ಕಾಲೇಜು ಲೈಫ್ ಮುಗಿದ ಬಳಿಕ ಮುಂದೇನು...?

ನಮ್ಮ ಜೀವನದಲ್ಲಿ ಕಾಲೇಜು ಜೀವನ ಒಂದು ಬೆಸ್ಟ್ ಜೀವನ. ಎಲ್ಲಾ ಚಿಂತೆಗಳನ್ನ ಮರೆತು, ನಾವು ನಮ್ಮ ಗುರಿಯನ್ನ ತಲುಪುವ ಉತ್ಸಾಹದಲ್ಲಿ ಇರುತ್ತೇವೆ

ನಮ್ಮ ಜೀವನದಲ್ಲಿ ಕಾಲೇಜು ಜೀವನ ಒಂದು ಬೆಸ್ಟ್ ಜೀವನ. ಎಲ್ಲಾ ಚಿಂತೆಗಳನ್ನ ಮರೆತು, ನಾವು ನಮ್ಮ ಗುರಿಯನ್ನ ತಲುಪುವ ಉತ್ಸಾಹದಲ್ಲಿ ಇರುತ್ತೇವೆ. ಫನ್, ಸ್ನೇಹಿತರು ಹಾಗೂ ವಿದ್ಯಾಭ್ಯಾಸ ಇವೆಲ್ಲಾ ನಮ್ಮ ಜೀವನದ ಬೆಸ್ಟ್ ಕ್ಷಣಗಳಾಗಿರುತ್ತದೆ. ಆದರೆ ಕಾಲೇಜು ಜೀವನ ಮುಗಿದ ತಕ್ಷಣ ಏನು ಮಾಡುವುದು ಎಂದು ನೀವು ಯಾವತ್ತಾದ್ರೂ ಯೋಚಿಸಿದ್ದೀರಾ...?

ಕಾಲೇಜು ಲೈಫ್ ಮುಗಿದ ಬಳಿಕ ಮುಂದೇನು...?

ಹೆಚ್ಚಿನ ವಿದ್ಯಾರ್ಥಿಗಳು ಅಯ್ಯೋ ಕಾಲೇಜು ಲೈಫ್ ಮುಗಿಯಿತು ಎಂದು ಚಿಂತಿಸುತ್ತಾರೆ ವಿನಾಃ ಮುಂದೇನು ಮಾಡಬಹುದು ಎಂಬ ಐಡಿಯಾ ಕೂಡಾ ಮಾಡಿಕೊಂಡಿರಲ್ಲ. ನೀವು ಅಂತಹವರಲ್ಲಿ ಒಬ್ಬರಾಗಬೇಡಿ. ನಿಮಗಾಗಿ ಕಾಲೇಜು ಮುಗಿದ ನಂತರ ಏನೆಲ್ಲಾ ಮಾಡಬಹುದು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

ಕಾಲೇಜು ಮುಗಿದ ನಂತರ ಏನೆಲ್ಲಾ ಮಾಡಬಹುದು ಎಂದು ಈ ಕೆಳಗೆ ನೀಡಲಾಗಿದೆ

ಹವ್ಯಾಸ ಪ್ರಾರಂಭಿಸಿ:

ಕಾಲೇಜಿನ ಕೊನೆಯ ಪರೀಕ್ಷೆ ಫಲಿತಾಂಶಕ್ಕೆ ಕಾಯುತ್ತಿದ್ದೀರಾ, ಹಾಗಿದ್ರೆ ಜತೆಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗೂ ತಯಾರಿ ಮಾಡಿಕೊಳ್ಳಿ. ಜತೆಗೆ ಯಾವುದಾದ್ರೂ ಹವ್ಯಾಸ ಪ್ರಾರಂಭಿಸಿ. ಮುಂದೆ ಭವಿಷ್ಯದಲ್ಲಿ ನಿಮ್ಮ ಕೆರಿಯರ್ ಗೆ ಸಹಾಯಕವಾಗುವಂತಹ ಹವ್ಯಾಸ ರೂಢಿಸಿಕೊಳ್ಳಿ.

ಬೇರೆ ಆಯ್ಕೆಗಳತ್ತ ಆಸಕ್ತಿ ತೋರಿಸಿ:

ಕೆರಿಯರ್ ಗೆ ಸಹಾಯಕವಾಗುವಂತಹ ಹಲವಾರು ಕೋರ್ಸ್ ಗಳು ಇದೀಗ ಲಭ್ಯವಿದೆ. ನಿಮಗೆ ಸರಿಯಾದ ಕೋರ್ಸ್ ಆಯ್ಕೆ ಮಾಡಿಕೊಂಡು, ಸ್ಟಡಿ ಮುಂದುವರೆಸಿ. ಇದುವರೆಗೆ ಕಾಲೇಜಿನಲ್ಲಿ ಕಲಿತಿರುವುದಕ್ಕೆ ಹತ್ತಿರವಿರುವ ಕೋರ್ಸ್ ಮಾಡುವುದಕ್ಕಿಂತ ಬೇರೆ ಬೇರೆ ಫೀಲ್ಡ್‌ ಕೋರ್ಸ್ ಮಾಡುವುದು ಬೆಸ್ಟ್. ಇದರಿಂದ ನಿಮಗೆ ಮುಂದೆ ಹೆಚ್ಚಿನ ಕೆರಿಯರ್ ಆಯ್ಕೆ ಸಿಗುವುದು.

ಎನ್‌ಜಿಓ ಜತೆ ಕೆಲಸ ಮಾಡಿ:

ನಿಮ್ಮ ಬಳಿ ತುಂಬಾ ಟೈಂ ಇದ್ದರೆ ಏನಾದ್ರೂ ಒಳ್ಳೆಯ ಕೆಲಸಕ್ಕೆ ಕೈ ಹಾಕಿ. ಎನ್‌ಜಿಓ ಜತೆ ಕೆಲಸ ಮಾಡಿದ್ರೆ ನಿಮಗೇ ಒಂದು ರೀತಿಯ ಸಂತೃಪ್ತಿ ಸಿಗುವುದು ಮಾತ್ರವಲ್ಲ, ನಿಮ್ಮ ಮಾನವೀಯತೆ ವ್ಯಕ್ತವಾಗಲು ಒಂದು ವೇದಿಕೆ ದೊರೆತಂತ್ತೆ ಆಗುತ್ತದೆ. ದೊಡ್ಡ ದೊಡ್ಡ ಕಂಪನಿಗಳಿಗೆ ಕೆಲಸಕ್ಕೆ ಅರ್ಜಿ ಹಾಕಿದಾಗ ಇಲ್ಲಿನ ಅನುಭವ ನಿಮಗೆ ಸಹಾಯಕ್ಕೆ ಬರುವುದು.

ಗ್ರಂಥಾಲಯದಲ್ಲಿ ಕಾಲಕಳೆಯಿರಿ:

ನಿಮ್ಮ ಫೇವರೆಟ್ ಸಬ್‌ಜೆಕ್ಟ್ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ಮಾಡಿ. ಅದಕ್ಕಾಗಿಯೇ ಗ್ರಂಥಾಲಯಕ್ಕೆ ಹೋಗಿ ಅಲ್ಲಿ ಒಂದೇ ಸಬ್‌ಜೆಕ್ಟ್ ಬಗ್ಗೆ ಹಲವಾರು ಪುಸ್ತಕಗಳು ಲಭ್ಯವಿದೆ, ಪುಸ್ತಕಗಳನ್ನ ಖರೀದಿಸಿ ಓದಿ. ಜ್ಞಾನ ವೃದ್ಧಿಸಿಕೊಳ್ಳಿ.

ಶಾರ್ಟ್ ಟರ್ಮ್ ಕೋರ್ಸ್ ಮಾಡಿ:

ಈಗಂತೂ ಹಲವಾರು ಕೋರ್ಸ್ ಗಳು ಲಭ್ಯವಿದೆ. ನಿಮ್ಮ ಕೆರಿಯರ್ ಗೆ ಸಂಬಂಧಪಡುವಂತಹ ಕೋರ್ಸ್ ಗಳನ್ನ ಆಯ್ಕೆ ಮಾಡಿಕೊಂಡು ಸ್ಟಡಿ ಮಾಡಿ ಯಶಸ್ಸು ಗಳಿಸಿ. ಇನ್ನು ಈ ಕೋರ್ಸ್ ಗಳು ಕೂಡಾ ಎರಡು ಇಲ್ಲ ಮೂರು ತಿಂಗಳ ಅವಧಿಯ ಕೋರ್ಸ್ ಗಳಾಗಿದ್ರೆ ಬೆಸ್ಟ್.

More News  

For Quick Alerts
ALLOW NOTIFICATIONS  
For Daily Alerts

English summary
Life starts when college is over, so its time for you to buckle up and aim for the stars. because nothing is impossible untill you feel it is
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+