Job Change Benefits: ಬರೀ ಸ್ಯಾಲರಿ ಮಾತ್ರವಲ್ಲ ಏನೆಲ್ಲಾ ಪ್ರಯೋಜನವಿದೆ ನೋಡಿ

ಕೆರಿಯರ್ ಜೀವನದಲ್ಲಿ ಏಳ್ಗೆ ಆಗಬೇಕು ಎಂದು ನೀವು ಅಂದುಕೊಂಡಿದ್ದರೆ ಒಂದೇ ಕಂಪನಿಯಲ್ಲಿ ಸಾವಿರಾರು ವರ್ಷ ದುಡಿಯುತ್ತಾ ಕುಳಿತುಕೊಳ್ಳುವುದಲ್ಲ. ಹಾಗಾಗಂತ ಆಗಾಗ ಕೆಲಸ ಬದಲು ಮಾಡುತ್ತಾ ಇರುವುದು ಕೂಡಾ ಸರಿಯಲ್ಲ.

By Kavya

ಕೆರಿಯರ್ ಜೀವನದಲ್ಲಿ ಏಳ್ಗೆ ಆಗಬೇಕು ಎಂದು ನೀವು ಅಂದುಕೊಂಡಿದ್ದರೆ ಒಂದೇ ಕಂಪನಿಯಲ್ಲಿ ಸಾವಿರಾರು ವರ್ಷ ದುಡಿಯುತ್ತಾ ಕುಳಿತುಕೊಳ್ಳುವುದಲ್ಲ. ಹಾಗಾಗಂತ ಆಗಾಗ ಕೆಲಸ ಬದಲು ಮಾಡುತ್ತಾ ಇರುವುದು ಕೂಡಾ ಸರಿಯಲ್ಲ.

ಪದೇ ಪದೇ ಜಾಬ್ ಚೇಂಜ್... ಬರೀ ಸ್ಯಾಲರಿ ಮಾತ್ರವಲ್ಲ ಏನೆಲ್ಲಾ ಪ್ರಯೋಜನವಿದೆ ನೋಡಿ

ನೀವು ಒಂದೇ ಕಂಪನಿಯಲ್ಲಿ 3 ರಿಂದ 5 ವರ್ಷ ಕೆಲಸ ಮಾಡುತ್ತಾ ಇದ್ದರೆ ನಿಮಗೆ ಆ ಕಂಪನಿಯಲ್ಲಿ ಕಂಫರ್ಟ್ ಫೀಲ್ ಆಗಿರಬಹುದು. ಆದ್ರೆ ಕ್ರಮೇಣ ನಿಮಗೆ ಕೆಲಸದ ಮೇಲೆ ಆಸಕ್ತಿ ಕೂಡಾ ಕಡಿಮೆಯಾಗಬಹುದು. ನೀವು ಮೊದಲಿನ ಥರಹ ಆಕ್ಟೀವ್ ಆಗಬೇಕೆಂದಿದ್ದರೆ ನೀವು ಕಂಪನಿ ಚೇಂಜ್ ಮಾಡುತ್ತಾ ಇರಬೇಕು. ಬರೀ ಸ್ಯಾಲರಿ ಮಾತ್ರವಲ್ಲದೇ ಬೇರೆ ಯಾವೆಲ್ಲಾ ಕಾರಣಕ್ಕೆ ಕಂಪನಿ ಚೇಂಜ್ ಮಾಡಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಮಾಹಿತಿ ನೀಡುತ್ತಿದೆ ಮುಂದಕ್ಕೆ ಓದಿ.

ನಿಮ್ಮನ್ನ ಸ್ಟ್ರಾಂಗ್ ಆಗಿಸಲು:

ಹೊಸ ಹೊಸ ಜಾಗದಲ್ಲಿ ಕೆಲಸ ಮಾಡಿದ್ರೆ ನಿಮ್ಮ ಸ್ಕಿಲ್ ಡೆವಲಪ್ ಆಗುತ್ತದೆ. ನಿಮಗೆ ಗೊತ್ತಿಲ್ಲದ ಉತ್ತಮ ವ್ಯಕ್ತಿ ನಿಮ್ಮೊಳಗಿನಿಂದ ಹೊರ ಬರುತ್ತಾನೆ. ಹೊಸ ಕಂಪನಿಗಳಲ್ಲಿ ನಿಮಗೆ ಹೊಸ ರೀತಿಯ ಟಾಸ್ಕ್ ದೊರೆಯುತ್ತದೆ. ಅಷ್ಟೇ ಅಲ್ಲ ಇದರಿಂದ ನಿಮಗೆ ಹೊಸ ಹೊಸತನ್ನ ಕಲಿಯುವ ಅವಕಾಶ ಕೂಡಾ ದೊರೆಯುತ್ತದೆ. ಹಳೆಯ ಆಫೀಸ್‌ನಲ್ಲಿ ನೀವು ಕೆಲಸ ಮಾಡಿ ಮಾಡಿ ಬೋರ್ ಆಗಿ ಆಲಸಿಗಳಾಗಿರುತ್ತೀರಿ, ಸಡನ್ ಜಾಬ್ ಚೇಂಚ್ ಮಾಡುವುದರಿಂದ ನೀವು ಆಕ್ಟೀವ್ ಆಗಿ ಕೆಲಸ ಮಾಡುತ್ತೀರಿ.

ನೆಟ್‌ವರ್ಕ್ ದೊಡ್ಡದಾಗುತ್ತದೆ:

ನೀವು ಎಷ್ಟು ಜಾಗದಲ್ಲಿ ಕೆಲಸ ಮಾಡುತ್ತಾ ಹೋಗುತ್ತೀರೋ ಇದರಿಂದ ನಿಮ್ಮ ನೆಟ್‌ವರ್ಕ್ ಕೂಡಾ ಸ್ಟ್ರಾಂಗ್ ಆಗುತ್ತಾ ಹೋಗುತ್ತದೆ. ಇದರಿಂದ ಕೆಲಸ ಹುಡುಕುದು ಕೂಡಾ ನಿಮಗೆ ಸುಲಭವಾಗುತ್ತದೆ. ನಿಮ್ಮ ಪ್ರೊಫೆಶನಲ್ ಲೈಫ್ ಚೆನ್ನಾಗಿರಬೇಕಾದರೆ ಕಂಪನಿಯ ಹೊರಗೂ ನಿಮ್ಮ ಲಿಂಕ್ ಚೆನ್ನಾಗಿರಬೇಕು.

ಜ್ಞಾನ ಹೆಚ್ಚಾಗುತ್ತದೆ:

ಒಂದು ವೇಳೆ ನೀವು ಸ್ವಲ್ಪ ಸ್ವಲ್ಪ ಸಮಯಕ್ಕೆ ಜಾಬ್ ಚೇಂಜ್ ಮಾಡುತ್ತಾ ಇದ್ದರೆ, ನೀವು ಜ್ಞಾನದಲ್ಲೂ ಪರ್ಫೆಕ್ಟ್ ಆಗುತ್ತಾ ಹೋಗುತ್ತೀರಿ. ಮಾರ್ಕೆಟ್ ನಲ್ಲಿ ಏನು ನಡೆಯುತ್ತಿದೆ. ಯಾವ ವಸ್ತುವಿನ ಟ್ರೆಂಡಿಂಗ್ ಇದೆ ಮಾರುಕಟ್ಟೆ ಬೆಲೆ, ಬೇಡಿಕೆ ಮುಂತಾದ ವಿಷಯದ ಬಗ್ಗೆ ನಿಮಗೆ ಹೆಚ್ಚು ಜ್ಞಾನ ಸಿಗುತ್ತದೆ. ಇನ್ನು ಹಲವಾರು ಇಂಟರ್ ವ್ಯೂ ನೀವು ಫೇಸ್ ಮಾಡುವುದರಿಂದ ನಿಮ್ಮ ಮಾರ್ಕೆಟ್ ವ್ಯಾಲ್ಯೂ ನಿಮಗೆ ತಿಳಿಯುತ್ತದೆ.

ಹೊರಗಿನ ಜನತೆ ಜತೆ ಸಂಪರ್ಕ:

ಹಲವಾರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡು, ನಿಮ್ಮ ಬಾಸನ್ನ ಮೆಚ್ಚಿಸುವುದು ಒಳ್ಳೆಯ ಕೆಲಸವಲ್ಲ. ನೀವು ಜೀವನವಿಡೀ ಒಂದೇ ಕಂಪನಿಯಲ್ಲಿ ಕೆಲಸ ಮಾಡಬೇಕು ಎಂದು ಅಂದುಕೊಂಡರೆ, ನೀವು ಖಂಡಿತ ಆಫೀಸ್ ಪಾಲಿಟಿಕ್ಸ್ ನಲ್ಲಿ ಸಿಲುಕಿ ಹಾಕಿಕೊಳ್ಳುತ್ತೀರಿ. ನೀವು ಆಫೀಸ್‌ನಿಂದ ಹೊರಗಿನ ಪ್ರಪಂಚದಲ್ಲೂ ದುಡಿಯ ಬೇಕು. ಅಷ್ಟೇ ಅಲ್ಲ ನೀವು ಆಗಾಗ ಕೆಲಸ ಬದಲು ಮಾಡುವುದರಿಂದ ನಿಮಗೆ ಹೊರಗಿನ ವ್ಯಕ್ತಿಗಳ ಜತೆ ಹೆಚ್ಚು ಸಂಪರ್ಕ ವಾಗುತ್ತದೆ

ಏನಾದ್ರೂ ಹೊಸತು ಕಲಿಯಲು ಸಿಗುತ್ತದೆ:

ಒಂದೇ ಕಂಪನಿಯಲ್ಲಿ ಹಲವಾರು ವರ್ಷ ದುಡಿಯುತ್ತಿದ್ದರೆ, ಒಂದು ಲೆವೆಲ್ ವರೆಗೆ ಮಾತ್ರ ನಿಮ್ಮ ಕೆರಿಯರ್ ಅಭಿವೃದ್ಧಿ ಕಾಣುತ್ತದೆ. ಕೆರಿಯರ್ ಲೈಫ್ ನಲ್ಲಿ ಉತ್ತಮ ಸ್ಥಾನ ಪಡೆಯಬೇಕು ಅಂದ್ರೆ ನೀವು ಕಂಪನಿ ಬದಲು ಮಾಡಲೇ ಬೇಕು. ಇದರಿಂದ ಹೊಸ ಕಂಪನಿಗಳಲ್ಲಿ ನಿಮಗೆ ಹೊಸತೇನಾದ್ರೂ ಕಲಿಯಲು ಅವಕಾಶ ಸಿಗುತ್ತದೆ. ಹೊಸ ಹೊಸ ಜನರಿಂದ ಹೋಸತೇನಾದ್ರೂ ಕಲಿಯುವ ಅವಕಾಶ ನಿಮ್ಮದಾಗುವುದು.

More News  

For Quick Alerts
ALLOW NOTIFICATIONS  
For Daily Alerts

English summary
Why want to change job if you think like that means here is the answer for your questions. Not only Salery better opportunity, more challenges and career growth is the main reason for job change. here are some approaches that you are leaving your job for right reasons.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+