Tap to Read ➤

ಟ್ವಿಟ್ಟರ್ ಮಾಧ್ಯಮದ ಇತಿಹಾಸ

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್ ನ ಇತಿಹಾಸ ಇಲ್ಲಿದೆ
ವಿಶ್ವದ ಅತಿದೊಡ್ಡ ಶ್ರೀಮಂತ ಹಾಗು ಯಶಸ್ವಿ ಉದ್ಯಮಿ ಎಲಾನ್ ಮಸ್ಕ್ 3.36 ಲಕ್ಷಕೋಟಿ ಹಣದಿಂದ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ. ಈ ಸುದ್ದಿ ಈಗ ಟ್ರೆಂಡಿಂಗ್ ನಲ್ಲಿದೆ.
ವಿಶ್ವದ ನಂಬರ್ ಒನ್ ಮೈಕ್ರೋ ಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್ ಬಗ್ಗೆ ತಿಳಿದುಕೊಳ್ಳೋಣ.
ಟ್ವಿಟರ್ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ 2006 ರಲ್ಲಿ ಅವರ ಕಲ್ಪನೆಯಂತೆ ಟ್ವಿಟ್ವರ್ ಆರಂಭವಾಯಿತು. ಡಾರ್ಸೆ ಮೂಲತಃ ಟ್ವಿಟ್ಟರ್ ಅನ್ನು ಎಸ್‌ಎಂಎಸ್ ಆಧಾರಿತ ಸಂವಹನ ವೇದಿಕೆಯಾಗಿ ಆಲೋಚಿಸಿದ್ದರು.
ಸ್ನೇಹಿತರ ಗುಂಪುಗಳು ತಮ್ಮ ಸ್ಟೇಟಸ್ ಅಪ್‌ಡೇಟ್‌ಗಳ ಆಧಾರದ ಮೇಲೆ ಪರಸ್ಪರ ಏನು ಮಾಡುತ್ತಿದ್ದಾರೆ ಎಂಬುದರ ಕುರಿತು ತಿಳಿಯುವ ಸಲುವಾಗಿ ಆರಂಭದಲ್ಲಿ ಟ್ವಿಟ್ಟರ್ ಬಳಕೆ ಮಾಡುವಂತಾಗಿತ್ತು.
ನಂತರದ ದಿನಗಳಲ್ಲಿ ಪಾಡ್‌ಕಾಸ್ಟಿಂಗ್ ಕಂಪನಿ Odeo ನಲ್ಲಿ ಮೊದಲು Dorsey ಈ ಎಸ್‌ಎಂಎಸ್‌ ಆಧಾರಿತ ವೇದಿಕೆಯನ್ನು Odeo ನ ಸಹ-ಸಂಸ್ಥಾಪಕ ಇವಾನ್ ವಿಲಿಯಮ್ಸ್ ಗೆ ಪ್ರಸ್ತಾಪ ಮಾಡಿದ್ದರು.
ಇವಾನ್ ಹಾಗೂ ಸಹ-ಸಂಸ್ಥಾಪಕ ಬಿಜ್ ಸ್ಟೋನ್ ಇದನ್ನು ಅಭಿವೃದ್ಧಿಪಡಿಸಲು ಮುಂದಾದರು. ಅದರ ಆರಂಭಿಕ ದಿನಗಳಲ್ಲಿ ಟ್ವಿಟರ್ ಅನ್ನು twttr ಎಂದು ಉಲ್ಲೇಖಿಸಲಾಗಿತ್ತು.
ಸಾಫ್ಟ್‌ವೇರ್ ಡೆವಲಪರ್ ನೋಹ್ ಗ್ಲಾಸ್ ಮೂಲ ಹೆಸರು twttr ಅನ್ನು ಟ್ವಿಟ್ಟರ್ ಆಗಿ ಬದಲಾವಣೆ ಮಾಡಿದರು.
ಮೊದಲ ಟ್ವೀಟ್ ಯಾವುದು? ಮಾರ್ಚ್ 21, 2006 ರಂದು 9:50 p.m. ಕ್ಕೆ ಜ್ಯಾಕ್ Twitter ನಲ್ಲಿ ಮೊದಲ ಸಂದೇಶವನ್ನು ಕಳುಹಿಸಿದರು.
ಆ ಸಂದೇಶದಲ್ಲಿ ಏನಿತ್ತು ?:
 "ನನ್ನ twttr ಅನ್ನು ಜಸ್ಟ್ ಟೆಸ್ಟ್ ಮಾಡುತ್ತಿದ್ದೇನೆ," ಎಂದು ಬರೆಯಲಾಗಿತ್ತು.
Twitter ಅಭಿವೃದ್ಧಿಯ ಸಮಯದಲ್ಲಿ ತಂಡದ ಸದಸ್ಯರು ತಮ್ಮ ವೈಯಕ್ತಿಕ ಫೋನ್ ಬಿಲ್‌ಗಳಿಗೆ ಎಸ್‌ಎಂಎಸ್‌ ಶುಲ್ಕಗಳಲ್ಲಿ ನೂರಾರು ಡಾಲರ್‌ಗಳನ್ನು ಸಂಗ್ರಹಿಸಿದ್ದಾರೆ.
ತದನಂತರ ಟ್ವಿಟ್ಟರ್‌ನಲ್ಲಿ ಹಲವಾರು ಬದಲಾವಣೆಗಳು ಕಂಡು ಬಂದಿದೆ. 2012 ರ ಹೊತ್ತಿಗೆ 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ದಿನಕ್ಕೆ 340 ಮಿಲಿಯನ್ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.
2022ರ ವೇಳೆಗೆ ಉದ್ಯಮಿ ಎಲಾನ್ ಮಸ್ಕ್ 3.36 ಲಕ್ಷಕೋಟಿ ಹಣದಿಂದ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕರಿಯರ್ ಇಂಡಿಯಾ ಕನ್ನಡಕ್ಕೆ ಭೇಟಿ ನೀಡಿ
Add Button Text