6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ

By Nishmitha

ಕೇಂದ್ರ ಲೋಕ ಸೇವಾ ಆಯೋಗ ಇದೀಗ ಸದ್ಯದಲ್ಲೇ ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಲಿದೆ. ಸಿವಿಲ್ ಸರ್ವೀಸ್ ಪ್ರೆಲಿಮಿನರಿ ಪರೀಕ್ಷೆಯು ಭಾರತದ ಅತೀ ಕಷ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಇನ್ನು ಈ ಪರೀಕ್ಷೆಯ ಬರೆಯಲು 32 ವರ್ಷ ಗರಿಷ್ಟ ಅವಧಿಯಾಗಿದೆ.

6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ

ಈಗಾಗಲೇ ನೀವು 6 ಬಾರಿ ಈ ಪರೀಕ್ಷೆ ಬರೆದಿದ್ದು, ನಿಮಗೆ 32 ವರ್ಷ ಆಗಿದ್ದರೆ ಮುಂದೇನು ಮಾಡಬಹುದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಗೆ ನೀಡುತ್ತಿದೆ.

ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು!

ವಿದ್ಯಾರ್ಥಿಗಳು ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುದಾದ್ರೆ ಕನಿಷ್ಟ ಒಂದು ವರ್ಷ ಆದ್ರೂ ಓದಿಗೆ ಮೀಸಲಿಡಬೇಕು. ಹಾಗೂ 6 ಬಾರಿ ಈ ಪರೀಕ್ಷೆ ಬರೆಯುವುದು ಸುಲಭದ ಮಾತಲ್ಲ ಬದಲಿಗೆ ಈ ಪರೀಕ್ಷೆ ಬರೆಯಲು ಹೆಚ್ಚಿನ ಶ್ರಮ ಅಗತ್ಯ.

ಇನ್ನು ಈಗಾಗಲೇ 6 ಬಾರಿ ಪರೀಕ್ಷೆ ಬರೆದು ಕೂಡಾ ಫೈಲಾಗಿದ್ರೆ ಬೇಜಾರು ಆಗುವುದು ಖಂಡಿತಾ. ಹಾಗಂತೂ ಅಷ್ಟೇ ಜೀವನವಲ್ಲ. ನಿಮ್ಮ ಜ್ಞಾನ ನಿಮ್ಮ ಬಳಿ ಹಾಗೆಯೇ ಇರುತ್ತದೆ. ನಿಮ್ಮ 32 ವರ್ಷದಲ್ಲೂ ಸಿವಿಲ್ ಸರ್ವೀಸ್ ಎಕ್ಸಾಂ ಫೈಲಾದ್ರೆ ಮುಂದೇನು ಮಾಡಿ ಎಂದು ಕೆರಿಯರ್ ಇಂಡಿಯಾ ನಿಮಗೆ ಇಲ್ಲಿ ಸಲಹೆ ನೀಡುತ್ತಿದೆ.

ಕಾಲೇಜಿನಲ್ಲಿ ಶಿಕ್ಷಣ ಯಾಕೋ ಆಗಿ ಬರುತ್ತಿಲ್ವಾ... ಹಾಗಿದ್ರೆ ಈ ರೀತಿಯಾಗಿ ನಿಮ್ಮ ಕೆರಿಯರ್ ರೂಪಿಸಿ

ಟೀಚಿಂಗ್:

ಇದು ಹೆಚ್ಚಿನ ಗೌರವಾನ್ವಿತ ಹುದ್ದೆ. ಈ ಹುದ್ದೆಯನ್ನ ಯಾವುದೇ ಕಷ್ಟವಿಲ್ಲದೇ ನೀವು ನಿಭಾಯಿಸಬಹುದು. ಹಲವಾರು ಕೋಚಿಂಗ್ ಸೆಂಟರ್ ಗಳಲ್ಲಿ ನಿಮಗೆ ಟೀಚಿಂಗ್ ಗೆ ಅವಕಾಶವಿರುತ್ತದೆ. ಇನ್ನು ಸಿವಿಲ್ ಸರ್ವೀಸ್ ಸಬ್‌ಜೆಕ್ಟ್ ಅನುಸಾರ ನೀವು ಸಬ್‌ಜೆಕ್ಟ್ ಎಕ್ಸ್‌ಪರ್ಟ್ ಆಗಿಯೂ ಟೀಚಿಂಗ್ ವೃತ್ತಿ ಪ್ರಾರಂಭಿಸಬಹುದು.

ವಿದೇಶದಲ್ಲಿ ಉನ್ನತ ಸ್ಟಡಿ:

ಸಿವಿಲ್ ಸರ್ವೀಸ್ ಪರೀಕ್ಷೆಗಾಗಿ ಅದೆಷ್ಟೋ ವಿದ್ಯಾರ್ಥಿಗಳು ಮಾಸ್ಟರ್ ಡಿಗ್ರಿ ಪಡೆಯದೇ ಇರುತ್ತಾರೆ. ಹಾಗಾಗಿ ಸಿವಿಲ್ ಸರ್ವೀಸ್ ಪರೀಕ್ಷೆ ನಿಮ್ಮಿಂದ ಪಾಸು ಮಾಡಲು ಸಾಧ್ಯವಾಗದೇ ಇದ್ದರೆ ನೋ ವರಿ ಯುಎಸ್ಎ ಇಲ್ಲ ಯುಕೆ ಗೆ ಪಯಣ ಬೆಳೆಸಿ. ವಿದೇಶಕ್ಕೆ ತೆರಳಿ ಉನ್ನತ ಶಿಕ್ಷಣಕ್ಕೆ ಗಮನಕೊಡಿ.

ಯುಜಿಸಿ ನೆಟ್ ಪರೀಕ್ಷೆ... ಕೊನೆ ಗಳಿಗೆ ತಯಾರಿ ಹೇಗೆ?

ಇನ್ನು ಅಭ್ಯರ್ಥಿಗಳು ವಿದೇಶಿ ಶಿಕ್ಷಣ ಸಂಸ್ಥೆಗಳು ನಡೆಸುವ ಪ್ರವೇಶ ಪರೀಕ್ಷೆಯನ್ನ ಸುಲಭವಾಗಿ ಪಾಸ್ ಮಾಡಬಹುದು. ನಿಮ್ಮ ಸಿವಿಲ್ ಸರ್ವೀಸ್ ತರಭೇತಿಯ ಜ್ಞಾನದಿಂದ ಗ್ರಾಜ್ಯುಯೆಟ್ ರೆಕಾರ್ಡ್ ಎಕ್ಸಾಮಿನೇಶನ್ ಮತ್ತು ಗ್ರಾಜ್ಯುಯೆಟ್ ಮ್ಯಾನೇಜ್‌ಮೆಂಟ್ ಅಡ್ಮಿಶನ್ ಪರೀಕ್ಷೆಯನ್ನ ಪಾಸು ಮಾಡಬಹುದು.

ಸ್ಟೇಟ್ ಪಬ್ಲಿಕ್ ಸರ್ವೀಸ್ ಕಮಿಷನ್:

ಸ್ಟೇಟ್ ಪಬ್ಲಿಕ್ ಸರ್ವೀಸ್ ಕಮಿಷನ್ ಅಲ್ಲಿರುವ ಹುದ್ದೆಗಳು ಕೂಡಾ ತುಂಬಾ ಜನಪ್ರಿಯವಾದ ಹುದ್ದೆಗಳು. ಇಲ್ಲಿ ಯಾವುದೇ ಹುದ್ದೆಗಳಿಗೆ ವಯೋಮಿತಿ ನಿರ್ಭಂದನೆ ಇಲ್ಲ. ಸಿವಿಲ್ ಸರ್ವೀಸ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಸುಲಭವಾಗಿ ಈ ಪರೀಕ್ಷೆ ಪಾಸ್ ಮಾಡುತ್ತಾರೆ. ಯಾಕೆಂದ್ರೆ ಇದರ ಸಿಲೇಬಸ್ ಹಾಗೂ ಸಿವಿಲ್ ಸರ್ವೀಸ್ ಪರೀಕ್ಷೆಯ ಸಿಲೇಬಸ್ ಸ್ವಲ್ಪ ಸಿಮಿಲರ್ ಆಗಿರುತ್ತದೆ.

ರಿಜೆಕ್ಟ್ ಪದ ಕೇಳಿ ಸಾಕಾಯಿತಾ... ನೋ ವರಿ ಈ ಪದದಿಂದ ಏನೆಲ್ಲಾ ಲಾಭವಿದೆ ಗೊತ್ತಾ?

ಬರವಣಿಗೆ:

ಹೌದು ಸಿವಿಲ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಎಲ್ಲಾ ಕ್ಷೇತ್ರದ ಬಗ್ಗೆಯೂ ಜ್ಞಾನ ಹೊಂದಿರುತ್ತಾರೆ. ಅವರು ಯಾವ ಸಬ್‌ಜೆಕ್ಟ್ ಆಯ್ಕೆ ಮಾಡಿಕೊಂಡಿರುತ್ತಾರೋ ಅದರ ಬಗ್ಗೆ ಹೆಚ್ಚು ಜ್ಞಾನ ಸಂಪಾದಿಸಿರುತ್ತಾರೆ. ಅಂತಹ ಅಭ್ಯರ್ಥಿಗಳು ಅವರ ಮೇಜರ್ ಸಬ್‌ಜೆಕ್ಟ್ ಬಗ್ಗೆ ಬರೆಯುವ ಸಾಮರ್ಥ್ಯ ಹೊಂದಿರುತ್ತಾರೆ. ಹಾಗಾಗಿ ಅಭ್ಯರ್ಥಿಗಳು ಮ್ಯಾಗಜಿನ್, ಅಥವಾ ಕಾರ್ಪೋರೇಟೀವ್ ಕಂಪನಿಗಳಿಗೆ ಫ್ರೀಲೈನ್ಸರ್ ಆಗಿ ಕೆಲಸ ಕೂಡಾ ಮಾಡಬಹುದು

ಪದವಿ ಇಲ್ಲಂದ್ರೂ ಪರವಾಗಿಲ್ಲ... ಈ ವೃತ್ತಿ ನಿಮ್ಮದಾಗಿಸಿದ್ರೆ ಕೈ ತುಂಬಾ ಹಣ!

For Quick Alerts
ALLOW NOTIFICATIONS  
For Daily Alerts

    English summary
    The Union Public Service Commission (UPSC) is all set to declare the Civil Services preliminary examination results soon. Clearing India's toughest examination, Civil Services, is a gruelling task. A candidate can appear for the exam only six times in their lives or until the age of 32. However, the number of attempts for OBC candidates are nine and unlimited for candidates belonging to SC and ST castes.

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more