World Nature Conservation Day 2022 : ಈ ದಿನದ ಇತಿಹಾಸ ಮತ್ತು ಮಹತ್ವ ಇಲ್ಲಿ ತಿಳಿಯಿರಿ

ವಿಶ್ವ ಪ್ರಕೃತಿ ಸಂರಕ್ಷಾ ದಿನವನ್ನು ಏಕೆ ಆಚರಿಸಲಾಗುತ್ತೆ ? ಇಲ್ಲಿದೆ ಮಾಹಿತಿ

ಮಾನವನ ಆರೋಗ್ಯಕರವಾದ ಜೀವನಕ್ಕೆ ಉತ್ತಮ ಮತ್ತು ಆರೋಗ್ಯಕರ ಸಮಾಜ ಅಡಿಪಾಯವಾಗಿದೆ ಎಂದು ವಿಶ್ವ ಪ್ರಕೃತಿ ಸಂರಕ್ಷಣಾ ದಿನ ಅಂಗೀಕರಿಸಿದೆ. ಇದನ್ನು ಪ್ರತಿ ವರ್ಷ ಜುಲೈ 28 ರಂದು ಆಚರಿಸಲಾಗುತ್ತದೆ.

ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಭೂಮಿಯ ನೈಸರ್ಗಿಕ ಪರಿಸರದಲ್ಲಿ ಅಳಿದುಹೋಗುವ ಅಂಚಿನಲ್ಲಿರುವ ಪ್ರಾಣಿಗಳು ಮತ್ತು ಮರಗಳನ್ನು ಸಂರಕ್ಷಿಸುವುದು. ಈ ದಿನದ ಮಹತ್ವ ಮತ್ತು ಇತಿಹಾಸವನ್ನು ಇಲ್ಲಿ ತಿಳಿಯೋಣ.

ವಿಶ್ವ ಪ್ರಕೃತಿ ಸಂರಕ್ಷಾ ದಿನವನ್ನು ಏಕೆ ಆಚರಿಸಲಾಗುತ್ತೆ ? ಇಲ್ಲಿದೆ ಮಾಹಿತಿ

ಇತಿಹಾಸ:

ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಇತಿಹಾಸ ಮತ್ತು ಮೂಲವು ತಿಳಿದಿಲ್ಲ ಆದರೆ ಜುಲೈ 28 ರಂದು ಇದನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಮಾನವರು ಪ್ರಕೃತಿಯನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಮತ್ತು ಅದನ್ನು ಸಂರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು.

ವಿಶ್ವ ಪ್ರಕೃತಿ ಸಂರಕ್ಷಾ ದಿನವನ್ನು ಏಕೆ ಆಚರಿಸಲಾಗುತ್ತೆ ? ಇಲ್ಲಿದೆ ಮಾಹಿತಿ

ಮಹತ್ವ :

ನಮ್ಮ ಭೂಮಿಯನ್ನು ರಕ್ಷಿಸುವ ಕ್ರಿಯೆಯಲ್ಲಿ ಸಂಪನ್ಮೂಲಗಳ ಸಂರಕ್ಷಣೆಗೆ ಪ್ರಮುಖ ಪಾತ್ರವಿದೆ. ನೀರು, ಗಾಳಿ, ಮಣ್ಣು, ಶಕ್ತಿ, ಸಸ್ಯವರ್ಗ, ಖನಿಜಗಳು, ಪ್ರಾಣಿ ಇತ್ಯಾದಿ, ಪ್ರಕೃತಿಯ ವಿವಿಧ ಘಟಕಗಳನ್ನು ಸಂರಕ್ಷಿಸುವ ಮೂಲಕ ಭೂಮಿಯ ನೈಸರ್ಗಿಕ ಸೌಂದರ್ಯದಲ್ಲಿನ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

ಖ್ಯಾತ ರಷ್ಯಾದ ಬರಹಗಾರ ಲಿಯೋ ಟಾಲ್‌ಸ್ಟಾಯ್ ಅವರು "ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಪರ್ಕವನ್ನು ಮುರಿಯಬಾರದು ಎಂಬುದು ಸಂತೋಷಕ್ಕೆ ಕಾರಣವಾದ ಮೊದಲ ಷರತ್ತುಗಳಲ್ಲಿ ಒಂದಾಗಿದೆ" ಎಂದು ಉಲ್ಲೇಖಿಸಿದ್ದಾರೆ.

ಆರೋಗ್ಯಕರ ಪರಿಸರವು ಸ್ಥಿರ ಮತ್ತು ಉತ್ಪಾದಕ ಸಮಾಜಕ್ಕೆ ಅಡಿಪಾಯವಾಗಿದೆ. ಪ್ರಸ್ತುತ ಮತ್ತು ಭವಿಷ್ಯದ ದೃಷ್ಟಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನವನ್ನ ಆಚರಿಸಲಾಗುತ್ತದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಸುಸ್ಥಿರವಾಗಿ ನಿರ್ವಹಿಸಲು ನಾವೆಲ್ಲರೂ ಕ್ರಮಕೈಗೊಳ್ಳಲೇಬೇಕಿದೆ.

For Quick Alerts
ALLOW NOTIFICATIONS  
For Daily Alerts

English summary
World nature conservation day is on july 28. Here is the date, history and significance of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X