World Students Day 2022 : ಈ ದಿನದ ಕುರಿತು ಭಾಷಣ ಮಾಡಲು ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ

ಪ್ರತಿ ವರ್ಷ ಅಕ್ಟೋಬರ್ 15 ರಂದು ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳೂ ಕೂಡ ನೆನಪಿನಲ್ಲಿಟ್ಟುಕೊಂಡಿರುತ್ತಾರೆ ಕಾರಣ ಅಪ್ರತಿಮ ವ್ಯಕ್ತಿ ಅಬ್ದುಲ್ ಕಲಾಂ.

ವಿಶ್ವ ವಿದ್ಯಾರ್ಥಿಗಳ ದಿನದ ಕುರಿತು ಭಾಷಣ ಮಾಡಲು ಮತ್ತು ಪ್ರಬಂಧ ಬರೆಯಲು ಸಲಹೆ

ಈ ದಿನವನ್ನು ಶಾಲಾ ಕಾಲೇಜುಗಳಲ್ಲಿ ಹೆಚ್ಚು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ. ಕಲಾಂ ರವರ ಕುರಿತು ಒಂದಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಕಲಾಂ ಅವರ ಕುರಿತಾದ ರಸಪ್ರಶ್ನೆ ಕಾರ್ಯಕ್ರಮಗಳನ್ನು, ಪ್ರಬಂಧ ಸ್ಪರ್ಧೆಯನ್ನು ಮತ್ತು ಭಾಷಣ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ. ಹಾಗಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಮತ್ತು ಮಕ್ಕಳಿಗಾಗಿ ಪ್ರಬಂಧ ಬರೆಯಲು ಮತ್ತು ಭಾಷಣ ಮಾಡಲು ಮಾಹಿತಿಯನ್ನು ಒದಗಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ ನಿಮ್ಮ ಭಾಷಣ ಕಾರ್ಯಕ್ರಮಕ್ಕೆ ಮತ್ತು ಪ್ರಬಂಧ ಸ್ಪರ್ಧೆಗೆ ತಯಾರಿ ನಡೆಸಬಹುದು.

ವಿಶ್ವ ವಿದ್ಯಾರ್ಥಿಗಳ ದಿನದ ಕುರಿತು ಭಾಷಣ ಮಾಡಲು ಮತ್ತು ಪ್ರಬಂಧ ಬರೆಯಲು ಸಲಹೆ

ಪ್ರಬಂಧ/ಭಾಷಣ 1:

ಪ್ರತಿವರ್ಷ ವಿಶ್ವಸಂಸ್ಥೆಯು ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ. ಕಲಾಂ ರವರಿಗಿದ್ದ ವಿದ್ಯಾರ್ಥಿಗಳ ಮೇಲಿನ ಪ್ರೀತಿ ಮತ್ತು ಶಿಕ್ಷಣದ ಬಗೆಗೆ ಅವರಿಗಿದ್ದ ಒಲವನ್ನು ಗೌರವಿಸಲು ವಿಶ್ವಸಂಸ್ಥೆಯು ಅವರ ಜನ್ಮ ದಿನವನ್ನು 2010ರ ಅಕ್ಟೋಬರ್ 15ರಂದು "ವಿಶ್ವ ವಿದ್ಯಾರ್ಥಿಗಳ ದಿನ" ವನ್ನಾಗಿ ಆಚರಿಸಲು ಘೋಷಿಸಿತು. ತದನಂತರ ಈ ದಿನವನ್ನು ನಾವೆಲ್ಲರೂ ಹೆಚ್ಚು ಸಂತೋಷದಿಂದ ಆಚರಿಸುತ್ತಾ ಬಂದಿದ್ದೇವೆ. ಈ ದಿನದಂದು ನಾವು ಕಲಾಂ ಬಗ್ಗೆ ಹೆಚ್ಚು ತಿಳಿಯಲೇಬೇಕು.

ಕಲಾಂ ಅವರು ಕ್ಷಿಪಣಿ ರಕ್ಷಣಾ ಕಾರ್ಯಕ್ರಮದಿಂದ ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಂತಹವರು, ಆದರೆ ಅವರ ನೆಚ್ಚಿನ ಕೆಲಸವೆಂದರೆ ಶಿಕ್ಷಕ ವೃತ್ತಿಯಾಗಿತ್ತು. ಹಾಗಾಗಿ ಅವರಿಗೆ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗೆಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಪ್ರಸಿದ್ಧ ವಿಜ್ಞಾನಿ ಕಲಾಂ ಅವರು 1998 ರಲ್ಲಿ ಪೋಖ್ರಾನ್- II ಪರಮಾಣು ಪರೀಕ್ಷೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಕಾರಣದಿಂದಾಗಿ ಅವರು 'ಕ್ಷಿಪಣಿ ಮನುಷ್ಯ' ಎಂಬ ಹೆಸರಿನಿಂದ ಕರೆಯಲ್ಪಟ್ಟರು. 2005 ರಲ್ಲಿ ಕಲಾಂ ಸ್ವಿಟ್ಜರ್ಲೆಂಡ್‌ಗೆ ಭೇಟಿ ನೀಡಿದ್ದರು, ನಂತರ ಆ ದೇಶವು ಕಲಾಂರವರಿಗೆ ಗೌರವದ ಸಂಕೇತವಾಗಿ ಮತ್ತು ಅವರ ಭೇಟಿಯ ಗೌರವಾರ್ಥವಾಗಿ ಮೇ 26 ಅನ್ನು 'ವಿಜ್ಞಾನ ದಿನ' ವನ್ನಾಗಿ ಆಚರಿಸಲು ಘೋಷಿಸಿತು.

ಕಲಾಂ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು, ಅವುಗಳಲ್ಲಿ ಪ್ರಮುಖ ಪ್ರಶಸ್ತಿಗಳೆಂದರೆ 1981ರಲ್ಲಿ ದೊರೆತ ಪದ್ಮಭೂಷಣ ಪ್ರಶಸ್ತಿ ಮತ್ತು 1990 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು. ಸಂಶೋಧನೆ, ವಿಜ್ಞಾನ ಕ್ಷೇತ್ರ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗಳಲ್ಲಿನ ಅವರ ಕೊಡುಗೆಗಳಿಗಾಗಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾದರು.

ಕಲಾಂ ಅವರು ಲೇಖಕರಾಗಿದ್ದಲ್ಲದೇ ಹಲವು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ಅವುಗಳಲ್ಲಿ 'ವಿಂಗ್ಸ್ ಆಫ್ ಫೈರ್', 'ಮೈ ಜರ್ನಿ', 'ಇಗ್ನೈಟೆಡ್ ಮೈಂಡ್ಸ್ - ಅನ್ಲೀಶಿಂಗ್ ದಿ ಪವರ್ ಇನ್ ಇಂಡಿಯಾ' ಮತ್ತು 'ಇಂಡಿಯಾ 2020 - ಎ ವಿಷನ್ ಫಾರ್ ದಿ ನ್ಯೂ ಮಿಲೇನಿಯಮ್' ಪುಸ್ತಕಗಳು ಸೇರಿವೆ.

ಖ್ಯಾತ ವಿಜ್ಞಾನಿ ಮತ್ತು ಶಿಕ್ಷಕರಾದ ಕಲಾಂ ರವರು 2015 ರಲ್ಲಿ ಶಿಲ್ಲಾಂಗ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ನಲ್ಲಿ ಭಾಷಣ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು. ಅಲ್ಲಿಗೆ ಈ ಮಹಾನ್ ವ್ಯಕ್ತಿ ನಮ್ಮನ್ನು ಅಗಲಿದ ದಿನ ಆದರೆ ಅವರು ನಮ್ಮೆಲ್ಲರ ಮನಸ್ಸಲ್ಲೂ ಸದಾ ಹಚ್ಚಹಸಿರಾಗಿ ಉಳಿಯುವ ವ್ಯಕ್ತಿ ಎಂದು ಹೇಳುತ್ತಾ ಅವಕಾಶಕ್ಕಾಗಿ ಧನ್ಯವಾದಗಳು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಲವು ಪ್ರಮುಖ ವಿಚಾರಗಳನ್ನು ಮಾತ್ರ ಸರಳವಾಗಿ ಮತ್ತು ಸುಲಭವಾಗಿ ಅರ್ಥೈಸುವ ರೀತಿಯಲ್ಲಿ ಇಲ್ಲಿ ನೀಡಲಾಗಿದೆ. ಈ ಅಂಶಗಳನ್ನು ತೆಗೆದುಕೊಂಡು ನೀವು ನಿಮ್ಮ ಭಾಷಣವನ್ನು ಸಿದ್ದಪಡಿಸಿಕೊಳ್ಳಬಹುದು ಮತ್ತು ಈ ವಿಚಾರಗಳನ್ನು ಬಳಸಿಕೊಂಡು ಪ್ರಬಂಧವನ್ನು ಬರೆಯಬಹುದು.

ವಿಶ್ವ ವಿದ್ಯಾರ್ಥಿಗಳ ದಿನದ ಕುರಿತು ಭಾಷಣ ಮಾಡಲು ಮತ್ತು ಪ್ರಬಂಧ ಬರೆಯಲು ಸಲಹೆ

ಹತ್ತು ಸಾಲುಗಳಲ್ಲಿ ಪ್ರಬಂಧ/ಭಾಷಣ - 2:

1) ವಿಶ್ವ ವಿದ್ಯಾರ್ಥಿಗಳ ದಿನವು ಒಂದು ಜಾಗತಿಕ ಘಟನೆಯಾಗಿದೆ.

2) ಇಡೀ ವಿಶ್ವವು ಒಟ್ಟಾಗಿ ಸೇರಿ ಅಕ್ಟೋಬರ್‌ ೧೫ರಂದು ಈ ದಿನವನ್ನು ಆಚರಿಸಲಾಗುತ್ತದೆ.

3) ಅಕ್ಟೋಬರ್ 15 ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನ.

4) ಭಾರತದ ಕ್ಷಿಪಣಿ ಮನುಷ್ಯನ ಕೊಡುಗೆಗಳನ್ನು ಸ್ಮರಿಸಲು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ.

5) ಇದು ಪ್ರಪಂಚದ ವಿದ್ಯಾರ್ಥಿಗಳಿಗೆ ಮೀಸಲಾದ ದಿನವಾಗಿದೆ.

6) ಈ ದಿನವು ವಿದ್ಯಾರ್ಥಿಗಳ ಬೆಳವಣಿಗೆಯನ್ನು ಕಾಣಲು ಬುನಾದಿ ಹಾಕುವ ದಿನ.

7) ಈ ದಿನದಂದು ಸರ್ಕಾರವು ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಆರಂಭಿಸುತ್ತದೆ.

8) ಕಲಾಂ ಅವರ ಕೃತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶ.

9) ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ನಿಟ್ಟಿನಲ್ಲಿ ಈ ದಿನ.

10) ಇಡೀ ಜಗತ್ತೇ ಒಟ್ಟಾಗಿ ಕಲಾಂ ಅವರ ಹುಟ್ಟುಹಬ್ಬವನ್ನು ಆಚರಿಸುವ ಮೂಲಕ ಅವರ ಮಹತ್ವವನ್ನು ಸಾರುವುದು.

ವಿಶ್ವ ವಿದ್ಯಾರ್ಥಿಗಳ ದಿನದ ಕುರಿತು ಭಾಷಣ ಮಾಡಲು ಮತ್ತು ಪ್ರಬಂಧ ಬರೆಯಲು ಸಲಹೆ

ಹತ್ತು ಸಾಲುಗಳಲ್ಲಿ ಪ್ರಬಂಧ/ಭಾಷಣ - 3:

1) ವಿಶ್ವ ವಿದ್ಯಾರ್ಥಿಗಳ ದಿನವನ್ನು ಭಾರತದಲ್ಲಿ 'ವಿದ್ಯಾರ್ಥಿ ದಿವಸ್' ಎಂದು ಕರೆಯಲಾಗುತ್ತದೆ.

2) ಇದನ್ನು ವಿಶ್ವಸಂಸ್ಥೆಯು ಅಕ್ಟೋಬರ್ 15 ರಂದು ಜಾಗತಿಕವಾಗಿ ಆಚರಿಸಲು ಘೋಷಿಸಿತು.

3) ಡಾ.ಕಲಾಂ ಅವರ ಜನ್ಮ ದಿನವನ್ನು 2010 ರಿಂದ ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ.

4) ಡಾ.ಕಲಾಂ ಅವರು ತಮ್ಮ ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳೊಂದಿಗೆ ಕಳೆಯಲು ಇಷ್ಟಪಡುತ್ತಿದ್ದರು.

5) ರಾಷ್ಟ್ರದ ಯುವಕರ ಬಗೆಗಿದ್ದ ಅವರ ಪ್ರೀತಿಯ ಅರ್ಥವಾಗಿ ಅವರ ಜನ್ಮದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಮಾಡಿದೆ.

6) ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಡಾ.ಕಲಾಂ ಅವರ ಸ್ಫೂರ್ತಿದಾಯಕ ಜೀವನಚರಿತ್ರೆಯನ್ನು ಶಿಕ್ಷಕರು ತರಗತಿಗಳು ಮತ್ತು ಸೆಮಿನಾರ್‌ಗಳ ಮೂಲಕ ಹೇಳುತ್ತಾರೆ.

7) ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೂಡ ಡಾ.ಕಲಾಂ ಮತ್ತು ಅವರ ಸಾಧನೆಗಳ ಕುರಿತು ಭಾಷಣ ಮಾಡುತ್ತಾರೆ.

8) ಅದರ ಹೊರತಾಗಿಯೂ ಅವರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ನಿರ್ವಹಿಸುತ್ತಾರೆ.

9) ಇದು ಯುವಕರು ಮತ್ತು ಮಕ್ಕಳು, ವಿಶೇಷವಾಗಿ ವಿದ್ಯಾರ್ಥಿಗಳ ದಿನ.

10) ಸರ್ಕಾರವು ವಿದ್ಯಾರ್ಥಿಗಳಿಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುತ್ತದೆ.

ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಇಡೀ ಜಗತ್ತಿಗೆ ಸ್ಫೂರ್ತಿ ನೀಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ ಇಡೀ ಜಗತ್ತು ಆತನ ಬುದ್ಧಿವಂತಿಕೆ ಮತ್ತು ಪ್ರಾಮಾಣಿಕತೆಯನ್ನು ಸ್ವೀಕರಿಸಿದೆ. ವಿಶ್ವ ವಿದ್ಯಾರ್ಥಿಗಳ ದಿನವು ರಾಷ್ಟ್ರಕ್ಕಾಗಿ ಅವರ ಸೇವೆಗೆ ಮೀಸಲಾಗಿರುವ ದಿನವಾಗಿದೆ. ಭಾರತ ಆತನನ್ನು ಎಂದಿಗೂ ಮರೆಯುವುದಿಲ್ಲ.

For Quick Alerts
ALLOW NOTIFICATIONS  
For Daily Alerts

English summary
World students day is on october 15. Here is the essay and speech ideas for students and children in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X