Tap to Read ➤

ಬಿಎಸ್ಸಿ ಕೃಷಿ ಪದವಿ ಪಡೆದ ನಂತರದ ಕೆರಿಯರ್

ಕೃಷಿಯಲ್ಲಿ ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಪಟ್ಟಿ
kavya L
ಕೃಷಿಯಲ್ಲಿ ಬಿ.ಎಸ್ಸಿ ಪದವಿಯನ್ನು ಹೊಂದಿದ ಅಭ್ಯರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಅವಕಾಶವಿದೆ. ಹಾಗಾಗಿ ಯಾವೆಲ್ಲಾ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.
ಸರ್ಕಾರಿ ಸಂಶೋಧನಾ ಸಂಸ್ಥೆಗಳು : ಕೃಷಿಯಲ್ಲಿ ಬಿ.ಎಸ್ಸಿ ಪದವಿ ಪಡೆದ ಅಭ್ಯರ್ಥಿಗಳು ಸರ್ಕಾರಿ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು.
ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು (SAUs) : ರಾಜ್ಯ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕ ಹುದ್ದೆಗಳಿಗೆ ಸೇರಬಹುದು.
ಬೀಜ ತಯಾರಿಕಾ ಕಂಪನಿಗಳು : ಕೃಷಿಯಲ್ಲಿ ಬಿ.ಎಸ್ಸಿ ಪಡೆದವರು ಬೀಜ ತಯಾರಿಕಾ ಕಂಪನಿಗಳಲ್ಲಿ ಉದ್ಯೋಗವನ್ನು ಹುಡುಕಿಕೊಳ್ಳಬಹುದು.
ಆಹಾರ ತಂತ್ರಜ್ಞಾನ ಕಂಪನಿಗಳು : ಆಹಾರ ತಂತ್ರಜ್ಞಾನ ಕಂಪನಿಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಬಹುದು.
ಬ್ಯಾಂಕುಗಳು : ಕೇವಲ ಕೃಷಿ ಕ್ಷೇತ್ರದಲ್ಲಿ ಮಾತ್ರವಲ್ಲದೇ ಬ್ಯಾಂಕುಗಳಲ್ಲಿ ಕೂಡ ಉದ್ಯೋಗವನ್ನು ಕಂಡುಕೊಳ್ಳಬಹುದು.
ಕೃಷಿ ಕ್ಷೇತ್ರಗಳು : ಕೃಷಿ ವಲಯದಲ್ಲಿ ಕೂಡ ಉದ್ಯೋಗವನ್ನು ಹುಡುಕಿಕೊಳ್ಳಬಹುದು.
MNCಗಳು : ಅಭ್ಯರ್ಥಿಗಳು ಎಂಎನ್‌ಸಿಗಳಲ್ಲೂ ಕೂಡ ಉದ್ಯೋಗವನ್ನು ಮಾಡಬಹುದು.
ರಸಗೊಬ್ಬರ ತಯಾರಿಕಾ ಸಂಸ್ಥೆಗಳು : ರಸಗೊಬ್ಬರ ತಯಾರಿಕಾ ಘಟಕಗಳಲ್ಲಿ ತಮ್ಮ ಆಸಕ್ತಿಯನ್ನು ತೋರಬಹುದು.
ಆಹಾರ ಸಂಸ್ಕರಣಾ ಘಟಕಗಳು : ಆಹಾರ ಸಂಸ್ಕರಣಾ ಘಟಕಗಳಲ್ಲಿ ಕೂಡ ಬಹುತೇಕ ಉದ್ಯೋಗಾವಕಾಶಗಳಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು : ಬಹುತೇಕ ಸರ್ಕಾರದ ಇಲಾಖೆಗಳಲ್ಲಿ ಯಥೇಚ್ಚ ಉದ್ಯೋಗವನ್ನು ಅರಸಬಹುದು.
ಶಾಲೆಗಳು ಮತ್ತು ಕಾಲೇಜುಗಳು : ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಉದ್ಯೋಗವನ್ನು ಮಾಡಬಹುದು.
ಯಂತ್ರೋಪಕರಣಗಳ ಕೈಗಾರಿಕೆಗಳು : ಕೃಷಿ ಪದವಿ ಹೊಂದಿರುವ ಅಭ್ಯರ್ಥಿಗಳು ಯಂತ್ರೋಪಕರಣಗಳ ಕೈಗಾರಿಕೆಗಳಲ್ಲಿ ಕೆಲಸ ಮಾಡಬಹುದು.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text