Tap to Read ➤

ಕಾಲೇಜು ವಿದ್ಯಾರ್ಥಿಗಳಿಗಾಗಿ ಸಣ್ಣ ವ್ಯಾಪಾರಕ್ಕೆ ಸಲಹೆಗಳು

ಕಾಲೇಜು ವಿದ್ಯಾರ್ಥಿಗಳು ಮಾಡಬಹುದಾದ ಸಣ್ಣ ವ್ಯಾಪಾರಗಳ ಪಟ್ಟಿ
kavya L
ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆ ಜೊತೆಗೆ ಮಾಡಬಹುದಾದ ಸಣ್ಣ ವ್ಯಾಪಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಕಾಲೇಜು ವಿದ್ಯಾರ್ಥಿಗಳು ತಮ್ಮಲ್ಲಿರುವ ಕಡಿಮೆ ಬಂಡವಾಳದಲ್ಲಿ ಯಾವೆಲ್ಲಾ ವ್ಯಾಪಾರಗಳನ್ನು ಮಾಡಬಹುದು ಇಲ್ಲಿ ತಿಳಿಯಿರಿ.
ಟ್ಯೂಟರಿಂಗ್ : ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜೊತೆಗೆ ಆನ್‌ಲೈನ್ ಮೂಲಕ ಟ್ಯೂಶನ್ ಕೂಡ ಮಾಡಬಹುದು. ಇದರಿಂದ ಯಾವುದೇ ಹೂಡಿಕೆ ಇಲ್ಲದೆ ಹಣ ಸಂಪಾದಿಸಬಹುದು.
ವೈಯಕ್ತಿಕ ತರಬೇತಿ : ನೀವು ದೈಹಿಕ ಆರೋಗ್ಯ ಮತ್ತು ಫಿಟ್‌ನೆಸ್ ಕುರಿತು ನಿಪುಣರಾಗಿದ್ದಲ್ಲಿ ಶಿಕ್ಷಣದ ಜೊತೆಗೆ ವೈಯಕ್ತಿಕ ತರಬೇತಿಗಾರರಾಗಿ ಕೆಲಸ ಮಾಡಬಹುದು.
ಬರಹಗಾರ ಮತ್ತು ಪ್ರೂಫ್‌ರೀಡಿಂಗ್ : ಬರವಣಿಗೆಯಲ್ಲಿ ಆಸಕ್ತಿಯನ್ನು ಹೊಂದಿದ್ದಲ್ಲಿ ಬರಹಗಾರ ಮತ್ತು ಪ್ರೂಫ್‌ರೀಡಿಂಗ್ ಮಾಡುವ ಮೂಲಕ ಹಣ ಪಡೆಯಬಹುದು.
ಸೋಶಿಯಲ್ ಮೀಡಿಯಾ ಇನ್‌ಫ್ಯುಯೆನ್ಸರ್ : ಸಾಮಾಜಿಕ ಜಾಲ ತಾಣಗಳ ಮೂಲಕ ಇನ್ನೊಬ್ಬರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಹಂಚುವ ಮತ್ತು ಮನೊರಂಜನೆ ನೀಡುವ ಮೂಲಕವೂ ಹಣ ಪಡೆಯಬಹುದು.
ವೆಬ್‌ಡಿಸೈನ್ ಮತ್ತು ಡೆವಲಪ್ಮೆಂಟ್ : ನೀವು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದಲ್ಲಿ, ವೆಬ್‌ಡಿಸೈನ್ ಮತ್ತು ಡೆವಲಪ್ಮೆಂಟ್ ಮಾಡುವ ಮೂಲಕವೂ ಉದ್ಯೋಗ ಮಾಡಬಹುದು.
ವಾಯ್ಸ್‌ವೋವರ್ : ಸುಮಧುರ ಕಂಠವನ್ನು ನೀವು ಹೊಂದಿದ್ದಲ್ಲಿ ವಾಯ್ಸ್ ವೋವರ್ ನೀಡುವ ಮೂಲಕ ಹಣ ಸಂಪಾದಿಸಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text