World Health Day 2022 : ವಿಶ್ವ ಆರೋಗ್ಯ ದಿನದ ಥೀಮ್ ಏನು ಗೊತ್ತಾ ?

ಆರೋಗ್ಯವು ದೈಹಿಕ ಯೋಗಕ್ಷೇಮವನ್ನು ಮಾತ್ರವಲ್ಲದೆ ಮಾನಸಿಕ ಮತ್ತು ಸಾಮಾಜಿಕ ಯೋಗಕ್ಷೇಮವನ್ನೂ ಒಳಗೊಂಡಿದೆ. ಒಬ್ಬ ವ್ಯಕ್ತಿಯು ಈ ಮೂರನ್ನೂ ಹೊಂದಿದ್ದರೆ, ಅವನು ಅಥವಾ ಅವಳು ಆರೋಗ್ಯವಂತರು ಎಂದು ಹೇಳಲಾಗುತ್ತದೆ.

ವಿಶ್ವ ಆರೋಗ್ಯ ದಿನದ ಇತಿಹಾಸ ತಿಳಿಯಿರಿ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯವು ಮಾನವ ಸಂತೋಷ ಮತ್ತು ಯೋಗಕ್ಷೇಮಕ್ಕೆ ಮೂಲಭೂತವಾಗಿದೆ. ಇದು ಆರ್ಥಿಕ ಪ್ರಗತಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ, ಏಕೆಂದರೆ ಆರೋಗ್ಯವಂತ ಜನರು ಹೆಚ್ಚು ಕಾಲ ಬದುಕುತ್ತಾರೆ ಮತ್ತು ಹೆಚ್ಚು ಉತ್ಪಾದಕರಾಗಿದ್ದಾರೆ. ಅನೇಕ ಭಯಾನಕ ಕಾಯಿಲೆಗಳು ಪ್ರಪಂಚದಾದ್ಯಂತ ಲಕ್ಷಾಂತರ ವ್ಯಕ್ತಿಗಳನ್ನು ಬಾಧಿಸುತ್ತಿವೆ.

ಪ್ರತಿ ವರ್ಷ ಪ್ರಪಂಚದಾದ್ಯಂತ ಜನರ ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಜಾಗೃತಿಯನ್ನು ಉತ್ತೇಜಿಸಲು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಬನ್ನಿ ಈ ದಿನದ ಇತಿಹಾಸ, ಥೀಮ್ ಮತ್ತು ಮಹತ್ವವನ್ನು ಇಲ್ಲಿ ತಿಳಿಯೋಣ.

ವಿಶ್ವ ಆರೋಗ್ಯ ದಿನದ ಇತಿಹಾಸ ತಿಳಿಯಿರಿ

ವಿಶ್ವ ಆರೋಗ್ಯ ದಿನ 2022 ದಿನಾಂಕ :

ನಮ್ಮ ವೈದ್ಯಕೀಯ ಕ್ಷೇತ್ರದ ವ್ಯಾಪಕ ಕೊಡುಗೆಗಳನ್ನು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಯಶಸ್ಸನ್ನು ಗುರುತಿಸಲು ವಿಶ್ವ ಆರೋಗ್ಯ ದಿನ 2022 ಅನ್ನು ಪ್ರತಿ ವರ್ಷ ಏಪ್ರಿಲ್ 7 ರಂದು ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ದಿನ 2022 ಇತಿಹಾಸ :

ವಿಶ್ವ ಆರೋಗ್ಯ ಸಂಸ್ಥೆ (WHO) 1948ರಲ್ಲಿ ಮೊದಲ ವಿಶ್ವ ಆರೋಗ್ಯ ಸಭೆಯನ್ನು ಕರೆದಿತು ಮತ್ತು "ವಿಶ್ವ ಆರೋಗ್ಯ ದಿನ" ವನ್ನು ಸ್ಥಾಪಿಸಲು ಕರೆ ನೀಡಿತು. ಮೊದಲ ವಿಶ್ವ ಆರೋಗ್ಯ ದಿನವನ್ನು ಏಪ್ರಿಲ್ 7, 1950 ರಂದು ನಡೆಸಲಾಯಿತು, ತದನಂತರ ಪ್ರತಿ ವರ್ಷವೂ ಈ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಆದ್ಯತೆಯ ಕ್ಷೇತ್ರವನ್ನು ಹೈಲೈಟ್ ಮಾಡಲು ನಿರ್ದಿಷ್ಟ ಆರೋಗ್ಯ ವಿಷಯದ ಬಗ್ಗೆ ಜಾಗೃತಿ ಮೂಡಿಸುವುದು ದಿನದ ಮುಖ್ಯ ಗುರಿಯಾಗಿದೆ.

ವಿಶ್ವ ಆರೋಗ್ಯ ದಿನದ ಇತಿಹಾಸ ತಿಳಿಯಿರಿ

ವಿಶ್ವ ಆರೋಗ್ಯ ದಿನ 2022 ಥೀಮ್ :

ವಿಶ್ವ ಆರೋಗ್ಯ ದಿನ 2022 ರ ಥೀಮ್ 'ನಮ್ಮ ಗ್ರಹ, ನಮ್ಮ ಆರೋಗ್ಯ'. ಈ ವರ್ಷದ ಥೀಮ್ ನಮ್ಮ ಗ್ರಹದ ಯೋಗಕ್ಷೇಮ ಮತ್ತು ಅದರಲ್ಲಿ ವಾಸಿಸುವ ಮನುಷ್ಯರ ಕಡೆಗೆ ಜಾಗತಿಕ ಗಮನವನ್ನು ನಿರ್ದೇಶಿಸುವ ಗುರಿಯನ್ನು ಹೊಂದಿದೆ.

ವಿಶ್ವ ಆರೋಗ್ಯ ದಿನ 2022 ಮಹತ್ವ :

ವಿಶ್ವ ಆರೋಗ್ಯ ಸಂಸ್ಥೆಯು ಆರೋಗ್ಯ ಸಂಬಂಧಿತ ಕಾಳಜಿಗಳ ಬಗ್ಗೆ ಜಾಗೃತಿ ಮೂಡಿಸುವುದು ಜೊತೆಗೆ ಆರೋಗ್ಯ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ಪ್ರತಿ ವರ್ಷ ವಿಶ್ವ ಆರೋಗ್ಯ ದಿನವು ವಿವಿಧ ವಿಷಯಗಳೊಂದಿಗೆ ಅಗತ್ಯವಿರುವ ಸಮಕಾಲೀನ ಆರೋಗ್ಯ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
World health day is celebrated on april 7. Here is the history, theme and significance of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+