
ನರ್ಸ್ ಅಂದ್ರೆ ಎಲ್ಲರಿಗೂ ಅದು ಬೇರೆಲ್ಲಾ ಉದ್ಯೋಗದಂತೆ ಸಾಮಾನ್ಯ ಉದ್ಯೋಗ ಎಂಬ ಭಾವನೆ ಒಂದು ಕಾಲದಲ್ಲಿ ಇತ್ತು. ಆದರೆ ಕೊರೋನಾ ಬಂದ ಮೇಲೆಯೇ ನಿಜಕ್ಕೂ ವೈದ್ಯಕೀಯ ಕ್ಷೇತ್ರದ ಮಹತ್ವವೆಷ್ಟಿದೆ ? ಉದ್ಯೋಗಾವಕಾಶಗಳೆಷ್ಟಿವೆ ಎಂಬುದು ನಮಗೆ ತಿಳಿದದ್ದು ಅಲ್ವೇ?.... ಇನ್ನು ಆಸ್ಪತ್ರೆಗಳಲ್ಲಿ ನರ್ಸ್ ಗಳ ಕರ್ತವ್ಯ ಎಷ್ಟಿದೆ ಎನ್ನುವುದನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಲೇ ಇದ್ದೇವೆ. ಹಾಗಾಗಿ ಈ ನರ್ಸಿಂಗ್ ಕಲಿಕೆಯಿಂದ ಯಾವೆಲ್ಲಾ ಲಾಭಗಳಿವೆ ಎಂಬುದನ್ನು ಇಲ್ಲಿ ತಿಳಿಯೋಣ.
1. ಪ್ರಮುಖವಾಗಿ ನರ್ಸ್ ಗಳ ಕೊರತೆ ಇದೆ:
ಕಾರ್ಮಿಕ ಅಂಕಿಅಂಶಗಳ ಬ್ಯೂರೋ ಪ್ರಕಾರ 2020ರ ವೇಳೆಗೆ ಸುಮಾರು 800,000 ದಾದಿಯರ ಕೊರತೆ ಉಂಟಾಗಿದೆ. ವಿಶ್ವದಲ್ಲಿನ ಜನಸಂಖ್ಯೆಯು ಹೆಚ್ಚು ಕಾಲ ಬದುಕುತ್ತಿದೆ ಹಾಗಾಗಿ ಹೆಚ್ಚಿನ ವೈದ್ಯಕೀಯ ಆರೈಕೆಯ ಅಗತ್ಯವಿದೆ. ಆದ್ದರಿಂದ ಆಸ್ಪತ್ರೆಗಳಲ್ಲಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸದಾ ದಾದಿಯರ ಅಗತ್ಯವಿದೆ. ಹೀಗಾಗಿ ಅನೇಕ ಸಂಸ್ಥೆಗಳು ದಾದಿಯರಿಗೆ ಹೆಚ್ಚಿನ ವೇತನ ನೀಡುವ ಮೂಲಕ ಅವರನ್ನು ದುಡಿಸಿಕೊಳ್ಳುತ್ತಿವೆ.
2. ಉದ್ಯೋಗದಲ್ಲಿ ಫ್ಲೆಕ್ಸಿಬಿಲಿಟಿ ಇದೆ:
ಸಾಮಾನ್ಯವಾಗಿ ಉದ್ಯೋಗಗಳಲ್ಲಿ ನಿಗದಿತ ಸಮಯದಲ್ಲಿ ಕೆಲಸ ಮಾಡಬೇಕು ಮತ್ತು ಫ್ಲೆಕ್ಸಿಬಿಲಿಟಿಯ ಮಾತೇ ಬರುವುದಿಲ್ಲ. ಆದರೆ ಈ ಕ್ಷೇತ್ರದಲ್ಲಿ ಹಾಗಲ್ಲ, ದಾದಿಯರಿಗೆ ಅವರ ಅಗತ್ಯಕ್ಕನುಸಾರ ಉದ್ಯೋಗವನ್ನು ಮಾಡಬಹುದು.
ನಿಮಗೆ ಬೇಕಾದಾಗ ಎಲ್ಲಿ ಬೇಕಾದರೂ ಮತ್ತು ಯಾವ ಸಮಯಕ್ಕೆ ಬೇಕಾದರೂ ನೀವು ಕೆಲಸವನ್ನು ಮಾಡಬಹುದು. ನೀವು ಅರೆಕಾಲಿಕ, ಪೂರ್ಣ ಸಮಯ ಅಥವಾ ತಾತ್ಕಾಲಿಕವಾಗಿ ಕೆಲಸ ಮಾಡಲು ಬಯಸುವಿರಾದರೆ ಅಂತಹ ಆಯ್ಕೆಗಳು ನಿಮಗೆ ಲಭ್ಯವಿರುತ್ತವೆ. ನೀವು ನಿಮ್ಮ ಉದ್ಯೋಗಕ್ಕೆ ಬ್ರೇಕ್ ಕೂಡ ನೀಡಬಹುದು. ಮತ್ತೆ ನೀವು ನಿಮಗೆ ಅಗತ್ಯವಾದ ಸಮಯಕ್ಕೆ ವೃತ್ತಿ ಜೀವನಕ್ಕೆ ಮರಳಬಹುದು. ನೀವು ಸತತವಾಗಿ ಮೂರು ದಿನ ಕೆಲಸ ಮಾಡಬಹುದು ಮತ್ತು ನಾಲ್ಕು ದಿನಗಳ ರಜೆ ಪಡೆಯಬಹುದು. ನಿಮಗೆ ಯಾವುದೇ ಅಡಚಣೆಗಳಿಲ್ಲದಿದ್ದರೆ ಪೂರ್ಣ ಸಮಯದ ಉದ್ಯೋಗವನ್ನೂ ಮಾಡಬಹುದು.
3. ಕೆಲಸದಲ್ಲಿ ಆತ್ಮ ತೃಪ್ತಿಯಿರುತ್ತದೆ:
ನರ್ಸಿಂಗ್ ವಿಶ್ವದ ಅತ್ಯಂತ ಗೌರವಾನ್ವಿತ ಕ್ಷೇತ್ರಗಳಲ್ಲಿ ಒಂದಾದ ಉದ್ಯೋಗ. ವೈದ್ಯರು ಮತ್ತು ರೋಗಿಗಳ ನಡುವಿನ ಪ್ರಮುಖ ಕೊಂಡಿಯೆಂದರೆ ದಾದಿಯರು. ಪ್ರತಿಯೊಂದು ಸನ್ನಿವೇಶವೂ ವಿಭಿನ್ನವಾಗಿರುತ್ತದೆ. ಆದರೆ ಅನೇಕ ಬಾರಿ ರೋಗಿಯು ವೈದ್ಯರಿಗಿಂತ ಹೆಚ್ಚಾಗಿ ದಾದಿಯೊಂದಿಗೆ ಹೆಚ್ಚು ಸಂವಹನ ನಡೆಸುತ್ತಾನೆ. ಹಾಗಾಗಿ ರೋಗಿಯನ್ನು ಅರಿಯುವ ಮತ್ತು ರೋಗಿಯೊಂದಿಗೆ ಸಂವಹಿಸುವ ಅವಕಾಶ ದೊರೆಯುತ್ತದೆ. ಇದರಿಂದ ನಿಮಗೆ ಕೆಲಸದಲ್ಲಿ ತೃಪ್ತಿ ಸಿಗುತ್ತದೆ.
4. ಅನೇಕ ಸ್ಥಳಗಳಲ್ಲಿ ಉದ್ಯೋಗ ಮಾಡುವ ಅವಕಾಶ:
ದಾದಿಯಾಗುವ ಮೂಲಕ ನೀವು ಇಷ್ಟಪಡುವಲ್ಲೆಲ್ಲಾ ಕೆಲಸವನ್ನು ಹುಡುಕಬಹುದು. ನಿಮ್ಮ ಆಸೆಯಂತೆ ನಗರಗಳಲ್ಲಿ, ಉಪನಗರಗಳಲ್ಲಿ ಅಥವಾ ಗ್ರಾಮೀಣ ಪ್ರದೇಶದಲ್ಲಿ ಇರುವ ಆಸ್ಪತ್ರೆಗಳಲ್ಲಿ ಕೆಲಸ ಮಾಡಬಹುದು. ನೀವು ವಿಶ್ವದ ಯಾವುದೇ ರಾಜ್ಯ ಅಥವಾ ಯಾವುದೇ ದೇಶದಲ್ಲಿ ಕೆಲಸ ಮಾಡಲು ಬಯಸುವಿರಾದರೆ ಆ ಅವಕಾಶಗಳು ನಿಮಗೆ ಲಭ್ಯವಿವೆ. ನೀವು ಸ್ವತಂತ್ರ ಸಲಹಾ ದಾದಿಯಾಗಿದ್ದರೆ ನೀವು ಅಮೆರಿಕದ ಹೆಚ್ಚಿನ ನಗರಗಳಲ್ಲಿ ಕೆಲವು ದಿನಗಳು, ವಾರಗಳು ಅಥವಾ ತಿಂಗಳುಗಳವರೆಗೆ ಕೆಲಸ ಮಾಡಲು ಪ್ರಯಾಣಿಸಬಹುದು. ತದನಂತರ ಬೇರೆ ಬೇರೆ ಸ್ಥಳಕ್ಕೆ ಹೋಗಬಹುದು. ನೀವು ಹೋದಲ್ಲೆಲ್ಲಾ ನರ್ಸಿಂಗ್ ಕೆಲಸ ಲಭ್ಯವಿರುವುದು ಮತ್ತು ಪ್ರಾಮುಖ್ಯತೆ ನಿಮ್ಮ ಗಮನಕ್ಕೆ ಬಂದೇ ಬರುತ್ತದೆ.
5. ವೃತ್ತಿಯಲ್ಲಿ ವಿಭಿನ್ನ ಆಯ್ಕೆಗಳು:
ನೀವು ಆರ್ಎನ್ ಆದ ನಂತರ ನಿಮ್ಮ ವೃತ್ತಿಜೀವನದಲ್ಲಿ ನೀವು ಅನೇಕ ರೀತಿಯಲ್ಲಿ ಕೆಲಸದಲ್ಲಿ ಭಾಗಿಯಾಗಬಹುದು. ನೀವು ನ್ಯಾಯ ವ್ಯವಸ್ಥೆಯಲ್ಲಿ ಕಾನೂನು ದಾದಿಯ ಸಲಹೆಗಾರರಾಗಿ ಅಥವಾ ಆಘಾತ ಆರೈಕೆ ಅಥವಾ ಗಾಯದ ಆರೈಕೆಗಾರರಾಗಿ ಕೆಲಸ ಮಾಡಬಹುದು. ಅಥವಾ ನೀವು ಬರಹಗಾರ, ಶಿಕ್ಷಕ ಅಥವಾ ಸಂಶೋಧಕರಾಗಿ ಕೂಡ ಕೆಲಸ ಮಾಡಬಹುದು. ನೀವು ಒಮ್ಮೆ ನರ್ಸ್ ಆದ ಬಳಿಕ ನಿಮ್ಮ ವೃತ್ತಿ ಆಯ್ಕೆ ನಿಮ್ಮ ಕೈಯಲ್ಲಿದೆ.
6. ಹೆಚ್ಚಿನ ವೇತನ ಪಡೆಯುವ ಅವಕಾಶ:
ಬಿಎಲ್‌ಎಸ್ ಪ್ರಕಾರ ದಾದಿಯರ ಸರಾಸರಿ ವೇತನ ಸುಮಾರು 50,000/- ರೂಗಳನ್ನು ಪಡೆಯಬಹುದು. ನೀವು ನರ್ಸ್ ಪ್ರಾಕ್ಟೀಸರ್ ಆಗಿದ್ದರೆ ನೀವು ಸರಾಸರಿ ವೇತನದಲ್ಲಿ 60,000/- ರೂಗಳನ್ನು ಗಳಿಸಬಹುದು. ಅಡ್ವಾನ್ಸ್ಡ್ ಪ್ರಾಕ್ಟೀಸ್ ನಲ್ಲಿ ದಾದಿಯರು ತೊಡಗಿದ್ದರೆ ಅವರು 90,000/-ರೂಗಳ ವರೆಗೆ ವೇತನವನ್ನು ಪಡೆಯಬಹುದು. ರಜಾದಿನಗಳಲ್ಲಿ ಮತ್ತು ವಾರಾಂತ್ಯಗಳಲ್ಲಿ ಕೆಲಸ ಮಾಡಲು ನೀವು ಬಯಸುವಿರಾದರೆ ನೀವು ಇನ್ನು ಹೆಚ್ಚು ಸಂಪಾದನೆಯನ್ನು ಮಾಡಬಹುದು.
7. ಎರಡನೇ ವೃತ್ತಿಯಾಗಿ ಆಯ್ಕೆಮಾಡಿಕೊಳ್ಳುವ ಅವಕಾಶ:
ಎರಡನೇ ವೃತ್ತಿಜೀವನದಲ್ಲಿ ಆಯ್ಕೆ ಮಾಡಿಕೊಳ್ಳಬಹುದಾದ ಅತ್ಯಂತ ಜನಪ್ರಿಯ ಉದ್ಯೋಗವಿದಾಗಿದೆ. ಈ ಕ್ಷೇತ್ರದಲ್ಲಿ ಉದ್ಯೋಗ ಮಾಡುವುದರಿಂದ ತುಲನಾತ್ಮಕವಾಗಿ ಉತ್ತಮ ವೇತನವನ್ನು ಪಡೆಯಬಹುದು. ತಮ್ಮ ಮೊದಲ ವೃತ್ತಿಜೀವನದಿಂದ ನಿವೃತ್ತರಾದವು ತಮ್ಮ ವೃತ್ತಿಜೀವನದ ಎರಡನೇ ಉದ್ಯೋಗವಾಗಿ ದಾದಿಯರಾಗಿ ಕೆಲಸ ಮಾಡಬಹುದು. ಆದಾಯಕ್ಕೆ ಪೂರಕವಾಗಿ ಅರೆಕಾಲಿಕ ದಾದಿಯಾಗಿ ಕೆಲಸ ಮಾಡುವ ಅನೇಕ ವೃತ್ತಿಪರರು ಇದ್ದಾರೆ.
8. ನರ್ಸಿಂಗ್ ನಲ್ಲಿ ಹಲವು ವಿಶೇಷತೆಗಳಿವೆ:
ನರ್ಸಿಂಗ್ ನಲ್ಲಿ 200ಕ್ಕೂ ಹೆಚ್ಚು ಶುಶ್ರೂಷಾ ವಿಶೇಷತೆಗಳಿವೆ. ಇದರಲ್ಲಿ ನೀವು ನಿಮ್ಮ ಆಸಕ್ತಿಗನುಗುಣವಾದ ವಿಷಯದಲ್ಲಿ ವಿಶೇಷ ಪ್ರಮಾಣೀಕರಣವನ್ನು ಪಡೆಯಬಹುದು. ನೀವು ನಿರ್ಧಿಷ್ಟ ವಿಷಯದಲ್ಲಿ ವಿಶೇಷ ಪರಿಣಿತರಾಗಿದ್ದಲ್ಲಿ ಹೆಚ್ಚಿನ ಸಂಬಳವನ್ನು ಪಡೆಯಲು ಮತ್ತು ನಿಮ್ಮ ಸೇವೆಗಳಿಗೆ ಬೇಡಿಕೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಶುಶ್ರೂಷೆಯಲ್ಲಿ ನಿಮ್ಮ ಆಸಕ್ತಿ ಏನೇ ಇರಲಿ ನಿಮಗೆ ಆಸಕ್ತಿಯಿರುವ ವಿಶೇಷತೆಗಳು ನಿಮ್ಮ ಕಣ್ಣಿಗೆ ಕಾಣಬಹುದು.
9. ವಿವಿಧ ರೋಗಿಗಳಿಗೆ ಶುಶ್ರೂಷೆ ಮಾಡುವ ಅವಕಾಶ:
ನೀವು ಒಂದು ನಿರ್ಧಿಷ್ಟ ರೀತಿಯ ರೋಗಿಯೊಂದಿಗೆ ಕೆಲಸ ಮಾಡಲು ಬಯಸುವಿರಾದರೆ ನೀವು ಅದನ್ನು ದಾದಿಯಾಗಿ ಮಾಡಬಹುದು. ಮಕ್ಕಳ, ಜೆರೊಂಟಾಲಜಿ, ನೋವು ನಿರ್ವಹಣೆ, ಗಾಯ ಮತ್ತು ಸುಡುವ ನಿರ್ವಹಣೆ, ಮನೋವೈದ್ಯಕೀಯ ಮತ್ತು ರಾಸಾಯನಿಕ ಅವಲಂಬನೆಯಲ್ಲಿ ತೊಡಗಿರುವ ವಿವಿಧ ರೋಗಿಗಳ ನಡುವೆ ಕೂಡ ಕೆಲಸ ಮಾಡಬಹುದು.
ದಾದಿಯಾಗಿರುವುದರಿಂದ ಉತ್ತಮ ಸಂಬಳ ಮತ್ತು ಬೇಡಿಕೆ ಇರುತ್ತದೆ. ಅನೇಕ ಅವಕಾಶಗಳು ಹಾಗೂ ಪ್ರಯೋಜನಗಳನ್ನುಪಡೆಯುವ ಅವಕಾಶವೂ ಸಿಗುತ್ತದೆ. ನೋಂದಾಯಿತ ದಾದಿಯಾಗಲು ನಿಮ್ಮ ಹತ್ತಿರವಿರುವ ಎಲ್ಲಾ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪರೀಕ್ಷಿಸಿಕೊಂಡು ರಿಜಿಸ್ಟರ್ ಮಾಡಿಕೊಳ್ಳಿ.


Click it and Unblock the Notifications











