UPSC Civil Service Prelims 2020: ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗೋದು ತುಂಬಾ ಸಿಂಪಲ್

ಯಪಿಎಸ್‌ಸಿ ಪರೀಕ್ಷೆ ಎಲ್ಲಾ ಪರೀಕ್ಷೆಗಳಿಗೂ ಹಿರಿಯಣ್ಣ ಎಂದೇ ಹೇಳಬಹುದು. ಯಾಕಂದ್ರೆ ಈ ಪರೀಕ್ಷೆಗಳು ಅಷ್ಟು ಮಹತ್ವದಾಯಕವಾಗಿದ್ದು, ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಅನೇಕ ಪ್ರಯತ್ನಗಳೊಂದಿಗೆ ಸಾಗಬೇಕಿರುತ್ತೆ. ಕೆಲವೊಮ್ಮೆ ಏಳು ಬೀಳುಗಳನ್ನು ಕಾಣುವ ಸಾಧ್ಯತೆಗಳು ಹೆಚ್ಚಿದ್ದರೂ ಛಲ ಬಿಡದೆ ನಿಯಂತರ ಅಧ್ಯಯನದಲ್ಲಿ ತೊಡಗಿದಲ್ಲಿ ಫಲಿತಾಂಶ ಉತ್ತಮವಾಗಿರುತ್ತೆ.

ಯುಪಿಎಸ್‌ಸಿ ಪರೀಕ್ಷೆ ತಯಾರಿಗೆ ನಮ್ಮ ಸಲಹೆ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ 2020 ಸಿವಿಲ್ ಸರ್ವೀಸ್ ಪರೀಕ್ಷೆಯನ್ನು ಅಕ್ಟೋಬರ್ 4,2020 ರಂದು ನಡೆಸಲಿದೆ. ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಮತ್ತು ಯಾವೆಲ್ಲಾ ಪ್ರಮುಖ ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂಬ ಮಾಹಿತಿ ಇಲ್ಲಿದೆ ನಿಮಗಾಗಿ.

 ಪರೀಕ್ಷಾ ವಿವರ:

ಪರೀಕ್ಷಾ ವಿವರ:

ಈ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯಲು ಅಭ್ಯರ್ಥಿಗಳು ಸಾಮಾನ್ಯ ಜ್ಞಾನ ಪೇಪರ್I ನಲ್ಲಿ ಅರ್ಹತೆ ಯನ್ನು ಪಡೆದ ನಂತರ ಪೇಪರ್ II ನಲ್ಲಿ ಕನಿಷ್ಟ 33%ರಷ್ಟು ಅಂಕಗಳನ್ನು ಪಡೆದಿರಬೇಕು. ಪ್ರತಿ ತಪ್ಪು ಉತ್ತರಗಳಿಗೂ ಅಭ್ಯರ್ಥಿಯು ಒಂದು ಪ್ರಶ್ನೆಗೆ 0.33 ಅಂಕಗಳನ್ನು ಕಳೆದುಕೊಳ್ಳುವರು.

 ತಯಾರಿ ಹೇಗೆ:

ತಯಾರಿ ಹೇಗೆ:

ಹಾಗಾಗಿ ಅಭ್ಯರ್ಥಿಯು ಇನ್ನುಳಿದ ಕೆಲವೇ ದಿನಗಳಲ್ಲಿ ಪರೀಕ್ಷೆಗೆ ಹೇಗೆಲ್ಲಾ ಸಿದ್ಧತೆಗಳನ್ನ ನಡೆಸಬೇಕು. ಯಾವೆಲ್ಲಾ ಪುಸ್ತಕಗಳನ್ನ ಓದಿದರೆ ಉಪಯುಕ್ತವಾಗಬಹುದು ಅನ್ನೋದನ್ನ ನಾವು ತಿಳಿಸ್ತೇವೆ. ಈಗೆಲ್ಲಾ ಮಾರ್ಕೆಟ್ ನಲ್ಲಿ ಅನೇಕ ಪುಸ್ತಕಗಳು ಲಭ್ಯವಿವೆ ಅದರಲ್ಲೂ ಜನರಿಗೆ ಬೇಕು ಬೇಡಗಳ ಜೊತೆಗೆ ಅನಗತ್ಯ ಮಾಹಿತಿಗಳನ್ನೂ ತಲೆಗೆ ತುಂಬಲಾಗುತ್ತಿದೆ. ಹಾಗಾಗಿ ಈ ಪರೀಕ್ಷೆಯಲ್ಲಿ ಪಾಸ್ ಆಗೋಕೆ ಯಾವೆಲ್ಲಾ ಪುಸ್ತಕಗಳನ್ನ ಓದೋದ್ರಿಂದ ಉಪಯೋಗ ಆಗಬಹುದು ಅನ್ನೋದನ್ನ ನಾವು ತಿಳಿಸ್ತೇವೆ.

 ಯುಪಿಎಸ್‌ಸಿ ಪ್ರಿಲಿಮ್ಸ್ 2019: ಪುಸ್ತಕಗಳ ಲೀಸ್ಟ್

ಯುಪಿಎಸ್‌ಸಿ ಪ್ರಿಲಿಮ್ಸ್ 2019: ಪುಸ್ತಕಗಳ ಲೀಸ್ಟ್

1 ಇತಿಹಾಸ- ಏನ್ಶಿಯನ್ಟ್ ಇಂಡಿಯಾ: ರಾಮ ಚರಣ್ ಶರ್ಮಾ

2 ಇತಿಹಾಸ- ಮೆಡಿವಲ್ ಇಂಡಿಯಾ: ಸತೀಶ್ ಚಂದ್ರ

3 ಇತಿಹಾಸ- ಮಾಡ್ರನ್ ಇಂಡಿಯಾ: ಬಿಪಿನ್ ಚಂದ್ರ

4 ಎನ್‌ಸಿಇಆರ್‌ಟಿ 8 ರಿಂದ 12 ನೇ ತರಗತಿಯವರೆಗಿನ ಇತಿಹಾಸ ಸಂಬಂಧಿತ ಪುಸ್ತಕ

5 ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ -ಬಿಪಿನ್ ಚಂದ್ರ

6 ಭೂಗೋಳ- ಎನ್‌ಸಿಇಆರ್‌ಟಿ 7 ನೇತರಗತಿಯಿಂದ 12 ನೇತರಗತಿಯವರೆಗಿನ ಪುಸ್ತಕಗಳು

7 ಭೂಗೋಳ- ಮಹೇಶ್ ಕುಮಾರ್ ಬಾರ್ನ್‌ವಾಲ್ಸ್ ಜಿಯೋಗ್ರಫಿ- ಸಮಗ್ರ ವಿವರ

8 ಇಂಡಿಯನ್ ಪಾಲಿಟಿ- ಎಂ ಲಕ್ಮೀಕಾಂತ್

9 ಎಕನಾಮಿಕ್ಸ್- ಬೇ ಲಾಲ್ ಮತ್ತು ಲಾಲ್

10 ಎಕನಾಮಿಕ್ ಸರ್ವೇ ಬೈ ಮಿನಿಸ್ಟರಿ ಆಫ್ ಫಿನಾನ್ಸ್, ಭಾರತೀಯ ಸರ್ಕಾರ

11 ವಿಜ್ಞಾನ -ಎನ್‌ಸಿಇಆರ್‌ಟಿ 9 ರಿಂದ 10 ನೇ ತರಗತಿಯ ಪುಸ್ತಕಗಳು

12 ಇಂಡಿಯಾ ಇಯರ್ ಬುಕ್

13 ಇಂಡಿಯನ್ ಆರ್ಟ್ ಮತ್ತು ಕಲ್ಚರ್ ಬೈ ನಿತಿನ್ ಸಿಂಗಾನಿಯ

ಯುಪಿಎಸ್‌ಸಿ ಪ್ರಿಲಿಮ್ಸ್: ಮ್ಯಾಗಜಿನ್ಸ್

ಪ್ರತಿಯೋಗಿತ ದರ್ಪಣ

ದೃಷ್ಠಿ ಮ್ಯಾಗಜಿನ್

 

ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗೋದು ತುಂಬಾ ಸಿಂಪಲ್

ಯುಪಿಎಸ್‌ಸಿ ಪರೀಕ್ಷೆಗೆ ತಯಾರಾಗೋದು ತುಂಬಾ ಸಿಂಪಲ್

ಈ ಎಲ್ಲಾ ಪುಸ್ತಕಗಳನ್ನು ಓದುವುದಷ್ಟೇ ಅಲ್ಲದೇ ಅಭ್ಯರ್ಥಿಗಳು ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಪ್ರತಿನಿತ್ಯದ ಆಗು ಹೋಗುಗಳನ್ನು ದಿನಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ತಿಳಿದುಕೊಳ್ಳುವುದರ ಬಗೆಗೆ ಹೆಚ್ಚು ಆಸಕ್ತಿಯನ್ನು ಹೊಂದಿರಬೇಕು. ಪ್ರತಿ ನಿಮಿಷವೂ ಕಲಿಕೆಗಾಗಿ ಮೀಸಲಿಡಬೇಕು ಹಾಗಿದ್ದಾಗ ಕೆಲವೇ ದಿನಗಳಲ್ಲಿ ಪರೀಕ್ಷೆಗೆ ಸಿದ್ಧತೆಗಳನ್ನು ಮಾಡಿಕೊಂಡು ಬಿಡಬಹುದು.

ಇನ್ನೂ ಕೆಲವರು ಈಗಾಗಲೆ ಒಂದೆರಡು ಬಾರಿ ಪರೀಕ್ಷೆಯನ್ನು ತೆಗೆದುಕೊಂಡಿದ್ದೇನೆ , ಪರೀಕ್ಷೆ ತುಂಬಾ ಕಷ್ಟ ಇರುತ್ತೆ ಹಾಗಾಗಿ ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂದು ಚಿಂತಿಸುವವರು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ನೂರು ಭಾರಿ ಎಡವಿದ ಮೇಲೆ ಒಂದು ಭಾರಿಯಾದರೂ ಎದ್ದು ನಿಲ್ಲೋದಕ್ಕೆ ಸಾಧ್ಯ ಹಾಗಾಗಿ ನಿಮ್ಮ ಗುರಿಯನ್ನು ಸಾಗಲು ಶ್ರಮ ಪಟ್ಟಾಗ ಫಲಿತಾಂಶ ಸಿಕ್ಕೇ ಸಿಗುತ್ತದೆ. ಮತ್ತೊಮ್ಮೆ ಹೇಳೋದಾದ್ರೆ ಧೈರ್ಯ ಆತ್ಮವಿಶ್ವಾಸದೊಂದಿಗೆ ನಾವು ತಿಳಿಸಿರುವ ಪುಸ್ತಕಗಳನ್ನು ಓದಿ ಪರೀಕ್ಷೆಯನ್ನು ಎದುರಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಿ.

 

More News  

For Quick Alerts
ALLOW NOTIFICATIONS  
For Daily Alerts

English summary
UPSC civil services 2020 exams is on october 4. Here are the list of books and tips to crack UPSC prelims exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+