ಹೊಸ ಬ್ಯುಸಿನೆಸ್ ಗೆ ಕೈ ಹಾಕುತ್ತಿದ್ದೀರಾ... ಸಕ್ಸಸ್ ಗಾಗಿ ವಾಸ್ತು ಪ್ರಕಾರ ನಿಮ್ಮ ಕಛೇರಿ ಹೀಗಿರಲಿ!

ಹಣಕಾಸು ಎಂಬುವುದು ಪ್ರತೀ ಉದ್ಯಮದ ಹೃದಯ ಹಾಗೂ ಆತ್ಮ ಇದ್ದಂತೆ.ಸಣ್ಣ ಪ್ರಮಾಣದ ವ್ಯವಹಾರಗಳು ಹಣಕಾಸಿನ ಪರಿಚಲನೆ ಪಾವತಿ ಸಂದಾಯಗಳು ಮತ್ತು ನಗದು ಹರಿವಿನ ಮೇಲೆ ಅವಲಂಬಿತವಾಗಿದೆ. ಆರ್ಥಿಕ ಸ್ಥಿರತೆಯನ್ನ ಕಾಪಾಡಿಕೊಳ್ಳಲು ದೊಡ್ಡ ಉದ್ಯಮಗಳು ತಮ್ಮದೇ ಮೂಲಗಳನ್ನ ಹೊಂದಿದೆ.

ಹೊಸ ಬ್ಯುಸಿನೆಸ್ ಗೆ ಕೈ ಹಾಕುತ್ತಿದ್ದೀರಾ... ಸಕ್ಸಸ್ ಗಾಗಿ ವಾಸ್ತು ಪ್ರಕಾರ ನಿಮ್ಮ ಕಛೇರಿ ಹೀಗಿರಲಿ!

 

ನೀವು ಹೊಸ ಉದ್ಯಮ ಪ್ರಾರಂಭಿಸಬೇಕೆಂದಿದ್ದರೆ, ಇಲ್ಲ ಈಗಾಗಲೇ ಪ್ರಾರಂಭಿಸಿರುವ ಉದ್ಯಮದಲ್ಲಿ ಅಭಿವೃದ್ಧಿ ಕಾಣಬೇಕೆಂದಿದ್ದರೆ, ವಿಲೀನ ಅಥವಾ ಸ್ವಾಧೀನಾ, ಬ್ಯಾಂಕ್‌ ವ್ಯವಹಾರ, ಹಣಕಾಸು ಸಂಸ್ಥೆಗಳು, ಷೇರು ಮಾರುಕಟ್ಟೆ ಅಥವಾ ಹೂಡಿಕೆದಾರರಿಂದ ಹಣ ಪಡೆಯುವುದು ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇಷ್ಟು ಮಾತ್ರವಲ್ಲದೇ ವಾಸ್ತು ಬಗ್ಗೆಯೂ ಕೂಡಾ ನೀವು ಚಿಂತಿಸಬೇಕು.

ನೀವು ಒಂದು ಬ್ಯುಸಿನೆಸ್ ಅಥವಾ ಕೆಲಸ ಆರಂಭಿಸಲು ಏನಾದರೊಂದು ಕಚೇರಿ ಅಥವಾ ಶಾಪ್ ನಿರ್ಮಾಣ ಮಾಡುತ್ತೀರಿ ಎಂದಾದರೆ ಅದು ವಾಸ್ತು ಶಾಸ್ತ್ರದ ಅನುಸಾರ ಇರುವಂತೆ ನೋಡಿಕೊಳ್ಳಿ. ಯಾಕೆಂದರೆ ಯಾವುದೇ ಬ್ಯುಸಿನೆಸ್ ನಮ್ಮ ಜೀವನದ ಅತ್ಯಂತ ಪ್ರಮುಖ ಭಾಗವಾಗಿರುತ್ತದೆ. ಆದುದರಿಂದ ಯಶಸ್ಸು ಬೇಕಾದರೆ ಹಣ ಸಂಪಾದನೆ ಚೆನ್ನಾಗಿ ಆಗಬೇಕು. ಹಣ ಸಂಪಾದನೆ ಚೆನ್ನಾಗಿರಲು ವಾಸ್ತು ಶಾಸ್ತ್ರದ ಪ್ರಕಾರ ಕಚೇರಿ ನಿರ್ಮಾಣ ಮಾಡಿ. ಹಾಗಾಗಿ ವಾಸ್ತು ಪ್ರಕಾರ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ

ವಾಸ್ತು ಪ್ರಕಾರ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಮಾಹಿತಿ ಇಲ್ಲಿದೆ.

ಗಣೇಶ ಹಾಗೂ ಸರಸ್ವತಿ ಮೂರ್ತಿ:

ಇದು ಮೊದಲ ವಾಸ್ತು ಸಲಹೆ. ನಿಮ್ಮ ಕಚೇರಿಯ ಈಶಾನ್ಯ ಭಾಗದಲ್ಲಿ ಲಕ್ಷ್ಮೀ, ಗಣೇಶ ಅಥವಾ ಸರಸ್ವತಿಯ ಮೂರ್ತಿ ಇಡಿ. ಇದರಿಂದ ನೀವು ಶೀಘ್ರದಲ್ಲೇ ಅಭಿವೃದ್ಧಿ ಕಾಣುವಿರಿ.

ಚೌಕಾಕಾರ ಇಲ್ಲ ಆಯತಾಕಾರ:

ನೀವು ಹೊಸ ಉದ್ಯಮ ಪ್ರಾರಂಭಿಸಬೇಕೆಂದಿದ್ದರೆ ನಿಮ್ಮ ಶಾಪ್ ಅಥವಾ ಕಚೇರಿಯನ್ನು ಚೌಕಾಕಾರ ಅಥವಾ ಆಯತಾಕಾರದಲ್ಲಿಯೇ ನಿರ್ಮಾಣ ಮಾಡಿ. ಸರಿಯಾದ ಶೇಪ್ ಇರದಿದ್ದರೆ ಲಾಭ ಸಿಗುವುವುದು ಬರೀ ಕನಸಿನ ಮಾತಾಗಿರುತ್ತದೆ.

ಈಶಾನ್ಯ ಭಾಗ ಬೇಡ:

ಇನ್ನು ಕೆಲವರು ತಮ್ಮ ಮನೆಯಲ್ಲಿಯೇ ಬ್ಯುಸಿನೆಸ್ ಪ್ರಾರಂಭಿಸುತ್ತಾರೆ. ಅಂತಹವರು ಈ ವಾಸ್ತು ಟಿಪ್ಸ್ ಫಾಲೋ ಮಾಡಿ. ಮನೆಯಲ್ಲಿಯೇ ಶಾಪ್ ನಿರ್ಮಾಣ ಮಾಡುವುದಾದರೆ ಅದು ಯಾವತ್ತೂ ಈಶಾನ್ಯ ಭಾಗದಲ್ಲಿ ಇರದಂತೆ ನೋಡಿಕೊಳ್ಳುವುದು ಉತ್ತಮ.

 

ಗಿಡಮರಗಳಿರಲಿ:

ಗಿಡಮರಗಳು ಕೂಡಾ ವಾಸ್ತುವಿನಲ್ಲಿ ಪ್ರಾಮುಖ್ಯತೆ ಹೊಂದಿದೆ. ನಿಮ್ಮ ಶಾಪ್ ನ ಇಲ್ಲ ನೂತನ ಕಛೇರಿಯ ಎದುರು ಹಾಗೂ ಸುತ್ತಮುತ್ತಲೂ ಸಾಕಷ್ಟು ಗಿಡ, ಮರಗಳು ಇರುವಂತೆ ನೋಡಿಕೊಳ್ಳಿ. ಮುಖ್ಯವಾಗಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮರಗಳು ಇದ್ದರೆ ಉತ್ತಮ

ಜಾರು ಛಾವಣಿ ಬೇಡ:

ಹೊಸ ಕಚೇರಿಯ ಛಾವಣಿ ಅದರ ಮುಖ್ಯ ದ್ವಾರದ ಕಡೆಗೆ ಜಾರಿರದಂತೆ ನೋಡಿಕೊಳ್ಳಿ. ಅದೇ ರೀತಿ ಮುಖ್ಯ ದ್ವಾರದ ಮೂಲಕ ಸಾಕಷ್ಟು ಗಾಳಿ ಮತ್ತು ಬೆಳಕು ಆಫೀಸ್‌ ಒಳ ಪ್ರವೇಶವಾಗುವಂತೆ ಇದ್ದರೆ ಬೆಸ್ಟ್

ಬಾಗಿಲುಗಳು ಒಳಕ್ಕೆ ತೆರೆದಿರಲಿ:

ಇನ್ನೂ ಬಾಗಿಲು ವಿಚಾರಕ್ಕೂ ಕೆಲವೊಂದು ವಾಸ್ತು ಸಲಹೆಗಳು ಇವೆ. ಕಚೇರಿಯ ಎಲ್ಲಾ ಬಾಗಿಲುಗಳು ಒಳಭಾಗಕ್ಕೆ ತೆರೆದಿರುವಂತೆ ಇರಲಿ. ಅಷ್ಟೇ ಅಲ್ಲ ಬಾಗಿಲುಗಳೆಲ್ಲವೂ ಬಲ ಬದಿಗೆ ಇರಲಿ. ಜೊತೆಗೆ ಈ ಬಾಗಿಲುಗಳು ವಿಚಿತ್ರ ಶಬ್ಧ ಉಂಟು ಮಾಡದಂತೆ ನೋಡಿಕೊಳ್ಳುವುದು ಉತ್ತಮ.

ಮಾಲೀಕರ ಆಸನ:

ಕಚೇರಿಯಲ್ಲಿ ಭಾಸ್ ಸೀಟ್‌ ಉತ್ತರ, ಈಶಾನ್ಯ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಿ ಇದ್ದರೆ ಉತ್ತಮ. ಕ್ಯಾಶ್‌ ಕೌಂಟರ್‌ ಅಥವಾ ಲಾಕರ್ ಕಂಪನಿಯ ಉತ್ತರ ಭಾಗಕ್ಕೆ ಮುಖ ಮಾಡಿದ್ದರೆ ಅಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ.

For Quick Alerts
ALLOW NOTIFICATIONS  
For Daily Alerts

English summary
Finance is the heart and soul of every business,The Vaastu Shastra are not only applivable on residential buildings but they also effect the commercial building or the business places. Using Vaastu shastra for the fulfillmennt of business goals is justifiable
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more