World Veterinary Day 2022 : ವಿಶ್ವ ಪಶುವೈದ್ಯಕೀಯ ದಿನದ ಇತಿಹಾಸ ಮತ್ತು ಉದ್ದೇಶಗಳೇನು ?

ವಿಶ್ವ ಪಶುವೈದ್ಯಕೀಯ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂದು ತಿಳಿದಿದೆಯಾ ?

ಪ್ರತಿ ವರ್ಷವು ಏಪ್ರಿಲ್ ತಿಂಗಳ ಪ್ರತಿ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲಾಗುತ್ತದೆ. ಈ ಭಾರಿ ವಿಶ್ವ ಪಶುವೈದ್ಯಕೀಯ ದಿನವನ್ನು ಏಪ್ರಿಲ್ 30,2022 ರಂದು ಆಚರಿಸಲಾಗುತ್ತಿದೆ. ಈ ವರ್ಷ 'ಪ್ರಾಣಿ ಮತ್ತು ಮಾನವ ಆರೋಗ್ಯವನ್ನು ಸುಧಾರಿಸಲು ಪರಿಸರ ಸಂರಕ್ಷಣೆ' ಎಂಬ ಥೀಮ್ ನೊಂದಿಗೆ ಆಚರಿಸಲಾಗುತ್ತಿದೆ.

ವಿಶ್ವ ಪಶುವೈದ್ಯಕೀಯ ದಿನದ ಇತಿಹಾಸ:

1863 ರಲ್ಲಿ, ಎಡಿನ್ಬರ್ಗ್ ನ ಪಶುವೈದ್ಯಕೀಯ ಕಾಲೇಜಿನ ಪ್ರೊಫೆಸರ್ ಜಾನ್ ಗ್ಯಾಮ್ಗೀ ಅವರು ಯುರೋಪಿನ ಪಶುವೈದ್ಯರನ್ನು ಸಭೆಗೆ ಆಹ್ವಾನಿಸಿದ್ದರು. ತದನಂತರ ಇದನ್ನು ಮೊದಲ ಅಂತರರಾಷ್ಟ್ರೀಯ ಪಶುವೈದ್ಯಕೀಯ ಕಾಂಗ್ರೆಸ್ ಎಂದು ಕರೆಯಲಾಯಿತು. ಸಭೆಯಲ್ಲಿ ಎಪಿಜೂಟಿಕ್ ಕಾಯಿಲೆಗಳ ಬಗ್ಗೆ ಮತ್ತು ಸಂಭವನೀಯ ತಡೆಗಟ್ಟುವ ಕ್ರಮಗಳ ಚರ್ಚಿಸಲಾಗಿತ್ತು. ಈ ಕಾಂಗ್ರೆಸ್ ವಿಶ್ವ ಪಶುವೈದ್ಯಕೀಯ ಕಾಂಗ್ರೆಸ್ ಆಯಿತು. 1906 ರಲ್ಲಿ, 8 ನೇ ವಿಶ್ವ ಪಶುವೈದ್ಯಕೀಯ ಕಾಂಗ್ರೆಸ್‌ನಲ್ಲಿ, ಸದಸ್ಯರು ಶಾಶ್ವತ ಸಮಿತಿಯನ್ನು ರಚಿಸಿದರು.

ನಂತರ, ಸ್ಟಾಕ್ಹೋಮ್ನಲ್ಲಿ ನಡೆದ 15 ನೇ ಕಾಂಗ್ರೆಸ್ನಲ್ಲಿ, ಶಾಶ್ವತ ಸಮಿತಿ ಮತ್ತು ಸದಸ್ಯರು ಅಂತರಾಷ್ಟ್ರೀಯ ಸಂಘಟನೆ ಮತ್ತು ಸಂವಿಧಾನದ ಅಗತ್ಯವನ್ನು ಅರಿತರು. ಆದ್ದರಿಂದ, 1959 ರಲ್ಲಿ ಮ್ಯಾಡ್ರಿಡ್‌ನಲ್ಲಿ ನಡೆದ ಮುಂದಿನ ಕಾಂಗ್ರೆಸ್‌ನಲ್ಲಿ ವಿಶ್ವ ಪಶುವೈದ್ಯಕೀಯ ಸಂಘವನ್ನು ಸ್ಥಾಪಿಸಲಾಯಿತು. ವಿಶ್ವ ಪಶುವೈದ್ಯಕೀಯ ಸಂಘದ ಧ್ಯೇಯವೆಂದರೆ ಪ್ರಾಣಿಗಳ ಆರೋಗ್ಯ ಮತ್ತು ಕಲ್ಯಾಣ, ಹಾಗೆಯೇ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಕೇಂದ್ರೀಕರಿಸುವುದಾಗಿತ್ತು. ಇತ್ತೀಚಿನ ದಿನಗಳಲ್ಲಿ, ವಿಶ್ವ ಪಶುವೈದ್ಯಕೀಯ ಸಂಘವು OIE, WHO, ಮತ್ತು FAO ನಂತಹ ಇತರ ಪ್ರಮುಖ ಸಂಸ್ಥೆಗಳೊಂದಿಗೆ ಸಹಕರಿಸಿತು.

ವಿಶ್ವ ಪಶುವೈದ್ಯಕೀಯ ಸಂಘವು ಎಪ್ಪತ್ತಕ್ಕೂ ಹೆಚ್ಚು ರಾಷ್ಟ್ರಗಳ ಸದಸ್ಯರನ್ನು ಹೊಂದಿದೆ ಮತ್ತು ಪ್ರಪಂಚದಾದ್ಯಂತದ ರಾಷ್ಟ್ರೀಯ ಪಶುವೈದ್ಯಕೀಯ ಸಂಘಗಳನ್ನು ಒಳಗೊಂಡಿದೆ. 1997 ರಲ್ಲಿ ಹೊಸ ಸಂವಿಧಾನವನ್ನು ಸ್ವಾಗತಿಸಲಾಯಿತು ಮತ್ತು ಸಂಘಟನೆಯನ್ನು ಪುನರ್ ರಚಿಸಲಾಯಿತು.

2001 ರಲ್ಲಿ, ವಿಶ್ವ ಪಶುವೈದ್ಯಕೀಯ ಸಂಘವು ಏಪ್ರಿಲ್ ಕೊನೆಯ ಶನಿವಾರದಂದು ವಿಶ್ವ ಪಶುವೈದ್ಯಕೀಯ ದಿನವನ್ನು ಆಚರಿಸಲು ಜಾರಿಗೆ ತಂದಿತು. ಪ್ರತಿ ವರ್ಷವು ವಿಶೇಷ ಥೀಮ್ ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಪಶುವೈದ್ಯಕೀಯ ದಿನದ ಉದ್ದೇಶಗಳು:

ಪಶುವೈದ್ಯಕೀಯ ವೃತ್ತಿಯನ್ನು ಉತ್ತೇಜಿಸುವುದು,ಪ್ರಾಣಿ ಮತ್ತು ಮಾನವ ಕಲ್ಯಾಣ, ಪರಿಸರ, ಆಹಾರ ಸುರಕ್ಷತೆ ಮತ್ತು ಪ್ರಾಣಿಗಳ ಸಾಗಣೆ ಮತ್ತು ಸಂಪರ್ಕ ತಡೆಯನ್ನು ಸುಧಾರಿಸುವ ಕೆಲಸ ಮಾಡುವುದು ವಿಶ್ವ ಪಶುವೈದ್ಯಕೀಯ ದಿನದ ಉದ್ದೇಶವಾಗಿದೆ.

ವಿಶ್ವ ಪಶುವೈದ್ಯಕೀಯ ಸಂಘ (ಡಬ್ಲ್ಯುವಿಎ) ಪ್ರತಿ ಎರಡು ವರ್ಷಗಳ ಅಂತರದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಸಮಾವೇಶವನ್ನು ಆಯೋಜಿಸುತ್ತದೆ. ಈ ಸಂಘದ ಕ್ರಮಗಳೆಂದರೆ ಮುಖ್ಯವಾಗಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವುದು, ನೈಸರ್ಗಿಕ ಸಂಪನ್ಮೂಲಗಳ ಜವಾಬ್ದಾರಿಯುತ ಮತ್ತು ಬುದ್ಧಿವಂತ ಬಳಕೆ ಮತ್ತು ಔಷಧಿಗಳ ಸರಿಯಾದ ವಿಲೇವಾರಿಯನ್ನು ಖಚಿತಪಡಿಸಿಕೊಳ್ಳುವುದು.

ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ?:

ಈ ದಿನದಂದು ಹೊಸ ಆವಿಷ್ಕಾರಗಳನ್ನು ಚರ್ಚಿಸಲು ಮತ್ತು ಭವಿಷ್ಯದ ಪೀಳಿಗೆಗೆ ನಮ್ಮ ಪರಿಸರವನ್ನು ಕಾಪಾಡಲು ಸಂಬಂಧಿಸಿದ ಜ್ಞಾನವನ್ನು ಹಂಚಿಕೊಳ್ಳಲು, ಮಾನವ ಮತ್ತು ಪ್ರಾಣಿಗಳ ಸಹಬಾಳ್ವೆಯನ್ನು ಖಚಿತಪಡಿಸಿಕೊಳ್ಳಲು ವಿಶ್ವ ಪಶುವೈದ್ಯಕೀಯ ಸಂಘ ಹಲವಾರು ಸಭೆ ಮತ್ತು ಸೆಮಿನಾರ್‌ಗಳನ್ನು ಆಯೋಜಿಸುತ್ತದೆ.

ವಿಶ್ವ ಪಶುವೈದ್ಯಕೀಯ ಸಂಘ ಮತ್ತು ಗ್ಲೋಬಲ್ ಅನಿಮಲ್ ಮೆಡಿಸಿನ್ಸ್ ಅಸೋಸಿಯೇಷನ್ ​​ವಿಶ್ವ ಪಶುವೈದ್ಯಕೀಯ ಸಂಘದ ಸದಸ್ಯರಿಗೆ ಏಕಾಂಗಿಯಾಗಿ ಅಥವಾ ಇತರ ಗುಂಪುಗಳೊಂದಿಗೆ ಕೆಲಸ ಮಾಡುವವರಿಗೆ ವಾರ್ಷಿಕ ಪ್ರಶಸ್ತಿಯನ್ನು ನೀಡುತ್ತದೆ. ಈ ಪ್ರಶಸ್ತಿಯನ್ನು ವಿಶ್ವ ಪಶುವೈದ್ಯಕೀಯ ಸಂಘ ವಿಷಯದ ಪ್ರಕಾರ ಅವರ ಕೆಲಸ / ಕೊಡುಗೆ ಕಂಡುಬರುವವರಿಗೆ ಮಾತ್ರ ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
World Veterinary Day 2022 is on april 30, here is the theme, objectives and history of the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X