ತಮ್ಮ ಮನೆಯ ವಾರ್ಡ್ ರೋಬ್ ಇಲ್ಲ ಕಪಾಟಿನಲ್ಲಿ ಸ್ಟೈಲೀಶ್ ಹಾಗೂ ಟ್ರೆಂಡಿ ಬಟ್ಟೆಗಳನ್ನ ಇಡಬೇಕೆಂದು ಪ್ರತಿಯೊಬ್ಬರು ಬಯಸುತ್ತಾರೆ. ಹುಡುಗ ಇರಲಿ ಇಲ್ಲ ಹುಡುಗಿ ಇರಲಿ ಫ್ಯಾಶನ್ ಎಂಬ ರೇಸ್‌ನಲ್ಲಿ ಸದಾ ಮುಂದಿರಲು ಬಯಸುತ್ತಾರೆ ವಿನಾಃ ಹಿಂದಿರಲು ಅಲ್ಲ. ಅದಕ್ಕಾಗಿ ಪ್ರತಿಯೊಂದು ಟ್ರೆಂಡನ್ನ ಕೂಡಾ ಇಂದಿನ ಜನತೆ ಚಾಚೂ ತಪ್ಪದೇ ಫಾಲೋ ಮಾಡುತ್ತಿದೆ.

ಸಮಯ ಉಳಿಸಲು:
ಸಕ್ಸಸ್ ಫುಲ್ ವ್ಯಕ್ತಿಗಳ ಪ್ರತಿ ದಿನದ ಶೆಡ್ಯುಲ್ ತುಂಬಾ ಬ್ಯುಸಿ ಇರುತ್ತದೆ. ಇವರು ಬಟ್ಟೆ ಹುಡುಕಲು ಇಲ್ಲ ಸೆಲೆಕ್ಟ್ ಮಾಡಲು ಹೆಚ್ಚು ಸಮಯ ತೆಗೆದುಕೊಂಡರೆ, ಉಳಿದ ಕೆಲಸಗಳಿಗೆ ಇವರಿಗೆ ಸಮಯದ ಅಭಾವ ಉಂಟಾಗುತ್ತದೆ. ಹಾಗಾಗಿ ಸಕ್ಸಸ್ ಫುಲ್ ವ್ಯಕ್ತಿಗಳು ಬಟ್ಟೆ ವಿಚಾರದಲ್ಲಿ ಈ ಫಾರ್ಮುಲ ಬಳಸುತ್ತಾರೆ.
ಕಾಲೇಜಿನಲ್ಲಿ ಇಂತಹ ವಿದ್ಯಾರ್ಥಿಗಳಿಂದ ದೂರವಿರುವುದು ಬೆಸ್ಟ್ !
ಟೆನ್ಶನ್ ಕಡಿಮೆ ಮಾಡಲು:
ನಿಮ್ಮ ಬಳಿ ಹೆಚ್ಚಿನ ಉಡುಗೆ ಇದ್ದಾಗ ಯಾವ ಉಡುಗೆ ಧರಿಸುವುದು ಎಂದು ಯೋಚಿಸುವುದರಲ್ಲೇ ನೀವು ಹೆಚ್ಚು ಸಮಯ ಕಳೆಯುತ್ತಿರಾ. ಅಷ್ಟೇ ಅಲ್ಲ ಪ್ರತಿಯೊಂದು ಉಡುಗೆಯನ್ನ ಹಾಕಿ ಟ್ರೈ ಮಾಡುತ್ತಾ ನೋಡುತ್ತಾ ಇರುತ್ತೀರಿ ಇದರಿಂದ ನಿಮಗೆ ಉಡುಗೆ ಜಾಸ್ತಿಯಾದಂತೆ ಯಾವ ಉಡುಗೆ ಧರಿಸುವುದು ಎಂಬ ವ್ಯರ್ಥ ಟೆನ್ಶನ್ ಪ್ರಾರಂಭವಾಗುತ್ತದೆ. ಹಾಗಾಗಿ ಸಕ್ಸಸ್ ಫುಲ್ ವ್ಯಕ್ತಿಗಳು ಒಂದೇ ತೆರೆನಾದ ಉಡುಗೆ ಹೊಂದಿದ್ದು, ಟೆನ್ಶನ್ ಫ್ರೀಯಾಗಿ ಇರುತ್ತಾರೆ.
ಉಡುಗೆ ಕಮ್ಮಿ ಇದ್ದಂತೆ ಸ್ಪೂರ್ತಿ ಹಾಗೂ ಎನರ್ಜಿ ಅಧಿಕ:
ನಿಮ್ಮ ಬಳಿ ಅಧಿಕ ಉಡುಗೆ ಇದ್ದಾಗ ಅದನ್ನ ಸೆಟ್ ಮಾಡಿ ಇಡುವಲ್ಲಿ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಹಾಗಾಗಿ ಸಕ್ಸಸ್ ಫುಲ್ ವ್ಯಕ್ತಿಗಳು ಮಿತ ಉಡುಗೆ ಹೊಂದಿದ್ದು, ಅದನ್ನ ಕಡಿಮೆ ಸಮಯದಲ್ಲಿ ಸೆಟ್ ಮಾಡಿ ಎನರ್ಜಿಯನ್ನ ಉಳಿಸಿಕೊಳ್ಳುತ್ತಾರೆ. ಹಾಗೂ ದಿನಪೂರ್ತಿ ಸ್ಪೂರ್ತಿದಾಯಕರಾಗಿ ಇರುತ್ತಾರೆ.


Click it and Unblock the Notifications











