ನೀವು ಶಾಲೆಯಲ್ಲಿ ಇರಲಿ, ಇಲ್ಲ ಕಾಲೇಜಿನಲ್ಲಿ ಇರಲಿ ಪರೀಕ್ಷೆಯಲ್ಲಿ ಫೈಲಾಗಿದ್ದೀರಾ... ಜೀವನ ಮುಗಿತು ಎಂದು ಅಳುತ್ತಾ ಕುಳಿತು ಕೊಳ್ಳಬೇಡಿ. ಕೆಲವರು ಫೈಲಾದ್ರೆ ಅದನ್ನ ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಆದ್ರೆ ಇದೆಲ್ಲಾ ತಪ್ಪು. ಫೈಲಾದ ಮಾತ್ರಕ್ಕೆ ನಿಮ್ಮ ಜೀವನ ಮುಗಿದಿಲ್ಲ. ನಿಮ್ಮ ಮುಂದೆ ಅದೆಷ್ಟೋ ಆಯ್ಕೆಗಳಿವೆ. ಆದ್ರೆ ನೀವು ಸರಿಯಾಗಿ ಕಣ್ಣು ತೆರೆದು ನೋಡಬೇಕಷ್ಟೆ.

ಬನ್ನಿ ಫೈಲಾದ್ರೆ ಮುಂದೇನು ಜೀವನವಿಲ್ಲ ಅಂದುಕೊಳ್ಳುವವರು ಈ ಟಿಪ್ಸ್ ಓದಿ
ಪ್ರೊಫೆಶನಲ್ ಕೋರ್ಸ್ :
ನೀವೇನಾದ್ರೂ ಕಾಲೇಜು ಲೈಫ್ ನಲ್ಲಿ ಸಕ್ಸಸ್ ಆಗದೇ ಫೈಲ್ಯುಯರ್ ಆಗಿದ್ದೀರಾ... ಹಾಗಿದ್ರೆ ನೋ ವರಿ ನಿಮಗಾಗಿ ಅದೆಷ್ಟೋ ಪ್ರೊಫೆಶನಲ್ ಕೋರ್ಸ್ ಗಳು ಇವೆ. ಬೆಸ್ಟ್ ಇನ್‌ಸ್ಟಿಟ್ಯೂಟ್ ಗಳಲ್ಲಿ ನಿಮಗೆ ಇಂತಹ ಪ್ರೊಫೆಶನಲ್ ಕೋರ್ಸ್ ಗಳು ಕೂಡಾ ಲಭ್ಯವಿದೆ. ಹಾಗಾಗಿ ಬೆಸ್ಟ್ ಕೋರ್ಸ್ ಆಯ್ಕೆ ಮಾಡಿಕೊಂಡು, ಇತ್ತ ಫೈಲಾಗಿರುವ ಸಬ್‌ಜೆಕ್ಟ್ ಕೂಡಾ ಪಾಸ್ ಮಾಡಿಕೊಳ್ಳಿ.
ಜಾಬ್ ಹುಡುಕಿ:
ಕೇವಲ ಪಾಸ್ ಆದ್ರೆ ಮಾತ್ರ ಉದ್ಯೋಗ ಸಿಗುವುದಲ್ಲ, ನೀವು ಫೈಲಾಗಿದ್ರೂ ಕೂಡಾ ಬೆಸ್ಟ್ ಜಾಬ್ ನಿಮ್ಮದಾಗಿಸಿಕೊಳ್ಳಬಹುದು. ನಿಮ್ಮ ಟ್ಯಾಲೆಂಟ್ ನಿಮ್ಮ ಇಂಟ್ರೆಸ್ಟ್ ಗೆ ತಕ್ಕಂತೆ ಜಾಬ್ ನಿಮ್ಮದಾಗಿಸಿಕೊಳ್ಳಿ. ಜಾಬ್ ಮಾಡಿಕೊಂಡು ನಿಮ್ಮ ಸಬ್‌ಜೆಕ್ಟ್ ಕೂಡಾ ಕ್ಲಿಯರ್ ಮಾಡಿಕೊಳ್ಳಬಹುದು.
ಸ್ಪೋರ್ಟ್ :
ಇನ್ನು ಕಾಲೇಜು ಟೈಂನಲ್ಲಿ ನೀವು ಸ್ಪೋರ್ಟ್ ನಿಂದ ದೂರ ಇರುವುದು ಬೆಸ್ಟ್. ನೀವು ಒಂದು ವೇಳೆ ಯಾವುದಾದ್ರೂ ಸಬ್‌ಜೆಕ್ಟ್ ನಲ್ಲ ಫೇಲಾದ್ರೆ ನೋ ವರಿ ಸ್ಪೋರ್ಟ್ ವಿಭಾಗಕ್ಕೆ ಎಂಟ್ರಿ ನೀಡಿ. ನಿಮ್ಮ ನೆಚ್ಚಿನ ಸ್ಪೋರ್ಟ್ ಆಯ್ಕೆ ಮಾಡಿಕೊಳ್ಳಿ. ಹಾಗೂ ಅದರಲ್ಲಿ ಏನಾದ್ರೂ ಸಾಧನೆ ಮಾಡಲು ಯತ್ನಿಸಿ.
ಟ್ರಿಪ್ ಮಾಡಿ ಬ್ಲಾಗ್ ಸ್ಟಾರ್ಟ್ ಮಾಡಿ:
ಇದಂತೂ ಈಗಿನ ಹೆಚ್ಚಿನ ಜನರು ಮಾಡುತ್ತಾರೆ. ಆದ್ರೆ ಇದಕ್ಕೆ ಖರ್ಚು ಕೂಡಾ ಹೆಚ್ಚಾಗಬಹುದು. ನೀವೆಷ್ಟು ಬಂಡವಾಳ ಹೂಡುತ್ತಿರೋ ಅಷ್ಟೇ ಲಾಭ ಕೂಡಾ ಪಡೆಯುತ್ತೀರಿ. ಹಾಗಾಗಿ ಇದು ಬೆಸ್ಟ್ ಐಡಿಯಾ. ಟೂರ್ ಮಾಡಿ ನಿಮ್ಮ ಟೂರ್ ಬಗ್ಗೆ ಒಂದು ಬ್ಲಾಗ್ ಕೂಡಾ ತೆರೆಯಿರಿ. ಇದರಿಂದ ಟೈಂ ಕೂಡಾ ವೇಸ್ಟ್ ಆಗುವುದಿಲ್ಲ, ಹಣ ಕೂಡಾ ಗಳಿಸಬಹುದು ಹಾಗೂ ಸಮಯ ಸಿಕ್ಕಾಗ ನಿಮ್ಮ ಸಬ್‌ಜೆಕ್ಟ್ ಕೂಡಾ ಪಾಸ್ ಮಾಡಬಹುದು


Click it and Unblock the Notifications











