World Environment Day 2021 Quiz: ಪರಿಸರ ಕುರಿತ ಸಾಮಾನ್ಯ ರಸಪ್ರಶ್ನೆಗಳು ಇಲ್ಲಿವೆ..ನೀವೂ ಉತ್ತರಿಸಿ

ಪ್ರಸ್ತುತ ದಿನಗಳಲ್ಲಿ ಪರಿಸರ ಕಾಳಜಿ ಅತ್ಯಗತ್ಯವಾಗಿದೆ. ಮಾನವ ನಿರ್ಮಿತ ಹಲವು ಚಟುವಟಿಕೆಗಳಿಂದ ಪರಿಸರ ನಾಶಕ್ಕೆ ಕಾರಣವಾಗುತ್ತಿದೆ. ಅನೇಕ ಕಾರಣಗಳಿಂದಾಗಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಆದ್ದರಿಂದ ಈ ದಿನ ನಾವು ಪರಿಸರ ಕುರಿತಾದ ಕೆಲವು ಸಾಮಾನ್ಯ ಜ್ಞಾನ ರಸಪ್ರಶ್ನೆಯನ್ನು ಇಲ್ಲಿ ನೀಡುತ್ತಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ಹಾಗೂ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.

 
ವಿಶ್ವ ಪರಿಸರ  ದಿನದಂದು ನಿಮಗಾಗಿ ರಸಪ್ರಶ್ನೆ

ಪರಿಸರ ದಿನದ ಪ್ರಯುಕ್ತ ಪರಿಸರ ಕುರಿತಾದ ಜಿಕೆ ಪ್ರಶ್ನೆ ಮತ್ತು ಉತ್ತರಗಳು:

1. ವಿಶ್ವ ವನ್ಯಜೀವಿ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ಜನವರಿ 25
ಬಿ. ಫೆಬ್ರವರಿ 2
ಸಿ. ಫೆಬ್ರವರಿ 27
ಡಿ. ಮಾರ್ಚ್ 3
ಉತ್ತರ: ಡಿ

2. ವಿಶ್ವ ಅರಣ್ಯ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ಮಾರ್ಚ್ 20
ಬಿ. ಮಾರ್ಚ್ 21
ಸಿ. ಮಾರ್ಚ್ 24
ಡಿ. ಏಪ್ರಿಲ್ 1
ಉತ್ತರ: ಬಿ

3. ವಿಶ್ವ ಹವಾಮಾನ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ಮಾರ್ಚ್ 22
ಬಿ. ಮಾರ್ಚ್ 23
ಸಿ. ಏಪ್ರಿಲ್ 2
ಡಿ. ಏಪ್ರಿಲ್ 5
ಉತ್ತರ: ಬಿ

4. ವಿಶ್ವ ಜೀವವೈವಿಧ್ಯ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ಮಾರ್ಚ್ 25
ಬಿ. ಮೇ 22
ಸಿ. ಏಪ್ರಿಲ್ 7
ಡಿ. ಏಪ್ರಿಲ್ 10
ಉತ್ತರ: ಬಿ

5. ವಿಶ್ವ ಆಮೆ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ಮೇ 1
ಬಿ. ಮೇ 11
ಸಿ. ಮೇ 23
ಡಿ. ಮೇ 25
ಉತ್ತರ: ಸಿ

6. ವಿಶ್ವ ಮಹಾಸಾಗರ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ಜೂನ್ 5
ಬಿ. ಜೂನ್ 8
ಸಿ. ಜೂನ್ 10
ಡಿ. ಜೂನ್ 21
ಉತ್ತರ: ಬಿ

7. ವಿಶ್ವ ಪರಿಸರ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಎ. ಜೂನ್ 1
ಬಿ. ಜೂನ್ 5
ಸಿ. ಜೂನ್ 10
ಡಿ. ಜೂನ್ 19
ಉತ್ತರ: ಬಿ

 

8. ಅಂತರರಾಷ್ಟ್ರೀಯ ಹುಲಿ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ಜುಲೈ 1
ಬಿ. ಜುಲೈ 5
ಸಿ. ಜುಲೈ 10
ಡಿ. ಜುಲೈ 29
ಉತ್ತರ: ಡಿ

9. ವಿಶ್ವ ಆನೆ ದಿನವನ್ನು ಯಾವ ದಿನಾಂಕದಲ್ಲಿ ಆಚರಿಸಲಾಗುತ್ತದೆ ?
ಎ. ಆಗಸ್ಟ್ 1
ಬಿ. ಆಗಸ್ಟ್ 5
ಸಿ. ಆಗಸ್ಟ್ 12
ಡಿ. ಆಗಸ್ಟ್ 15
ಉತ್ತರ: ಸಿ

10. ವಿಶ್ವ ಶೌಚಾಲಯ ದಿನವನ್ನು ಎಂದು ಆಚರಿಸಲಾಗುತ್ತದೆ ?
ಎ. ನವೆಂಬರ್ 1
ಬಿ. ನವೆಂಬರ್ 4
ಸಿ. ನವೆಂಬರ್ 11
ಡಿ. ನವೆಂಬರ್ 19
ಉತ್ತರ: ಡಿ

For Quick Alerts
ALLOW NOTIFICATIONS  
For Daily Alerts

English summary
World Environment Day 2021 Quiz for Students: Here, we are presenting the questions and answers being asked about environment days in kannada. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X