Tap to Read ➤

ಸಿಬಿಎಸ್ಇ 10ನೇ ತರಗತಿ ಟರ್ಮ್ 2 ವಿಜ್ಞಾನ ಪರೀಕ್ಷೆಗೆ ಸಲಹೆ

ಸಿಬಿಎಸ್ಇ 10ನೇ ತರಗತಿ ಟರ್ಮ್ 2 ವಿಜ್ಞಾನ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಸಲಹೆಗಳು ಇಲ್ಲಿವೆ.
ವಿದ್ಯಾರ್ಥಿಗಳು ಈ ವರೆಗೂ ಓದಿದ್ದನ್ನು ಪುನರ್ ಮನನ ಮಾಡಿ. ಅಂದರೆ ಓದಿದನ್ನು ಒಮ್ಮೆ ಮೆಲುಕು ಹಾಕಿ.
ಪರೀಕ್ಷಾ ಕೇಂದ್ರಕ್ಕೆ ಗಡಿಬಿಡಿಯಿಂದ ಹಾಜರಾಗದೆ ಸಮಾಧಾನವಾಗಿ ಅರ್ಧ ಘಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿ.
ವಿದ್ಯಾರ್ಥಿಗಳು ಪರೀಕ್ಷಾ ಮಾರ್ಗಸೂಚಿ ಜೊತೆಗೆ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ
ವಿಜ್ಞಾನ ವಿಷಯದ ಪರೀಕ್ಷೆಗೆ ಸಂಬಂಧಿಸಿದ ಟಿಪ್ಪಣಿಯತ್ತ ಒಮ್ಮೆ ಕಣ್ಣಾಡಿಸಿ. ಇದರಿಂದ ಓದಿದ್ದು ಮತ್ತಷ್ಟು ಬಲವಾಗಿ ನೆನಪಿನಲ್ಲಿ ಉಳಿಯಲು ಸಾಧ್ಯವಾಗಲಿದೆ.
ಪರೀಕ್ಷೆಗೆ ಅಗತ್ಯ ಸಲಕರಣೆಗಳನ್ನು ಒಯ್ಯುವುದು ಮರೆಯದಿರಿ.
ವಿಜ್ಞಾನ ವಿಷಯದಲ್ಲಿನ ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಲು ಗಮನ ಕೊಡಿ.
ವಿದ್ಯಾರ್ಥಿಗಳು ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಪ್ರಯತ್ನಿಸಿ.
ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಹೆಚ್ಚು ಮುಖ್ಯ ಹಾಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಪರೀಕ್ಷೆಯನ್ನು ಬರೆಯಿರಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text