ಬ್ಯಾಡ್ ಬಾಸ್ ಎಂಬ ಕೇಳಿದ್ರೆನೆ ಏನೋ ಮೂಡ್ ಆಫ್ ಆಗುತ್ತದೆ. ನಮ್ಮ ಜೀವನದ ಹೆಚ್ಚಿನ ಸಮಯವನ್ನ ನಾವು ಕೆಲಸ ಮಾಡುವ ಜಾಗದಲ್ಲಿ ಕಳೆಯುತ್ತೇವೆ. ಒಂದು ವೇಳೆ ನಮ್ಮ ಬಾಸ್ ತುಂಬಾ ಹಠಮಾರಿಯಾಗಿದ್ದರೆ, ನಾವು ಕೆಲಸ ಮಾಡುವ ಜಾಗ ನರಕಕ್ಕೆ ಸಮ ಇದ್ದಂತೆ ಹೀಗೆಂದು ನಾವೆಲ್ಲರೂ ತಿಳಿದುಕೊಳ್ಳುತ್ತೇವೆ. ಆದ್ರೆ ಸ್ವಲ್ಪ ನಾವು ಯೋಚಿಸುವ ರೀತಿ ಬದಲಾಯಿಸುವ. ಬ್ಯಾಡ್ ಬಾಸ್ ನಿಂದ ಏನೆಲ್ಲಾ ಲಾಭಗಳಾಗುತ್ತದೆ ಎಂದು ಮೊದಲಿಗೆ ಲಿಸ್ಟ್ ಮಾಡೋಣ, ಆಗ ನೀವೇ ಆಶ್ಚರ್ಯಕರದಿಂದ ಹೌದಾ ಎಂದು ಉದ್ಘಾರ ಎಳೆಯುತ್ತೀರಾ ನೋಡಿ.

ಬ್ಯಾಡ್ ಬಾಸ್‌ನಿಂದ ನಿಮಗ ಶಿಸ್ತು ಕಲಿಯಬಹುದು
ನೀವು ಯಾವಾಗಲೂ ಸರಿಯಾದ ಸಮಯಕ್ಕೆ ಕೆಲಸ ಮಾಡಿ ಮುಗಿಸಬೇಕೆಂದು ಬ್ಯಾಡ್ ಬಾಸ್ ಬಯಸುತ್ತಾರೆ. ಹಾಗೂ ನಿಮ್ಮ ಬಾಸನ್ನ ಹ್ಯಾಪಿ ಆಗಿರಿಸಿ ಇಡಬೇಕೆಂದು ನೀವು ಸಮಯ ವ್ಯರ್ಥ ಮಾಡದೇ ನಿಮ್ಮ ಕೆಲಸ ಕಂಪ್ಲೀಟ್ ಮಾಡುವಲ್ಲಿ ಫೋಕಸ್ ಮಾಡುತ್ತೀರಿ ಹಾಗೂ ಡೆಡ್ ಲೈನ್ ಮುಗಿಯೊದರೊಳಗೆ ನೀವು ಕೆಲಸ ಮಾಡಿ ಮುಗಿಸಿತ್ತೀರಿ. ಹಾಗಾಗಿ ಎಲ್ಲವನ್ನ ಸರಿಯಾದ ಸಮಯಕ್ಕೆ ಮಾಡಿ ಮುಗಿಸುವುದರಿಂದ ನೀವು ಶಿಸ್ತನ್ನ ರೂಢಿಸಿಕೊಳ್ಳುತ್ತೀರಿ. ಕೊನೆಯದಾಗಿ ನಿಮ್ಮ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆಯಾಗುವುದು ನೀವು ಕಾಣಬಹುದು. ಇದರಿಂದ ನೀವು ಕೊನೆಯಲ್ಲಿ ಖಂಡಿತ ನಿಮ್ಮ ಬ್ಯಾಡ್ ಬಾಸನ್ನ ಇಷ್ಟ ಪಡುತ್ತೀರಿ.
ಬ್ಯಾಡ್ ಬಾಸ್‌ನಿಂದ ನಿಮ್ಮ ಜ್ಞಾನ ಹೆಚ್ಚುತ್ತದೆ
ಕಷ್ಟ ಕಷ್ಟದ ಟಾಸ್ಕ್ ಕೊಡುತ್ತಾರೆ ಎಂದು ನಾವು ಬಾಸ್ ಮೇಲೆ ಕೋಪಿಸಿಕೊಳ್ಳಬಹುದು. ಬ್ಯಾಡ್ ಬಾಸ್ ಯಾವಾಗಲೂ ಕಷ್ಟದ ಕೆಲಸ ನಮಗೆನೇ ಕೊಡುತ್ತಾರೆ ಎಂದು ನಾವು ದುಖಿಃಸಬಹುದು. ಆ ಟಾಸ್ಕ್ ಬಗ್ಗೆ ನಮಗೆ ಏನೂ ಗೊತ್ತಿರುವುದಿಲ್ಲ.ಆದ್ರೆ ಟಾಸ್ಕ್ ಕಂಪ್ಲೀಟ್ ಮಾಡಲೇ ಬೇಕಾದ್ದರಿಂದ ನಾವು ರಿಸರ್ಚ್ ಮಾಡಿ, ಇಲ್ಲ ಇತರರ ಸಹಾಯ ಪಡೆದು ಆ ಟಾಸ್ಕ್ ಕಂಪ್ಲೀಟ್ ಮಾಡುತ್ತೇವೆ. ಇದರಿಂದ ಏನೂ ಗೊತ್ತಿಲ್ಲದ ನಮಗೆ ಅದೆಷ್ಟೋ ವಿಚಾರ ತಿಳಿದುಕೊಂಡಂತೆ ಆಗುವುದು. ಹಾಗಾಗಿ ಬ್ಯಾಡ್ ಬಾಸ್ ಇದ್ದರೆ ನಮ್ಮ ಜ್ಞಾನವೂ ಕೂಡಾ ಹೆಚ್ಚುತ್ತದೆ.
ಬ್ಯಾಡ್ ಬಾಸ್ ನಿಂದ ಪರ್ಫೇಕ್ಟ್ ಆಗ್ತೀರಾ
ಕೆಲವೊಮ್ಮೆ ನಿಮ್ಮ ಬಾಸ್ ಆಫೀಸ್ ಟೈಂ ನಲ್ಲಿ ಮಗಿಸುವಂತೆ ಹೇಳಿ ಹೆಚ್ಚು ಕೆಲಸ ಕೊಡುತ್ತಾರೆ. ಹಾಗಾಗಿ ಆ ಟಾಸ್ಕ್ ನೀವು ಕಂಪ್ಲೀಟ್ ಮಾಡಿ ಮುಗಿಸಬೇಕೆಂದು, ಹೆಚ್ಚಿನ ಟೈಂ ವ್ಯಯಿಸುತ್ತೀರಿ ಹಾಗೂ ಹೆಚ್ಚು ಹೆಚ್ಚು ಯೋಚಿಸುತ್ತೀರಿ. ಇದೇ ಚಟುವಟಿಕೆ ಮುಂದುವರೆಯುತ್ತಾ ಹೋದಲ್ಲಿ, ಕ್ರಮೇಣ ನೀವು ಯಾವುದೇ ಕೆಲಸ ಹೇಳಿದ್ರು ಕರೆಕ್ಟ್ ಟೈಂನಲ್ಲಿ ಮಾಡಿ ಮುಗಿಸುವಷ್ಟು ಪರ್ಫೆಕ್ಟ್ ಆಗುತ್ತೀರಿ. ಹೆಚ್ಚು ಸ್ಕಿಲ್ ನಿಮ್ಮದಾಗುವುದಲ್ಲದೇ ನೀವು ಕೆಲಸದ ವಿಚಾರದಲ್ಲಿ ಪರ್ಫೆಕ್ಟ್ ಆಗುತ್ತೀರಿ.
ತಾಳ್ಮೆ ಕಲಿತುಕೊಳ್ಳುತ್ತೀರಿ
ಹೌದು ನಿಮಗೆ ಹೇಳಿದ ಟಾಸ್ಕ್ ನೀವು ಹೇಳಿದ ಸಮಯದೊಳಗೆ ಮಾಡಿ ಮುಗಿಸಿಲ್ಲ ಎಂದಾದ್ರೆ ನಿಮ್ಮ ಬಾಸ್ ನಿಮ್ಮ ಮೇಲೆ ರೇಗಾಡಬಹುದು ಇಲ್ಲ ಕೂಗಾಡಬಹುದು. ಇಂತಹ ಸಮಯದಲ್ಲಿ ನೀವು ತಾಳ್ಮೆ ವಹಿಸದೇ ವಿನ್ಹಾ ಬೇರೆ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ನಿಮಗೆ ಗೊತ್ತಿಲ್ಲದೇ ನಿಮ್ಮಲ್ಲಿ ತಾಳ್ಮೆಯ ಸ್ವಭಾವ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ನೀವು ಭವಿಷ್ಯತ್ ನಲ್ಲಿ ಹಲವಾರು ಉಪಯೋಗ ಪಡೆದುಕೊಳ್ಳಬಹುದು.
ಬ್ಯಾಡ್ ಬಾಸ್ ನಿಂದ ಬೆಸ್ಟ್ ಜಾಬ್ ನಿಮ್ಮದಾಗುವುದು
ಹೌದು ಬ್ಯಾಡ್ ಬಾಸ್ ಜತೆ ಕೆಲಸ ಮಾಡಿ ಕೊನೆಗೆ ನಿಮಗೆ ಸಾಕು ಎನಿಸಿ ನೀವು ಬೇರೆ ಕಡೆ ಉತ್ತಮ ಅವಕಾಶಕ್ಕೆ ಟ್ರೈ ಮಾಡಬಹುದು. ಆದ್ರೆ ಈಗಾಗಲೇ ಬ್ಯಾಡ್ ಬಾಸ್ ನಿಂದ ನೀವು ಕಲಿತುಕೊಂಡಿರುವ ಶಿಸ್ತು, ತಾಳ್ಮೆ, ಹೆಚ್ಚಿನ ಜ್ಞಾನ ದಿಂದ ನಿಮಗೆ ಬೇರೆ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗವಕಾಶ ಕೂಡಾ ಸಿಗುವುದು. ಹಾಗಾಗಿ ಈ ಎಲ್ಲಾ ಕಾರಣಕ್ಕಾದ್ರೂ ನೀವು ನಿಮ್ಮ ಬಾಸನ್ನ ಎಷ್ಟೇ ಹೇಟ್ ಮಾಡಿದ್ರೂ ಒಂದು ಬಾರಿ ಥ್ಯಾಂಕ್ಸ್ ಎಂದು ಕೂಡಾ ಹೇಳಿ.


Click it and Unblock the Notifications











