನೋಡಿದ್ರೆ ಖಂಡಿತ ನಿಮಗೆ ತಿಳಿಯುತ್ತೆ ಯಾಕೆ ಚಾಲಾಕಿ ವಿದ್ಯಾರ್ಥಿಗಳಿಂದ ದೂರವಿರಬೇಕು ಎಂದು. ಅವರು ನಿಮ್ಮ ಬಗ್ಗೆ ಹೊಟ್ಟೆಕಿಚ್ಚು ಪಡಬಹುದು. ಅಷ್ಟೇ ಅಲ್ಲ ನಿಮ್ಮ ಮನಸ್ಸನ್ನ ಚಂಚಲಗೊಳಿಸಲು ಸದಾ ಯತ್ನಿಸುತ್ತಿರುತ್ತಾರೆ. ಇಂತಹ ವ್ಯಕ್ತಿಗಳಿಂದ ನೀವು ದೂರುವಿರುವುದೇ ಒಳಿತು

ಬೆಣ್ಣೆಯಂತೆ ಮಾತನಾಡುವ ವ್ಯಕ್ತಿ:

ಬೆಣ್ಣೆಯಂತೆ ಮಾತನಾಡುವ ವಿದ್ಯಾರ್ಥಿ ಶಿಕ್ಷಕರ ನೆಚ್ಚಿನ ಸ್ಟೂಡೆಂಟ್ ಆಗಿರಬಹುದು. ಆದ್ರೂ ನೀವು ಇಂತಹ ವಿದ್ಯಾರ್ಥಿಯನ್ನ ಅವಾಯ್ಡ್ ಮಾಡಬೇಕು. ಇವರು ಚಮಚಗಿರಿ ಹೆಚ್ಚು ಮಾಡುತ್ತಾರೆ. ನಿಮ್ಮ ಸೀಕ್ರೇಟ್ ಲೀಕ್ ಮಾಡುವುದಲ್ಲದೇ ಅದನ್ನ ಶಿಕ್ಷಕರಿಗೆ ಮುಟ್ಟಿಸುತ್ತಾರೆ ಕೂಡಾ.

ತಮ್ಮತ್ತ ಗಮನಕ್ಕಾಗಿ:

ಹೌದು ಇಂತಹ ವ್ಯಕ್ತಿತ್ವ ಇರುವ ವಿದ್ಯಾರ್ಥಿಗಳು ಪ್ರತೀ ಕ್ಲಾಸ್‌ನಲ್ಲೂ ಕಾಣಸಿಗುತ್ತಾರೆ. ಅವರಿಗೆ ಯಾವಾಗಲೂ ಎಲ್ಲರ ಗಮನ ಅವರತ್ತ ಇರಬೇಕು ಎಂಬ ಆಸೆ. ಏನಾದ್ರೂ ಡ್ಯಾಮ್ ಕೆಲಸ ಮಾಡಿ ಅಟೆಂಶನ್ ಪಡೆದುಕೊಳ್ಳುತ್ತಾರೆ. ಇಂತಹ ವ್ಯಕ್ತಿಗಳು ಸಿಕ್ಕಾಗ ಅವರ ಮುಂದೆ ಎರಡು ಹೊಗಳಿಕೆ ಮಾತನಾಡಿ, ಅಲ್ಲಿಂದ ಕಾಲ್ಕೀಳಿ.

<strong>ಸವಿ ಸವಿ ನೆನಪು... ಶಾಲೆಯಲ್ಲಿ ಅನುಭವಿಸಿದ್ದ ಶಿಕ್ಷೆಗಳಿವು!<br></strong>ಸವಿ ಸವಿ ನೆನಪು... ಶಾಲೆಯಲ್ಲಿ ಅನುಭವಿಸಿದ್ದ ಶಿಕ್ಷೆಗಳಿವು!

ಗ್ಯಾಂಗ್ ಲೀಡರ್:

ಕಾಲೇಜಿನಲ್ಲಿ ಒಬ್ಬ ಗ್ಯಾಂಗ್ ಲೀಡರ್ ಎಂದು ಇರುತ್ತಾನೆ. ಅವನು ಅದೇ ಊರಿನ ಸ್ಥಳೀಯನಿರಬಹುದು ಇಲ್ಲ ಆ ಊರಿನ ಎಂಎಲ್ ಎ ಗಳ ಪರಿಚಯವಿರಬಹುದು. ಅಷ್ಟೇ ಅಲ್ಲ ಸದಾ ಗುಂಪಿನಲ್ಲೇ ಕಾಲೇಜಿನಲ್ಲಿ ಓಡಾಡಿಕೊಂಡು ಇರುತ್ತಾರೆ. ಇಂತಹ ವಿದ್ಯಾರ್ಥಿಗಳಿಂದಲೂ ನೀವು ದೂರವಿದ್ರೆ ವಿದ್ಯೆಯಲ್ಲಿ ಮುಂದೆ ಬರಬಹುದು.

ಬಂಕರ್ಸ್:

ನೆನಪಿಟ್ಟುಕೊಳ್ಳಿ ನಿಮ್ಮ ಹೆತ್ತವರು ಸಾಲ ಸೋಲ ಮಾಡಿ ನಿಮಗೆ ಒಂದು ಉತ್ತಮ ಕಾಲೇಜಿಗೆ ಸೇರಿಸುತ್ತಾರೆ ಕಾರಣ ತನ್ನ ಮಗಳು ಇಲ್ಲ ಮಗ ಚೆನ್ನಾಗಿ ಕಲಿತು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕೆಂದು. ಆದ್ರೆ ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕ್ಲಾಸ್ ಬಂಕ್ ಮಾಡುವುದು ಹವ್ಯಾಸ ಮಾಡಿಕೊಂಡಿರುತ್ತಾರೆ. ನೀವು ಅಂತಹವರ ಜತೆ ಸೇರಿ ನಿಮ್ಮ ಎಜ್ಯುಕೇಶನ್ ಲೈಫ್ ಹಾಳುಮಾಡಿಕೊಳ್ಳಬೇಡಿ.

<strong>ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?</strong>ವಿದ್ಯಾರ್ಥಿಗಳ ತಲೆನೋವು... ದೇಶದಲ್ಲಿ ನಡೆಯುವ ಕಷ್ಟಕರ ಪರೀಕ್ಷೆಗಳು ಅಂದ್ರೆ ಯಾವುವು ಗೊತ್ತಾ?

For Quick Alerts
ALLOW NOTIFICATIONS  
For Daily Alerts

English summary
I agree it’s a new journey for you, but always remember it is also the time you will meet new people who will either teach you important lessons or those who will completely shake your belief in human race. So today I am going to share the types of people you need to stay away from in your college life if you want those 4 years to be stress free!
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X