ನೀವೆಲ್ಲಾ ಕಾಲೇಜಿನಲ್ಲಿ ಇದನ್ನ ಮಾಡಿಯೇ ಇರುತ್ತೀರಾ ಅಲ್ವಾ?

ಪ್ರತಿಯೊಬ್ಬರಲ್ಲೂ ತುಂಟಾತನ ಎಂಬ ಸ್ವಭಾವ ಇದ್ದೇ ಇರುತ್ತದೆ. ಇನ್ನೂ ಕಾಲೇಜು ವಿದ್ಯಾರ್ಥಿಗಳಲ್ಲಂತೂ ಈ ತುಂಟತನ ಹೆಚ್ಚೇ ಇರುತ್ತದೆ.

ಪ್ರತಿಯೊಬ್ಬರಲ್ಲೂ ತುಂಟಾತನ ಎಂಬ ಸ್ವಭಾವ ಇದ್ದೇ ಇರುತ್ತದೆ. ಇನ್ನೂ ಕಾಲೇಜು ವಿದ್ಯಾರ್ಥಿಗಳಲ್ಲಂತೂ ಈ ತುಂಟತನ ಹೆಚ್ಚೇ ಇರುತ್ತದೆ. ಕಾಲೇಜು ದಿನಗಳನ್ನ ಮೆಲುಕು ಹಾಕಿದಾಗ ನಿಜಕ್ಕೂ ಅದು ಫನ್ ದಿನಗಳು ಎಂದು ಅನಿಸುತ್ತದೆ. ಅಷ್ಟೇ ಅಲ್ಲ ನಮ್ಮ ಮುಖದಲ್ಲಿ ಕಿರು ನಗೆ ಕೂಡಾ ಮೂಡುತ್ತದೆ. ಹಾಗಂತ ನಾವು ಮತ್ತೆ ಕಾಲೇಜಿಗೆ ಮರಳಲು ಸಾಧ್ಯವಿಲ್ಲ. ಬದಲಿಗೆ ನಮ್ಮ ಜೀವನದುದ್ದಕ್ಕೂ ಕಾಲೇಜಿನಲ್ಲಿ ಕಳೆದ ಪ್ರತಿಯೊಂದು ಕ್ಷಣವನ್ನು ಕೂಡಾ ಮೆಲುಕು ಹಾಕಿಕೊಳ್ಳಬಹುದು.

ನೀವೆಲ್ಲಾ ಕಾಲೇಜಿನಲ್ಲಿ ಇದನ್ನ ಮಾಡಿಯೇ ಇರುತ್ತೀರಾ ಅಲ್ವಾ?

ಶಾಲೆ ವರ್ಸಸ್ ಕಾಲೇಜು... ಯಾವುದು ಬೆಸ್ಟ್!

ಕಾಲೇಜಿನಲ್ಲಿ ಕಳೆದ ಪ್ರತಿಯೊಂದು ಕ್ಷಣ ನೆನೆದಾಗ ನಗು ಮೂಡುತ್ತದೆ ಅಷ್ಟೇ ಅಲ್ಲ ಮತ್ತೆ ಫ್ರೆಶ್ ಅನುಭವ ಮೂಡುತ್ತದೆ. ಇನ್ನು ಕ್ರೇಜಿ ಸ್ನೇಹಿತರು ಇದ್ದವರಂತೂ ಕಾಲೇಜು ಲೈಫ್ ಸಖತ್ ಎಂಜಾಯ್ ಮಾಡುತ್ತಾರೆ.

ಕ್ಲಾಸ್ ಬಂಕ್ ಮಾಡುವುದರಿಂದ ಹಿಡಿದು ಹಾಸ್ಟೆಲ್ ನಿಂದ ಕದ್ದು ಓಡಿರುವುದು ಸೇರಿದಂತೆ ಹಲವಾರು ಕ್ರೇಜಿ ಆಕ್ಟಿವಿಟೀಸ್ ನಾವು ಮಾಡಿದ್ದು, ಅವುಗಳ ಬಗ್ಗೆ ಇದೀಗ ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತದೆ ಮುಂದಕ್ಕೆ ಓದಿ.

ಒಂದೇ ರೀತಿಯ ಔಟ್‌ಫಿಟ್ ಧರಿಸಿ ಬರುವ ಗ್ಯಾಂಗ್:

ಉದ್ಯೋಗಕ್ಕೆ ಸಂಬಂಧಪಟ್ಟ ಸಮಸ್ಯೆಗೆ ವಾಸ್ತು ಸಲಹೆ !

ಹೌದು ಸ್ನೇಹಿತರ ಗ್ಯಾಂಗ್ ಮೊದಲೇ ನಿರ್ಧರಿಸಿ ಒಂದೇ ಬಣ್ಣದ ಉಡುಗೆ, ಇಲ್ಲ ಒಂದೇ ರೀತಿಯ ಶೈಲಿಯ ಔಟ್‌ಫಿಟ್ ಧರಿಸಿ ಕಾಲೇಜಿಗೆ ಬರುವುದು. ಅಷ್ಟೇ ಮಾತ್ರವಲ್ಲ ಕಾಲೇಜಿಗೆ ಬಂದ ಮೇಲೆ ಹೋ ... ಸೇಮ್ ಪಿಂಚ್... ಎಂದು ಹೇಳುವುದು. ಯಾರಾದ್ರೂ ಕೇಳಿದ್ರೆ ಇಲ್ಲ ಇದು ಜಸ್ಟ್ ಕೋ ಇಂಸಿಡೆಂಟ್ ಎಂದು ಉತ್ತರಿಸುವುದು. ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜು ದಿನಗಳಲ್ಲಿ ಹೀಗೆ ಖಂಡಿತ ಮಾಡಿರುತ್ತಾರೆ.

ಕ್ಲಾಸ್ ಬಂಕ್:

ಕಾಲೇಜು ಎಂದ್ರೆ ಅಲ್ಲಿ ಬಂಕ್ ಎಂಬ ಪದ ಇದ್ದೇ ಇರುತ್ತದೆ. ಕೆಲವೊಮ್ಮೆ ಒಬ್ಬೊಬ್ಬರೇ ಕ್ಲಾಸ್ ಬಂಕ್ ಮಾಡಿದ್ರೆ ಮತ್ತೆ ಕೆಲವೊಮ್ಮೆ ಸ್ನೇಹಿತರ ಗುಂಪಿನ ಜತೆ ಬಂಕ್ ಮಾಡುತ್ತಾರೆ ವಿದ್ಯಾರ್ಥಿಗಳು. ಇದನ್ನ ಮಾಸ್ ಬಂಕ್ ಅಂತಾರೆ. ಇನ್ನು ಬಂಕ್ ಯಾಕೆಂದ್ರೆ ಫ್ರೆಂಡ್ಸ್ ಜತೆ ಔಟಿಂಗ್ ಪ್ಲ್ಯಾನ್ ಮಾಡಿದಾಗ ಎಲ್ಲರೂ ಜತೆಯಾಗಿ ಮಾಸ್ ಬಂಕ್ ಮಾಡುತ್ತಾರೆ.

ಕಾಲೇಜು ಲೈಫ್ ನಲ್ಲಿ ನೀವು ಮಾಡಲೇ ಬೇಕಾದ ಕ್ರೇಜಿ ಆಕ್ಟಿವಿಟೀಸ್!

ಸ್ನೇಹಿತರ ಜತೆ ಕ್ಯಾಂಟೀನ್ ಚಿಲ್:

ಹೌದು ಕಾಲೇಜು ಹೋಗುವ ವಿದ್ಯಾರ್ಥಿಗಳು ಕ್ಲಾಸ್‌ಗಿಂತ ಹೆಚ್ಚಾಗಿ ಕ್ಯಾಂಟೀನ್ ಅಲ್ಲಿಯೇ ಕಾಲಕಳೆಯುತ್ತಾರೆ. ಫ್ರೆಂಡ್ಸ್ ಗ್ಯಾಂಗ್ ಜತೆ ಏನಾದ್ರೂ ಪಾರ್ಟಿ ಮಾಡಿಕೊಂಡು ಸಖತ್ ಎಂಜಾಯ್ ಮಾಡುತ್ತಾರೆ. ನೀವು ಯಾರೇ ವಿದ್ಯಾರ್ಥಿಗಳಲ್ಲಿ ಕೇಳಿ ನಿಮ್ಮ ನೆಚ್ಚಿನ ಜಾಗ ಯಾವುದು ಎಂದು ಥಟ್ಟನೆ ಉತ್ತರಿಸುವುದು ಕಾಲೇಜು ಕ್ಯಾಂಟೀನ್ ಎಂದು.

ಪರೀಕ್ಷೆ ಹಿಂದಿನ ದಿನ ಎದ್ದ-ಬಿದ್ದು ಓದು:

ಹ..ಹ... ಹೌದು ವಿದ್ಯಾರ್ಥಿಗಳು ಗಮನವಿಟ್ಟು ಶೃದ್ಧೆಯಿಂದ ಓದಿಕೊಳ್ಳುವುದು ಯಾವಾಗ ಎಂದರೆ ಪರೀಕ್ಷೆ ಹಿಂದಿನ ದಿನ. ನಾಳೆ ಪರೀಕ್ಷೆ ಎಂದ್ರೆ ಇಂದು ಸ್ನೇಹಿತರ ಜತೆಗೂಡಿ ಇದ್ದ ಬಿದ್ದ ಪುಸ್ತಕ ಎಲ್ಲಾ ಹಿಡಿದುಕೊಂಡು ಓದಿರುವುದು ಯಾರೂ ಕೂಡಾ ಮರೆಯಲ್ಲ.

<strong>ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?</strong>ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?

ಪರೀಕ್ಷೆಯಲ್ಲಿ ಚೀಟಿ:

ಹೌದು ಒಂದೇ ದಿನದಲ್ಲಿ ಎಲ್ಲಾ ಸಿಲೇಬಸ್ ಓದಿ ಮುಗಿಸಲು ಸಾಧ್ಯವಿಲ್ಲ. ಈ ಸತ್ಯ ವಿದ್ಯಾರ್ಥಿಗಳಿಗೂ ತಿಳಿದಿರುತ್ತದೆ. ಹಾಗಾಗಿ ಈ ಟೈಂನಲ್ಲಿ ಏನು ಮಾಡುತ್ತಾರೆ ಎಂದ್ರೆ ಚಿಕ್ಕ ಚೀಟಿ ಹಿಡಿದುಕೊಂಡು ಅದರಲ್ಲಿ ಕೆಲವೊಂದಿಷ್ಟು ಉತ್ತರ ಬರೆದುಕೊಂಡು ಎಕ್ಸಾಂ ಹಾಲ್ ಗೆ ಕೊಂಡೊಯ್ಯುತ್ತಾರೆ. ಅಷ್ಟೇ ಅಲ್ಲ ಎಕ್ಸಾಂ ಹಾಲ್‌ನಲ್ಲಿ ಆ ಚೀಟಿಯಿಂದ ನಕಲು ಮಾಡುವುದಲ್ಲದೇ ತಮ್ಮ ಸ್ನೇಹಿತರಿಗೂ ಆ ಚೀಟಿಯನ್ನ ಪಾಸು ಮಾಡುತ್ತಾರೆ.

ಜ್ಯೂನಿಯರ್ಸ್ ಗೆ ಬಾಸ್:

ಹೌದು ಜ್ಯೂನಿಯರ್ಸ್ ಗೆ ಇವರೇ ಬಾಸ್ ಅನ್ನೊ ತರಹ ಸೀನಿಯರ್ಸ್ ವರ್ತಿಸುತ್ತಾರೆ. ಅಷ್ಟೇ ಅಲ್ಲ ಸದಾ ಜ್ಯೂನಿಯರ್ಸ್ ಕಾಲೆಳೆದು ಅವರಿಗೆ ಕೀಟಲೆ ಮಾಡುತ್ತಾ ಮಜಾ ತೆಗೆದುಕೊಂಡಿರುವುದು ಯಾರೂ ಕೂಡಾ ಮರೆತಿರುವುದಿಲ್ಲ.

<strong>ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್! </strong>ಸಿನಿಮಾ ಹಾಸ್ಟೆಲ್ ಥರಹ ಇರುತ್ತಾ ರಿಯಲ್ ಹಾಸ್ಟೆಲ್!

For Quick Alerts
ALLOW NOTIFICATIONS  
For Daily Alerts

English summary
It is always fun to think about the memories that every one of us has during the college days. Isn’t it?! We may possibly not get the chance to get back to the college days, but surely will have memories that are cherished for life.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X