Tap to Read ➤

ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಕಾಲೇಜು ಆಯ್ಕೆಗೆ ಸಲಹೆಗಳು

ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಕಾಲೇಜು ಆಯ್ಕೆ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳು
kavya L
ಅನೇಕರಿಗೆ ತಾವು ಜೀವನದಲ್ಲಿ ಏನಾದರು ಸಾಧಿಸಬೇಕೆಂಬ ಹಂಬಲವಿರುತ್ತದೆ ಹಾಗಾಗಿ ಶಿಕ್ಷಣ ಪಡೆಯುವಲ್ಲಿ ಮುಂದಿರುತ್ತಾರೆ. ಹಂತ ಹಂತವಾಗಿ ಶಿಕ್ಷಣವನ್ನು ಪಡೆಯುವ ದಾರಿಯಲ್ಲಿ ಸಾಗುತ್ತಾರೆ. ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಕಾಲೇಜು ಆಯ್ಕೆ ಮಾಡುವ ಮುನ್ನ ಈ ಅಂಶಗಳು ನೆನಪಿರಲಿ.
ಸ್ನಾತಕೋತ್ತರ ಅಧ್ಯಯನಗಳಿಗೆ ಕಾಲೇಜು ಆಯ್ಕೆ ಮಾಡುವ ಮುನ್ನ ಸ್ಥಳ ಅಥವಾ ಕಾಲೇಜು ಇರುವ ಸ್ಥಳವನ್ನು ಮೊದಲು ತಿಳಿದುಕೊಳ್ಳಿ. ಏಕೆಂದರೆ ಸ್ಥಳದ ಆಯ್ಕೆ ನಿಮಗೆ ಪೂರಕವಾಗಿದೆಯೇ ಎನ್ನುವುದು ಮುಖ್ಯ.
ಕಾಲೇಜು ಆಯ್ಕೆ ಮಾಡುವ ಮುನ್ನ ಕಾಲೇಜು ವ್ಯವಸ್ಥೆ, ವಾತಾವರಣ ಮತ್ತು ಅಲ್ಲಿನ ಸ್ಥಿತಿಗತಿಗಳನ್ನು ತಿಳಿಯುವ ಪ್ರಯತ್ನ ಮಾಡಿ.
ಕಾಲೇಜು ಆಯ್ಕೆಯ ಮುನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಲಹೆಗಳನ್ನು ಪಡೆದುಕೊಳ್ಳಿ.
ಸ್ನಾತಕೋತ್ತರ ಕೋರ್ಸ್ ಗಳಿಗೆ ಉತ್ತಮ ಸಿಬ್ಬಂದಿ ಮತ್ತು ಪ್ರಾಧ್ಯಾಪಕರು ಕಾಲೇಜಿನಲ್ಲಿ ಲಭ್ಯವಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ.
ಕಾಲೇಜು ವಾತಾವರಣದಲ್ಲಿ ಶಿಕ್ಷಣ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಇದೆಯೇ ಮತ್ತು ಕೌಶಲ್ಯಗಳ ಅಭಿವೃದ್ಧಿಗೆ ಆದ್ಯತೆ ಇದೆಯೇ ಎಂದು ತಿಳಿಯಿರಿ.
ಕಾಲೇಜು ಆಯ್ಕೆ ಕೇವಲ ಸಂಖ್ಯೆಯ ಮೂಲಕ ಮಾತ್ರವಲ್ಲದೇ, ಪ್ರಸಿದ್ಧಿ ಮತ್ತು ಇತರೆ ಮಾನದಂಡಗಳ ಆಧಾರದ ಮೇಲೆ ಪರಿಗಣಿಸಿ.
ಹೆಚ್ಚಿನ ಮಾಹಿತಿ ಮತ್ತು ಸಲಹೆಗಳಿಗಾಗಿ ಕೆರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ.
Add Button Text