ಅತೀ ಹೆಚ್ಚು ಅಂಕ ಸ್ಕೋರ್ ಮಾಡಬೇಕಾ... ವಾಸ್ತು ಪ್ರಕಾರ ಸ್ಟಡಿ ರೂಂ ಹೀಗಿರಲಿ !

ಎಷ್ಟೇ ಓದಿದ್ರೂ ನಿಮ್ಮ ಮಕ್ಕಳು ಓದಿದ್ದು ನೆನಪಿಲ್ಲ ಎಂದು ಹೇಳುತ್ತಾರೆ. ಇಲ್ಲ ಮಕ್ಕಳು ತಮಗೆ ಓದಲು ಮನಸ್ಸು ಇಲ್ಲ ಎಂದು ಗೋಗರೆಯುತ್ತಾರೆ.

By Kavya

ಎಷ್ಟೇ ಓದಿದ್ರೂ ನಿಮ್ಮ ಮಕ್ಕಳು ಓದಿದ್ದು ನೆನಪಿಲ್ಲ ಎಂದು ಹೇಳುತ್ತಾರೆ. ಇಲ್ಲ ಮಕ್ಕಳು ತಮಗೆ ಓದಲು ಮನಸ್ಸು ಇಲ್ಲ ಎಂದು ಗೋಗರೆಯುತ್ತಾರೆ. ಹಾಗಿದ್ರೆ ನೀವು ಮಕ್ಕಳ ಸ್ಟಡಿ ರೂಂನ ವಾಸ್ತು ನತ್ತ ಕೂಡಾ ಗಮನಹರಿಸಬೇಕು. ಸ್ಟಡಿ ರೂಂನಲ್ಲಿ ನೆಗಟೀವ್ ಎನರ್ಜಿ ತುಂಬಿದ್ದರೆ ಅವರು ಓದಲು ಒಲ್ಲೆ ಎನ್ನುತ್ತಾರೆ. ಹಾಗಾಗಿ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದ್ರೆ ಇಲ್ಲಿ ಕೆಲವೊಂದು ವಾಸ್ತು ಟಿಪ್ಸ್ ನೀಡಲಾಗಿದೆ. ಮಕ್ಕಳ ಸ್ಟಡಿ ರೂಂ ವಾಸ್ತು ಪ್ರಕಾರ ಹೀಗಿದ್ರೆ ಅವರು ಎಜ್ಯುಕೇಶನ್ ಯಾವ ರೀತಿಯಲ್ಲಿ ಉನ್ನತ ಮಟ್ಟಕ್ಕೆ ಏರುತ್ತೆ ನೋಡಿ.

ವಾಸ್ತು ಪ್ರಕಾರ ಮಕ್ಕಳ ಸ್ಟಡಿ ರೂಂ ಹೀಗಿರಲಿ

3-4 ಇಂಚು ಅಂತರದಲ್ಲಿ ಫರ್ನಿಚರ್ ಇಡಿ:

ಹೌದು ಗೋಡೆಗೆ ತಾಕುವಂತೆ ಟೇಬಲ್ ಕುರ್ಚಿಗಳನ್ನ ಇಡಬೇಡಿ, ಬದಲಿಗೆ ಗೋಡೆಯಿಂದ 3-4 ಇಂಚು ಅಂತರದಲ್ಲಿ ಫರ್ನಿಚರ್ ಇಡಿ. ಇದರಿಂದ ನಿಮ್ಮ ರೂಂನಲ್ಲಿ ಪಾಸಿಟೀವ್ ಎನರ್ಜಿ ತುಂಬಿಕೊಳ್ಳುವುದು.

ಟೇಬಲ್ ಆಕಾರ:

ಮಕ್ಕಳಿಗೆ ಓದಲು ಚೌಕ ಹಾಗೂ ಆಯತಾಕಾರದ ಟೇಬಲ್ ಇದ್ದರೆ ಬೆಸ್ಟ್. ಹಾಗಾಗಿ ಸ್ಟಡಿ ಟೇಬಲ್ ಯಾವಾಗಲೂ ಚೌಕಾ ಇಲ್ಲವೇ ಆಯತಾಕಾರದಲ್ಲಿ ಇದ್ದರೆ ಉತ್ತಮ.

ಶಾರ್ಪ್ ತುದಿ ಬೇಡ:

ಹೌದು ಟೇಬಲ್‌ನ ತುದಿಗಳು ಶಾರ್ಪ್ ಆಗಿದ್ದರೆ ನೆಗಟೀವ್ ಎನರ್ಜಿ ನಿಮ್ಮನ್ನ ಆವರಿಸಿಕೊಳ್ಳುತ್ತದೆ. ಇದರಿಂದ ನಿಮ್ಮ ಶಾಂತ ಮನಸ್ಥಿತಿಯನ್ನ ಇದು ಅಲ್ಲೋಲಕಲ್ಲೋಲ ಗೊಳಿಸುತ್ತದೆ.

ತೆರೆದ ಕಪಾಟು :

ಸ್ಟಡಿ ರೂಂನಲ್ಲಿ ಇರುವ ತೆರೆದ ಕಪಾಟು ನಿಮ್ಮ ಮನಸ್ಥತಿಯ ಹತೋಟಿ ತಪ್ಪುವಂತೆ ಮಾಡುತ್ತದೆ. ನಿರ್ದಿಷ್ಟಿ ಮನಸ್ಥಿತಿ ಹೋಗಿ ಸದಾ ಚಂಚಲ ಮನಸ್ಥಿತಿ ನಿಮ್ಮದಾಗಿರುತ್ತದೆ.

ನೈಋತ್ಯದಲ್ಲಿ ಪುಸ್ತಕ ಬೇಡ:

ಕೊಠಡಿಯ ನೈಋತ್ಯ ದಿಕ್ಕಿನಲ್ಲಿ ಪುಸ್ತಕಗಳನ್ನ ಇರಿಸಬೇಡಿ. ಯಾಕೆಂದ್ರೆ ಇದರಿಂದ ಮಕ್ಕಳಿಗೆ ಪುಸ್ತಕದತ್ತ ಒಲವು ಮೂಡುವುದಿಲ್ಲ. ಅಷ್ಟೇ ಅಲ್ಲ ಪುಸ್ತಕ ತೆರೆಯಲು ಕೂಡಾ ಮಕ್ಕಳು ಮನಸ್ಸು ಮಾಡುವುದಿಲ್ಲ.

ಉತ್ತರ-ಪೂರ್ವ ದಿಕ್ಕಿಗೆ ಮುಖ:

ಇದನ್ನೆಲ್ಲಾ ಚೆನ್ನಾಗಿ ನೆನಪಿಟ್ಟುಕೊಳ್ಳಿ. ಮಕ್ಕಳು ಯಾವಾಗಲೂ ಓದುವಾಗ ಕೊಠಡಿಯ ಉತ್ತರ -ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತುಕೊಂಡು ಓದುವಂತಿರಬೇಕು. ಯಾಕೆಂದ್ರೆ ಉತ್ತರ -ಪೂರ್ವ ದಿಕ್ಕು ಎಜ್ಯುಕೇಶನ್ ಝೋನ್ ದಿಕ್ಕು ಎಂದೇ ಕರೆಯಲ್ಪಡುತ್ತದೆ.

ರೂಂ ಮಧ್ಯೆ ಖಾಲಿ ಇಡಿ:

ಮಕ್ಕಳ ಸ್ಟಡಿ ರೂಂನಲ್ಲಿ ಮಧ್ಯೆ ಭಾಗ ಖಾಲಿ ಇಡಿ. ಅಲ್ಲಿ ಬೇಡದ ಮಸ್ತುಗಳನ್ನ ತುರುಕಿಸಿಟ್ಟುಕೊಳ್ಳಬೇಡಿ. ರೂಂನ ಮಧ್ಯದ ಜಾಗ ಖಾಲಿ ಇರಿಸುವುದರಿಂದ ನಿಮ್ಮ ಮಕ್ಕಳ ಕ್ರಿಯೇಟಿಇ ಮೈಂಡ್ ಹೆಚ್ಚಾಗುವುದ. ಅವರು ಹೆಚ್ಚು ಕ್ರಿಯಾತ್ಮಕವಾಗಿ ಕೂಡಾ ಯೋಚಿಸುತ್ತಾರೆ.

ಹೆಚ್ಚು ಕಿಟಕಿ ಹಾಗೂ ಹಿತವಾದ ಬೆಳಕು:

ಮಕ್ಕಳ ಸ್ಟಡಿ ರೂಂನಲ್ಲಿ ಹೆಚ್ಚು ಕಿಟಕಿಗಳು ಇದ್ದು ಹೊರಗಿನಿಂದ ಗಾಳಿ ತೇಲಿ ಬರುವಂತೆ ಇರಬೇಕು. ಅಷ್ಟೇ ಅಲ್ಲ ರೂಂ ತುಂಬಾ ಬ್ರೈಟ್ ಬೆಳಕು ಇರುವ ಬದಲು ಮಿತವಾದ ಬೆಳಕು ಇದ್ರೆ ಮಕ್ಕಳಿಗೆ ಓದಿನತ್ತ ಹೆಚ್ಚು ಒಲವು ಮೂಡುತ್ತದೆ.

ಯಾವ ದಿಕ್ಕು ಬೆಸ್ಟ್:

ಇನ್ನು ಮಕ್ಕಳು ಯಾವ ದಿಕ್ಕಿನಲ್ಲಿ ಕುಳಿತು ಓದದ್ರೆ ಬೆಸ್ಟ್ ಎಂದು ಕೂಡಾ ನಾವು ಹೇಳ್ತೇವೆ. ಒಂದು ವೇಳೆ ಹುಡುಗನಾಗಿದ್ದರೆ ಅವರನ್ನ ಉತ್ತರ ಇಲ್ಲ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕೂರಿಸಿ ಅದೇ ರೀತಿ, ಹುಡುಗಿಯಾಗಿದ್ದರೆ ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನತ್ತ ಮುಖ ಮಾಡಿ ಓದಿದ್ರೆ ಬೆಸ್ಟ್

ನೈಋತ್ಯ ದಿಕ್ಕು ಬೇಡ:

ಮನೆಯ ನೈಋತ್ಯ ದಿಕ್ಕಿನತ್ತ ಇರುವ ರೂಂನಲ್ಲಿ ಯಾವಾಗಲೂ ಮನೆಯ ಹಿರಿಯರು ನೆಲೆಸಿರಬೇಕು. ಇನ್ನು ಆ ರೂಂ ಮಕ್ಕಳಿಗೆ ಸ್ಟಡಿ ರೂಂ ಆಗಿ ನೀಡಬೇಡಿ. ಇದರಿಂದ ಮಕ್ಕಳ ವರ್ತನೆ ಹೈಪರ್ ಆಕ್ಟೀವ್ ಆಗಿರುವ ಸಂಭವವಿದೆ.

ಗೋಡೆ ಬಣ್ಣ:

ಮಕ್ಕಳ ಸ್ಟಡಿ ರೂಂ ಗೆ ನೀಲಿ ಹಾಗೂ ಹಸಿರು ಬಣ್ಣ ಬಳೆಯುವುದು ಬೆಸ್ಟ್. ಇದರಿಂದ ಪಾಸಿಟೀವ್ ಎನರ್ಜಿ ಹೆಚ್ಚಾಗಿ ಮಕ್ಕಳ ಏಕಾಗ್ರತೆ ಹೆಚ್ಚುವುದು

ನೈಋತ್ಯದಲ್ಲಿ ಬೆಡ್ ಇರಲಿ:

ಮಕ್ಕಳ ಮನಸ್ಸು ಓದಿನತ್ತ ಇರಬೇಕು ಎಂದಾದ್ರೆ ಅವರ ಬೆಡ್ ನೈಋತ್ಯ ದಿಕ್ಕಿನಲ್ಲಿ ಇರಿಸಿ.

More News  

For Quick Alerts
ALLOW NOTIFICATIONS  
For Daily Alerts

English summary
In Home Like other room, Study Room too holds a crucial role as it affects the education, career any hence the future of your kids. So here Some Vastu Tips for the bright future of your children.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+