ಆಫೀಸ್‌ನಲ್ಲಿ ಕೆಲಸ ಮಾಡುದಕ್ಕಿಂತ ಮನೆಯಲ್ಲಿ ಕುಳಿತು ಮಾಡಿ ಕೆಲಸ..ಯಾಕೆ ಗೊತ್ತಾ?

ಇದೀಗ ಹೊಸ ವರ್ಕಿಂಗ್ ವಿಧಾನ ಪ್ರಾರಂಭವಾಗಿದೆ. ಮನೆಯಲ್ಲಿ ಇದ್ದುಕೊಂಡೇ ಕೆಲಸ ಮಾಡಬಹುದು. ನಿಮಗೆ ಆಶ್ಚರ್ಯ ಆಗಬಹುದು. ಆದ್ರೆ ನಾವು ಹೇಳುತ್ತಿರುವುದು ನಿಜ. ಮನೆಯಿಂದ ಕೆಲಸ ಮಾಡಿದ್ರೆ ಏನೆಲ್ಲಾ ಪ್ರಯೋಜನಗಳಿವೆ ಎಂದು ಮುಂದಕ್ಕೆ ಓದಿ

By Kavya

ಟ್ರಾಫಿಕ್ ಮಧ್ಯೆ, ಧೂಳು ಬಿಸಿಲಿನ ಧಗೆಗೆ ದಣಿದು ನೀವು ಆಫೀಸಿಗೆ ಬಂದು ಕೆಲಸ ಮಾಡುವ ಹೊತ್ತಿಗೆ ನಿಮ್ಮ ಎನರ್ಜಿ ಎಲ್ಲಾ ಹೋಗಿರುತ್ತೆ. ಅಷ್ಟೇ ಅಲ್ಲ ಆ ಮೇಲೆ ಕೆಲಸ ಮಾಡಲು ನಿಮಗೆ ಕಾಂಸಟ್ರೇಂಟ್ ಇರದೇ ಮತ್ತೆ ಉನ್ನತ ಅಧಿಕಾರಿಗಳಿಂದ ಉಗಿಸಿಕೊಳ್ಳುತ್ತೀರಾ. ಹೌದು ಇದೆಲ್ಲಾ ಪ್ರತಿದಿನ ಕಚೇರಿಗೆ ಅಲಿದು ಕೆಲಸ ಮಾಡುವವರ ಗೋಳಾಗಿದೆ.

ಮನೆಯಲ್ಲಿ ಕುಳಿತು ಕೆಲಸ... ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹಾಗೆಯೇ ಕೊರೊನಾ ಭೀತಿಯಿಂದಾಗಿ ದೇಶದೆಲ್ಲೆಡೆ ಅನೇಕ ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಹೀಗಿರುವಾಗ ಮನೆಯಿಂದಲೇ ಕೆಲಸ ಮಾಡೋದ್ರಿಂದ ತುಂಬಾ ಪ್ರಯೋಜನಗಳಿವೆ. ನಿಮಗೆ ಆಶ್ಚರ್ಯ ಆಗಬಹುದು. ಆದ್ರೆ ನಾವು ಹೇಳುತ್ತಿರುವುದು ನಿಜ. ಮನೆಯಿಂದ ಕೆಲಸ ಮಾಡಿದ್ರೆ ಏನೆಲ್ಲಾ ಪ್ರಯೋಜನಗಳಿವೆ ಎಂದು ಮುಂದಕ್ಕೆ ಓದಿ.

ನಿಮ್ಮ ಸಮಯ ಹಾಗೂ ಎನರ್ಜಿ ಉಳಿಯುತ್ತದೆ:

ನೀವು ಮನೆಯಿಂದ ಕೆಲಸ ಮಾಡಿದ್ರೆ ನಿಮ್ಮ ಸಮಯ ಉಳಿಯುತ್ತದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹಾಕಿಕೊಳ್ಳುವ ಗೊಂದಲ ತಪ್ಪುತ್ತದೆ. ಟ್ರಾಫಿಕ್ ಚಿಂತೆಯಿಲ್ಲದೇ ಆರಾಮವಾಗಿ ಕೆಲಸ ಮಾಡಬಹುದು.

ಫ್ಯಾಮಿಲಿಗೆ ಜತೆ ಕಾಲ:

ಯಾವ ಟೈಂ ಬೇಕಾದ್ರೂ ಫ್ಯಾಮಿಲಿಯನ್ನ ನೋಡಿಕೊಳ್ಳಬಹುದು. ನೀವು ಮನೆಯಲ್ಲೇ ಕೆಲಸ ಮಾಡುವುದರಿಂದ ಮಕ್ಕಳ ಜತೆ ಹಾಗೂ ಹೆತ್ತವರ ಜತೆ ಕೂಡಾ ಆರಾಮವಾಗಿ ಇರಬಹುದು. ಅವರ ಜತೆ ಕೂಡಾ ಕಾಲ ಕಳೆಯಬಹುದು.

ರಿಲಾಕ್ಸ್ ಆಗಿ ಕೆಲಸ:

ಫಾರ್ಮಲ್ ಡ್ರೆಸ್ ಧರಿಸಿ, ಬೆಳಗ್ಗಿನಿಂದ ಸಂಜೆವರೆಗೆ ಒಂದೇ ಚೇರ್ ನಲ್ಲಿ ಕುಳಿತು ಕೆಲಸ ಮಾಡುವ ಅಗತ್ಯವಿಲ್ಲ. ಬದಲಿಗೆ ನಿಮಗೆ ಬೇಕಾದ ಫೋಸ್ ನಲ್ಲಿ ಆರಾಮವಾಗಿ ಕುಳಿತು ರಿಲಾಕ್ಸ್ ಆಗಿ ಕೆಲಸ ಮಾಡಬಹುದು.

ಒತ್ತಡ ಇಲ್ಲದೇ ಕೆಲಸ:

ಮನೆಯಲ್ಲಿ ಕುಳಿತು ಕೆಲಸ ಮಾಡುವುದಾದ್ರೆ ಇನ್ನೊಂದು ಬೆನಿಫಿಟ್ ಎಂದ್ರೆ ಒತ್ತಡವಿರುವುದಿಲ್ಲ. ನೀವು ನಿಮಗೆ ಅನುಕೂಲಕರವಾಗುವ ಟೈಂನಲ್ಲಿ ಕೆಲಸ ಪ್ರಾರಂಭಿಸಿ, ಮುಗಿಸಬಹುದು. ಒತ್ತಡ ಹಾಗೂ ಯಾವುದೇ ಟಾರ್ಗೇಟ್ ಇಲ್ಲದೇ ನೀವು ಆರಾಮವಾಗಿ ಕೆಲಸ ಮಾಡಿಮುಗಿಸ ಬಹುದು.

ಸಂಪಾದನೆಯೂ ಚೆನ್ನಾಗಿರುತ್ತೆ:

ಹೆಚ್ಚಿನವರು ಏನು ತಿಳಿದುಕೊಂಡಿದ್ದಾರೆ ಎಂದರೆ ಮನೆಯಲ್ಲಿ ಕುಳಿತು ಸಂಪಾದನೆ ಮಾಡಿದ್ರೆ ಅಷ್ಟೊಂದು ದುಡಿಯಲು ಸಾಧ್ಯವಿಲ್ಲ ಎಂದು. ಅಂದ್ರೆ ಸ್ಯಾಲರಿ ಚೆನ್ನಾಗಿ ಸಿಗುವುದಿಲ್ಲ ಎಂದು. ಆದ್ರೆ ಅದು ನಿಮ್ಮದು ತಪ್ಪು ಕಲ್ಪನೆ. ಮನೆಯಲ್ಲಿ ಕುಳಿತು ಕೆಲಸ ಮಾಡುವವರು ಕೂಡಾ ತುಂಬಾ ಹಣ ಸಂಪಾದಿಸುತ್ತಾರೆ.

ಇತರ ಕೆಲಸಗಳಿಗೆ ಸಮಯ:

ಕಚೇರಿಗೆ ಹೋಗಿ ಕೆಲಸ ಮಾಡುವವರು ಹೆಚ್ಚಿನ ಒತ್ತಡದಿಂದಾಗಿ ಫ್ಯಾಮಿಲಿ ಜತೆ ಕಾಲಕಳೆಯಲು ಅವರಿಗೆ ಸಮಯಯಿಲ್ಲದಂತಾಗಿದೆ. ಹಾಗಾಗಿ ಅವರು ಫ್ಯಾಮಿಲಿಯನ್ನ ಕಡೆಗಣಿಸುತ್ತಾರೆ. ಆದ್ರೆ ನೀವು ಮನೆಯಲ್ಲಿ ಕುಳಿತು ಕೆಲಸ ಮಾಡುವವರಾದ್ರೆ ಫ್ಯಾಮಿಲಿ ಜತೆ ಕೂಡಾ ಕಾಲಕಳೆಯಬಹುದು.

ನೋ ಪಾಲಿಟಿಕ್ಸ್, ನೋ ಗಾಸಿಪ್ಸ್:

ಆಫೀಸನಲ್ಲಿ ಕೆಲಸ ಮಾಡಿದ್ರೆ ಪಾಲಿಟಿಕ್ಸ್ ಗೆ ಎದುರಿಸುವ ಸಂಭವ ಬರಬಹುದು. ಇಲ್ಲ ಗಾಸಿಪ್ ಭೂತ ನಿಮ್ಮನ್ನ ಸುತ್ತುಕೊಳ್ಳಬಹುದು. ಆದ್ರೆ ನಿವು ಮನೆಯಲ್ಲಿ ಕೆಲಸ ಮಾಡಿದ್ರೆ ಇದ್ಯಾಯ ಸಮಸ್ಯೆ ಕೂಡಾ ನಿಮ್ಮನ್ನ ಕಾಡುವುದಿಲ್ಲ.

More News  

For Quick Alerts
ALLOW NOTIFICATIONS  
For Daily Alerts

English summary
you will get more benifits from Work from home. you don't need to let go your personal commitments like looking after your beloved family, taking care of your kids.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+