World Food Safety Day 2022 : ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ, ಥೀಮ್ ಮತ್ತು ಉಲ್ಲೇಖಗಳು

ವಿಶ್ವ ಆಹಾರ ಸುರಕ್ಷತಾ ದಿನದ ಇತಿಹಾಸ, ಥೀಮ್ ಮತ್ತು ಉಲ್ಲೇಖಗಳು

ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಆಹಾರದಿಂದ ಉಂಟಾಗುವ ಅಪಾಯಗಳನ್ನು ತಡೆಗಟ್ಟಲು, ಪತ್ತೆಹಚ್ಚಲು ಮತ್ತು ಕ್ರಮವನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ.

ಪ್ರತಿಯೊಬ್ಬ ಮನುಷ್ಯನೂ ಭೂಮಿಯ ಮೇಲೆ ತನ್ನ ಅಸ್ತಿತ್ವಕ್ಕಾಗಿ ಆಹಾರ (ನೀರು ಸೇರಿದಂತೆ), ಗಾಳಿ ಮತ್ತು ಬಟ್ಟೆಯ ಮೇಲೆ ಅವಲಂಬನೆಯನ್ನು ಹೊಂದಿರುತ್ತಾನೆ. ಆಹಾರವು ನಮ್ಮ ದೇಹದಲ್ಲಿನ ಶಕ್ತಿಯ ವೇಗವರ್ಧಕವಾಗಿದೆ. ಆಹಾರವು ನಮ್ಮ ದೇಹದ ಬೆಳವಣಿಗೆಗೆ ಎಲ್ಲಾ ಅಗತ್ಯ ಪೋಷಕಾಂಶಗಳು, ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಪ್ರೋಟೀನ್‌ಗಳನ್ನು ಒದಗಿಸುತ್ತದೆ. ಹಾಗಾಗಿ ಆಹಾರ ಸುರಕ್ಷತಾ ದಿನ ಹೆಚ್ಚು ಗಮನಾರ್ಹವಾದುದು. ಬನ್ನಿ ಈ ದಿನದ ಇತಿಹಾಸ ಏನು ? ಯಾವ ದಿನಾಂಕದಲ್ಲಿ ಆಚರಿಸಲಾಗುತ್ತದೆ ? ಈ ವರ್ಷದ ಥೀಮ್ ಏನು ? ಮತ್ತು ಆಹಾರ ಸುರಕ್ಷತಾ ದಿನದ ಉಲ್ಲೇಖಗಳನ್ನು ಇಲ್ಲಿ ತಿಳಿಯೋಣ.

ವಿಶ್ವ ಆಹಾರ ಸುರಕ್ಷತಾ ದಿನ 2022 : ಇತಿಹಾಸ

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) 5 ವರ್ಷದೊಳಗಿನ ಮಕ್ಕಳು ಮತ್ತು ಕಡಿಮೆ ಆದಾಯವನ್ನು ಹೊಂದಿರುವ ದೇಶಗಳಲ್ಲಿ ವಾಸಿಸುವ ವ್ಯಕ್ತಿಗಳಲ್ಲಿ ಹರಡುತ್ತಿರುವ ಆಹಾರ ಸಮಸ್ಯೆಗಳನ್ನು ಗುರುತಿಸುತ್ತದೆ. ಹಾಗಾಗಿ 2018ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವೆಂದು ಘೋಷಿಸಲಾಗುತ್ತದೆ. ವಿಶ್ವ ಆರೋಗ್ಯ ಅಸೆಂಬ್ಲಿಯು ಆಹಾರದಿಂದ ಹರಡುವ ರೋಗದ ಹೊರೆ ಕಡಿಮೆ ಮಾಡಲು ಆಹಾರ ಸುರಕ್ಷತೆಗಾಗಿ ಜಾಗತಿಕ ಪ್ರಯತ್ನಗಳನ್ನು ಬಲಪಡಿಸುವ ನಿರ್ಣಯವನ್ನು ಅಂಗೀಕರಿಸಿತು.

ಡಬ್ಲ್ಯುಎಚ್‌ಒ ಹಾಗೂ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಜಂಟಿಯಾಗಿ ಸದಸ್ಯ ರಾಷ್ಟ್ರಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲು ಅನುಕೂಲ ಮಾಡಿಕೊಡುತ್ತವೆ.

ವಿಶ್ವ ಆಹಾರ ಸುರಕ್ಷತಾ ದಿನ 2022 : ದಿನಾಂಕ

ಆಹಾರ ಮತ್ತು ನೀರಿನ ಮಾಲಿನ್ಯದ ಬಗ್ಗೆ ಜಾಗತಿಕವಾಗಿ ಗಮನ ಸೆಳೆಯಲು ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನವನ್ನು ಆಚರಿಸಲಾಗುತ್ತದೆ. ಇಂದು ವಿಶ್ವ ಆಹಾರ ಸುರಕ್ಷತಾ ದಿನದ (ಡಬ್ಲ್ಯುಎಫ್‌ಎಸ್‌ಡಿ) ಮೂರನೇ ವಾರ್ಷಿಕೋತ್ಸವವಾಗಿದೆ. ಈ ದಿನ ಡಬ್ಲ್ಯುಎಚ್‌ಒ ಜಾಗತಿಕವಾಗಿ ಆಹಾರದಿಂದ ಹರಡುವ ರೋಗವನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಮಾಡಲು ಪ್ರಯತ್ನಿಸುತ್ತದೆ.

ವಿಶ್ವ ಆಹಾರ ಸುರಕ್ಷತಾ ದಿನ 2021: ಥೀಮ್

2021ರ ವಿಶ್ವ ಆಹಾರ ಸುರಕ್ಷತಾ ದಿನದ ಥೀಮ್ 'ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ'. ಸುರಕ್ಷಿತ ಆಹಾರವನ್ನು ಉತ್ಪಾದಿಸುವುದು ಮತ್ತು ಸೇವಿಸುವತ್ತ ಗಮನಹರಿಸುವುದು ಈ ವರ್ಷದ ವಿಷಯವಾಗಿದೆ.

ಸುರಕ್ಷಿತ ಆಹಾರವನ್ನು ಸೇವಿಸುವುದರಿಂದ ಮನುಷ್ಯನಿಗೆ ದೀರ್ಘಕಾಲದ ಆರೋಗ್ಯ ಲಭಿಸುತ್ತದೆ. ಇದರಿಂದ ಮನುಷ್ಯನು ಪ್ರಾಣಿಗಳು, ಸಸ್ಯಗಳು, ಪರಿಸರ ಮತ್ತು ಆರ್ಥಿಕತೆಯ ನಡುವೆ ವ್ಯವಸ್ಥಿತ ಸಂಪರ್ಕವನ್ನು ರೂಪಿಸುವಲ್ಲಿ ಮುಂದಾಗುತ್ತಾನೆ. ಹಾಗಾಗಿ ಇದು ಭವಿಷ್ಯದ ಅಗತ್ಯಗಳನ್ನು ಪೂರೈಸಲು ನಮಗೆ ಸಹಾಯ ಮಾಡುತ್ತದೆ.

ವಿಶ್ವ ಆಹಾರ ಸುರಕ್ಷತಾ ದಿನ 2022 : ಉಲ್ಲೇಖಗಳು

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

"ಜಗತ್ತಿನಲ್ಲಿ ತುಂಬಾ ಜನರು ಹಸಿದಿದ್ದಾರೆ, ದೇವರು ಅವರಿಗೆ ಕಾಣಿಸುವುದಿಲ್ಲ ಆದರೆ ರೊಟ್ಟಿಯ ರೂಪದಲ್ಲಿ ಮಾತ್ರ ಕಾಣಿಸುತ್ತಾನೆ" - ಮಹಾತ್ಮ ಗಾಂಧಿ.

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

"ನಿಮ್ಮ ಆಹಾರವು ನಿಮ್ಮ ಔಷಧಿಯಾಗಲಿ ಮತ್ತು ನಿಮ್ಮ ಔಷಧವು ನಿಮ್ಮ ಆಹಾರವಾಗಲಿ" -ಹಿಪ್ಪೊಕ್ರೇಟ್ಸ್

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

"ಆಹಾರ ಸುರಕ್ಷತೆಯು ಆಹಾರ ಸರಪಳಿಯಲ್ಲಿರುವ ಪ್ರತಿಯೊಬ್ಬರನ್ನು ಒಳಗೊಂಡಿರುತ್ತದೆ" -ಮೈಕ್, ಜೋಹಾನ್ಸ್

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

"ಮನಸ್ಸಿನಲ್ಲಿ ಪ್ರವೇಶಿಸುವ ಆಹಾರವನ್ನು ದೇಹಕ್ಕೆ ಪ್ರವೇಶಿಸುವ ಆಹಾರದಂತೆಯೇ ನೋಡಬೇಕು" -ಪ್ಯಾಟ್ ಬ್ಯೂಕ್ಯಾನನ್

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

ವಿಶ್ವ ಆಹಾರ ಸುರಕ್ಷತಾ ದಿನ 2021: ಉಲ್ಲೇಖಗಳು

"ಅನೇಕ ದೇಶಗಳು ಜಮೀನಿನಿಂದ ಟೇಬಲ್‌ಗೆ ಆಹಾರ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿವೆ. ಆಹಾರ ಪೂರೈಕೆಯಲ್ಲಿ ತೊಡಗಿರುವ ಪ್ರತಿಯೊಬ್ಬರೂ ಪ್ರಮಾಣಿತ ಆಹಾರ ಸುರಕ್ಷತಾ ಕಾರ್ಯವಿಧಾನಗಳನ್ನು ಅನುಸರಿಸಬೇಕು. ಆಹಾರದೊಂದಿಗೆ ತೊಡಗಿಸಿಕೊಂಡ ಪ್ರತಿಯೊಬ್ಬರೂ ಇದರಿಂದ ಜನರು ಅನಾರೋಗ್ಯಕ್ಕೆ ಒಳಗಾಗದಂತಿರಲು ಭಾವಿಸಬೇಕು" -ಮರಿಯನ್ ನೆಸ್ಲೆ

For Quick Alerts
ALLOW NOTIFICATIONS  
For Daily Alerts

English summary
World food safety day is celebrated on june 7. Here is the history, date, theme and quotes of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X