ಈ 5 ಕಾರಣಗಳಿಗಾಗಿ ಮಹಿಳೆಯರು ಜಾಬ್ ಬದಲಿಸುತ್ತಾ ಇರುತ್ತಾರೆ

ನೌಕರಿ ವಿಷಯದಲ್ಲಿ ನಮಗೆ ಯಾವತ್ತೂ ಸಂತೃಪ್ತಿ ಎಂಬುವುದು ಇರುವುದಿಲ್ಲ. ಹುಡುಗರು ಹೆಚ್ಚಾಗಿ ಆಗಾಗ ಕೆಲಸ ಬದಲು ಮಾಡುತ್ತಾ ಇರುತ್ತಾರೆ.

By Kavya

ನೌಕರಿ ವಿಷಯದಲ್ಲಿ ನಮಗೆ ಯಾವತ್ತೂ ಸಂತೃಪ್ತಿ ಎಂಬುವುದು ಇರುವುದಿಲ್ಲ. ಹುಡುಗರು ಹೆಚ್ಚಾಗಿ ಆಗಾಗ ಕೆಲಸ ಬದಲು ಮಾಡುತ್ತಾ ಇರುತ್ತಾರೆ. ಆದ್ರೆ ಈ ವಿಷಯದಲ್ಲಿ ಬರೀ ಹುಡುಗರು ಮಾತ್ರವಲ್ಲದೆ ಹುಡುಗಿಯರು ಕೂಡಾ ಒಂದು ಕೈ ಮೇಲು. ಹುಡುಗಿಯರು ಕೂಡಾ ಆಗಾಗ ಕೆಲಸ ಬದಲು ಮಾಡುತ್ತಾ ಇರುತ್ತಾರೆ. ಹುಡುಗಿಯರು ಒಂದೇ ಕೆಲಸದಲ್ಲಿ ತುಂಬಾ ದಿನ ಇರುವುದಿಲ್ಲ. ಅಸಲಿಗೆ ಅವರು ಏನಾದ್ರೂ ಬದಲಾವಣೆ ಆದ್ರೆ ಸಾಕು ಕೂಡಲೇ ಜಾಬ್ ಚೇಂಜ್ ಮಾಡುತ್ತಾರೆ.

ಈ 5 ಕಾರಣಗಳಿಗಾಗಿ ಮಹಿಳೆಯರು ಜಾಬ್ ಬದಲಿಸುತ್ತಾ ಇರುತ್ತಾರೆ

ಯಾವೆಲ್ಲಾ ಕಾರಣಕ್ಕೆ ಹುಡುಗಿಯರು ಜಾಬ್ ಚೇಂಜ್ ಮಾಡುತ್ತಾರೆ ಎಂದು ಮುಂದಕ್ಕೆ ಓದಿ

ಸ್ಯಾಲರಿ:

ಪ್ರತಿಯೊಬ್ಬರಿಗೂ ಕೆಲಸ ಬೇಕಾಗಿದೆ. ಅಷ್ಟೇ ಅಲ್ಲ ಪ್ರತೀ ವರ್ಷ ಕೆಲಸದಲ್ಲಿ ಒಂದು ಹೆಜ್ಜೆ ಮೇಲೆ ಮೇಲೆ ಹೋಗಬೇಕೆಂದು ಬಯಸುತ್ತಾರೆ. ಅದರರ್ಥ ಸ್ಯಾಲರಿ ಹೆಚ್ಚಾಗಬೇಕೆಂಬ ಆಶಯ. ೮೦ ಹಾಗೂ ೯೦ ರ ದಶಕದಲ್ಲಿ ಹುಟ್ಟಿದ ಜನರು ಹೆಚ್ಚಾಗಿ ಸ್ಯಾಲರಿಗಾಗಿ ಕೆಲಸ ಬದಲು ಮಾಡುತ್ತಾ ಇರುತ್ತಾರೆ. ಹೆಚ್ಚಿನ ಮಹಿಳೆಯರು ವೇತನ ಹೆಚ್ಚಳದ ಬದಲಿಗೆ, ಅವರು ಪರ್ಯಾಯ ಪ್ರಯೋಜನಗಳಿಗೆ ಆದ್ಯತೆ ನೀಡುತ್ತಾರೆ. ಮಹಿಳೆಯರ ಮೇಲೆ ಜವಬ್ದಾರಿ ಹೆಚ್ಚಿರುತ್ತದೆ ಹಾಗಾಗಿ ಸರಿಯಾದ ಸ್ಯಾಲರಿ ಸಿಗುವ ತನಕ ಅವರು ಹುದ್ದೆ ಬದಲಿಸುತ್ತಾ ಇರುತ್ತಾರೆ.

ಕುಟುಂಬ:

ಕೆಲವೊಮ್ಮೆ ಹುಡುಗಿಯರು ಕೆಲಸ ಬಿಡಲು ಅವರ ಕುಟುಂಬ ಕೂಡಾ ಕಾರಣವಾಗಿರುತ್ತದೆ. ಇಲ್ಲಿ ಹುಡುಗಿ ಕೇವಲ ತನಗೆ ಇಷ್ಟ ಇರುವ ಕಂಪನಿಯಲ್ಲಿ ಮಾತ್ರ ಕೆಲಸ ಮಾಡುವುದಲ್ಲ, ತನ್ನ ಕುಟುಂಬಸ್ಥರಿಗೂ ಇಷ್ಟವಾಗುವಂತಹ ಕಂಪನಿಯಲ್ಲಿ ಕೆಲಸ ಮಾಡಲು ಬಯಸುತ್ತಾರೆ.

ಬಾಸ್:

ಹುಡುಗಿಯರು ಕೆಲಸ ಬಿಡಲು ಇದೂ ಒಂದು ಕಾರಣವಾಗಿದೆ. ಕೆಲವೊಮ್ಮೆ ಮಹಿಳಾ ಬಾಸ್‌ಗಳಿದ್ದರೆ, ಅವರು ಹೆಚ್ಚು ಹೆಚ್ಚ ಚ್ವರೆ ಮಾಡುತ್ತಾರೆ, ಅಷ್ಟೆ ಅಲ್ಲ ಪುರುಷ ಬಾಸ್‌ಗಳಿದ್ದರೆ ಅವರು ನಿಮ್ಮ ಜತೆ ಅಸಭ್ಯವಾಗಿ ಬರ್ತಿಸುವ ಸಭವವಿದೆ.

ಕೆಲಸದ ಅವಧಿ:

ಪ್ರತಿ ಆಫೀಸ್‌ನಲ್ಲಿ ಮಹಿಳೆಯರು ಕೆಲಸದ ಅವಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಅತೀಯಾದ ಅವಧಿ ವರೆಗೂ ಕೆಲಸ ಮಾಡಿಸಿದ್ರೆ ಹುಡುಗಿಯರು ಅಂತಹ ಜಾಗದಲ್ಲಿ ಇರುವುದಿಲ್ಲ. ಇಲ್ಲ ರಜಾದಿನಗಳಲ್ಲಿಯೂ ಕೆಲಸ ಮಾಡಿಸಿದ್ರೆ ಅದು ಕೂಡಾ ಯಾವುದೇ ಇನ್ನಿತ್ತರ ಸೌಲಭ್ಯನೀಡದೇ ಮಾಡಿಸಿದ್ರೆ ಹುಡುಗಿಯರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ

ದೂರ:

ಮನೆಯಿಂದ ಅತೀ ಹೆಚ್ಚು ದೂರದಲ್ಲಿ ದುಡಿಯಲು ಹೆಣ್ಮಕ್ಕಳು ಇಷ್ಟಪಡುವುದಿಲ್ಲ. ಯಾಕೆಂದ್ರೆ ಆಫೀಸ್‌ನಿಂದ ಮನೆಗೆ ಹೋದ ಬಳಿಕವೂ ಹೆಣ್ಮಕ್ಕಳಿಗೆ ಮನೆಯಲ್ಲಿ ಕೆಲಸವಿರುತ್ತದೆ. ಮನೆಯಲ್ಲೂ ಅವರು ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಹುಡುಗಿಯರು ತಾವು ಕೆಲಸ ಮಾಡುತ್ತಿರುವ ಜಾಗ ಮನೆಯಿಂದ ತುಂಬಾ ದೂರವಿದ್ದರೆ ಅಂತಹ ಕಡೆ ಕೆಲಸ ಮಾಡಲು ಇಷ್ಟಪಡುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
Job Change is a normal parto of life. There is no avoiding it. And Girls seem to thrive on change. they are always open to new ideas and better ways to do anything. thats why girls choose their like pver a career.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X